ಚಿಂತಾಖಂಡನ ಸ್ತೋತ್ರಂ
ಭವರೋಗಗಳ ನಿವಾರಣೆಗೆ ಶ್ರೀವಾದಿರಾಜ ರಚಿತ ದಿವ್ಯಮಂತ್ರ ಪಠಿಸಿ, ಧನ್ವಂತರೀ ವಿದ್ಯೆಯಲ್ಲೂ ಸಿದ್ಧಿಸಾಧಕರೆನಿಸಿದ್ದ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು ವಿವಿಧ ದೈಹಿಕ-ಮಾನಸಿಕ ಖಾಯಿಲೆಗಳ ಹಾಗೂ ಇನ್ನಿತರ ಇಹಪರ ಸಮಸ್ಯೆಗಳ ನಿವಾರಣೆಗಾಗಿ ಮಂತ್ರತುಲ್ಯವಾದ ಸಂಜಿವಿನೀ ಸನ್ನಿಧಿಯನ್ನೊಳಗೊಂಡ ವ್ಯಾಧಿ ನಿವಾರಣಾ ಸ್ತುತಿಗಳನ್ನು ರಚಿಸಿದ್ದಾರೆ. ಕಳೆದ ಕೆಲವು ಶತಮಾನ ಗಳಿಂದ ಸಹಸ್ರಾರು ಭಕ್ತರು ಈ ಸ್ತುತಿಗಳನ್ನು ಶ್ರದ್ದಾ-ಭಕ್ತಿಯಿಂದ ಪಠಿಸಿ ವ್ಯಾಧಿಯಿಂದ ಮುಕ್ತರಾದ ವಿಚಾರ ಎಲ್ಲೆಡೆ ಜನಜನಿತವಾಗಿದೆ.
ಚಿಂತಾಖಂಡನ ಸ್ತೋತ್ರಂ
ಶ್ರೀ ಗುರುಭ್ಯೋ ನಮಃ ಹರಿಃ ಓಂ
ಸೃಷ್ಟಿ-ಸ್ಥಿತಿ-ಲಯದ ಸೊಗಸನ್ನು ಆಧ್ಯಾತ್ಮಿಕವಾಗಿ ಬಣ್ಣಿಸಿ ನಿತ್ಯ ಸತ್ಯವನ್ನು ತಿಳಿಹೇಳಿ ಸರ್ವರಕ್ಷಕನಾದ ಭಗವಂತನ ಸ್ವರೂಪ ಹಾಗೆಯೇ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬದುಕನ್ನು ಪಾರಮಾರ್ಥಿಕವಾಗಿ ದೇವರ ಪಾದಕಮಲಗಳಿಗೆ ಹೇಗೆ ಅರ್ಪಿಸಬೇಕು ಎಂಬ ನಿರೂಪಣೆ ಈ ಸ್ತೋತ್ರದ-ಹಂದರ. ಈ ಸ್ತೋತ್ರದ ಪಠಣವು ಯಾವುದೇ ತರಹದ ಮನೋವ್ಯಾಧಿಗೆ ರಾಮಬಾಣ.
ಯಯಾ ತೇ ಧರ್ಮಕಾಮೌ ಚ ಯಯಾ ತೇ ವ್ಯರ್ಥಮಾಜನಿ |ಕಿಂ ತಯಾ ಚಿಂತಯಾ ಜೀವ ಹಂತಾಹಂತಾಽಫಲಾ ತವ || ೧ ||
ಸುಖಮೀಶೇಚ್ಛಯಾ ನೃಣಾಂ ದುಃಖಂ ಚಾಪಿ ತದಿಚ್ಛಯಾ |ನ ಸ್ವೇಚ್ಛಯಾ ಭವೇತ್ಕಿಂಚದ್ದಂತಾಹಂತಾಽಫಲಾ ತವ || ೨ ||
ಅದತೋ ಮದತೋಽಂಧಸ್ಯ ಜಿಹ್ವಾಂ ಬಹ್ವಾಶಿನೋ ನರ | ಸಂತಃ ಖಾದಂತಿ ದಂತಾಸ್ತೇ ಹಂತಾ ಹಂತಾಽಫಲಾ ತವ || ೩ ||
ಮಹತ್ವೇ ತೇ ಯದಾಽಽಕಾಂಕ್ಷಾ ಮಹತ್ವೇವ ಭಯಂ ತದಾ | ಜೀವ ಕಿಂ ಜೀವನಾರ್ಥೇಽ ತಶ್ಚಿಂತಯಾ ಚಿಂತಯಾಽಚ್ಯುತಮ್ || ೪ ||
ಮಹಾಪದ್ಯಾಗತಾಯಾಂ ಹಿ ಮಹಾ ಪದ್ಯಾರ್ಥಿ ನೋಽಧುನಾ | ಹರಿಣಾ ಸ್ವೈರಿಣಾ ತ್ರಾತಾಃ ಕಿಂ ನ ಖಿನ್ನಕೃಪಾಲುನಾ || ೫ ||
ಮಮತಾ ಯೇಷು ತೇ ನಿತ್ಯಮಮತಾಸ್ತೇಽತ ಏವ ಹಿ |ಅಹಂತಾ ಯತ್ರ ತೇ ಜೀವ ನ ಹಂತಾ ತಸ್ಯ ಕಿಂ ಯಮಃ || ೬ ||
ನ ಸ್ವೇಶಾಂ ಸ್ವೇಚ್ಛಯಾs ಕಾರ್ಶೀತ್ಕಷ್ಟಂ ವಾಽತ್ಯಕ್ರಮೀದಿಹ |ನರೋ ವಾಽಪ್ಯಥವಾ ನಾರೀ ಸುರೋ ವಾಽಪ್ಯ ಸುರೋಽಪಿ ವಾ || ೭ ||
ಸ್ವೇಷ್ಟಾನಾಪ್ತ್ಯಾ ರೋದನೇನ ರುದ್ರೋs ರುದದಿತಿ ಶೃತಿಃ |ನರ್ತೇ ತ್ವತ್ಕ್ರಿಯತೇ ಕಿಂಚಿ ದಿತ್ಯಾಹಾ ನ್ಯಾಚ್ಯುತಂ ಪ್ರಭುಮ್ || ೮ ||
ಪಾರ್ಥಾನ್ಪಾರ್ಥಸತೀಮಾರ್ತಾಂ ಹರಂ ಭಸ್ಮಾಸುರಾರ್ದಿತಮ್ | ವಿರೋಚನಸ್ಯ ಪಿತರಂ ಕಃ ಕಷ್ಟಾತ್ಪ್ರಾಗ್ವ್ಯ ಮೋಚಯತ್ || ೯ ||
ಶತ್ರವೋ ಯಾಂತಿ ಮಿತ್ರತ್ವಂ ಮಿತ್ರೇ ಮಿತ್ರೇ ಸತಾಂ ಹರೌ |ಮಿತ್ರಾಣ್ಯೇವ ಚ ಶತ್ರುತ್ವಂ ಶತ್ರೌ ಶತ್ರೌ ಸುರದ್ವಿಷಾಮ್ || ೧೦ ||
ಪಿತುರ್ವಧೇ ಪುತ್ರ ಏವ ಕಾರಣಂ ಪ್ರಾಗಭೂದಿತಿ |ಕಿಂ ನ ಶ್ರುತಂ ಸರ್ಪವೈರೀ ಸರ್ಪಸ್ಯೈವಾಭಯಂಕರಃ || ೧೧ ||
ದುಃಖಾಸ್ಪೃಷ್ಟೋ ಹರಿಸ್ತ್ವೇಕೋ ದುಃಖ ಸ್ಪೃಷ್ಟಾ ಸ್ತತೋಽಪರೇ | ಅತೋ ನ ಭೀತೋ ದುಃಖೇಭ್ಯೋ ಭವಾನುಭವಧೀರಧೀಃ || ೧೨ ||
ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |ಇತಿ ಯನ್ನಿಯಮಸ್ತ ಸ್ಮಾನ್ನಿಯಮೇ ನಿಯಮಂ ಕುರು || ೧೩ ||
ಅತೋ ದುರಂತಯಾ ಸ್ವಾಂತಚಿಂತಯಾ ಕಿಂ ಚಿದಂತಯಾ | ಹಯಾನನಂ ದಯಾಸಿಂಧುಂ ಸ್ಮರ ಸ್ಮರದಭೀಷ್ಟದಮ್ || ೧೪ ||
ಆಚತುರ್ದಶಾಮಾದ್ವರ್ಷಾಧ್ಯಾ ಚಿಂತಾ ಹೃದಿ ದೇಹಿನಾಮ್ | ವಾದಿರಾಜೋ ಯತಿಸ್ತಸ್ಯಾಃ ಖಂಡನಾಯೇದಮಭ್ಯಧಾತ್ || ೧೫ ||
|| ಇತಿ ಶ್ರೀಮದ್ವಾದಿರಾಜತೀರ್ಥ ಪೂಜ್ಯ ಚರಣ ವಿರಚಿತಂ ಚಿಂತಾ ಖಂಡನ ಸ್ತೋತ್ರಮ್ ಸಂಪೂರ್ಣಮ್ ||
No comments:
Post a Comment