ಆಡಿಸಿದಳು ಕೌಸಲ್ಯ ಶ್ರೀರಾಮನ
ಆಡಿಸಿದಳು ಕೌಸಲ್ಯ ಶ್ರೀ ರಾಮನ ಆಡಿಸಿದಳು ಕೌಶಲ್ಯ
ರಘುಕುಲ ಸೋಮನ ಪರಿಪೂರ್ಣ ಕಾಮನೆಂ
ಆಡಿಸಿದಳು ಕೌಸಲ್ಯ ಶ್ರೀರಾಮನ
ವಿಶ್ವಾಮಿತ್ರರ ಯಾಗವ ಮಾಡಲೇಬೇಕು
ಗೌತಮ ಪತ್ನಿಯನ್ನುದ್ಧರಿಸಲೇ ಬೇಕು
ಮಿಥಿಲೆಯ ಶಿವ ಧನುಸ್ಸನೆ ಮುರಿಯಲು ಬೇಕು
ಸೀತೆಯ ಜೊತೆ ಪುರಕೆ ನೀ ತೆರಳಬೇಕೆಂ
ಆಡಿಸಿದಳು ಕೌಸಲ್ಯ ಶ್ರೀರಾಮನ
ಪಿತನ ವಚನದಂತೆ ವನಕೆ ತೆರಳಲು ಬೇಕು
ಆಡಿಸಿದಳು ಕೌಸಲ್ಯ ಶ್ರೀರಾಮನ
ಪಿತನ ವಚನದಂತೆ ವನಕೆ ತೆರಳಲು ಬೇಕು
ಭರತಗೆ ಪಾದುಕೆನಯ ಕೊಡಲು ಬೇಕು
ಪತಿ ಮಾನವರಂತೆ ಸತಿಯ ಪೋಷಿಸಬೇಕು
ಹಿತದಿ ಸುಗ್ರೀವಗೆ ಸಖನಾಗಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ವಾನರ ಸೈನ್ಯವ ಒಟ್ಟುಗೂಡಿಸಬೇಕು
ಶರಧಿಗೆ ಸೇತುವೆಯ ಕಟ್ಟಲು ಬೇಕು
ಬಳಗ ಸಹಿತ ರಾವಣನ ವದಿಸಲು ಬೇಕು
ಜಾನಕಿ ಒಡಗೂಡಿ ಪುರಕ್ಕೆ ನೀ ಬರಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ಅಯೋಧ್ಯಾಪುರಕ್ಕೆ ನೀನರಸನಾಗಲು ಬೇಕು
ಕ್ಷೇಮ ದಯದಿಂದ ರಾಜ್ಯ ನಾಳೇ ಬೇಕು ಅನುಮಾನವಿಲ್ಲದೆ ಅಗಸನ ಕೇಳಬೇಕು ಚಿನ್ಮಯ ಸೀತೆಯನ್ನು ಹೊರಗಟ್ಟಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ಅಶ್ವಮೇಧವ ಮಾಡಿ ಅಶ್ವನೆ ಬಿಡಬೇಕು
ಲವಕುಶರಿಂದ ಮೂರ್ಚಿತನಾಗಬೇಕು
ಮಕ್ಕಳು ಸತಿಗೂಡಿ ಯಜ್ಞ ಮುಗಿಸಲು ಬೇಕು
ರಾಮನೆಂದವರಿಗೆ ಮುಕ್ತಿಯ ಕೊಡಬೇಕೆಂ
ಪತಿ ಮಾನವರಂತೆ ಸತಿಯ ಪೋಷಿಸಬೇಕು
ಹಿತದಿ ಸುಗ್ರೀವಗೆ ಸಖನಾಗಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ವಾನರ ಸೈನ್ಯವ ಒಟ್ಟುಗೂಡಿಸಬೇಕು
ಶರಧಿಗೆ ಸೇತುವೆಯ ಕಟ್ಟಲು ಬೇಕು
ಬಳಗ ಸಹಿತ ರಾವಣನ ವದಿಸಲು ಬೇಕು
ಜಾನಕಿ ಒಡಗೂಡಿ ಪುರಕ್ಕೆ ನೀ ಬರಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ಅಯೋಧ್ಯಾಪುರಕ್ಕೆ ನೀನರಸನಾಗಲು ಬೇಕು
ಕ್ಷೇಮ ದಯದಿಂದ ರಾಜ್ಯ ನಾಳೇ ಬೇಕು ಅನುಮಾನವಿಲ್ಲದೆ ಅಗಸನ ಕೇಳಬೇಕು ಚಿನ್ಮಯ ಸೀತೆಯನ್ನು ಹೊರಗಟ್ಟಬೇಕೆಂದು
ಆಡಿಸಿದಳು ಕೌಸಲ್ಯ ಶ್ರೀರಾಮನ
ಅಶ್ವಮೇಧವ ಮಾಡಿ ಅಶ್ವನೆ ಬಿಡಬೇಕು
ಲವಕುಶರಿಂದ ಮೂರ್ಚಿತನಾಗಬೇಕು
ಮಕ್ಕಳು ಸತಿಗೂಡಿ ಯಜ್ಞ ಮುಗಿಸಲು ಬೇಕು
ರಾಮನೆಂದವರಿಗೆ ಮುಕ್ತಿಯ ಕೊಡಬೇಕೆಂ
ಆಡಿಸಿದಳು ಕೌಸಲ್ಯ ಶ್ರೀರಾಮನ
No comments:
Post a Comment