ಅಂಬಾ ಶಿವೆ ಶಂಕರಿ
ಅಂಬಾ ಶಿವೆ ಶಂಕರಿ ಜಗದಂಬಾ ಪರಮೇಶ್ವರಿ ||
ಅಂಬಾ ಮುಕಾಂಬಾ ಹೇರಂಬಾ ಜನನಿ ||
ಸೂರ್ಯಬಿಂಬೆ ಸೌರಂಬೆ ನಾನಂಬಿ ಬೇಡುವೆ ತಾಯೆ || ಪ||
ಗೌರಿ ಹರಿ ಸೋದರಿ ಭಯದೂರಿ ಕರುಣಾಕರಿ ||
ಧೀರೆ ಓಂಕಾರೆ ವಿಚಾರೆ ಮುಂದಿನ ದಾರಿ ||
ತೋರೆ ವಿಸ್ತಾರೆ ಗಂಭೀರೆ ವಂದಿಪೆ ತಾಯೆ || 1 ||
ಶಾಂತಿ ಜಯ ಭಾರತಿ ಗುಣವಂತೆ ನಿನಗಾರತಿ ||
ಸಂತತ ನಿಂತಿರೆನ್ನ ಅಂತರಂಗದೋಳು ||
ನಿಶ್ಚಿಂತೆ ವೇದಾಂತೆ ಗುಣವಂತೆ ಪಾರ್ವತಿ ಮಾತೆ || 2 ||
ದಾಸಾತ್ಮಕೆ ಶಾಂಭವಿ ವರ ಪಾಶಾಂತಕೆ ಭೈರವಿ ||
ವಾಸ ಕೈಲಾಸ ಗಿರೀಶಾನಾಗಿರುತೀರ್ಪ ||
ಈಶ ಸರ್ವೇಶಾ ಮಹೇಶನ ಪ್ರಿಯದರಸಿ || 3 ||
No comments:
Post a Comment