Wednesday, November 16, 2022

*GOVINDARAJA PROTECTION FROM ಗೋವಿಂದರಾಜ ರಕ್ಷ

GOVINDARAJA  RAKSHA

ಗೋವಿಂದರಾಜ ರಕ್ಷ

ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶರೀರ ಸ್ವಾಸ್ಥ್ಯಕ್ಕಾಗಿ   ಕಾಯಿಸಿ ಆರಿಸಿದ ನೀರನ್ನೋ, ಯಜ್ಞ ಭಸ್ಮವನ್ನೋ  ಈ ಶ್ರೀ ಗೋವಿಂದ ರಾಜರಕ್ಷಾ ಕವಚದಿಂದ  ಅಭಿಮಂತ್ರಿಸಿ  ಕುಡಿಸಿ/ ಲೇಪಿಸಿ ಮಲಗಿಸಿದರೇ ದುರಿತಗಳೆಲ್ಲ ದೂರವಾಗುತ್ತವೆ ಇದು ನಿಸ್ಸಂಶಯ.

ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ 
ಗೋವರ್ಧನ ಬೆರಳಲೆತ್ತಿದ ಗೋವಿಂದಾ ನಮ ರಕ್ಷಿಸೋ  || ಪಲ್ಲ ||
ಸ್ವಯಂ ಚಲಿತದ ಸ್ವಯಂ ಸಾಧಕ ಸ್ವಯಂ ಕಾರ್ಯಗಳಾರಿಗೋ   | ಸ್ವಯಂ ಜಡ ಬಲಾಢ್ಯ ಚೇತನ ನವ್ಯತಮ ಪ್ರತಿರೋಧಕ  |
ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ  | ಗೋವು ರಕ್ಷಕ ಜಡವು ಚೇತನ ಗೋವಿಂದಾ ನಮ ರಕ್ಷಿಸೋ   || ೧ ||
ಶಿರಸ್ಸಿಗೆ ಶಾಂತಾಕಾರನ ರಕ್ಷ ,  ತಲೆಗೆ ತ್ರಿವಿಕ್ರಮನ ರಕ್ಷ , ಹಣೆಗೆ  ಹಣಮಂತನ ರಕ್ಷ,  ಕಣ್ಣಿಗೆ ಕಾಮನ ರಕ್ಷ,  ಮಗಿಗೆ ಮುಕುಂದನ ರಕ್ಷ ,  ಬಾಯಿಗೆ ಬ್ರಹ್ಮಾಂಡದ ರಕ್ಷ

ನವ್ಯ ವಾಚನ ಮಾತ್ರ ಸ್ಮರಣೆಯ  ಅನ್ಯ ಸ್ಮರಣ ಪ್ರವೇಶವು. | ಕವ್ಯ ಪ್ರೇರಕ ಭವ್ಯ ದೃಶ್ಯಕ ಸವ್ಯ ವೇಗದ  ಸಾಧಕ  | ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ | ಗೋಕ್ಷರದೋಳ್ ಗಚ್ಚ ಗಮ್ಯಕೆ  ಗೋವಿಂದಾ ನಮ ರಕ್ಷಿಸೋ   || ೨ ||
ಸ್ಕಂಧಕೆ ಸ್ಕಂದನ ರಕ್ಷ , ಬಾಹುಗೆ ಭೂಮಿಯ ರಕ್ಷ,  ಹಸ್ತಕೆ ಹಲಾಯುಧನ  ರಕ್ಷ ,  ಪಕ್ಕೆಗೆ ಪ್ರದ್ಯುಮ್ನನ ರಕ್ಷ,   ನಾಲಿಗೆಗೆ ನಾರಾಯಣನ ರಕ್ಷ ,  ಕಂಠಕೆ  ಕೃಷ್ಣನ ರಕ್ಷ 

ದಮನ ಕೃತ ಪರಿಹಾರ ಹೊಂದುವ  ನಿರ್ಬಲೀಕೃತ ದೋಷವು | ಸಾರ್ವಮತ ಸಂಸ್ಕಾರ ಹೊಂದಿದ ಸೌಷ್ಠ ದೇಹದ ಮನವದು | ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ | ಸವ್ಯ ಸಾಚಿಯ ದರ್ಶನೀಯಕೇ  ಗೋವಿಂದಾ ನಮ ರಕ್ಷಿಸೋ   || ೩ ||
ಹೊಟ್ಟೆಗೆ ವಿಠ್ಠಲನ ರಕ್ಷ ,  ಯಮನ ಯಕೃತಕೆ ರಕ್ಷ  ಕರುಳಿಗೆ ಕಾಲನ ರಕ್ಷ , ಗುಹ್ಯಗಳಿಗದೆಯ ರಕ್ಷ ಸೊಂಟಕೆ ಗಂಟೆಯ ರಕ್ಷ , ಬೃಹ ಸೂಕ್ಷ್ಮಕೆ ಸಂಕರ್ಷಣನ  ರಕ್ಷ  

ಆಪ ತೇಜವು ವಾಯು ನಭಗಳ ಪೃಥ್ವಿ ಚರ್ಮ ತತ್ವವು |
ರೂಪ ಮನಸಿನ ಬುದ್ಧಿ ಚಿತ್ತದ  ನಾಹ  ಶಬ್ದ ಸ್ಪರ್ಶವು   |
ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ | ಭಾವ ಗಂಧದ ಚಕ್ಷು ರಸಗಳಿ  ಗೋವಿಂದಾ ನಮ ರಕ್ಷಿಸೋ   || ೪ ||
ಊರುಗಳಿಗುಪೇಂದ್ರನ ರಕ್ಷ,   ಬೆನ್ನಿಗೆ ಭೀಮನ ರಕ್ಷ , ಮಣಿಕೆಗೆ ಮದಸೂದನ ರಕ್ಷ,   ಜಂಘಕೆ ನರಸಿಂಘನ ರಕ್ಷ, ಪಾದಕೆ ಪ್ರೇರಕ ರಕ್ಷ ,  ಅಂಗಾಲಿಗೆ ಶ್ರೀ ರಂಗನ ರಕ್ಷ 

ನಿರಂತದೊಳು ದೋಷರಹಿತದಿ ಒರಟು ಕಠಿಣವ ಲಕ್ಷಿಸಿ | ಪರಂಧಾಮದ ಕನಸು ಹೊತ್ತಿಹ  ಇಂದುಸುತವರ ರಕ್ಷಿಸೋ | ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ಗೋವಳ ಪ್ರಿಯ | ನೋವು ನಲಿವುಗಳನು ಸಮದಲಿ   ಗೋವಿಂದಾ ನಮ ರಕ್ಷಿಸೋ   || ೫ ||
ಮೆದುಳಿಗೆ ಮೊರೇಶ್ವರನ ರಕ್ಷ ,  ಶಕ್ತಿಗೆ ಶ್ರೀಧರ ರಕ್ಷ  ಬುದ್ಧಿಗೆ ವಿದ್ಯಾಧೀಶನ  ರಕ್ಷ , ಮನಸಿಗೆ ಮಾಧವನ ರಕ್ಷ  ಗಾತ್ರ ಚತುಷ್ಟಕೆ ಗಾಯತ್ರಿಯ ರಕ್ಷ , ಸಂಸ್ಕಾರಕೆ ಸಂಸ್ಮರಣದ  ರಕ್ಷ, ವಸುಂಧರೆಗೆ ವರಾಹನ ರಕ್ಷ  ಯಜ್ಞ ವರಾಹಕೆ ಯಜ್ಞದ  ರಕ್ಷ   

ಸಂಜೆಯ ಸಮಯದಿ ಶ್ರೀ ಭಗವತಿ ಮಹಾದೇವಿಯೇ ಮಹಾಲಕ್ಷ್ಮೀಯೇ ಮಹಾವಾಣಿಯೇ ನಿಮ್ಮ ರಕ್ಷಣೆಯು ನಮ್ಮ ಮೇಲಿರಲಿ ..... ಎಂದು ಕೂಸುಗಳ ಮೇಲಿಂದ ಅವರು ಕುಡಿದು ಉಳಿಸಿದ ಹಾಲನ್ನು ಐದು ಸಲ ತಲೆಯಿಂದ ಪಾದದ ವರೆಗೆ ಇಳಿಸಿ ಬಾಗಿಲು ಹೊರಗೆ ಚೆಲ್ಲುವುದು ರೂಢಿಯಲ್ಲಿದೆ.......                                                   ಸಾಷ್ಟಾಂಗ ನಮನಗಳೊಂದಿಗೆ  

             || ಶ್ರೀ ರಕ್ಷಕಾರ್ಪಣಮಸ್ತು ||


No comments:

Post a Comment