Wednesday, August 06, 2025

Jeshta Gouri Dora Bandhan ಶ್ರೀ ಜ್ಯೇಷ್ಠಾಗೌರಿ ದಾರ ಕಟ್ಟಿಕೊಳ್ಳುವ ಹಾಡು

       ಶ್ರೀ ಜ್ಯೇಷ್ಠಾಗೌರಿ ದಾರ ಕಟ್ಟಿಕೊಳ್ಳುವ ಹಾಡು 
ಪಂಕಜನಾಭಗೆ ಶಂಕಿಸಿ ಶರಣೆಂಬೆ | ಪಂಕಜೋದ್ಭವಗೆ ಶರಣೆಂಬೆ |ಪಂಕಜೋದ್ಭವಗೆ ಶರಣೆಂದು ಪೇಳುವೆ ಅಂಬಿಕೆಗೆ ಕರವ ಮುಗಿವೆನು | 

ಹಿರಿಯ ಹೆಂಡತಿ ವೈದು ಮುಳ್ಳು ಬೇಲಿಯಲಿಟ್ಟು ಸಿರಿ ವೈದು ಕೊಟ್ಟು ಶ್ರೀಕಾಂತ |ಸಿರಿವೈದುಕೊಟ್ಟು ಶ್ರೀಕಾಂತೆಂಬ ಅರಸಿಯ ಮನೆಯೊಳಗಿರುತಿದ್ದ ಅರಸು ||1

ಹೊರಟನೆ ರಾಯ ತಾ ಮೃಗದ ಬೇಟೆಯನಾಡಿ ಕೆರೆ ಇಲ್ಲ ಭಾವಿ ಮೊದಲಿಲ್ಲ |ಕೆರೆಯಿಲ್ಲ ಭಾವಿ ಮೊದಲಿಲ್ಲದಿದ್ದರೆ ಬಿಡುವೆ ನಾ ಪ್ರಾಣಗಳನೆಂದ ||2

ಹೋಗುವ ದೂತನ ಬೇಗದಲಿ ಕರೆದರು | ಕರದಲ್ಲಿ ದಾರ ಕಟ್ಟಿ |ಕರದಲ್ಲಿ ದಾರ ಕಟ್ಟಿ ಕೂಗಣಿ ಕುರುಳಿಯಲಿ ಉದಕ ಕೊಡುವೋರು ||3

ಹಿಂದಕ್ಕೆ ತಿರುಗಿ ನೀ ನೋಡಬೇಡ ಎನುತಲಿ | ಹಿಂದಕ್ಕೆ ತಿರುಗಿ ಬಿಸಲಿಗೆ |ಹಿಂದಕ್ಕೆ ತಿರುಗಿ ಬಿಸಲಿಗೆ ಕೂಗಣಿ ಒಡೆದು ನದಿಯಾಗಿ ಹರಿದೀತು ||4

ನದಿಯ ನೀರನೆ ಕುಡಿದು ಕರೆದನು ದೂತನ್ನ | ಕರದಲ್ಲಿ ನೀನು ಕಟ್ಟಿದ್ದ |ಕರದಲ್ಲಿ ನೀನು ಕಟ್ಟಿದ್ದ ದಾರವನು ಇದೇನೆಂದು ಬೆಸಗೊಂಡ ||5

ನಾಗ ಕನ್ನಿಕೆಯರು ಲಕ್ಷ್ಮೀ ಧಾರವೆಂದು ಲಕ್ಷಣವುಳ್ಳ ಅರಸಿಗೆ |ಲಕ್ಷಣವುಳ್ಳ ಅರಸಿಗೆ ಕೊಡು ಎಂದು ಕೊಟ್ಟರು ಲಕ್ಷ್ಮೀ ವರಗಳನು ||6

ಬೇಟೆಯಾಡಿ ರಾಯ ಬಳಲಿ ಮನಿಗೆ ಬಂದ | ಬಂದು ರಾಣಿಯ ತೊಡೆಯ ಮೇಲೆ |ಬಂದು ರಾಣಿಯ ತೊಡೆಯಮೇಲೆ ಮಲಗಲು ಧಾರ ಇದೇನೆಂದು ಬೆಸಗೊಂಡ್ಲು ||7

ಕಾಂತೆಯ ಮೇಲೆ ಸುಕಾಂತೆಯ ತಂದೀರಿ ಕರದಲ್ಲಿ ನೀವು ಕಟ್ಟಿದ್ದ |ಕರದಲ್ಲಿ ನೀವು ಕಟ್ಟಿದ್ದ ಧಾರದ ಮಹಿಮೆಗಳೆನಗೆ ತಿಳಿದೀತು ||8

ದೃಷ್ಟಿಸಿ ಕಾಂತೆ ತಾ ಸಿಟ್ಟಿಲಿ ಹರಿದಳು ಹಿತ್ತಲಾಗಿದ್ದ ಪಡವಲ |ಹಿತ್ತಲಾಗಿದ್ದ ಪಡವಲ ಬಳ್ಳಿಯ ಹಂದರದ ಮೇಲೆ ಎಸೆದಾಳು ||9

ಒಣಗಿದ್ದ ಬಳ್ಳಿಯು ಚಿಗಿತು ಫಲವಾಯಿತು | ಅದು ಕಂಡು ರಾಯ ಮನದಲಿ |ಅದು ಕಂಡು ರಾಯ ಮನದಲ್ಲಿ ಕ್ಲೇಶ ಪಡುತ್ತಿದ್ದ ||10

ದಿನದ ಪಡಿಗಳಿಗಾಗಿ ಬಂದಳಾ ದಾಸಿಯು ಪಡುವಲ ಬಳ್ಳಿಯ ಮೇಲಿದ್ದ |ಪಡುವಲ ಬಳ್ಳಿಯ ಮೇಲಿದ್ದ ಧಾರವನು ಕಂಡು ಸಂತೋಷ ಪಡುತಿದ್ಲು ||11

ಕೈಯಲ್ಲಿ ಮುಟ್ಟಿದರೆ ಕಳ್ಳಿ ಎಂದಾರೆಂದು ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರ |ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರವೆಂದು ಮರದ ಕೊನೆಯಲ್ಲಿ ತೆಗೆದಾಳು ||12

ತೆಗೆದು ಧಾರವನು ಉಡಿಯೊಳಗಿಟ್ಟಳು ದಿನದ ಪಡಿಗಳನು ಕೇಳಿದರೆ |ದಿನದ ಪಡಿಗಳನು ಕೇಳಿದರೆ ಚಾರಕರು ರಾಗಿ ಪಡಿ ತಂದು ಕೊಡುವೋರು ||13

ರಾಗಿ ಪಡಿ ತಂದು ಕೊಡುವೋದು ರಾಯ ತಾ ನೋಡಿದ ನನಗಲ್ಲದರಸಿ ನಿಮಗೆಲ್ಲಿ |ನನಗಲ್ಲದರಸಿ ನಿಮಗೆಲ್ಲಿ ಎಂದೆನುತ ರಾಯ ಕೋಪದಲಿ ನುಡಿದಾನು ||14

ತರಿಸಿದ ರಾಯ ತಾ ಅಕ್ಕಿ ಗೋದಿ ಬೆಲ್ಲ ತರಿಸಿ ತುಂಬಿಸೀ ದಾಸೀಗೆ |ತರಿಸಿ ತುಂಬಿಸೀ ದಾಸಿಗೆ ಹೊರಿಸಿ ಮನಿತನಕಾ ಕಳಿಸೀದ ||15

ಒಕ್ಕಲಗಿತ್ತಿಯು ಹೊತ್ತಳು ಹೆಡಗಿಯನ್ನು ಮಿತ್ರೆ ಸುಕಾಂತೆ ಮನೆಗಾಗಿಬಂದಿನ್ನು ಇಳಿಸವ್ವ ಭತ್ತದ ಹೆಡಗಿಯನು ||16

ಅಂದ ಮಾತಿಗಾಗಿ ನೊಂದಾಗ ಮನದಲ್ಲಿ ಮಂದಿಯ ಒಳಗೆನಗೆಗೇಡು ಮಾಡುವುದು ದಾಸಿ ನಿನಗಿದು ತರವೇನೆ||17

ಚಕ್ಕಂದವಲ್ಲವೇ ತಾಯೇ ನೀ ಕೇಳವ್ವ ಒಡೆಯರು ಕೊಟ್ಟಂಥ ಪಡಿಗಳನು |ಒಡೆಯರು ಕೊಟ್ಟಂಥ ಪಡಿಗಳ ನೋಡೆಂದು ಅಕ್ಕಿ ಗೋದಿಯನೆ ತೆಗೆದಾಳು ||18

ತೆಗೆದು ಧಾರವನು ಹರದಿಗೆ ಕೊಟ್ಟಳು ಮಿತ್ರೆ ಸುಕಾಂತೆ ಧಾರದ |ಮಿತ್ರೆ ಸುಕಾಂತೆ ಧಾರದ ತೊಡಕನ್ನು ಬಲ್ಲ ಹಿರಿಯರಿಗೆ ಅರುಹಿದಳು ||19

ಭಾದ್ರಪದ ಶುದ್ಧ ಅಷ್ಟಮಿಯ ದಿನದಲ್ಲಿ ಮುತ್ತೈದೆ ನನಗೆದೊರಕ್ಯಾಳು ಇಂದಿನ್ನು ಸೌಭಾಗ್ಯಳೆಂದು ನುಡಿದಾಳು ||20

ಅರಸಿನ ಮನೆಗಾಗಿ ಬಂದಳೆ ಮಹಾಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ |ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಶ್ರೀಕಾಂತೆಯ ಬಳಿಗೆ ನಡೆತಂದ್ಲು ||21

ಮಾಸಿದ್ದು ಉಟ್ಟಿದ್ದು ಮೈಲಿಗೆ ತೊಟ್ಟಿದ್ದು | ಸೂಸುವ ಮಾರೀ ಸಿಂಬಳದ |ಸೂಸುವ ಮಾರೀ ಸಿಂಬಳದ ಜೋರಿನ್ನು | ಹೇಸಿ ಹೋಗೆಂದು ನುಡಿದಳು ||22

ಅಂದ ಮಾತಿಗಾಗಿಗೆ ಕೊಡುವಳೆ ಶಾಪವ ಹಂದಿಯ ಮಾರಿ ಮಂದಿಯ |ಹಂದಿಯ ಮಾರಿ ಮಂದಿಯ ರೂಪವು ಇಂದು ನಿನಭಂಗ ಧೃಢವಾಗಲಿ ||23

ನುಡಿದ ಮಾತಿಗಾಗಿ ಕೊಡುವಳೆ ಶಾಪವ ಮಿತ್ರೆ ಸುಕಾಂತೆ ಮಿಂದ |ಮಿತ್ರೆ ಸುಕಾಂತೆ ಮಿಂದ ನೀರೊಳು ಅಂದು ನಿನಭಂಗ ಧೃಢವಾಗ್ಲಿ ||24

ಹಿರಿಯ ಹೆಂಡತಿ ಮನೆಗೆ ಬಂದಳಾ ಮಹಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ|ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಸುಕಾಂತಿದ್ದ ಬಳಿಗೆ ನಡೆತಂದ್ಲು ||25

ಹರಸಿ ಮುತ್ತೈದೆಗೆ ಮುದದಿಂದ ಎರೆದಳು ಹದಿನಾರು ಎಳೆಯ ಧಾರವನು |ಹದಿನಾರು ಎಳೆಯ ಧಾರವನೆ ಗಂಟು ಹಾಕಿ ಮುದದಿಂದ ಆರತಿಯ ಬೆಳಗಿದಳು||26

ಮರುದಿನ ಅಷ್ಟಮಿಯಲ್ಲಿ ಮೂಲ ನಕ್ಷತ್ರದಲ್ಲಿ ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು | ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು ಒಡನೆ ಮಹಾಲಕ್ಷ್ಮೀ ಉಣುತಿದ್ಲು ||27

ಭೋಗುಳ್ಳ ಅರಸುತನ ರಾಜ್ಯವನೆ ಕಳಕೊಂಡು ಪಾದಚಾರಿಯಾಗಿ ಪರಮ | ಪಾದಚಾರಿಯಾಗಿ ಪರಮ ಕಷ್ಟದಿಂದ ಭೂಮಿಯಲಿ ಕೃತಘ್ನಗೆ ನೆರಳಿಲ್ಲ ||28

ಭೂಮಂಡಲೇಶನಾದ ಗಂಡನ ಕಾಣದೆ ಬೆಂಡಾಗಿ ರಾಯ | ಬಳಲುತಿಪ್ಪುದು ಕಂಡು ತಂಗಿಗೆ ವಿಶಾಪ ಕೊಟ್ಟಳು ಅಣ್ಣಿಗೇರಿಯಲ್ಲಿ ಅಮೃತ||29

ಭೂಮಿಯಲ್ಲಿ ಲಕ್ಷ್ಮೀದೇವಿಯ ಕಥೆಯ ಮಾಡಿದನು |
ಮಾಡಿದನು ತಿರುಮಲ ಲಕ್ಷಣವುಳ್ಳವರು ಕಿವಿಗೊಟ್ಟು ಕೇಳೆ ಹರಿ‌ಒಲಿವ ||30

                                  ........ಅಣ್ಣೀಗೇರಿ ಲಕ್ಷ್ಮೀ ದೇವಿ

No comments:

Post a Comment