Friday, May 10, 2024

HANUMANTA BALAVANTA ಹನುಮಂತ ಬಲವಂತ

                      ಹನುಮಂತ ಬಲವಂತ


ಹನುಮಂತ ಬಲವಂತ ಅತಿ ದಯವಂತಾ |
ಘನವಂತ ಕೀರ್ತಿವಂತ ಅತಿ ಜಯವಂತಾ ||
ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ |
ಯ ನೀಯೋ ದನುಜ ಕೃತಾಂತಾ ||ಪ ||

ಪಾವಮಾನಿ ಸತತ ಪಾವನ್ನ ಚರಿತಾ |
ಪಾವಕಾಂಬಕನುತಾ ಪ್ಲವಂಗನಾಥಾ ||
ದೇವ ಕರುಣಪಾಂಗಾ ಭಾವುಕತುಂಗಾ |
ಗ್ರೀವಾ ಶತಶೃಂಗ ಗ್ರಾವವೆ ಭಂಗಾ ||
ಕಾವಾ ವರವೀವಾ ಭೋದೇವ ಸಂಭವಾ | ಸುಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ |
ಕೋವಿದಾ ಕಪಿವರ ದೇವಕಿ ತನುಜನಾ ||ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ ||1||

ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಹರ ಗುಣಸಮುದ್ರಾ ಗರಳ ಅಂದು ಮೆದ್ದಾoದುoರುಳರ ವರವದ್ದಾ |ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ಗುರುವೆ ಬಲು ಮೆರೆವೇ ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಹರುಷವ ತೋರಿದೆ ಕುರುಪುರಾ
ಕೆಡಿಸುತಾ ಶರಧೀ ಬಾಗಿದ ಧೀರಾ |ವರ ಪಾಂಡವ ಸೂನು ಆವಾಸ ಯೋಗಕೆ ಸಂ | ಚರಿಸಿ ಶೌರ್ಯನೆ ಸುರನದಿ ದಾಟಿದಾ ಪರಮಹಂಸ ||2||

ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ |
ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ |
ಕುರುಪತಿ ನಿಜ ತಮ್ಮ ಬರಲವನ ಹಮ್ಮು |
ಮುರಿದೆ ಭಳಿರೆ ಬೊಮ್ಮ ಪೊರೆವನೆ ನಮ್ಮ |
ಮರುತಾ ಸುಖ ಭರಿತಾ ಸಂಹರಗೈಸುವ |
ಸಂಕರ ಗರ್ವಹರ ಸರಯು ತೀರದಲ್ಲಿದ್ದಾ |
ಪುರದಲ್ಲಿ ಮೆರದನೆ | ಗುರುವ್ಯಾಸಮುನಿಗಳ ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ | ಶರಣರ ಪಾಲಾ ಬದರಿವಾಸಾ ಯಂತ್ರೇಶಾ ||3

No comments:

Post a Comment