Tuesday, March 26, 2024

*GOVINDA KADIHANE ಗೋವಿಂದ ಕಾದಿಹನೇ

Please listen video of this post by YouTube channel CLICK HERE..

       ಗೋವಿಂದ ಕಾದಿಹನೇ



ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ

ಜಗಮೂರ್ಗಳ ಪತಿ ಗರುಡಗಮನ ಹರಿ ಗೋವಿಂದ ಕಾದಿಹನೇ || ಪ ||

ರಾಗ ನಿರಾಗ ಸುರಾಗವಾಗಿಸೆ ಬಾರೆ ಗೋವಿಂದ ಕಾದಿಹನೇ || ಅಪ ||


ಸಾಗರ ತನುಜಾ ಸಾಗರಶಯಸತಿ ಸಾಗರವಾಸಿನಿ ಬಾರೆ  | 

ಜಾಗರ ನಡೆಸುತ ಜಗಸೇರಿಹುದು ನಾಗರರರಸಿಯೆ ಬಾರೆ 

ಬೇಗ ಆವೇಗ ಸಂವೇಗ ತಣಿಸೆ ಬಾರೆ ಗೋವಿಂದ ಕಾದಿಹನೇ || ೧ ||

ರಾಗ ನಿರಾಗ ಸುರಾಗವಾಗಿಸೆ ಬಾರೆ ಗೋವಿಂದ ಕಾದಿಹನೇ || ಅಪ ||

ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ | 

ಜಗಮೂರ್ಗಳ ಪತಿ ಗರುಡಗಮನ ಹರಿ ಗೋವಿಂದ ಕಾದಿಹನೇ || ಪ ||


ರಾಮನ ಸತಿಯೇ ಶ್ಯಾಮನರತಿಯೇ ಕಾಮನೆ ಸಿದ್ಧಿಯ ತೋರೆ  |ಭೂಮಂಡಲಸಮ ಸುಮಚರಣಂಗಳ ಪಾಮರ ಜನ್ಮಕೆ ತೋರೆ 

ನೇಮ ನಿಮಿತ್ತ ಸ್ವಾಯತ್ತಗೊಳಿಸೆ ಬಾರೆ ಗೋವಿಂದ ಕಾದಿಹನೇ || ೨ ||

ರಾಗ ನಿರಾಗ ಸುರಾಗವಾಗಿಸೆ ಬಾರೆ ಗೋವಿಂದ ಕಾದಿಹನೇ || ಅಪ ||

ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ | 

ಜಗಮೂರ್ಗಳ ಪತಿ ಗರುಡಗಮನ ಹರಿ ಗೋವಿಂದ ಕಾದಿಹನೇ || ಪ ||


ಜಾನಕ ಹಲಜಾ ಭೀಷ್ಮಕ ಕುಲಜಾ ಅನಂತ ಜಲಜಾ ಬಾರೆ  | 

ಜಾನಕಿರಾಮನ ಕುಲದೇವನ ಸತಿ ಪತಿಯನು ಸೇರಲು ಬಾರೆ 

ದಾನ ಸದ್ಧರ್ಮ ಯುಗಧರ್ಮಗೊಳಿಸೆ ಬಾರೆ ಗೋವಿಂದ ಕಾದಿಹನೇ || ೩ |

ರಾಗ ನಿರಾಗ ಸುರಾಗವಾಗಿಸೆ ಬಾರೆ ಗೋವಿಂದ ಕಾದಿಹನೇ || ಅಪ ||


ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ | 

ಜಗಮೂರ್ಗಳ ಪತಿ ಗರುಡಗಮನ ಹರಿ ಗೋವಿಂದ ಕಾದಿಹನೇ || ಪ ||

ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ | 

ಹರಿ ಗೋವಿಂದ ಕಾದಿಹನೇ |ಪ|

                                    ...... ಜಾನಕಿ ರಾಮ

No comments:

Post a Comment