Sunday, October 06, 2024

SHRI SHANAISHCHARA CHARITAM III ( 01- 226 ) ಶ್ರೀ ಶನೈಶ್ಚರ ಚರಿತಂ ೩

  SHRI SHANAISHCHARA CHARITAM  III  ( 01- 226 )
 ಶ್ರೀ ಶನೈಶ್ಚರ ಚರಿತಂ  ೩ 
                                                           || श्री शनैश्चर देवताभ्यो नमः ||
                               ( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )
ತೃತೀಯ ಸವಿಗಥಾ ಸಂಧಿ ೩ 

( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

 ಓಂ ನಮೋ ಗಣಪತಯೇ ವಂದಿಪೆ 
ಸನ್ನುತಿಪೆ ಶಾರದೆಯೆ ವೀಣೆಯೇ 
ಮುನ್ನುಡಿಯ ಮೊದಲಲ್ಲಿ ನಿಮ್ಮಯ ಕೃಪೆಯ ಬೇಡುವೆನು 1
ಶ್ರೀ ಗುರುವೇ ಕೃತಿ ಮೊದಲು ಒಂದಿಪೆ 
ನೀಗಿಪುದು ಬೌದ್ಧಿಕದ ತೊಂದರೆ 
ರಾಗ ರಂಜನೆ ನವ ರಸಂಗಳ ತಾನೆ ಬರುವಂತೆ.  2
ಮಂದಮತಿಗೆ ಮತಿಯ ನೀಯಲು 
ಮಂದ ದೇವನೇ ನಿನಗೆ ನಮಿಸುವೆ 
ಅಂದದಿಂದಲೇ ಆಜ್ಞೆ ಕೊಡಲು ಮಹತಿಯಂ ನುತಿಸೆ6. 3
ಎರಡನೆಯ ಸವಿಗತೆಯ ಸಂಶಯ 
ಬರುತೆ ವಿಕ್ರಮ ನಿಧಿಯ ಕುಂಬಳ 
ಇರಿಸಿ ನೀಗಿಪುದಾಗದೆ ತನ್ನಂತೆಯಾಗಿಹುದು  4
ಮೂಲ ಗುರ್ಜರ ಭಾಷೆಯಿಂದಲೇ 
ಮೇಳವಿಸಿ ರಸ ಉಸಿರು ಕನ್ನಡ 
ಮೇಲುನುಡಿ ಗ್ರಹಗಳರಿವೆನು ತೊಡರು ನೀಗಿಸುವ 5
ಭಾರತಿಯ ನಾಭಿಯನೆ ಶೋಭಿಪ
ತೋರುತಿಹ ಉಜ್ಜಯಿನಿ ಜೈ ಪುರಿ 
ವೀರ ವಿಕ್ರಮನಲ್ಲಿ ಜರುಗಿತು ಒಂದು ಘಟನೆಯದು 6
ಒಂದು ದಿನ ಮುಂಜಾವು ಸಭೆಯೊಳು 
ಬಂದ ಶಂಕೆಯ ವಿವರಿಸುತ ನೃಪ 
ನಂದ ಪಂಡಿತರಲ್ಲಿ ಗ್ರಹಗಳ ಕುರಿತು ಪ್ರಶ್ನಿಸಿದ  7
ಕಾಡುವವು ಕಲ್ಯಾಣ ಮಾಳ್ಪವು 
ಆಡಿಪವು ನರರನ್ನು ಕಟುಬರ 
ನೋಡು ಬೊಂಬೆಯ ತೆರದಿ ಕುಣಿಸುತವೆಂದು ಕೇಳಿದನು 8
ಗೃಹಗಳಲಿ ಗ್ರಹ ಶ್ರೇಷ್ಠ ಗ್ರಹವದು 
ಇಹುದು ಯಾವುದು ಎಂತು ಪೂಜೆಯು 
ಮಹತಿ ಹೇಳಿರಿ ಗತಿ ಮತಿಯ ಸ್ಥಿತಿ ರೂಹ ವಿಸ್ತರಿಸಿ 9
ಬುಧರು ಹೇಳಿದ ನೃಪನ ಮಾತಿಗೆ 
ವಿಧ ವಿಧದ ಹೊತ್ತಿಗೆಗಳಾಲಿಸಿ 
ಸದವಕಾಶವು ಎಂದು ತಮ ಪಾಂಡಿತ್ಯ ತೋರಿದರು  10
ಮಿತ್ರ ಗ್ರಹ ಬಹು ಶ್ರೇಷ್ಠ ಕಶ್ಯಪ 
ಗೋತ್ರಜನು ಕಾಳಿಂಗ ದೇಸಿಗ 
ಕ್ಷತ್ರಿಯನು ವರಹಸ್ತ ಕೆಂದಾವರೆಗಳಿಂ ಶೋಭೆ   11
ಸಪ್ತ ಕುದುರೆಗಳಿಂದ ಒಪ್ಪುವ 
ತಪ್ತ ವರ್ಣ ಉಪಸ್ಥ ಆಸನ 
ಸಪ್ತ ಸಾಸಿರ ಜಪಗಳಿಂ ಖಗದೇವ ಒಲಿಯುವನು 12
ರನ್ನ ಮಣಿ ಗೋಧೂಮ ಧಾನ್ಯವು 
ಅನ್ನ ಗುಡ ನೈವೇದ್ಯ ವರ್ಪಿಸಿ 
ಸನ್ನುತಿಸೆ ನಡು ತಾಮ್ರ ಧಾತುರ್ ಮೂರ್ತಿ ಸ್ಥಾಪಿಸುವ 13
ಪ್ರತ್ಯಕ್ಷದಲ್ಲಿ ತಾ ಕಾಣುವ ಗ್ರಹ 
ನಿತ್ಯವೂ ನಿಜ ರಶ್ಮಿ ತೋರ್ಪ್ಪನು 
ಸತ್ಯವೂ ಇವನಾಗಜ್ಞೆ ಪಾಲಿಸೆ ಇತರ ಗ್ರಹಗಳವು 14
ಭಾನುಪಾಸನೆ ಜಪ ಪರಾಯಣ 
ಮಾನವಗೆ ಬಹ ವಿಘ್ನ ದೂಷಣ 
ಜ್ಞಾನುದಯದಿಂದ ದೂರದೂರಿತವು ಆದಿ ವ್ಯಾದಿಗಳು 15
ನೆನಹಿನಿಂದಲೇ ಚಿಂತಿಸಿದ ಇಹ 
ಮನದ ಬೇಡಿಕೆ ಪೂರ್ತಿ ಮಾಳ್ಪನು 
ಜನಜನಿತ ಆಗಿರ್ಪನೆಮ್ ಪಂಡಿತನು ಹೇಳಿದನು 16
ದ್ವಿತೀಯ ಪಂಡಿತನೆದ್ದು ಪೇಳ್ದ ನ- 
ದ್ವಿತೀಯನಿಹ ಚಂದ್ರತ್ರಿ ಗೋತ್ರಜ 
ತೃತೀಯ ನೇತ್ರನ ಪ್ರೀತಿ ಪಾತ್ರನು ಯಮುನೆ ತೀರಿಗನು 17
ಕವಲು ಕರಗದೆ ಅಭಯ ತೋರ್ಪವು 
ಧವಲದಾರ್ಣವ ಧವಲ ವಸ್ತ್ರವು 
ಪೂವಡಿಯ ಕುಲಜನಿಸಿದವ ಪಾಲಡಿಗೆ ಪ್ರಿಯಕರನು 18
ಪತ್ತು ಹಯರತ ಸ್ಪಟಿಕಮೂರ್ತಿಯ 
ಮುತ್ತು ಮಣಿ ನೆಲ್ಲಕ್ಕಿ ಈವುದು 
ಮತ್ತೆ ಜಪ ಪನ್ನೊಂದುಸಾಸಿರ ಮಾಳ್ಪುದೇ ಲೇಸು 19
ಆಗ್ನೇ ದಿಕ್ಕಿಗೆ ನಿಲಿಸಿ ಜಪಿಸಲು 
ವಿಘ್ನವೆಲ್ಲವೂ ಪರಿಹರಿಪ ಮನ 
ಭಗ್ನವಂ ದೂರಿಪನು ಅಮೃತವರ್ಷಣಿಯ ಮಾಡಿ 20
ಸಸ್ಯಗಳಿಗತಿ ಪ್ರಿಯನಾಗಿಹ 
ಆಸರದಿ ರಕ್ಷಿಪನು ವನಗಳ 
ಆಸತಿಯೇ ತಾ ರಜನಿ ದೇವಿಯು ತಾರೆ ವೃಂದದಲಿ. 21
ಕಾಡದೇ ಕಲ್ಯಾಣ ಬಯಪನು 
ಮಾಡಿರಲು ಜಪ ತಪವು ಭಕ್ತನು 
ಷೋಡಶದ ಕಲೆ ಕಲೆಗಳಿಂ ಕಾಣುವನು ಚಂದ್ರಮನು 22
ಅಕ್ಕಸಾಲಿಗನಿಹನು ಮಂಗಳ 
ಅಕ್ಕು ಭಾರದ್ವಾಜ ವಂಶಜ
ಇಕ್ಕು ದೇಶವವಂತಿ ಎಂಬುದು ಇಹುದು ಭೌಮನಿಗೆ. 23
ಶಕ್ತಿ ಶೂಲ ಗದೆಗಳಿಂ ವರ 
ಹಸ್ತನಾಗಿಯೇ ಟಗರ ದೇರನು. 
ತಪ್ತಮೈ ವೈವಸ್ತ್ರ ಧಾರಿಯು ಕ್ರೂರ ಮಂಗಳನು 24
ಹವಳ ರತ್ನ ಅಢಳ ಧಾನ್ಯವು 
ಅವಗೆ ಸಲ್ವುದು ಹವಿಷ್ಯಾನ್ನವು
ತಾವು ಕುಜನ ಮೂರುತಿ ಚಂದನ ಕಾಷ್ಟ ನಿರ್ಮಿತವು 25
ಜಪದ ಸಂಖ್ಯೆಯು ಒಂದು ಸಾವಿರ 
ತಪಿಸಿ ಗೈಯಲು ಮನದಬಿಷ್ಟವ 
ಸಫಲ ಮಾಳ್ಪನು ನಾಸ್ಥಿಕಂಗೆ ನಾಶ ಮಾಡುವನು. 26
ಸಿಂಡರಿಸಿದ ನೋಟ ಕೆರಳಿದ 
ಖಂಡ ಧಾರೆಯ ತೆರದಿ ಇರಲದು
ಭಂಡ ಗರ್ವದ ನಿಂದಕರ ಕಳುಹುವನು ಯಮಪುರಿಗೆ  27
ಭೌಮ ತೆಂಕಣ ದೆಸೆಗೆ ಸ್ಥಾಪಿಸಿ 
ಪ್ರೇಮದಿಂ ಪೂಜಿಪರ ಉದ್ಧರ 
ಕಾಮಿತಾರ್ಥವ ಗೊಳಿಪ ನೀಚರ ಘಾತ ಗೊಳಿಸುವನು 28
ತೃತೀಯ ಪಂಡಿತ ನುಡಿದು ಕೂಡ್ರಲು 
ಅತಿಯ ಚತುರದಿ ಚತುರ ಜಾಣನು 
ಗತಿಪ ಗ್ರಹಗಳ ನಡು ಹಿರಿಯ ಬುಧ ಮಹಾಪ್ರಭುವು. 29
ಬುಧನು ಬಣಜಿಗ ಅತ್ರಿಯಜನು ಮ-
ಗಧ ವಾಸಿಯು ಹಸ್ತ ಚತುರಸ್
ಗದೆ ಗುರಾಣಿ ವರ ಖಂಡೆಯನು ಝಳಪಿಸುತ್ತಿರುವ  30
ಪೀತ ಮೈ ನೀಲೋಪ‌ ವಸ್ತ್ರವು
ಖ್ಯಾತಿ ಕೇಸರಿ ಏರಿ ಕುಳಿತಿಹ
ಮೂರ್ತಿ ಕನಕಗದಿ ರಚಿಸೇ ಪೂಜೆಯ ತಾಣ ಈಶಾನ್ಯ 31
ಪಂಚರತ್ನದ ಮುದ್ಗದಾನ್ಯವು 
ಮೆಚ್ಚುತಿರೆ ಪಾಲ್ ಬೆರೆತ ಅನ್ನವು 
ಇಚ್ಛೆ ಪೂರ್ತಿಪ ನಾಲ್ಕು ಸಾವಿರ ಜಪಗಳಿ ನುತಿಸೆ   32
ಚಂದ್ರ ಪುತ್ರನು ಬುದ್ಧಿವಂತನು 
ಅಂದದಿಂದದಿ ಪೂಜಿಪರ ಭಯ
ಹಿಂದೆ ಮಾಳ್ಪನು ಸಚ್ಚರಿತ್ರನು ಚೆಲುವ ಮೂರುತಿಯ  33
ಯಾವ ಕಾರ್ಯಕು ವಿಘ್ನ ತಾರನು
ಭಾವ ಮೃದು ಮನ ಜ್ಞಾನ ಜ್ಞೇಯನು
ದೇವಕಲ್ಪಾಂತರದಿ ಮಾಡನು ಕೇಡ ಕಾರ್ಪಣ್ಯ  34
ಪರಮ ಪಂಡಿತ ಪಂಚಮಸ್ಥನು 
ಗುರುವ ಮಹಿಮೆಯನರುಹುತಿರಲಾ 
ಅರಿವಮೂರ್ತಿಯ ಮೋಕ್ಷಕಾರಣ ಭವದಬಿಡುಗಡೆಯ 35
ಹಿಂದೂ ಪ್ರಾದೇಶಿಕನು ಪಾರ್ವನು 
ವಂದ್ಯ ಅಂಗೀರಸನೊಳಾಗಿರೇ 
ಗಂಧ ಅರಿಶಿಣ ಮೈಯ ವರ್ಣವು ವಸ್ತ್ರಸಹಿತಾಗಿ  36
ದಂಡ ದಾರಿಯು ಅಕ್ಷಮಾಲೆ ಕ-
ಮಂಡಲವು ವರ ಹಸ್ತ ನಾಲ್ಕು ಉ
ದ್ದಂಡ ಗಜವೇರಿದನು ಗುರು ಮೊಸರನ್ನ ಒಲವಿಗನು 37
ಉತ್ತರ ವದಿಷ್ಠಾನವಿರುತಿಹ 
ಮತ್ತೆ ಚೆನ್ನಗಿ ಕಾಳು ಪ್ರಿಯನಿಹ
ಕತ್ತು ಮಾಲೆಯ ಮಧ್ಯ ಪುಷ್ಯರಾಗ ರತ್ನಮಣಿ 38
ಜಪವು ಹತ್ತೊಂಬತ್ತು ಸಾವಿರ 
ತಪವ ಗೈವೊಡೆ ಕರುಣೆ ತೋರುವ 
ಉಪದಿ ಜನನವು ದಾಟಿ ಅಮೃತ ರೂಪ ಮಾಡುವನು  39  
ಜ್ಞಾನ ನಿಧಿ ಕರ್ಮವನು ಕಳೆಯುವ ಮನ 
ಮಾನ ಮೊದಲಿಹ ಅಮರರೊಳು ತಾಮ್. 
ಮಾನವಗೆ ಮಂಗಳವ ಬಯಸುವ ದೇವ ಗುರುರಾಯ    40 
ಶಿವನೇ ಗುರುವಿನ ಪೂಜೆ ಮಾಡಿರೆ  
ಭವಿಯ ಪಾಡೇನಿಹುದು ಅವನಲಿ 
ಅವ ನವಗ್ರಹಗಳಿಗೆ ಗುರುವೇ ಶಾಂತಿ ಪೂರ್ಣವದು    41
ಮಂತ್ರಗಳಿಗೂ ಭಾಷೆಗಳಿಗೂ 
ಯಂತ್ರಗಳಿಗೂ ಸಿದ್ಧಿ ಭೂತನು 
ತಂತ್ರಿಗೃಹಗಳು ಭಜಿಸಿ ಇವನು ತುಷ್ಟಿಗೊಂಡಿರುವ 
ಆರನೆಯ ಪಂಡಿತನು ಕೇಳಿದ ಭಾರ್ಗವಸ 
ಗೋತರ ಜನು ಶುಭನು ಪಾರ್ವನಿಹ ಭೋಜಕಟ ದೇಶದ ದೈತ್ಯ ರಕ್ಷಿಸಿದ 
ಅಪಸರ ದಂಡಕ ಮಂಡಲ ರಕ್ಷಕರ ವಿಹ ಹುಲಿಯ ಮೇರಿದ ಅಕ್ಷರ ಒಂದಾಗಿರಲು ಸಂಜೀವನ ಮಂತ್ರಿಸಿದ 
ಅದುವೇ ಪೂಜೆಯು ಪೂರ್ವದಿಸೆಯೋಳು ಅಧಿಕ ಅಭಿರುಚಿ ಹವೇಶ ಅಧಿಕ ಅಭಿರುಚಿ ಹವೇಶನ್ನವು ಸಾವಿರ ಜಪವ ಮಾಡಲು ಹೊಲಿಯುವ ಭತ್ತ ತಂಗಿ 
ಬೆಳ್ಳಿ ಮೂರ್ತಿ ವಜ್ರ ರತ್ನವು ಮೆಲ್ಲಳಿತ ಉಪ ವಸ್ತ್ರ ವಿರುತಿರೆ ಶಾಲೆ ಅಕ್ಕಿಯ ಪ್ರೀತಿ ಪನು ದಾನವಗೆ ಗುರುವಿನಮೆಲ್ಲನೆ ಅಕ್ಕಿಯ ಪ್ರೀತಿ ಬಂತು
ಜೀವವಿಲ್ಲದ ಜೀವಿಗಳಿಗೆ. ಜೀವ ಮಾಡಲು ಬರುವ ತೆರೆ ಸಂ 
ಜೀವ ಮುಂದವೇಶಕ್ತಿ ಮಹತಿಯು ಹೇಳಲಸದಳವು 
ಭಯವು ತೋರಿಪನಾದರೂ ಅದು.  ಭೈರವ ಪೂಜೆ ಸ್ಥಾನವಿ. ದಯವು ಮಾಡಲು ಸಂಪದವು ನರ ಪಡೆದುಕೊಳ್ಳಲು 
ಕೇಳಿ ಷಡ್ ಗ್ರಹಗಳಿಹ ಕಥೆಯನ್ನು ಮೇಳವಿಸಿ ತಲೆವಾಗಿ ಅರ್ಜನೆ ತಾಳ ಹಾಕುತೆ ಮಾತಿನಲ್ಲಿ ನಲಿದಾಡಿದನು ಅರಸ 
ಇನ್ನುಳಿದವವು ಆವಗ್ರಹಗಳು 
ಭಿನ್ನೈಸಿಕೊಂಡಿರಲು ಪಂಡಿತ ಮನ್ನಣೆ ಕೊಡುತ್ತೆ ಹೇಳಿದರೆ ಕೇಳಿದರಾಗ ರಾಯಣ್ಣ


 

No comments:

Post a Comment