ಕೇಸರಿ ಮುಖ “ ತೋರೊ ಕರುಣ ಸಾಂದ್ರ “
ಹಯವದನನೆ ನಿನ್ನ ಪಾದ ಪಂಕಜವನ್ನೇ
ನೋಡೋ ತವಕ ಚಂದ್ರS| ಹಾಡೋ ಕರುಣ ಮಂದ್ರ |ಕೊಡು ನಿನ್ನ ಸ್ಮರಣೇಯS ಶ್ರೀ ಹರಿ
ತೋರೊ ಕರುಣ ಸಾಂದ್ರ SSS || 1 ||
ಹಿರಣ್ಯಕನುದರವ ಹರಿದ ಕೇಸರಿ ಮುಖ ನರನೆ |
ಹಯಮುಖ ನೊಡೆಯನೆ ಸೀತಾಹರ ವಧ
ಪಾದ ಕಮಲ ತೋರೋ SSS || 2 ||
ಕೊಡು ನಿನ್ನ ಸ್ಮರಣೇಯS ಶ್ರೀ ಹರಿ
ತೋರೊ ಕರುಣ ಸಾಂದ್ರ SSS ||
ಶಿಶುಕರೆಗೊಲಿದವನೇ ಒಡೆದು ಕಂಬದಿ ನಿಂತವನೆ |
ಧೃವ ರಾಜರಲಿ ಮಮತೆಯ ತೋರಿದ
ಗುಣ ರತ್ನಾಕರನೇ SSS || 3 ||
ಕೊಡು ನಿನ್ನ ಸ್ಮರಣೇಯS ಶ್ರೀ ಹರಿ
ತೋರೊ ಕರುಣ ಸಾಂದ್ರ SSS ||
ಗರ್ಭದಿ ಹರಿ ಕಥೆಯS ಕೇಳಿದ
ಅರ್ಭಕಗೊಲಿದವನೇ |
ತುಳಸಿಯ ಹೃದಯದಿ ನೆಲೆಸಿದ ರಾಮರ
ಎನ್ನ ಮನವನೊಲಿಸೋ SSS || 4 ||
ಕೊಡು ನಿನ್ನ ಸ್ಮರಣೇಯS ಶ್ರೀ ಹರಿ
ತೋರೊ ಕರುಣ ಸಾಂದ್ರ SSS ||
....ಶ್ರೀತುಳಸಿ
No comments:
Post a Comment