Friday, October 04, 2024

*CHANDRA GHANTA III " ಚಂದ್ರಘಂಟಾ ೩ "

                        ಚಂದ್ರಘಂಟಾದೇವಿ



ಪಿಂಡಜ ಪ್ರವರಾ ರೂಢಾ ಚಂಡ ಕೋಪಾಸ್ತ್ರಕೈರ್ಯುತಾ |  
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಮಂದಿರಕೆ ಬಂದಿಹಳು ಚಂದ್ರಘಂಟಾದೇವಿ
ವೃಕನ ವಾಹನವಾಗಿ ಕೊಂಡು ಬಂದಿಹಳು
ಖೂಳ ಜತುಕನ ಕತ್ತು ಚಂಡಾಡಿ ಮರಳಿಹಳು 
ಎರಗಿರೋ ಚರಣಕೆ ಅಂಬೆ ನಿಂದಿಹಳು.

ಗಂಡನಿಲ್ಲದ ವೇಳೆ ಆಪತ್ತು ಒಕ್ಕರಿಸೆ 
ವಿಚಲಿತತೆ ತೋರದೆಯೇ ಧೈರ್ಯವಾಗಿ 
ಘಂಟೆಯ ನಾದದಿಂ ವೈರಿಯ ನಿಗ್ರಹಿಸಿ 
ಸೆಣಸಿದಳು ರಕ್ಷಣೆಗೆ ದಿಟ್ಟವಾಗಿ 
ಗೃಹಿಣಿಯ ಶಕ್ತಿಯನು ಜಗದಗಲ ಸಾರಿಹಳು
ಎರಗಿರೋ ಚರಣಕೆ ಅಂಬೆ ನಿಂದಿಹಳು.

ವಿವಿಧ ನದಿಗಳ ಜಲವ ತಂದಿಹೆವು ಚಂದ್ರಿಕೆಯೆ 
ಯುಧ್ಧ ಮಾಡಿಹ ದೇಹ ಶುದ್ಧಿಗಾಗಿ 
ಬಣ್ಣ ಬಣ್ಣದ ಹೂವ ಮಾಲೆಗಳು ನೀಡುವೆವು 
ಕನಕ ವರ್ಣೆಯ ವಿಭೆಯ ವೃದ್ಧಿಗಾಗಿ 
ಮಣಿಪುರದ ಚಕ್ರದಲಿ ಯೋಗದಿಂ ನೆಲೆಸಿಹಳು  
ಎರಗಿರೋ ಚರಣಕೆ ಅಂಬೆ ನಿಂದಿಹಳು.

                                       ..... ಜಾನಕಿ ರಾಮ 

                       ಸೀತಾರಾಮ ಕಟ್ಟಿ ಯಲಗೂರು 











No comments:

Post a Comment