Friday, April 18, 2025

KORAVARESHA STUTI श्री कोरवारेश स्तुती ಶ್ರೀ ಕೋರವಾರೇಶ ಸ್ತುತಿ

                 ಅಥ  ಶ್ರೀ ಕೋರವಾರೇಶ ಸ್ತುತಿ:

ಶ್ರೀ ಗುರುಭ್ಯೋ ನಮಃ ಹರಿ: ಓಂ 

ಶ್ರೀ ಅರಸಭಕ್ತ  ನೀ ವರಕೋರವಾರೇಶ |
ತ್ವರದಿ ಯಮ್ಮನು ಸಲುಹುತ ||
ಹರಿಯಲ್ಲಿ ಭಕುತಿಯನು ಸರಳಾದ ಹೃದಯವನು |
ಕರುಣದಲಿ ನೀ ನೀಡುತ ||
ಭರದಿಂದ ಭಕುತರನು ಪೊರೆವಾತ ದೊರೆಯೆಂಬ |
ಬಿರುದುಳ್ಳ ಪ್ರಾಣೇಶನೇ ||
ಪರಮ ಭಗವದ್ ಭಕ್ತ ಕರುಣಾಳು ಕರ ಪಿಡಿದು |
ಪೊರೆ ಯನ್ನನೀಗ ಬಿಡದೆ || ೧ ||
ಬಂದೆ ನಿನ್ನಡಿಗಿಂದು ನೊಂದ ಜೀವಿಯು ದೇವ |
ಮುಂದು ಗಾಣದೆ ಭವದಲಿ ||
ಕುಂದುಕೊರತೆಗಳುಂಟು ಸಂದೇಹ ವಿಲ್ಲದಕೆ  |
ಗಂಧ ವಾಹನ ನಿನ್ನಲೀ. ||
ಮೋದತೀರ್ಥರ ಮತವ ವಾರಿಧಿಯ ಚಂದ್ರಯತಿ |
ವಾದಿರಾಜರು ಯನ್ನನು. ||
ಆದರದಿ ಭಜಿಶಿ ಶುಭ ಆದಿಮಾಸದ ಮೊದಲು|
ತೇದಿಯಲಿ ಸ್ಥಾಪಿಸಿದರು  || ೨ ||
ತುಂಗ ವಿಕ್ರಮ ನೀನು ಮಂಗಗಳ ದೊರೆಯಾಗಿ |
ಸಂಘ ಶಕ್ತಿಯ ಬೆಳೆಸಿದೆ ||
ರಂಗನಪ್ಪಣೆ ಪಡೆದು ಅಂಗವನು ಬೆಳೆಸಿ ಜಲ |
ಸಂಘವನು ದಾಟಿ ಪೋದೇ ||
ಭಂಗ ಪಡಿಸುತ ದೈತ್ಯ ರಂಗವನೆ ತುಡಿಯುತ್ತ |
ದಂಗು ಬಡಿಸಿದೆ ದನುಜರ ||
ಮಂಗಳಾತ್ಮಕಳಾದ ರಂಗನರ್ಧಾಂಗಿಗೆ. |
ಉಂಗುರವ ಕೊಟ್ಟು ಬಂದೇ || ೩ ||
ಭಂಡ ಬಕನುಪಟಳವ ಕಂಡು ಕುಂತೀ ದೇವಿ |
ನೊಂದಂತ ಭೂಸುರನಿಗೆ ||
ಕಂದನನು ಕಳುಹುವೆನು ಸಂದೇಹ ಬೇಡೆನುತ |
ಚಂದದಿಂ ಭಾಷೆಯಿತ್ತು ||
ಬಂದು ಮಂದಿರಕೆ  ನಿನ ಮುಂದೆಪೇಳಿದಳಾಗ |
ಅಂದು ನೀನಾನಂದದಿ ||
ಬಂಡಿ ಅನ್ನವನುಂಡು ಭಂಡ ಬಕನನು ಕೊಂದು|
ಪುಂಡವೀರೆನಿಸಿ ಕೊಂಡೆ || ೪ ||
ಮುನ್ನ ಕುರುಸಭೆಯಲ್ಲಿ  ಮನ್ನಿಸಿದೆ ಮಮತೆಯಲಿ|
ಖಿನ್ನಾದ ಪಾಂಚಾಲಿಯ ||
ಕುನ್ನಿಗಳ ಕೆಡಹುವೆನು ಎನ್ನುತ್ತ ಬೊಬ್ಬಿರಿಯೇ |
ಕಣ್ಣು ಸನ್ನೆಯಲಿ ನಿಂದೇ ||
ಅನ್ಯರನು ಕಾಣೆ ನಾ ನಿನ್ನ ಮೊರೆ ಹೊಕ್ಕೆನೈ |
ಎನ್ನ ಮಾನವನುಳುಹಿಸೈ ||
ಬನ್ನು ಬಡುವೆನು ದೇವ ಚನ್ನಕೇಶವನಾಣೇ |
ಸನ್ನುತಾಂಗನೇ ಬಿಡದಲೇ || ೫ ||
ದುರುಳ ದುಶ್ಯಾಸನನು ತರುಣಿಯನು ಸಭೆಯಲ್ಲಿ|
ಪರಿಪರಿಯಲಿಂ ಬಾಧಿಸೇ ||
ಭರದಿ ನೀ ಸಮರದಲಿ  ಅರಿಗಳನ್ನು ತುಂಡರಿಸಿ|
ಧುರಧೀರ ನೆನಿಸಿಕೊಂಡೇ ||
ಪರಮ ವಾತ್ಸಲ್ಯದಿಂ ಕುರುಳು ನೇವರಿಸುತ್ತ |
ಕರ ಪಿಡಿದು ನಿಜ ಸಂಗತಿಯನು ||
ಮರೆಯದಲೆ ಭಾಷೆಯನು ವರೆಸಿ ರಕುತವ ಶಿರಕೆ|
ಸಿರಿ ಮುಡಿಯ ಕಟ್ಟಿ ಮೆರೆದೆ  ||೬ ||
ಎದ್ದು ಇರುಳೊಳು ನೀನು ಹೊದ್ದು ಸೀರೆಯ ಸೆರಗು|
ಮುದ್ದು ಮುಖ ಸುದತಿಯಾದೇ ||
ಸದ್ದು ಮಾಡದೆ ಪೋಗಿ ಬಿದ್ದಂಥ ಕೀಚಕನ  |
ಗುದ್ದಿ ಯಮಪುರಿಗಟ್ಟಿದೇ ||
ಬಿದ್ದನಾ ಭರದಲ್ಲಿ  ಎದ್ದು ತಾ ನಿಲ್ಲದಲೆ |
ಉದ್ಧರಿಸುವವರಿಲ್ಲದೇ||
ಬುದ್ಧಿ ಭ್ರಮೆಯಾಯಿತೈ ಬದ್ಧ ಕಂಕಣನಾಗಿ |
ಮಧ್ವಮುನಿ ನೀ ಕರುಣಿಸೈ || ೭ ||
ಮರಳಿ ಭೂಸುರನಾಗಿ ಧರೆಯಮೇಲವತರಿಸಿ|
ಪರಮ ತೇಜದಿ ಪೊಳೆಯುತ ||
ಭರದಿ ವ್ಯಾಸರ ಸೇವೆ ಸರಸದಲಿ ಸ್ವೀಕರಿಸಿ|
ವರ ಭಕುತನೆನಿಸಿಕೊಂಡೆ ||
ಜರೆದು ಅದ್ವೈತವನು ಭರದಿ ಖಂಡಿಸಿ ಮತವ |
ಹಿರಿದಾದ ದ್ವೈತಮತವ ||
ನಿರುತದಲಿ ಸ್ಥಾಪಿಸುತ ಹರಿಯೆ ಪರದೈವನೆಂ |
ದರುಹಿ ಘನಘೋರ ಶ್ರಮದೀ || ೮ ||
ಅಂದು ಮಂದಿಯ ಗೂಡಿ ಬಂದು ವಾರಿಧಿಯಲ್ಲಿ|
ಮಿಂದುತಿರಲಾಗ ಬಳಿಕ ||
ನಂದ ನಂದನ ಗೋಪಿ  ಚಂದನದಿ ನೋಡಿ ಆ- |
ನಂದದಿಂ ಭಜಿಸಿ ಭಕುತ ||
ವೃಂದವನು ಗೂಡಿ ಕರದಿಂದ ಕೃಷ್ಣನ ಪ್ರತಿಮೆ  |
ತಂದು ಉಡುಪಿಯ ಕ್ಷೇತ್ರದೀ ||
ಚಂದದಿಂದಲಿ ಸ್ವತಃ ಸುಂದರಿ ಗೃಹದಿ ಅರ-  |
ವಿಂದನಾಭನ ನಿಲಿಸಿ ದೇ || ೯ ||
ಎಷ್ಟು ಪರಿಶೀಲಿಸಿದರಷ್ಟೆ ಇರುವುದು ಭಕುತಿ|
ನಷ್ಟವಾಗದು ಎನ್ನೊಳು ||
ಕಷ್ಟ ಪಡಿಸುವುದೇಕೆ ಘಟ್ಯಾಗಿ ಚರಣಗಳ |
ಮುಟ್ಟಿ ಭಜಿಸುವ ಭಕುತನ ||
ಪೆಟ್ಟು ಬಹು ತಿಂದೆ ನಾ ಕೆಟ್ಟೆನೈ ಕರುಣಾಳು |
ಕಟ್ಟ ಕಡೆಗಿಲ್ಲಿ ಬಂದು ||
ಶ್ರೇಷ್ಠಾದ ಅಡಿಗಳನು ನಿಷ್ಠೆಯಿಂದಲಿ ಭಜಿಸಿ|
ತುಷ್ಟನಾದೆನು ಹನುಮನಿಗೆ || ೧೦ ||
ಚಂದಿರನೆ ನೀನೀಗ ಮಂದಮತಿ ನಾನೆಂದು |
ಸಂದೇಹ ಪಡಲಿ ಬೇಡ ||
ಇಂದು ನೀ ದೂಡಿದರೆ ಮುಂದೆನ್ನ ಗತಿಯೇನು|
ಗಂಧ ವಾಹನ ಪೇಳೆಲೋ ||
ನೊಂದು ನುಗ್ಗಾದೆನೈ ಬಂಧುಗಳು ಎನಗಿಲ್ಲ |
ಇಂದಿರಾಪತಿ ಸಾಕ್ಷಿಯು ||
ಕಂದನನು ಕರಪಿಡಿದು ಮುಂದೆ ನಡೆಸುವುದೀಗ |
ಅಂಧ ನಾನೀಜಗದೊಳು || ೧೧ ||
ನೀತಿಗೆಟ್ಟರು ಧರ್ಮ ಭೀತಿ ಬಿಟ್ಟರು ಜನರು |
ಪಾತಕವ ಗೈದು ಧರೆಯೊಳು ||
ಜಾತಿಮತಗಳ ನೆವದಿ ಘಾತುಕವ ಗೈದು ನಿಜ |
ಪ್ರೀತಿ ತೊರೆದರು ಮನುಜರು ||
ನಿನ್ನ ಭಕುತರು ಬಿಡದೆ ಅನ್ನಕ್ಕೆ ಬಾಯ್ಬಿಡುತ |
ಅನ್ಯ ಕರ್ಮಕೆ ಮೆಚ್ಚುತ ||
ಕುನ್ನಿಗಳ ತೆರದಿ ತಾ ಬೆನ್ನಟ್ಟಿ ನೀಚರನು. |
ಮುನ್ನ ಸಾರ್ಥಕ ವೆನ್ನುತ. || ೧೨ ||
ಕಲ್ಲಾಗಿ ನೀನಿರುವುದಲ್ಲವೀ ಸಮಯದಲ್ಲಿ |
ಬಲ್ಲಿದೆನು ನೀನು ಮುದದಿ||
ನಿಲ್ಲದಲೆ ಅವತರಿಸಿ  ಸೊಲ್ಲು ಅಡಗಿಸು ಖಳರ|
ಉಲ್ಲಾಸ ನೀಡು ಜಗದೀ ||
ಕರುಣಿಸೆನ್ನನು ದೇವ ಮೊರೆ ಹೊಕ್ಕೆ ನಿನ್ನ ಪದ |
ಮರೆಯದಲೆ ನೀನೆಂದಿಗು ||
ಶರಣ ಜನ ರಕ್ಷಕನು ಪೊರೆವ ತಾಂ ಬಿಡನೆಂಬ |
ಬಿರುದು ಸಾರ್ಥಕ ಗೊಳಿಸಿಗೋ || ೧೩ ||
ಪ್ರೀತಿ ವರುಷದಲಿ ಶ್ರೇಷ್ಠ ಪ್ರಥಮ ಮಾಸದ ಶುಭ |
ಪ್ರತಿಪದೆಯ ಮೊದಲುಗೊಂಡು ||
ಸತತ ದಶಮಿಯ ವರೆಗೆ ಶತಸಹಸ್ರ ದ್ವಜರು |
ವ್ರತ ನೇಮ ಬದ್ಧರಾಗಿ ||
ಮತಿವಂತ ವಿಬುಧಜನರಿಂದ ಲಾಗಮಮೋಕ್ತ |
ರಥ ಉತ್ಸವಾದಿಗಳನು ||
ಅತಿ ಹರುಷದಲಿ ಮಾಡಿ ಸತತ ಭಜಿಸುತಲಿಹರು|
ಮತಿವಂತ ಪ್ರಾಣೇಶನೆ   || ೧೪ ||
ಶೇಷಶಾಯೀ ಪ್ರೀಯ ದಾಸನಾ ಮೊರೆಹೊಕ್ಕೆ |
ಲೇಸಾಗಿ ಪೊರೆಯೊ ಬಿಡದೆ ||
ಕಾಸಿಗಾಸೆಯಮಾಡಿ ದಾಸತ್ವವಹಿಸಿ ಬಲು |
ಹೇಸಿ ಜನುಮವ ನೂಕಿದೇ ||
ಏಸು ಜನುಮವ ತಿರುಗಿ ಘಾಸೆ ಪಡುತಲಿ ಭವದಿ|
ಬೇಸತ್ತು ನುಸುಳಿ ಬಂದೇ ||
ಎಮ್ಮನ್ನು ಕರಪಿಡಿದು ಪೋಷಿಸೈ ಕರುಣಾಳು |
ಶ್ರೀಶ ಕೋರ್ವಾರೇಶನೇ. || ೧೫ ||
                       .........ಶ್ರೀ ವಾದಿರಾಜ ತೀರ್ಥರು
ಶ್ರೀ ಕೃಷ್ಣಾರ್ಪಣಮಸ್ತು 

श्री कोरवारेश स्तुती:

श्री गुरुभ्यो नमः हरी: ॐ 
श्री अरसभक्त निं वरकोरवारेश. |
त्वरदी यम्मनू सलुहुता ||
हरियल्लि भकुतीयनु सरळाद हृदयवनु |
करुणदली नी नीडुता ||
भरदिंद भकुतरनु पोरेवात दोरेयेंब  |
बिरूदुळ्ळ प्राणेशने   ||
परम भगवद् भक्त करुणाळू कर पिडिदु |
पोरे यन्ननीग बीडदे. || १ ||
बंदे निन्नडीगिंदू  नोंद जीवियु देव  |
मुंदु गाणदे भवदली    ||
कुंदू कोरते गळून्टू संदेह विल्लदके |
गंध वाहन नीन्नली. ||
मोदतीर्थर मतव वारिधिय चंद्रयती |
वादिराजरू यन्ननु. ||
आदरदि भजीशिशुभ आदीमासद मोदलु|
तेदियली स्थापिसिदरू || २ ||
तुंग विक्रम नीनु मंगगळ दोऱेयागि |
संघ शक्तीय बेळेसिदे ||
रंगनप्पणेपडेदु अंगवनु बेळशी जल |
संघवनू दाटी पोदे ||
भंग पडीसुत दैत्य रंगवने तुडियुत्त |
दंगु बडिशिदे  दनुजरा ||
मंगळात्मकळाद रंगनर्धांगिगे. |
अंगूरव कोट्टू बंदे || ३ ||
भंड बकनुपटळव कंडु कुंती देवी
नोंदंथ भुसुरनिगे ||
कंदननु कळुहुवेनु संदेह बेडेनुत |
चंददिं भाषेयित्तु  ||
बंदु मंदिरके निन मुंदे पेळिदळाग 
अंदु नीनानंददी ||
बंडि अन्नव नुंडु भंड बकननु कोंदु |
पुंड वीरेंनिसी कोंडे || ४ ||
मुन्न कुरुसभेयल्लित मन्निसिदे ममतेयलि |
खिन्नाद पांचालीय ||
कुन्निगळ केडुहुवेनु एन्नुत्त बोब्बिरिये |
कण्णु सन्नेयलि निंदे ||
अन्यरनु काणेंना निन्न मोरे होक्केनै  |
एन्न मानवनुळुहिसै ||
बन्न बडुवेनू देवा चन्नकेशवनाणे |
सन्नुथांगने बिडदलै || ५ ||
दुरुळ दुष्यासननु तरुणीयनु सभेयल्लि |
परिपरिलीं बाधिसे ||
भरदि नी समरदली अरिगळनु तुंडरिसी |
धुरधीर नेनिसि कोंडे ||
परम वात्सल्यादिं कुरुळु नेवरिसुत्त |
कर पिडिदु निज संगतियनु ||
मरेयदले भाषेयनु वरेसि रकुतव शिरके 
सिरी मुडीय कट्टी मेरेदे || ६ ||
एद्दु इरुरोळू नीनु  होद्दु सीरेय सेरगु. |
मद्दू मुख सुदतियादे ||
सद्दुमाडदे पोगि बिद्दंथ कीचकन. |
गुद्दि यमपुरीगट्टिदे  ||
बिद्दना भरदल्लि एद्दु त्या निल्लदले  |
उद्धरिसुववरिल्लदे  ||
बुद्धी भ्रमेयायितै बद्ध कंकणनागी |
मध्वमुनी नी  करुणिसै ||  ७ ||
मरळि भूसुरनागि धरेयमेलवतरिसी |
परम तेजदि पोळेयुत ||
भरदि व्यासर सेवे सरसदलि स्वीकरिसि |
वर भकुतनेनिसिकोंडे ||
जरेदु अद्वैतवनु  भरदि खंडिसी मतव |
हिरिदाद  द्वैतमतव ||
स्थापिसुत निरुतदलि हरिये परदैवनें - |
दरूही घनघोर श्रमदी || ८ ||
अंदु मंदियगूडी बंदु वारिधियल्लि. |
मिंदुतिरलाग बळिक  ||
नंद नंदन गोपी चंदनदी नोडि आ- |
नंदादिं भजिसी भकुत  ||
वृंदवनु गूडी करदिंद कृष्णन प्रतिमे  |
तंदु उडुपीय क्षेत्रदी ||
चंददिंदली स्वत: सुंदरि गृहदि अर- |
विंदनाभन निलिसिदे.  || ९ ||
एष्टु परिसीलिसिदरष्टे इरुवुदु भकुति |
नष्टवागदु एन्नोळू ||
कष्ट पडिसुवुदेके घट्यागि चरणगळ |
मुट्टि भजिसुव भकुतन ||
पेट्टुबहु तिंदेना  केट्टेनै करुणाळु. |
कट्टकडेगिल्लि बंदु. ||
श्रेष्टाद अडिगळनु निष्टेयिंदलि भजिसी |
तुष्टनादेनु हनुमने. || १० ||
चंदिरने नीनीग मंदमति नानेंदु. |
संदेह पडलि बेड‌. ||
इंदु नी दूडिदरे‌ मुंदेन्न गतियेनु |
गंध वाहन पेळेलो. ||
नोंदु नुग्गादेनै  बंधुगळु यनगिल्ल. |
इंदिरा पति साक्षियु ||
कंदननु करपिडिदु मुंडे नडेसुवुदीग |
अंध नानीजगदोळू. || ११||
नीतिगेट्टरु धर्म भीति बिट्टरु जनरु |
पातकव गैदु धरेयोळ्.  ||
जातिमतगळ नेवदि घातुकव गैदु निज |
प्रीति तोरेदरू मनुजरू  ||
निम्न भकुतरु बिडदे अन्नक्के बाय्बिडुत |
अन्य कर्मे मेच्चुत ||
कुन्निगळ तेरदि ता बेन्नट्टि नीचरनु. |
मुन्नी सार्थकवेन्नुत.  ||१२ ||
कल्लागि नीनिरुवुदल्लवी समयदलि |
बल्लिदनु नीनु मुददी ||
निल्लदले अवतरिसि  सोल्लु अडगिसु खळर |
उह्लास नीडु जगदी.  |
करुणिसेन्ननु देव मोरे होक्के निन्न पद. |
मरेयदले नीनेंदिगू. ||
शरणजन रक्षकनु  पोरेव तां बिडनेंब. |
बिरुदु सार्थक गोळिसिको. ||१३||
प्रीति वरुषलि श्रेष्ठ प्रथम मासद शुभ. |
प्रतिपदेय मोदलु गोंडु  ||
सतत दशमिय वरेगे शत सहस्र द्विजरू |
व्रत नेम बद्धरागि  ||
मतिवंत विबुध जन रिंद लागत मोक्त. |
रथ उत्सवादिगळनु. ||
अति हरुषदलि माडी  सतत भजिसुतलिहरु |
मतिवंत प्राणेंशने. || १४ ||
शेषशायी प्रीया दसना मोरेहोक्के |
एक लेसागि पोरेयो बिडदे ||
कासिगासेय माडि  दासत्व वहिसि बलु |
हेसि जनुमव नूकीदे ||
एसु जनुमव तिरुगि  घासले पडुतलि भवदि |
बेसत्तु नुसुळि बंदरे ||
एम्मन्नु करपिडिदु पोषिसै करुणाळु |
श्रीश कोर्वारेशने  ||१५ ||
                                    ....... श्री वादिराज तीर्थरु
श्री कृष्णार्पणमस्तु 



No comments:

Post a Comment