ಗೋಕುಲದ ಜೀವರಾಶಿ ಕೃಷ್ಣ ಹೊರಟನು || ಪ ||
ಮೋಹವೆಂಬ ಪಾಶದಲ್ಲಿ ನಮ್ಮನೆಲ್ಲ ಕಟ್ಟಿಹಾಕಿ
ತನ್ನ ಕರ್ಮಭೂಮಿಯೆಡೆಗೆ ಧರ್ಮ ರಥದಲೇರಿ ನಿಂತು II ಅಪII
ಯಮುನೆ ಭರತದಲ್ಲಿ ರಾತ್ರಿ ತಂದೆ ಕಾಪು ತಂದುಬಿಟ್ಟ
ತಿಳಿದ ಒಡನೆ ಕಂಸರಾಯ ಕೊಲ್ಲಲವನ ಯತ್ನ ಪಟ್ಟ
ಬಂದ ದುಷ್ಟಶಕ್ತಿಗಳಿಗೆ ಧೈರ್ಯದಿಂದ ಎದೆಯ ಕೊಟ್ಟ
ಗೋಕುಲದ ಬೀದಿಗಳಿಗೆ ದೇವಲೋಕ ಇಳಿಸಿಕೊಟ್ಟ || ೧||
ಮಗುವಿನಂತೆ ಲೀಲೆಮಾಡಿ ಮುಗ್ಧ ಮುಗ್ಧ ಆಟವಾಡಿ
ಗೆಳೆಯರೊಡನೆ ಬೆಣ್ಣೆ ಕದ್ದು ಊರ ಜನರ ಕಾಡಿ ಕಾಡಿ
ಗೋಗಳನ್ನು ಹೊಡೆದುಕೊಂಡು ದಟ್ಟವನಕೆ ನಿತ್ಯ ಓಡಿ
ಒಡನೆ ಈಗ ಬಂಧ ಕಳಚಿ ಎಲ್ಲರನ್ನು ಸ್ತಬ್ಧ ಮಾಡಿ ||೨||
ಯಾರ ಮಾತು ಕೇಳದ ಒರಟು ಮನದ ಪುಟ್ಟ ಗೊಲ್ಲ
ಮಧುರೆಯಡೆಗೆ ಕಣ್ಣ ನೆಟ್ಟು ದಿಟ್ಟ ಹೊರಟು ನಿಂತನಲ್ಲ
ಮೋಹಕಿಂತ ಕರ್ಮ ಮೇಲು ತೋರ ಹೊರಟನಲ್ಲ
ಜಾನಕೀಪ ರಾಮನಂತೆ ಕರ್ಮಪಥದ ಜಗದಮಲ್ಲ || ೩ ||
ಜಾನಕಿರಾಮ ಮೋಹವೆಂಬ ಪಾಶದಲ್ಲಿ ನಮ್ಮನೆಲ್ಲ ಕಟ್ಟಿಹಾಕಿ

ಸೀತಾರಾಮ ಕಟ್ಟಿ ಯಲಗೂರು

No comments:
Post a Comment