Wednesday, April 10, 2024

*JAYA VAU HANUMANTA. ಜಯ ವಾಯು ಹನುಮಂತ

                  ಜಯ ವಾಯು ಹನುಮಂತ 


ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ

ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ

ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ  ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ ಗಿರಿಯ ಸಂಜೀವನವ ತಂದು ಬದುಕಿಸಿದ

ಧುರದಲಿ ದುರ್ಯೋಧನನ ಬಲವನು ತಿಳಿದೆ ಅರಿತು ದುಷ್ಯಾಸನನ ಒಡಲನು ಬಗಿದೆ ಉರವ ತಪ್ಪಿಸಿ ಕೌರವನ ತೊಡೆಗಳ ಮುರಿದೆ ಹರಿಯ ಕಿಂಕರ ದುರಂಧರಗಾರು ಸರಿಯೆ

ಕಲಿಯುಗದ ಬಲು ಕಳ್ಳರುದಿಸಿ ದುರ್ಮತ ಗಳನುಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿಕಲಿಯನುಸರಿಸಲು ಗುರುವಾಗಿ ಅವತರಿಸಿ ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ

              

               ....ದಾಸ ಸಾಹಿತ್ಯ.. ವ್ಯಾಸರಾಯರು

No comments:

Post a Comment