वन्दे मातरम् वन्दे मातरम्
सुजलां सुफलां मलयजशीतलाम्
शस्यशामलां मातरम् ।
शुभ्रज्योत्स्नापुलकितयामिनीं
फुल्लकुसुमितद्रुमदलशोभिनीं
सुहासिनीं सुमधुर भाषिणीं
सुखदां वरदां मातरम् ।। १ ।। वन्देमातरम् ।
कोटि-कोटि-कण्ठ-कल-कल-निनाद-कराले,
कोटि-कोटि-भुजैर्धृत-खरकरवाले,
अबला केन मा एत बले ।
बहुबलधारिणीं नमामि तारिणीं
रिपुदलवारिणीं मातरम् ।। २ ।। वन्दे मातरम् ।
तुमि विद्या, तुमि धर्म
तुमि हृदि, तुमि मर्म
त्वं हि प्राणा: शरीरे
बाहुते तुमि मा शक्ति,
हृदये तुमि मा भक्ति,
तोमारई प्रतिमा गडि मन्दिरे-मन्दिरे
मातरम् ।। ३ ।। वन्दे मातरम् ।
त्वं हि दुर्गा दशप्रहरणधारिणी
कमला कमलदलविहारिणी
वाणी विद्यादायिनी, नमामि त्वाम्
नमामि कमलां अमलां अतुलां सुजलां सुफलां मातरम् ।। ४ ।। वन्दे मातरम् ।
श्यामलां सरलां सुस्मितां भूषितां
धरणीं भरणीं मातरम् ।। ५ ।। वन्दे मातरम् ।

– बंकिमचंद्र चट्टोपाध्याय ( चटर्जी )
(`वन्दे मातरम्’ यह गीत रविवार, कार्तिक शुद्ध नवमी, शके १७९७ (७ नोव्हेंबर १८७५) इस दिन लिख कर पूरा हुआ.)

( ಕನ್ನಡದಲ್ಲಿ ಅರ್ಥೈಸಿದ್ದು ನನಗೆ ತಿಳಿದಂತೆ )
ಓ ತಾಯಿ, ನಾವು ನಿನಗೆ ನಮಸ್ಕರಿಸುತ್ತೇವೆ.
ನೀರು ಮತ್ತು ಸಂಪತ್ತಿನ ಸಮೃದ್ಧಿಯಿಂದ ಆಶೀರ್ವದಿಸಲ್ಪಟ್ಟು, ಮಲಯ ಪರ್ವತಗಳಿಂದ ಬೀಸುವ ಗಾಳಿಯಿಂದ ತಂಪಾಗಿ, ಮತ್ತು ಹೇರಳವಾದ ಕೃಷಿಯಿಂದ ಶಾಂತಿ ಚಿತ್ತಳಾದ ಓ ತಾಯಿಯೇ, ನಾವು ನಿನಗೆ ನಮಸ್ಕರಿಸುತ್ತೇವೆ.
ಇಲ್ಲಿಯ ಸೂರ್ಯ ಚಂದ್ರರಿಂದ ದಿನ ರಾತ್ರಿಗಳು ಸಂತೋಷದಿಂದ ತುಂಬಿವೆ, ಮತ್ತು ಹಸಿರು ಸಸ್ಯಗಳು ಹೂವುಗಳಿಂದ ತುಂಬಿದ ವಸ್ತ್ರ ಪರಿಧಾನ ಮಾಡಿದ ಭೂಮಿ ತಾಯಿ, ಸುಶೋಭಿತಳಾಗಿ ಸುಂದರಳಾಗಿ ಕಾಣುತ್ತಿ, ಓ ತಾಯಿ, ನೀನು ಯಾವಾಗಲೂ ಹರ್ಷಚಿತ್ತದಿಂದ ಮತ್ತು ಸಸುಮಧುರವಾಗಿ ಮಾತನಾಡುವವಳು, ವರಗಳನ್ನು ನೀಡುವವಳು ಮತ್ತು ಸಂತೋಷವನ್ನು ನೀಡುವವಳು! ತಾಯಿ, ನಾವು ನಿನಗೆ ನಮಸ್ಕರಿಸುತ್ತೇವೆ.
(೧೪೧ ಕೋಟಿ ) ಮೂವತ್ತು ಕೋಟಿ ಬಾಯಿಗಳಿಂದ ಭಯಾನಕ ವಡವಾನಲದಂತೆ ಹೊರಹೊಮ್ಮುವ ಗರ್ಜನೆಗಳು ಮತ್ತು ( ೨೮೨ ಕೋಟಿ ) ಅರವತ್ತು ಕೋಟಿ ಕೈಗಳಲ್ಲಿ ಹೊಳೆಯುವ ವಿವಿಧ ಆಯುಧಗಳು, ಕತ್ತಿಗಳೊಂದಿಗೆ ವಿರಾಜಿಸುವ ನಿನ್ನನ್ನು ದುರ್ಬಲ ಎಂದು ಕರೆಯಲು ಯಾರು ಧೈರ್ಯ ಮಾಡುವಂತಿಲ್ಲ, ನಿಜಕ್ಕೂ, ಓ ತಾಯಿ, ನೀನು ಮಹತ್ತರ ಶಕ್ತಿಯನ್ನು ಹೊಂದಿದವಳು, ಪ್ರೋತ್ಸಾಹಿಸುವವಳು. ಶತ್ರು ಪಡೆಗಳ ದಾಳಿಯನ್ನು ಹಿಮ್ಮೆಟ್ಟಿಸುವ ಮೂಲಕ ಹೊಡೆದೆಬ್ಬಿಸಿ, ನಮ್ಮನ್ನು ಮಕ್ಕಳಾಗಿ ರಕ್ಷಿಸುವ ಓ ತಾಯಿಯೇ, ನಿನಗೆ ನಾವು ನಮಸ್ಕರಿಸುತ್ತೇವೆ.
ನಮ್ಮ ಜ್ಞಾನ, ಪಾತ್ರ ಮತ್ತು ಧರ್ಮ ನಿನ್ನಿಂದಲೇ ಪ್ರೇರಿತವಾಗಿದೆ. ನೀನೇ ನಮ್ಮ ಹೃದಯ ಮತ್ತು ಪ್ರಜ್ಞೆ ಇರುವಿ. ನೀನು ನಮ್ಮ ಆತ್ಮವೂ ಹೌದು. ನೀನು ನಮ್ಮ ಮುಷ್ಟಿಯ ಮಣಿಕಟ್ಟುಗಳಲ್ಲಿ ಶಕ್ತಿ ಮತ್ತು ಹೃದಯದಲ್ಲಿ ಧಗಧಗಿಸುವ ಕಾಳಿ ಮಾತೆ. ದೇವಾಲಯಗಳಲ್ಲಿ ನಾವು ಸ್ಥಾಪಿಸುವ ವಿಗ್ರಹಗಳೆಲ್ಲವೂ ನಿನ್ನ ಅಭಿವ್ಯಕ್ತಿಗಳು. ಆ ವಿಗ್ರಹಗಳಲ್ಲಿಯೇ ನಾವು ನಿನ್ನನ್ನು ಆರಾಧಿಸುತ್ತೇವೆ. ಓ ತಾಯಿ ಕರುಣಾಮಯಿಯೇ ನಿನಗೆ ನಾವು ನಮಸ್ಕರಿಸುತ್ತೇವೆ.
ನೀನು ಸಾಧ್ವಿ, ಖಲ ಸಂಹಾರಿಣಿ, ಶತ್ರುಗಳನ್ನು ಸಂಹರಿಸುವವಳು,ನಿನ್ನ ಹತ್ತು ಕೈಗಳಲ್ಲಿ ಹತ್ತು ಆಯುಧಗಳನ್ನು ಹಿಡಿದವಳು. ಕಮಲದಂತೆ ಮೃದುವಾದ ಕರುಣಾಮಯಿ ಲಕ್ಷ್ಮಿಯೂ ನೀನೇ, ಕಮಲದ ಹೂವುಗಳಿಂದ ತುಂಬಿದ ಸರೋವರದಲ್ಲಿ ಸಂಚರಿಸುವವಳೂ ನೀನೇ. ಜ್ಞಾನವನ್ನು ನೀಡುವ ಸರಸ್ವತಿಯೂ ನೀನೇ. ನಾವು ನಿನಗೆ ನಮಸ್ಕರಿಸುತ್ತೇವೆ. ತಾಯಿ, ನಾವು ನಿನಗೆ ನಮಸ್ಕರಿಸುತ್ತೇವೆ.
ಸಂಪತ್ತು, ಸದ್ಗುಣ ಮತ್ತು ಪರಿಶುದ್ಧತೆಯನ್ನು ನೀಡುವವಳು, ರಾಷ್ಟ್ರದ ಪವಿತ್ರ ಹೊಳೆಗಳು ಮತ್ತು ಅಮೃತದಂತಹ ಹಣ್ಣುಗಳಿಂದ ತುಂಬಿದ ವಸುಂಧರೆಯ ಸ್ಫೂರ್ತಿಯಿಂದ ಭರಿಸಲ್ಪಟ್ಟವಳು, ನಿನ್ನ ಶ್ರೇಷ್ಠತೆಯು ಎಲ್ಲಿಯೂ ಎಂದಿಗೂ ಎಂದೆಂದಿಗೂ ಹೋಲಿಸಲಾಗದು, ಅದಕ್ಕೆ ಯಾವುದೇ ಮಿತಿಯಿಲ್ಲ. ಓ ತಾಯಿ, ಓ ತಾಯಿಯೇ , ನಾವು ನಿನಗೆ ನಮಸ್ಕರಿಸುತ್ತೇವೆ.
ತಾಯಿ, ನಿನ್ನ ಮೈಬಣ್ಣವು ಶೀತಲ ನಿರಭ್ರ ಆಕಾಶದಂತೆ ಶ್ಯಾಮ ವರ್ಣದ್ದಾಗಿದ್ದು, ಪಾತ್ರವು ಪರಿಶುದ್ಧವಾಗಿದೆ. ನಿನ್ನ ಮುಖವು ಸುಂದರವಾದ ಸ್ನೇಹಯುತ ನಗುವಿನಿಂದ ಹೊಳೆಯುತ್ತಿದೆ. ನೀನು ನಿಸರ್ಗದತ್ತ ಎಲ್ಲ ಅಲಂಕಾರಗಳಿಂದ ಆವರಿಸಲ್ಪಟ್ಟಾಗ ಎಷ್ಟು ಸುಂದರವಾಗಿ, ಆನಂದದಾಯಿಯಾಗಿ ಕಾಣಿಸಿಕೊಳ್ಳುತ್ತೀಯ! ನಿಜಕ್ಕೂ, ನಮ್ಮನ್ನು ಪೋಷಿಸುವವಳು ಪ್ರೇರಿಸುವವಳು ಮತ್ತು ಎಚ್ಚರಿಕೆ ನೀಡುವವಳು ನೀನೇ. ಓ ತಾಯಿ, ಮತ್ತೊಮ್ಮೆ ನಿನ್ನ ಪದಕಮಲಗಳಿಗೆ ನಮ್ಮ ನಮನಗಳನ್ನು ಅರ್ಪಿಸುತ್ತೇವೆ.
ಸಮಸ್ತ ರಾಷ್ಟ್ರಪ್ರೇಮಿಗಳಿಗೆ ಅಭಿವಂದನೆಗಳು.

Vande Mātaram is a poem that was adopted as the National song of the Republic of India in 1950. It is written in Sanskritised Bengali by Bankim Chandra Chatterjee in the 1870s, and was first published in 1882 as part of Chatterjee's Bengali novel Anandmath.

No comments:
Post a Comment