ಹಿಂಗುಳೆ ಸನ್ನತಿ ಪುರ ಚಂದ್ರಳೆ ।
ಇಂದಿರೆ ಮಹ ಲಕ್ಷ್ಮೀ ॥ ಮಂಗಲೇ
ಭೃಂಗಾಲಯ ಪದಕಮಲೆ ॥
ಜೋ ಜೋ ಜೋ ಜೋ
ಹಸಿರು ಕುಪ್ಪಸ ತೊಟ್ಟು । ಹೊಸನುಟ್ಟು ।
ಹೊಳೆವಾಭರಣಗಳಿಟ್ಟು । ಬಾಗಿಣ ಪೂರಿಟ್ಟು ।
ತುಂಬಿಟ್ಟು । ಕುಂಕುಮ ನೆಲೆಗಡಲಿಟ್ಟು ।
ಜೋ ಜೋ ಜೋ ಜೋ
ಚವರಿ ರಾಗುಟಿ ವಾಲಿ । ಬೆಂಡೋಲಿ ।
ಬುಗುಡಿ ನತ್ತಿನ ತಾಳಿ । ವಜ್ರದ ಹೂಮಾಲಿ ।
ದ್ರಾವಿಡಲಿ । ಕಾಲುಂಗುರ ಗುಡಿಸುವಲಿ ।
ಜೋ ಜೋ ಜೋ ಜೋ
ರತ್ನ ಮಂಟಪದಾಗ ।ಅತಿ ಬೇಗ ।
ತೊಟ್ಟಿಲ ಕಟ್ಟಿದರಾಗ । ಮುತ್ತಿನ ತಳಿಯಾಗ।
ಪಾದುಕಕ । ಹೆಸರಿಟ್ಟಾಡಿದರಾಗ ।
ಜೋ ಜೋ ಜೋ ಜೋ
ಮೂರು ಲೋಕದ ಜನರು । ನಾರಿಯರು ।
ಹೊಸಗೂಸಿನ ತಾಯಿಯರು । ಮುಂಗಡಿ ಬಾಲಕರು ।
ಪುತ್ರಿಯರು ಸರಿ ಬಾಳುವ ಸೊಸೆಯರು ।
ಜೋ ಜೋ ಜೋ ಜೋ
ಭಾರ್ಗವಿ ವಸುಧಾತ್ರಿ । ಶುಭರಾತ್ರಿ ।
ಜೋ ಜೋ ಜೋ ಜೋ
ಹಸಿರು ಕುಪ್ಪಸ ತೊಟ್ಟು । ಹೊಸನುಟ್ಟು ।
ಹೊಳೆವಾಭರಣಗಳಿಟ್ಟು । ಬಾಗಿಣ ಪೂರಿಟ್ಟು ।
ತುಂಬಿಟ್ಟು । ಕುಂಕುಮ ನೆಲೆಗಡಲಿಟ್ಟು ।
ಜೋ ಜೋ ಜೋ ಜೋ
ಚವರಿ ರಾಗುಟಿ ವಾಲಿ । ಬೆಂಡೋಲಿ ।
ಬುಗುಡಿ ನತ್ತಿನ ತಾಳಿ । ವಜ್ರದ ಹೂಮಾಲಿ ।
ದ್ರಾವಿಡಲಿ । ಕಾಲುಂಗುರ ಗುಡಿಸುವಲಿ ।
ಜೋ ಜೋ ಜೋ ಜೋ
ರತ್ನ ಮಂಟಪದಾಗ ।ಅತಿ ಬೇಗ ।
ತೊಟ್ಟಿಲ ಕಟ್ಟಿದರಾಗ । ಮುತ್ತಿನ ತಳಿಯಾಗ।
ಪಾದುಕಕ । ಹೆಸರಿಟ್ಟಾಡಿದರಾಗ ।
ಜೋ ಜೋ ಜೋ ಜೋ
ಮೂರು ಲೋಕದ ಜನರು । ನಾರಿಯರು ।
ಹೊಸಗೂಸಿನ ತಾಯಿಯರು । ಮುಂಗಡಿ ಬಾಲಕರು ।
ಪುತ್ರಿಯರು ಸರಿ ಬಾಳುವ ಸೊಸೆಯರು ।
ಜೋ ಜೋ ಜೋ ಜೋ
ಭಾರ್ಗವಿ ವಸುಧಾತ್ರಿ । ಶುಭರಾತ್ರಿ ।
ಶಾಕ್ತತಿ ಪರಮ ಪವಿತ್ರಿ ॥
ಅಜ್ಞಾತ
No comments:
Post a Comment