VARA MAHALAKSHMI VRATA ವರ ಮಹಾಲಕ್ಷ್ಮೀ ವ್ರತ
ಒಂದುವೇಳೆ ಈ ಬಾರಿ.ವರಮಹಾಲಕ್ಷ್ಮೀ ವ್ರತವು ಏಕಾದಶೀ ಉಪವಾಸ ದಿನದಂದು ಬಂದರೇ
ಏಕಾದಶೀಯ ದಿನ -
1) ಗಣಪತಿ ಪೂಜೆ, ಯಮುನಾಪೂಜೆ, ಲಕ್ಷ್ಮೀ ಪೂಜೆ. ಆವಾಹನೆಗೆ ಮಂತ್ರಾಕ್ಷತೆಯನ್ನು ಉಪಯೋಗಿಸಬಾರದು. (ಕೇವಲ ಮಂತ್ರದಿಂದ ಆವಾಹನೆ ಮಾಡಬೇಕು)
2) ಸ್ನಾನ, ಅರ್ಘ್ಯ, ಪಾದ್ಯ, ಅರಿಶಿಣ, ಕುಂಕುಮ, ಗೆಜ್ಜೆವಸ್ತ್ರ ಮೊದಲಾದವುಗಳ್ನು ಸಮರ್ಪಿಸಬೇಕು.
3) ವರಮಹಾಲಕ್ಷ್ಮೀದೇವಿಯ ಕಲಶಸ್ಥಾಪನೆಯನ್ನು, ಆವಾಹನೆಯನ್ನು ಮಾಡಬೇಕು. (ಮಂತ್ರಾಕ್ಷತೆಯನ್ನು ಉಪಯೋಗಿಸಬಾರದು. ಕೇವಲ ಮಂತ್ರದಿಂದ ಆವಾಹನೆ ಮಾಡಬೇಕು)
5) ಕುಂಕುಮಾರ್ಚನೆ ಮಾಡಬಹುದು.
6) ಲಕ್ಷ್ಮೀಪೂಜೆಯ ಅಂಗವಾದ ಗ್ರಂಥಿ (ದಾರದ) ಪೂಜೆಯನ್ನು ಮಾಡಬಹುದು.
7) (ಕೇವಲ ದೀಪದ) ಆರತಿಯನ್ನು ಮಾಡಬೇಕು. ಹೂರಣದ ಆರತಿಯನ್ನು ಮಾಡಬಾರದು.
/8) ಪಂಚಾಮೃತ ಸ್ನಾನ, ಪುಷ್ಪಾರ್ಚನೆ ಮತ್ತು ನೈವೇದ್ಯ (ಗಣಪತಿ, ಯಮುನಾ, ಲಕ್ಷ್ಮೀ) ಯಾರಿಗೂ ಮಾಡಬಾರದು.
9) ವರಮಹಾಲಕ್ಷ್ಮೀ ಪೂಜೆಮಾಡುವ ಸುವಾಸಿನಿ ಸ್ತ್ರೀಯರು ತುಪ್ಪವನ್ನು ಹಚ್ಚಿಕೊಂಡು ಎರೆದುಕೊಳ್ಳಬೇಕು
ದ್ವಾದಶೀ (ಪಾರಣೆ) ದಿನ
10 ) ಗಣಪತಿ, ಯಮುನಾ, ಲಕ್ಷ್ಮೀದೇವಿಗೆ ಪಂಚಾಮೃತ, ಪುಷ್ಪಾರ್ಚನೆ, ಮುಂತಾದ ಷೋಡಶೋಪಚಾರ ಪೂಜೆ ಮಾಡಿ, ನೈವೇದ್ಯ ಮಾಡಿ, ಉಡಿ ತುಂಬಿ, ಹೂರಣದ ಆರತಿಯನ್ನು ಮಾಡಿ, ಧಾರವನ್ನು ಮತ್ತೆ ಪೂಜಿಸಿ ಕಟ್ಟಿಕೊಳ್ಳುವುದು, ದಂಪತಿ ಬ್ರಾಹ್ಮಣ ಭೋಜನ, ವಾಯನದಾನ, ಇವುಗಳನ್ನು ಮಾಡಬೇಕು.
No comments:
Post a Comment