Thursday, October 03, 2024

*SHAILAPUTRI. I ಶೈಲಪುತ್ರೀ. ೧

                              ಶೈಲಪುತ್ರೀ - ೧

ಆವಾಹನ , ಧ್ಯಾನ , ಆಸನ 
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಶೈಲಪುತ್ರಿ 
ಆಧ್ಯಾನದಲಿ ಮೈಮರೆತಿರುವೆವು 
ತುಂಗಜೆ ಬಂದು ಆಸನಿಸು
ಮೂಲಾಧಾರದಿ ಮನಸನು ನಿಲ್ಲಿಸು
ಯೌಗಿಕ ಪಯಣವ ನೀ ಹರಿಸು 

ವೃಷಭಾರೂಢಾ ವೃಷವಾಹನಸತಿ
ಜನಕನ ಯಜ್ಞದಿ ಆಗಮಿಸಿ
ಖಲ ಉಕ್ತಿಗಳ ಸಹಿಸದೆ ದೇಹವ
ಪೂರ್ಣಾಹುತಿಯಲಿ ನೀ ದಹಿಸಿ 
ಸಹನಾಸಹನೆಯ ಮಿತಿಯನು ತೋರಿದೆ
ಸಹನಾಯೋಗವ ಬಿತ್ತರಿಸು

ತೋಯಜಧಾರಿಣಿ ಸಮುದಯಕಾರಿಣಿ 
ರುದ್ರಾಮ್ಕುಶವನು ಧೃಢವಹಿಸಿ 
ಪುನರಾಜಾತಿಯ ಪಡೆದರು ಛಲದಲಿ 
ಶಂಕರನನ್ನೇ ಮರುವರಿಸಿ 
ಪಾತಿವ್ರತ್ಯದ ಮಹತಿಯ ಸಾರಿದೆ 
ಧರೆಯಲಿ ಧರ್ಮವ ಸಂಘಟಿಸು 
                                     ..........ಜಾನಕಿ ರಾಮ 

                     (ಸೀತಾರಾಮ ಕಟ್ಟಿ ಯಲಗೂರು) 

No comments:

Post a Comment