Thursday, October 03, 2024

*BRAHMACHARINI II. ಬ್ರಹ್ಮಚಾರಿಣಿ ೨

                         ಬ್ರಹ್ಮಚಾರಿಣಿ ೨


ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ |

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||


ಗೋಧೂಳಿ ಸಮಯದಲಿ ಬಲಗಾಲು ಮೊದಲಿಟ್ಟು 

ಮನೆಯೊಳಗೆ ಬಾರಮ್ಮ ಬ್ರಹ್ಮಚಾರಿಣಿಯೇ 

ಹೆಂಗಳೆಯರೆಲ್ಲರಿಗು ಧೃಢಭಕುತಿ ಕಲಿಸು ಬಾ 

ಮೃಡನನ್ನು ಧೃಡತೆಯಲಿ ನೀನೊಲಿಸಿದಂತೆ 


ಅಸುರಹಂದೇವಿಯೇ ಪಾದ್ಯ ಅರ್ಪಿಸುವೆ 

ಪಾದಚಿಹ್ನೆಗಳನೆಮ್ಮ ಮನದಿ ಮೂಡಿಸು ಬಾ 

ಷಡ್ಶೀತಿಚಕ್ರಗಳ ಅಭಿಮಾನಿ ದೇವತೆಯೇ 

ಅರ್ಘ್ಯದ ಉಪಚಾರ ಗ್ರಹಿಸಲೋಸುಗ ಬಾ 

ಮೃಡನನ್ನು ಧೃಡತೆಯಲಿ ನೀನೊಲಿಸಿದಂತೆ 

ಹೆಂಗಳೆಯರೆಲ್ಲರಿಗು ಧೃಢಭಕುತಿ ಕಲಿಸು ಬಾ


ಮೃತ್ತಿಕಾಘಟ ಹಿಡಿದು ಶ್ವೇತ ವಸನವ ಧರಿಸಿ 

ಮಂಗಲಾಚಮನಕ್ಕೆ ಅಣಿಯಾಗು ಬಾ 

ಅಸುರ ಪ್ರಾಕಂಡನ ಸೈನ್ಯವನು ಬೂದಿಸಿಹೆ 

ಬೂದಿ ರಾಚಿದ ಮನಕೆ ಕಣಿಯಾಗು ಬಾ  

 ಮೃಡನನ್ನು ಧೃಡತೆಯಲಿ ನೀನೊಲಿಸಿದಂತೆ 

ಹೆಂಗಳೆಯರೆಲ್ಲರಿಗು ಧೃಢಭಕುತಿ ಕಲಿಸು ಬಾ

                                 .     .........ಜಾನಕಿ ರಾಮ 

                      (ಸೀತಾರಾಮ ಕಟ್ಟಿ ಯಲಗೂರು)


No comments:

Post a Comment