Sunday, February 02, 2025

Narasimha mantra is enough ನರಸಿಂಹ ಮಂತ್ರ ಒಂದಿರಲು ಸಾಕು

ನರಸಿಂಹ ಮಂತ್ರ ಒಂದಿರಲು ಸಾಕು




ನರಸಿಂಹ ಮಂತ್ರವು ಒಂದಿರಲು ಸಾಕು 

ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ  ||ಪಲ್ಲ||

 

ಶಿಶುವಾದ ಪ್ರಲ್ಹಾದನ ಬಾಧೆ ಬಿಡಿಸಿದ ಮಂತ್ರ 

ಅಸುರಕುಲದವರಿಗೆ ಶತ್ರು ಮಂತ್ರ

ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ                   (1)

 

ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ

ಶಿಷ್ಟ ವಿಭೀಷಣನ  ಪೊರೆದ ಮಂತ್ರ

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ                  (2)

 

ಹಿಂಡುಭೂತನ ಕಡಿದು ತುಂಡು ಮಾಡುವ ಮಂತ್ರ 

ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ 

ಗಂಡು ಗಲಿ ಕದನ ಉದ್ದಂಡ ವಿಕ್ರಮ  ಮಂತ್ರ 

ಪುಂಡರೀಕಾಕ್ಷ  ಪುರಂದರ ವಿಠಲ ಮಂತ್ರ              (3)

                                         ..... ಪುರಂದರ ವಿಠಲ

No comments:

Post a Comment