Tuesday, August 20, 2024

Mahalaxmi Aarati ಮಹಾಲಕ್ಷ್ಮಿ ಆರತಿ

                         ಮಹಾಲಕ್ಷ್ಮಿ ಆರತಿ 


ಆರುತಿ ಬೆಳಗಿರಿ ನಾರಿಯರು ಬೇಗ 

ಆದಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 

ಹಾಡುತ ಪಾಡುತ ಜಾಣೆಯರೆಲ್ಲರೂ 

ಆದಿ ನಾರಾಯಣ ಪ್ರಿಯಳಿಗೆ


ಪಿಲ್ಲೆ ಕಾಲುಂಗುರ ಲಲ್ಲು ಪೈಂಜಣರುಳಿ 

ಘಿಲ್ಲು ಘಿಲ್ಲೆಂದು ಹೆಜ್ಜೆಯ ನಿಡುತ 

ಉಲ್ಲಾಸದಿಂದಲಿ ನಡುವಿಗೋಡ್ಡಾಬ

ಫುಲ್ಲ ನಾಭನ ಪ್ರಿಯಳಿಗೆ ೠ


ಜರದ ಪೀತಾಂಬರ ನೀರಿಗೆಗಳಲೆಯುತ

ಝಗ ಝಗಿಯಿಂದ ಹೊಳೆಯುತ

ತೊಟ್ಟ ಕಂಚುಕ ಇಟ್ಟ ಒಂಕಿಯ ತೋಡೆ 

ಬೆಟ್ಟದ ವೆಂಕೋಬನ ಮಡದಿಗೆ


ಚೌರಿಗಾಗುಟಿ ಗೊಂಡೆ ಹೆರಳು ಬಂಗಾರ 

ಬುಗುಡಿ ವಾಲಿಗಳು ಹೊಳೆಯುತಲಿ 

ಸಡಗರದಿ ಕುಡಿಯ ಕುಂಕುಮ ಹಚ್ಚಿ 

ಒಡೆಯ ವೆಂಕೋಬನ ಮಡದಿಗೆ

                                                 ವೆಂಕೋಬ

No comments:

Post a Comment