श्री माधवी कानस्ये गर्भ
रक्षांबिके पाही भक्तम् स्थुवन्तम् । (हर श्लोक च्या शेवटी )
श्री गुरुभ्यो नमः हरी: ॐ
वापी तटे वाम भागे, वाम देवस्य देवी स्थित त्वां,
मानया वारेन्या वादानया, पाही,
गर्भस्या जन्थुन तथा भक्ता लोकान । १
श्री गर्भ रक्षा पुरे दिव्या,
सौंन्दर्या युक्ता, सुमंगल्या गात्री,
धात्री, जनत्री जनानाम, दिव्या,
रुपाम ध्यार धर्मम मनोगनाम भजे तं . २
आषाढ मासे सुपुन्ये , शुक्र ,
वारे सुगंधेना गंधेना लिप्ता ,
दिव्याम्बरा कल्प वेशा वाजा ,
पेयाधी यागस्या भक्तस्या सुद्रष्टा . ३
कल्याण धात्रीं नमस्ये, वेदी,
कन्ग च स्त्रीया गर्भ रक्षा करीं त्वां,
बालै सदा सेवीथाअन्ग्रि, गर्भ
रक्षार्थ, माराधुपे थैयुपेथाम. ४
ब्रम्हऒत्सव विप्र विद्यम वाद्य
घोषणे तुष्टम रथेना सन्निविष्टम
सर्व अर्थ धात्रीं भजेअहम, देव
व्रुन शब्दा पीडायाम जगन मातरम् त्वां ।५
येत कृतम स्तोत्र रत्नम, दीक्षीथअनंत रामेन देव्या तुष्टाच्यै।नित्यम पाठयस्तु भक्ता ,पुत्रादि भाग्यंभवे तस्या नित्यं ॥ . ६
ईति श्री अनत राम दीक्षीत विरचित गर्भ रक्षाअंबिका स्तोत्रं समपूर्णं ॥
ಹೆರಿಗೆ, ಹೆತ್ತವರು, ಬಸುರಿ, ಮತ್ತು ಸುಖ ಪ್ರಸವ, ಆರೋಗ್ಯವಂತ ಮಗುವಿಗೆ ಈ ಗರ್ಭರಕ್ಷಾ ಮಂತ್ರ ಪಠಿಸಿ
ಗರ್ಭ ರಕ್ಷಾ ಮಂತ್ರ ಶ್ಲೋಕ:
ಶ್ರೀ ಮಾಧವಿ ಕಾನನಸ್ಯೆ ಗರ್ಭ ರಕ್ಷಾಂಭಿಕೆ ಪಾಹಿ ಭಕ್ತಂ ಸ್ಥುವಂತಂ. (ಪ್ರತಿ ಶ್ಲೋಕದ ಕೊನೆಗೆ ಪಠಿಸಬೇಕು)
ರಕ್ಷಕಿ ಶ್ಲೋಕ:
ವಾಪಿ ತಥೇ ವಾಮಾ ಭಾಗೇ, ವಾಮಾ ದೇವಸ್ಯ ದೇವಿ ಸ್ಥಿತ ತ್ವಮ್ ಮನ್ಯಾ ವರೇಣ್ಯಾ ವದನ್ಯಾ ಪಾಹಿ ಗರ್ಭಸ್ಯ ಜಂತುನ್ ತಥಾ ಭಕ್ತ ಲೋಕಾನ್ ರಕ್ಷಿಸು ಶ್ಲೋಕ: ಶ್ರೀ ಗರ್ಭ ರಕ್ಷಾ ಶುದ್ಧ ಯಾ ದಿವ್ಯಾ ಸೌಂದರ್ಯಯುಕ್ತ, ಸುಮಾಂಗಲ್ಯ ಗಾತ್ರಿ ಧಾತ್ರೇಏ, ಜನಿತ್ರಿ ಜನಾನಾಮ್ ದಿವ್ಯಾ ರೂಪಾಮ್ ದಯಾರ್ದ್ರಾಮ್ ಮನೋಜ್ಞಾಮ್ ಭಜೆ ತಾಮ್
ಶ್ಲೋಕ:
ಆಶಾಢ ಮಾಸೇ ಸುಪುಣ್ಯೆ ಶುಕ್ರ ವಾರೇ ಸುಗಂಧೇನ ಗಂಧೇನ ಲಿಪ್ತ ದಿವ್ಯಾಂಬರ ಕಲ್ಪ ವೇಶ ವಾಜ ಪೇಯಾದಿ ಯಾಗಸ್ತ ಭಕ್ತಿ ಸುದ್ರುಷ್ಟಾ
ಶ್ಲೋಕ:
ಕಾಯಾನ ಧಾತ್ರಿಮ್ ನಮಸ್ಯೆ ವೇದಿ ಕಂಚ ಸ್ತ್ರೀಯಾ ಗರ್ಭ ರಕ್ಷಾ ಕರೀಮ್ ತ್ವಾಮ್ ಬಾಲೈ ಸದಾ ಸೇವಿತಾಂಗ್ರಿ ಗರ್ಭ ರಕ್ಷಾರ್ಥ ಮಾರಾ ಧೂಪೇ ತೈ ಪೇತಾಮ್
ಶ್ಲೋಕ:
ಬ್ರಹ್ಮೋತ್ಸವ ವಿಪ್ರ ವೇದ್ಯಾಮ್ ವಾದ್ಯ ಗೋಶೀನ ತುಷ್ಟಾಮ್ ರಾಧೇನಾ ಸನ್ನಿವಿಷ್ಟಂ, ಸರ್ವರ್ಥಾ ಧಾತ್ರಿಮ್ ಭಜೇಹಮ್ ದೇವ ವೃಂದೈರ ಪೀಡಾಯಾಂ ಜಗನ್ ಮಾತರಂ ತ್ವಮ್
ಶ್ಲೋಕ:
ಯೇತದ್ ಕೃತಾಮ್ ಸ್ತೋತ್ರ ರತ್ನಂ ದೀಕ್ಷಿತಾ ಅನಂತ ರಾಮೇನ ದೇವ್ಯಾ ತುಶ್ಟಚ್ಯೈ ನಿತ್ಯಂ ಪಠೇತ್ಯಸ್ತು ಭಕ್ತ್ಯ ಪುತ್ರ ಪೋತ್ರದಿ ಭಾಗ್ಯಂ ಭವೇತಸ್ಯ ನಿತ್ಯಂ
ಇತಿ ಬ್ರಹ್ಮ ಶ್ರೀ ಅನಂತರಾಮ ದೀಕ್ಷಿತ ವಿರಚಿತಂ ಗರ್ಭ ರಕ್ಷಾಂಬಿಕಾ ಸ್ತೋತ್ರಂ ಸಂಪೂರ್ಣಂ
ಶ್ರೀ ಕೃಷ್ಣಾರ್ಪಣಮಸ್ತು
ಮಗುವಿಗೆ ಜನ್ಮ ನೀಡಿದರೆ ಹೆಣ್ಣಿನ ಜನ್ಮ ಸಾರ್ಥಕ ಎನ್ನುತ್ತಾರೆ, ಈ ಮಾತು ಅಕ್ಷರಶಃ ಸತ್ಯ. 9 ತಿಂಗಳು ಮಗುವನ್ನು ಗರ್ಭದಲ್ಲಿಟ್ಟು ಕಣ್ಣಿನ ರೆಪ್ಪೆಯಂತೆ ಸುರಕ್ಷಿತವಾಗಿ ಸಲುಹಿ ನಂತರ ಅದನ್ನು ಹೊರಪ್ರಪಂಚಕ್ಕೆ ತಂದ ಕ್ಷಣ ಪ್ರತಿ ಹೆಣ್ಣಿಗೂ ತನ್ನ ಜನ್ಮ ಸಾರ್ಥಕ ಎಂಬ ಭಾವನೆ ಬರದೇ ಇರಲಾರದು. ಆ ಅನುಭವವೇ ಬೇರೆ, ಅದನ್ನು ವರ್ಣಿಸಲಸಾಧ್ಯ. ಹೀಗೆ ಗರ್ಭಿಣಿ ತನ್ನ ಮಗುವನ್ನು ನವಮಾಸ ಗರ್ಭದಲ್ಲಿ ಇರುವಾಗ ಪ್ರತಿಕ್ಷಣವನ್ನು ಎಚ್ಚರಿಕೆಯಿಂದ ಕಳೆಯುತ್ತಾಳೆ, ಮಗುವಿಗೆ ಆರೋಗ್ಯಕರ ಎನಿಸುವಂಥ ಆಹಾರ, ಅಭ್ಯಾಸಗಳನ್ನು ಮಾತ್ರ ರೂಢಿಸಿಕೊಳ್ಳುತ್ತಾಳೆ, ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುತ್ತಾಳೆ. ಆದರೆ ಮಗುವಿನ ಬೆಳವಣಿಗೆ ಕೇವಲ ದೈಹಿಕವಾಗಿ ಮಾತ್ರ ಆಗದೇ ಮಾನಸಿಕವಾಗಿಯೂ ನಮ್ಮ ಆಲೋಚನೆ, ಯೋಚನಾ ಲಹರಿಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ಇದಕ್ಕಾಗಿಯೇ ಹಲವು ಗರ್ಭಿಣಿಯರು ಸದಾ ಒಳ್ಳೆಯ ಆಲೋಚನೆ, ಉತ್ತಮ ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಹೀಗೆ ಹತ್ತು ಹಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಆದರೆ ಇದರಾಚೆಗೂ ಪ್ರತಿ ತಾಯಿಗೂ ತನ್ನ ಮಗು ಗರ್ಭದಲ್ಲಿ ಸುರಕ್ಷಿತವಾಗಿದೆಯೇ, ಹೆರಿಗೆ ಯಾವುದೇ ಸಮಸ್ಯೆ ಇಲ್ಲದೆ ಆಗುತ್ತದೆಯೇ, ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲವೇ ಎಂಬ ಆತಂಕ ಆಗಾಗ ಕಾಡುವುದುಂಟು, ಇದಕ್ಕಾಗಿ ದೈವದ ಮೊರೆ ಹೋಗುವವರಿಗೇನೂ ಕಡಿಮೆ ಇಲ್ಲ. ಇದಕ್ಕಾಗಿಯೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಗರ್ಭ ರಕ್ಷಾ ಮಂತ್ರಗಳನ್ನು, ಮಗುವಿನ ಆರೋಗ್ಯ ಸುಧಾರಿಸಲು ಹಾಗೂ ಸಹಜ ಹೆರಿಗೆಯಾಗಲು ಕೆಲವು ಮಂತ್ರಗಳನ್ನು ರಚಿಸಲಾಗಿದೆ. ನಿತ್ಯ ಈ ಮಂತ್ರಗಳನ್ನು ಪಠಿಸುವುದರಿಂದ ಮಗು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುತ್ತದೆ ಎನ್ನಲಾಗುತ್ತದೆ. ಗರ್ಭಿಣಿಯರು ತಮ್ಮ ಮಗುವಿನ ರಕ್ಷಣೆಗೆ ಮಂತ್ರಗಳನ್ನು ಪಠಿಸಿದರೆ ಸುರಕ್ಷಿತ .
ಶ್ರೀ ಕೃಷ್ಣಾರ್ಪಣಮಸ್ತು
ಧನ್ಯವಾದಗಳು
No comments:
Post a Comment