Thursday, February 29, 2024

NINDA STUTIH. ನಿಂದಾ ಸ್ತುತಿ

            ನಿಂದಾ ಸ್ತುತಿ

ನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ  || ಪ ||ಆಡಿದ ಮಾತಿಗೆ ಕಾಡಿಗ್ಹೋದವನೆಂದು ನಂಬಿದ ಮುಗ್ಧರು ಜಗದಿ ತುಂಬಿಹರಲ್ಲೋ || ಅಪ ||

ಪೆಣ್ಣ ಕೊಂದವನಾಗಿ | ಪೆಣ್ಣ ಕದ್ದವನಾಗಿ ಪೆಣ್ಣಿಗೇ ವಸನವನಿತ್ತು ಪಾಪ ಕಳೆಯುವಿಯೇನೋ ನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ|| ೧ ||

ಏಕ ಭಾರ್ಯಾ ವ್ರತವ ಸಾರಿ ತೋರಿದ ನೀನು ನೈಕ ಪತ್ನಿಯರನ್ನು ವರಿಸಿ ತೋರಿದುದೇನೋ ನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ|| 2 ||

ಮಾವನನ್ನೂ ವಧಿಸಿ ಅಳಿಯನನ್ನು ಮುಗಿಸಿಭಾವಬಂಧುರ ಹೋಮ ಮಾಡಿ ಪಡೆದಿಯೇನೋ  ನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ || 3 ||

ನಿನ್ನ ಮಾತನು ನಂಬಿ ಧರ್ಮ ಗ್ಲಾನಿಯ ಮಾಡಿ ನಿನ್ನ ದರುಶನಕೆಂದು ಕಾದು ಕುಳಿತಿಹರಲ್ಲೊ ನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ || 4 ||

ಚನ್ನಕೇಶವರಾಯ ಖಿನ್ನ ಮಾನಸನಾಗಿ ಜಾನಕಿರಾಮ ನಿಂದಾ ಸ್ತುತಿಯಪೇಳ್ವೆನು ಕ್ಷಮಿಸೋನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ || 5||

ಬೊಂಬೆ ಮಾಡಿದ ಬಳಿಕ ಒಡೆದುನೋಡುವುದೇನು ಅಂಬರದಿಂದಲದು ಮೋಜು ಕಾಣುವುದೇನೋನಿನ್ನಂಥವರಿಂದ ಜಗವು ಕೆಡುತಿದೆ ಕೃಷ್ಣ || 6 ||

                                             ಜಾನಕಿರಾಮ

No comments:

Post a Comment