ಗಂಧಮಾದನದಿಂದ ಕೇಳುತಿಹ ದನಿಯೊಂದು
ಗಾಳಿಯಲಿ ಹರಿ ಹರಿದು ನಾದವಾಗಿದೆಯಿಂದು
ಧನ್ಯವಾಗಿದೆ ಗಿರಿಯು ಧನ್ಯವಾಗಿದೆ ಬಯಲು
ಧನ್ಯವಾಗಿದೆ ಘಟವು ರಾಮ ನಾಮದಿ ಮಿಂದು
ಸರಯು ತಟದಲಿ ಅಂದು ಕೇಳಿ ಬಂದ ನಾಮ
ರವಿವಂಶ ವೃಕ್ಷದಲಿ ಸೇರಿಕೊಂಡ ನಾಮ
ದಶರಥಗೆ ವರವಾಗಿ ಒದಗಿಬಂದ ನಾಮ
ಜಾನಕಿಗೆ ವರನಾಗಿ ವರಿಸಿಬಂದ ನಾಮ
ವಚನ ಪಾಲನೆಯೆನಲು ನೆನಪಾಗುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
ಮರಣದಲಿ ವಾಲಿಗೆ ಮುಕುತಿಯಿತ್ತ ನಾಮ
ಶಬರಿಯಲಿ ಜೀವನವ ಸಾಗಿತಂದ ನಾಮ
ಸೋದರರ ಮನವನದಿ ಸುಮನವಾಗಿಹ ನಾಮ
ದಶಮುಖನ ಮನಪುರವ ದಗ್ಧಮಾಡಿದ ನಾಮ
ಮಿತಿಮತಿಯ ಅರಿವಿಗೆ ನೆಪವಾಗುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
ಎಂದಿಗೂ ಮಾರುತಿಯ ಉಸಿರ ಮಾರುತ ನಾಮ
ಧರ್ಮ ಪಾಲನೆಯಲ್ಲಿ ಧರ್ಮ ಮೂರುತ ನಾಮ
ಪಾಷಾಣ ಸೇತುವನು ಹಿಡಿದುಕೊಂಡಿಹ ನಾಮ
ನಾಮ ಸಾಸಿರವೆಲ್ಲ ಸೇರಿಕೊಂಡಿಹ ನಾಮ
ಪುಣ್ಯಗಳ ಹಿಡಿದಿಟ್ಟು ಪಾಪ ಕಳೆಯುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
-ಜಾನಕಿರಾಮ
ಗಾಳಿಯಲಿ ಹರಿ ಹರಿದು ನಾದವಾಗಿದೆಯಿಂದು
ಧನ್ಯವಾಗಿದೆ ಗಿರಿಯು ಧನ್ಯವಾಗಿದೆ ಬಯಲು
ಧನ್ಯವಾಗಿದೆ ಘಟವು ರಾಮ ನಾಮದಿ ಮಿಂದು
ಸರಯು ತಟದಲಿ ಅಂದು ಕೇಳಿ ಬಂದ ನಾಮ
ರವಿವಂಶ ವೃಕ್ಷದಲಿ ಸೇರಿಕೊಂಡ ನಾಮ
ದಶರಥಗೆ ವರವಾಗಿ ಒದಗಿಬಂದ ನಾಮ
ಜಾನಕಿಗೆ ವರನಾಗಿ ವರಿಸಿಬಂದ ನಾಮ
ವಚನ ಪಾಲನೆಯೆನಲು ನೆನಪಾಗುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
ಮರಣದಲಿ ವಾಲಿಗೆ ಮುಕುತಿಯಿತ್ತ ನಾಮ
ಶಬರಿಯಲಿ ಜೀವನವ ಸಾಗಿತಂದ ನಾಮ
ಸೋದರರ ಮನವನದಿ ಸುಮನವಾಗಿಹ ನಾಮ
ದಶಮುಖನ ಮನಪುರವ ದಗ್ಧಮಾಡಿದ ನಾಮ
ಮಿತಿಮತಿಯ ಅರಿವಿಗೆ ನೆಪವಾಗುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
ಎಂದಿಗೂ ಮಾರುತಿಯ ಉಸಿರ ಮಾರುತ ನಾಮ
ಧರ್ಮ ಪಾಲನೆಯಲ್ಲಿ ಧರ್ಮ ಮೂರುತ ನಾಮ
ಪಾಷಾಣ ಸೇತುವನು ಹಿಡಿದುಕೊಂಡಿಹ ನಾಮ
ನಾಮ ಸಾಸಿರವೆಲ್ಲ ಸೇರಿಕೊಂಡಿಹ ನಾಮ
ಪುಣ್ಯಗಳ ಹಿಡಿದಿಟ್ಟು ಪಾಪ ಕಳೆಯುವ ನಾಮ
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ನಾಮ
-ಜಾನಕಿರಾಮ
ಸೀತಾರಾಮ ಕಟ್ಟಿ

No comments:
Post a Comment