श्री हरि कथामृत सार
दास वरेण्य श्री जगन्नाथदासर कृति
1 . मंगळा चरण संधि
हरिकथामृतसार गुरुगळ करुणदिंदापनितु पेळुवॆपरम भगवद्भक्तरु इदनादरदि केळुवुदु॥
श्रीरमणि करकमल पूजित चारुचरण सरोज ब्रह्म समीरवाणि फणींद्रवींद्र भव इंद्र मुख विनुत नीरजभवांड उदय स्थिति कारणनॆ कैवल्यदायक नारसिंहनॆ नमिपॆ करुणिपुदु ऎमगॆ मंगळव॥1||
जगदुदरन अति विमल गुणरूपगळनु आलोचनदि भारत निगमततिगळ अतिक्रमिसि क्रिया विशेषगळ बगॆबगॆय नूतनव काणुत मिगॆ हरुषदिं पॊगळि हिग्गुवत्रिगुणमानि महालकुमि संतैसलि अनुदिनवु॥2||
निरुपमानंदात्म भव निर्जर सभासंसेव्य ऋजुगणद अरसॆ सत्वप्रचुर वाणीमुखसरोजे नगरुड शेष शशांकदळ शेखरर जनक जगद्गुरुवेत्वच्चरणगळिगॆ अभिवंदिसुवॆ पालिपुदु सन्मतिय॥3||
आरुमूरॆरॆडॊन्दु साविर मूरॆरॆडु शतश्वास जपगळमूरु विध जीवरॊळगॆ अब्जजकल्प परियंत ता रचिसिसत्वरिगॆ सुख संसार मिश्ररिगॆ अधमजनरिगॆअपार दुःखगळ ईव गुरु पवमान सलहॆम्म॥4||
चतुरवदनन राणि अतिरोहित विमला विज्ञानि निगम प्रततिगळिगभिमानि वीणापाणि ब्रह्माणि नुतिसि बेडुवॆ जननि लक्ष्मीपतिय गुणगळ तुतिपुदकॆसन्मतिय पालिसि नॆलॆसुनी मद्वदन सदनदलि॥5||
कृतिरमण प्रद्युम्ननंदनॆ चतुरविंशतिदेवतॆगळिगॆ गुरुवॆनिसुतिह मारुतन निजपत्निसतत हरियलि गुरुगळलि सद्गतिय पालिसिभागवत भारत पुराण रहस्य तत्वगळु अरुपु करुणदलि ॥6||
वेदपीठ विरिंचि भव शुक्र आदिसुर विज्ञान दायकमोद चिन्मय गात्र लोकपवित्र सुचरित्रछेद भेद विषाद कुटिलांतादि मध्य विदूरआदानादि कारण बादरायण पाहि सत्राण॥7||
क्षितियॊळगॆ मणिमंत मॊदलाद अति दुरात्मरु ऒंदधिक विंशति कुभाष्यव रचिसॆनडुमनॆयॆंब ब्राह्मणन सतिय जठरदॊळु अवतरिसि भारती रमणमध्वभिदानदि चतुरदश लोकदलि मॆरॆद अप्रतिमगॆ वंदिसुवॆ॥8||
पंचभेदात्मक प्रपंचकॆ पंचरूपात्मकनॆ दैवक पंचमुख शक्रादिगळु किंकररु श्रीहरिगॆ पंचविंशति तत्व तरतम पंचिकॆगळनु पेळ्दभावी विरिंचियॆनिप आनंदतीर्थर नॆनॆवॆननुदिनवु॥9||
वामदेव विरिंचितनय उमामनोहर उग्र धूर्जटिसामजाजिन वसनभूषण सुमनसोत्तंस कामहर कैलास मंदिरसोमसूर्यानल विलोचन कामितप्रद करुणिसॆमगॆ सदा सुमंगलव॥10||
जलधियॊळु हत्तु कल्पदि तपवगैदु आदित्य रॊळगॆ उत्तमनॆनिसिपुरुषोत्तमन परियंक पदवैदिदॆयो महदेव॥11||
पाकशासन मुख्य सकल दिवौकसरिगॆ अभिनमिपॆऋषिगळिगॆ एकचित्तदि पितृगळिगॆ गंधर्व क्षितिपरिगॆआ कमलनाभदि यतिगळा नीककानमिसुवॆनु बिडदॆरमाकळत्रन दासवर्गकॆ नमिपॆनु अनवरत॥12||
परिमळवु सुमनदॊळगॆ अनलनु अरणियॊळगॆ इप्पंतॆदामोदरनु ब्रह्मादिगळ मनदलि तोरि तोरदलॆ इरुतिहजगन्नाथ विठलन करुण पडॆव मुमुक्षुजीवरुपरम भागवतरनु कॊंडाडुवुदु प्रतिदिनवु॥13||
||इति श्री मंगळाचरण संधि संपूर्णं॥
क्रमशः
ಶ್ರೀ ಹರಿ ಕಥಾಮೃತ ಸಾರ
ದಾಸ ವರೇಣ್ಯ ಶ್ರೀ ಜಗನ್ನಾಥದಾಸರ ಕೃತಿ
1 . ಮಂಗಳಾ ಚರಣ ಸಂಧಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜಬ್ರಹ್ಮ ಸಮೀರವಾಣಿ ಫಣೀಂದ್ರ ವೀಂದ್ರ ಭವ ಇಂದ್ರ ಮುಖ ವಿನುತನೀರಜ ಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ||1||ಜಗದುದರನ ಅತಿ ವಿಮಲ ಗುಣ ರೂಪಗಳನು ಆಲೋಚನದಿಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು||2||
ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖ ಸರೋಜೇನ ಗರುಡ ಶೇಷ ಶಶಾಂಕದಳ ಶೇಖರರ ಜನಕ ಜಗದ್ಗುರುವೇತ್ವಚ್ಚರಣಗಳಿಗೆ ಅಭಿ ವಂದಿಸುವೆ ಪಾಲಿಪುದು ಸನ್ಮತಿಯ||3||
ಆರುಮೂರೆರೆಡೊoದು ಸಾವಿರ ಮೂರೆರೆಡು ಶತಶ್ವಾಸ ಜಪಗಳಮೂರು ವಿಧ ಜೀವ ರೊಳಗೆ ಅಬ್ಜಜಕಲ್ಪ ಪರಿಯಂತ ತಾ ರಚಿಸಿಸತ್ವರಿಗೆ ಸುಖ ಸಂಸಾರ ಮಿಶ್ರರಿಗೆ ಅಧಮಜನರಿಗೆಅಪಾರ ದುಃಖಗಳ ಈವ ಗುರು ಪವಮಾನ ಸಲಹೆಮ್ಮ||4||
ಚತುರವದನನ ರಾಣಿ ಅತಿರೋಹಿತ ವಿಮಲಾ ವಿಜ್ಞಾನಿನಿಗಮ ಪ್ರತತಿ ಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ ನುತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ ತುತಿಪುದಕೆಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ||5||
ಕೃತಿರಮಣ ಪ್ರದ್ಯುಮ್ನನಂದನೆ ಚತುರ ವಿಂಶತಿದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿಭಾಗವತ ಭಾರತ ಪುರಾಣ ರಹಸ್ಯ ತತ್ವಗಳು ಅರುಪು ಕರುಣದಲಿ ||6||
ವೇದಪೀಠ ವಿರಿಂಚಿ ಭವ ಶುಕ್ರ ಆದಿಸುರ ವಿಜ್ಞಾನದಾಯಕಮೋದ ಚಿನ್ಮಯ ಗಾತ್ರ ಲೋಕಪವಿತ್ರ ಸುಚರಿತ್ರಛೇದ ಭೇದ ವಿಷಾದ ಕುಟಿಲಾಂತಾದಿ ಮಧ್ಯ ವಿದೂರ ಆದಾನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ||7||
ಕ್ಷಿತಿಯೊಳಗೆ ಮಣಿಮಂತ ಮೊದಲಾದ ಅತಿ ದುರಾತ್ಮರುಒಂದಧಿಕ ವಿಂಶತಿ ಕುಭಾಷ್ಯವ ರಚಿಸೆನಡುಮನೆಯೆಂಬ ಬ್ರಾಹ್ಮಣನ ಸತಿಯ ಜಠರದೊಳು ಅವತರಿಸಿ ಭಾರತೀರಮಣ ಮಧ್ವಭಿದಾನದಿ ಚತುರದಶ ಲೋಕದಲಿ ಮೆರೆದ ಅಪ್ರತಿಮಗೆ ವಂದಿಸುವೆ||8||
ಪಂಚಭೇದಾತ್ಮಕ ಪ್ರಪಂಚಕೆ ಪಂಚ ರೂಪಾತ್ಮಕನೆ ದೈವಕಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ಪಂಚವಿಂಶತಿ ತತ್ವ ತರತಮ ಪಂಚಿಕೆಗಳನು ಪೇಳ್ದಭಾವೀ ವಿರಿಂಚಿಯೆನಿಪ ಆನಂದ ತೀರ್ಥರ ನೆನೆವೆನನುದಿನವು||9||
ವಾಮದೇವ ವಿರಿಂಚಿತನಯ ಉಮಾ ಮನೋಹರ ಉಗ್ರ ಧೂರ್ಜಟಿಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ಕಾಮ ಹರ ಕೈಲಾಸ ಮಂದಿರ ಸೋಮ ಸೂರ್ಯಾನಲ ವಿಲೋಚನಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಲವ||10||
ಜಲಧಿಯೊಳು ಹತ್ತು ಕಲ್ಪದಿ ತಪವ ಗೈದುಆದಿತ್ಯರೊಳಗೆ ಉತ್ತಮನೆನಿಸಿ ಪುರುಷೋತ್ತಮನ ಪರಿಯಂಕ ಪದ ವೈದಿದೆಯೋ ಮಹದೇವ||11||
ಪಾಕಶಾಸನ ಮುಖ್ಯ ಸಕಲ ದಿವೌಕಸರಿಗೆ ಅಭಿನಮಿಪೆಋಷಿಗಳಿಗೆ ಏಕಚಿತ್ತದಿ ಪಿತೃ ಗಳಿಗೆ ಗಂಧರ್ವ ಕ್ಷಿತಿಪರಿಗೆಆ ಕಮಲನಾಭ ದಿಯತಿಗಳಾನೀಕಕಾನಮಿಸುವೆನು ಬಿಡದೆರ ಮಾಕಳತ್ರನ ದಾಸವರ್ಗಕೆ ನಮಿಪೆನು ಅನವರತ||12||
ಪರಿಮಳವು ಸುಮನದೊಳಗೆ ಅನಲನು ಅರಣಿಯೊಳಗೆ ಇಪ್ಪಂತೆದಾಮೋದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ಇರುತಿಹಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷುಜೀವರುಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು
||13|||
|ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ||
ಕ್ರಮಶಃ
No comments:
Post a Comment