ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ |
ಗೋವಿಂದ ಸೇವಿಸೆ ದುಃಖವಿಲ್ಲವೇ ಇಲ್ಲ | ಗೋವಿಂದ ಎನಲೇ ಬೇಕೈ ||
ಜನಿಸಿ ಮಾನವನಾಗಿ ಜಿವ್ಹೆ ಪಡೆದಿರುವಾಗ | ಸದನದಲ್ಲಿರುವಾಗ ಸದನದಲ್ಲಿರದಾಗ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಶ್ರಮವೂ ಮಾಡುತಲಿರಲಿ ಶ್ರಮವು ಮಾಡದೆ ಇರಲಿ |
ಪರಿಹಾಸ್ಯ ಮಾಡುತಲೇ ಗಂಭಿರರಿರುತಲೇ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಸಿರಿವಂತನಿದ್ದಾಗ ಬಡವನಾಗಿರುವಾಗ |
ಷಡ್ರಸ ಅನ್ನವ ತಿನ್ನುತಲಿರುವಾಗ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಅನುರಾಗದಲೇ ಇರಲಿ ತಾಂಬೂಲ ಹಾಕುತಲಿ |
ಸುಖನಿದ್ರೆ ಮಾಡುತಲಿ ನಿದ್ರೆ ಬಾರದೆ ಇರಲಿ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಅರ್ಧಾಂಗಿ ಆನಂದ ಪಡೆಯುತಾಗಲು ಒಮ್ಮೇ |
ನಿದ್ರೆ ಹೋಗಲು ಒಮ್ಮೇ ಪ್ರಾತಃ ಏಳಲು ಒಮ್ಮೇ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಶಿಸುವಿನ ನಡೆ ಕಂಡು ನೆಮ್ಮದಿಯಲಿರುವಾಗ |
ರೋಗಗ್ರಸ್ತನಾಗಿ ಆರೋಗ್ಯದಲ್ಲಿರುವಾಗ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಎಲ್ಲ ಭೋಗವ ಪಡೆದು ಕೊಡುವಾತನನೆ ಬಿಡದೆ |
ಇಹ ಸರ್ವ ಕಾಲದಲಿ ನಿರ್ಮಲ ಚಿತ್ತದಲಿ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಅಗಸ್ತ್ಯ ಮುನಿಗಳ ಕರದಿ ಅರ್ಚಿತವಾದ |
ಅಶ್ವಥ ನಿಂಬಕ ರೂಪದಲ್ಲಿರುವಂಥ |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಉತ್ತುಂಗ ಪೀಠದಲಿ ಭೀಮರಥಿ ತೀರದಲಿ |
ಇಂದುಸುತ ಗೋವಿಂದ ಮೋಕ್ಷ ತಾ ಪಡೆವನು |
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಗೋವಿಂದ ಎನಬಾರದೇ ಗೋವಿಂದ, ಗೋವಿಂದ ಎನಲೇ ಬೇಕೈ ||
ಗೋವಿಂದ ನೆನೆದರೇ ದುಃಖವಿಲ್ಲವೇ ಇಲ್ಲ | ಗೋವಿಂದ ಎನಲೇ ಬೇಕೈ ||
No comments:
Post a Comment