ವೈಶ್ವಿಕ ಪ್ರಾರ್ಥನಾ ಮಂತ್ರ ಒಂದು ಪ್ರಯೋಗ
ಪ್ರತಿ ಸೋಮವಾರ, ಮಂಗಳವಾರ ಮತ್ತು ಶನಿವಾರ ನಿಮ್ಮ ಕಚೇರಿ ಅಥವಾ ಮನೆಯ ಸಮೀಪದಲ್ಲಿರುವ ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ. ಕ್ರಿಶ್ಚಿಯನ್ ಭಾನುವಾರ ಚರ್ಚ್‌ಗೆ ಮತ್ತು ಮುಸ್ಲಿಂ ಶುಕ್ರವಾರ ಮಸೀದಿಗೆ ಹೋಗುವಂತೆ.
ಹಿಂದೂಗಳಿಗೆ ಹಿಂದೂ ಧರ್ಮದ ಆಚರಣವೇ ಅರ್ಥವಾಗುವುದಿಲ್ಲ ಮತ್ತು ಅವರು ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವುದಿಲ್ಲ ಎಂದು ಎಲ್ಲರೂ ದೂರುತ್ತಾರೆ. ಬಹುಶಃ ಸ್ವಲ್ಪ ಮಟ್ಟಿಗೆ ಅದು ಸರಿ ಅನಿಸುವ ಹಾಗಿದೆ. ವಾರಕ್ಕೆ ಮೂರು ಬಾರಿಯಾದರೂ ಒಬ್ಬರನ್ನೊಬ್ಬರು ಭೇಟಿಯಾಗಿ ಸೌಹಾರ್ದತೆ ಆಪ್ಯಾಯತೆ ಒಕ್ಕಟ್ಟು ಬೆಳೆಸುವ ನಿಯಮ ಮಾಡಿದರೆ ಹೇಗೆ ? ಪ್ರಯತ್ನಿಸಿ ಪಾರಿವಾರದವರೆಲ್ಲರೂ ಹೋಗುವುದು ಒಳ್ಳೆಯದು ವಿಶೇಷವಾಗಿ ಮಕ್ಕಳನ್ನುಮಾತ್ರ ಕರೆದೊಯ್ಯಲೆ ಬೇಕು.
ನಾವು ನಮ್ಮ ನಿರ್ಜನ ದೇವಾಲಯಗಳಿಗೆ, ಶಕ್ತಿ ಮತ್ತು ಸಂಘಟಿತ ಸ್ಥಳಗಳನ್ನಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿ ಬೆಳೆಸಿದಂತಾಗುತ್ತದೆ
ಪ್ರತಿ ಸೋಮವಾರ, ಮಂಗಳವಾರ ಮತ್ತು ಶನಿವಾರದಂದು ಸಂಜೆ 7:00 ರಿಂದ 7:30 ರವರೆಗೆ ನೀವು ಎಲ್ಲೇ ಇದ್ದರೂ ಹತ್ತಿರದ ದೇವಸ್ಥಾನವನ್ನು ತಲುಪಬೇಕು ಎಂಬ ನಿಯಮವನ್ನು ಮಾಡಿಕೊಳ್ಳೋಣ ಅಲ್ಲಿ ಹನುಮಾನ್ ಚಾಲೀಸಾ ಮತ್ತು ಶ್ರೀ ವೆಂಕಟೇಶ ಶ್ರೀ ಶಂಕರ ಭೋಲೆನಾಥ ಶ್ರೀ ಗಣೇಶ ಮತ್ತು ಶ್ರೀ ಮಾರುತಿರಾಯರ ತಮ್ಮ ತಮ್ಮ ಶ್ರದ್ಧಾ ದೇವರುಗಳ ಧೂಪಾರತಿಯ ಸಮಯ ಎಂದು ತಿಳಿದುಕೊಂಡು ತಪ್ಪದೆ ಪಾಲಿಸುವ ಪರಿಪಾಠ ಇಟ್ಟುಕೊಳ್ಳೋಣ .
ನೀವು ನಿಮ್ಮ ಮನೆಯಲ್ಲಿಪೂಜೆ ಮಾಡುತ್ತಿದ್ದರೂ ಮನೆಯ ಹತ್ತಿರದ ದೇವಸ್ಥಾನದಲ್ಲಿ. ಪ್ರತಿ ಸೋಮವಾರ, ಮಂಗಳವಾರ ಮತ್ತು ಶನಿವಾರ ಸಂಜೆ 7:00 ರಿಂದ 7:30 ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳೋಣ ( ಹೋಗುವಾಗ ಎಲ್ಲರೂ ತಮ್ಮ ತಮ್ಮ ಶ್ರದ್ಧಾ ಲಾಂಛನಗಳಾದ ಗಂಧ ವಿಭೂತಿ ಭಸ್ಮ ತಿಲಕಗಳಣ್ಣಿಟ್ಟುಕೊಂಡು ತತ್ಸಮ ಉಡುಪುಗಳನ್ನು ಧರಿಸಿ ಹೋದರೆ ಇನ್ನೂ ಒಳಿತು )
ಊಹಿಸಿ, ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿ ದೇವಸ್ಥಾನಕ್ಕೆ 50 ರಿಂದ 100 ಜನ ಸೇರಿ ಒಕ್ಕೋರಲಿನಿಂದ ಜಾಗಟೆ ಶಂಖ ಮೊಳಗಿಸುತ್ತ. ಆರತಿ ಹಾಡುಗಳನ್ನು ದಾಸರ ಪದಗಳನ್ನೊ, ವಚನಗಳನ್ನೊ ಹಾಡುತ್ತ ಪ್ರತಿ ಸೋಮವಾರ, ಮಂಗಳವಾರ ಮತ್ತು ಶನಿವಾರ ಸಂಜೆ 7:00 ರಿಂದ 7:30 ರವರೆಗೆ ಆರೋಗ್ಯ ಪೂರ್ಣ ದೈವಿ ಮಿಶ್ರ ಸಂಗೀತವನ್ನು ಹಚ್ಚಿ ಮಾಡಲು ಪ್ರಾರಂಭಿಸಿದರೆ...
ಭಾರತದ ಈ ದನಿ ಪ್ರಪಂಚದಾದ್ಯಂತ ಹೋಗುತ್ತದೆ. ಇದರ ಪರಿಣಾಮವೂ ದೂರಗಾಮಿಯಾಗಲಿದೆ.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ತಮ್ಮ ದೇವಸ್ಥಾನಗಳಲ್ಲಿ ಸೇರಿದಾಗ, ಇಂದಿನ ರಾಷ್ಟ್ರೀಯ ಸಮಸ್ಯೆಗಳೆಲ್ಲವೂ ಕರ್ಪೂರದಂತೆ ಕರಗಿ ಹೋಗಬಹುದು ಮಾಯವಾಗಬಹುದು ಎಂದು ಅನಿಸುತ್ತದೆ. ಮನಃ ಪೂರ್ವಕವಾಗಿ ಮಾಡಿ ನೋಡಲು ಯಾವ, ಯಾರ ಅಭ್ಯಂತರ ಇರಲಾರದು.
ಹಿಂದೂ ಜನ ಜಾಗೃತಿಗಾಗಿ ಇದೊಂದು ವೈಶ್ವಿಕ ಪ್ರಾರ್ಥನಾ ಮಂತ್ರ
ಮಂತ್ರಪುಷ್ಪಾಂಜಲೀ
ಆರತಿಯನ್ನು ಮಾಡಿದ ನಂತರ ಮಂತ್ರ ಪುಷ್ಪಾಂಜಲಿಯನ್ನು ಅರ್ಪಿಸುವ ಪದ್ಧತಿಯಿದೆ.
ಇಲ್ಲಿ ನೀಡಿರುವ ಮಂತ್ರ ಪುಷ್ಪಾಂಜಲಿಯು 'ವೇದೋಕ್ತ'ವಾಗಿದೆ (ವೇದಗಳಲ್ಲಿ ಉಲ್ಲೇಖಿಸಿದಂತ). ವೇದೋಕ್ತ ಮಂತ್ರಗಳು ಸ್ವರ ಶಾಸ್ತ್ರಾನುಸಾರವಾಗಿರುತ್ತವೆ. ಆದುದರಿಂದ ಈ ಮಂತ್ರಗಳನ್ನು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವವರ ಹತ್ತಿರ ಸರಿಯಾಗಿ ಕಲಿತುಕೊಂಡು ಉಚ್ಚರಿಸಬೇಕು.
ಮಂತ್ರಪುಷ್ಪಾಂಜಲೀ
ಓಂ ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ | ತೇ ಹ ನಾಕಂ ಮಹಿಮಾನ: ಸಚಂತ ಯತ್ರ ಪೂರ್ವೇ ಸಾಧ್ಯಾ: ಸಂತಿ ದೇವಾ: ||
ಓಂ ರಾಜಾಧಿರಾಜಾಯ ಪ್ರಸಹ್ಯಸಾಹಿನೇ | ನಮೋ ವಯಂ ವೈಶ್ರವಣಾಯ ಕುರ್ಮಹೇ | ಸ ಮೇ ಕಾಮಾನ್ ಕಾಮ ಕಾಮಾಯ ಮಹಿಯಂ ಕಾಮೇಶ್ವರೋ ವೈಶ್ರವಣೋ ದದಾತು | ಕುಬೇರಾಯ ವೈಶ್ರವಣಾಯಾ ಮಹಾರಾಜಾಯ ನಮ: |
ಓಂ ಸ್ವಸ್ತಿ | ಸಾಮ್ರಾಜ್ಯಂ ಭೌಜ್ಯಂ ಸ್ವಾರಾಜ್ಯಂ ವೈರಾಜ್ಯಂ ಪಾರಮೇಷ್ಠ್ಯಂ ರಾಜ್ಯಂ ಮಹಾರಾಜ್ಯಮಾಧಿ ಪತ್ಯಮಯಂ ಸಮಂತಪರ್ಯಾ ಈಸ್ಯಾತ್ ಸಾರ್ವ ಭೌಮ: ಸಾರ್ವಾಯುಷ ಆಂತಾದಾಪರಾರ್ಧಾತ್ | ಪೃಥಿವ್ಯೈಸಮುದ್ರ ಪರ್ಯಂತಾಯಾ ಏಕರಾಳಿತೀ | ತದಪ್ಯೇಷಶ್ಲೋಕೋ ಭಿಗೀತೋ “ಮರುತ: ಪರಿವೇಷ್ಟಾರೋ ಮರುತ್ತಸ್ಯಾ ವಸನ್ ಗೃಹೇ | ಆವಿಕ್ಷಿತಸ್ಯಕಾಮಪ್ರೇರ್ವಿಶ್ವೇದೇವಾ: ಸಭಾಸದ” ಇತಿ |
No comments:
Post a Comment