ಗೊಳಗೆಪ್ಪನ ಡೊಳ್ಳಿನ ಪದ
ಗೋವಿಂದಪುರ ಶ್ರೀ ಗೋವಿಂದ ರಾಜ ದೇವರ ಡೊಳ್ಳಿನ ಪದ
ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಘೇ
ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಉಘೇ ಉಘೇ
ಬರ್ರೆಲ್ಲ ಕೇಳಕ್ಕ ಬರ್ರೇಲ್ಲ ನೋಡಲಿಕ್ಕ
ಬರ್ರೆಪ್ಪೋ ಗೋವಿಂದ ನೋಡ್ರೆಪ್ಪೋ ಘೇ..|| ಸ್ವಾಮಿ ||
ನೀರ್ಗಣ್ಣ ಮೀನಾಗಿ ಎಲ್ಲರ ಹೊತ್ತಿಗಿ
ಎಂಗಾಡಿ ರಾಕ್ಷಸರ ಕೊಂದಾನ್ನ|
ಸಂಗಾಡಿ ದುಷ್ಟರ ಕೊಂದು ವೇದ ಉಳಿಸಿ
ಬಂಗಾರ ಒಡಲನಿಗೆ ಕೊಟ್ಟಾನ್ನ ಘೇ....|| ಸ್ವಾಮಿ ||
ದೊಡ್ಡ ನೀರೀನಾಗ ನಮ್ಮಯ ಆಮೇಯ
ಗುಡ್ಡದ ಬೆನ್ನಲ್ಲಿ ನಿಂತಾನ್ನ|
ಗುಡ್ಡದ ಬೆನ್ನಲ್ಲಿ ರೇವಿಗೆ ಹೊತ್ಗೊಂಡು
ಮಡ್ಡ ಅಸುರ ಹುಚ್ಚ ಮಾಡ್ಯಾನ. ಘೇ. || ಸ್ವಾಮಿ ||
ಕಣ್ಣು ಕೆಂಪನ್ನ ಕಾಡಿನ ಹಂದ್ಯಾಗಿ
ಕಣ್ಣ ಬಂಗಾರನ್ನ ಕೊಂದಾನ್ನ |
ಕಣ್ಣ ಬಂಗಾರನ ಕೊಂದು ಲಕ್ಕವ್ವನ |
ಘನ್ನ ಗೋವಿಂದನಿಗಿತ್ತಾನ್ನ. ಘೇ.|| ಸ್ವಾಮಿ ||
ಸಿಟ್ಟಿನ ಸಿಂಹದು ಮೈಯ ಮನಶ್ಯಾರಂಗ |
ಹೊಟ್ಟೆಯ ಕರುಳನ್ನ ಕೊಳ್ಳೀಗಿಹಾಕ್ಯಾನ |
ಹೊಟ್ಟೆಯ ಕರುಳ ತಗದಾನ ನಮ ದೆವ
ಪುಟ್ಟನಿಗೆ ವರವ ಕೊಟ್ಟಾನ್ನ ಘೇ. || ಸ್ವಾಮಿ ||
ಹುಡಗ ಹಾರುವನು ಗಿಡ್ಡ ವಾಮನಂಗ
ನಡು ನೆಲ ಮುಗಿಲಕ್ಕ ಬೆಳೆದಾನ |
ಕಡೆಗೆ ಬೆಳೆದು ತೆಳಗ ರಾಜ ಬಲಿಯನ್ನು
ತಡೀದೇ ಪಾತಾಳಕ್ಕ ಹಾಕ್ಯಾನ. ಘೇ.|| ಸ್ವಾಮಿ ||
ಅವ್ವ ಮಾತನು ಕೇಳಿ ಸಾವಿರ ಕೈಯವನ |
ಆವು ಕಳ್ಳನ್ನ ಕೊಂದಾನ್ನ |
ಆವು ಒಯ್ದವನ ಕೊಂದು |
ಅವನಿ ಗೆದ್ದು ಹಾರುರಿಗಿ ಕೊಟ್ಟಾನ ಘೇ || ಸ್ವಾಮಿ ||
ಪಿಂಗಳ ಕಣ್ಣಿನ ರಾಮ ಕೋತಿಗಳ ಹುಡಕೀ |
ಛಂಗನೆ ಲಂಕೆಗೆ ಹೋಗ್ಯಾನ |
ಹೊಂಗ ಲಂಕೆಗೆ ಹೋಗಿ |
ಹೆಂಗಳ್ಳ ರಾವಣಗ ಕೊಂದಾನ ಘೇ. || ಸ್ವಾಮಿ ||
ಕರಿ ಹೊಲದೊಳಗ ಆಕಳ ಕಾಯುತ್ತಾ |
ಹೊಳೆಯ ಮಡುವಿನಾಗ ಹಾರ್ಯಾನ |
ಉರಗನ ಹತಲಮ್ಯಾಲ ಹಾರಾರಿ ಕುಣಿದಾನ
ಯಾರ್ಯಾರಿಗೆಲ್ಲಾನೆ ಕೊಟ್ಟಾನ ಘೇ. || ಸ್ವಾಮಿ ||
ತಂಡತಂಡದಿಂದ ಒಳ್ಳೆಯ ಮಂದೀಗಿ |
ಕಂಡ ಕಂಡಲ್ಲಿ ತಿರುಗಸ್ಯಾನ |
ಕಂಡಕಂಡಲ್ಲಿ ತಿರುಗಿ ಶ್ಯಾಣ್ಯಾರನ್ನ |
ಕೆಂಡ ಬುದ್ಧಿರ ಕೂಡಸ್ಯಾನ ಘೇ. || ಸ್ವಾಮಿ ||
ಚೆಲುವ ತರಳೆಯ ತುರುಗನ್ನ ಮಾಡಿ |
ಒಳ್ಳೆಯ ಶೂರನೇ ಆಗ್ಯಾನ |
ಒಳ್ಳೆ ವೀರನು ಕೆಟ್ಟವರ ಹೆಡಮುರಿಗಿ |
ಡೊಳ್ಳು ಹೊಟ್ಟೆಯ ಕಟ್ಟಿ ಒದ್ದಾನ ಘೇ. || ಸ್ವಾಮಿ ||
ಡೊಳ್ಳಿನ ಕೈಯನ್ನು ಗೊಳಗೆಪ್ಪ ಹಾಕ್ಯಾನ |
ಹೊಳ್ಳೊಳ್ಳಿ ಹೊಳಿ ಭೀಮಾ ನೋಡ್ಯಾನ |
ಹೊಳಿ ಭೀಮಾ ಮುಂದಿರುವ |
ಒಳ್ಳೆ ಗೋವಿಂದ ನಮಗೆಲ್ಲ ಕೂಡ್ಸ್ಯಾನ ಘೇ ||ಸ್ವಾಮಿ||
ಗೋವಿಂದ ಗೋವಿಂದ |
ಗೋವಿಂದಪುರ ಗೋವಿಂದ |
ಗೋವಿಂದ ದಾಸ ವಿಕ್ರಮ |
ಗೋವಿಂದರಾಜ ಅಂತ ಕುಣಿದಾನ ಘೇ. || ಸ್ವಾಮಿ || ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಘೇ ಉಘೇ
ಜಯಶ್ರೀ ನಂದನ
No comments:
Post a Comment