ಮಹಾಭಾರತದ ವನಪರ್ವದಲ್ಲಿ ಭೀಮಸೇನನು ಸಂಹರಿಸಿದ ರಾಕ್ಷಸರಲ್ಲಿ ಮಣಿಮಂತ ಪ್ರಮುಖನಾಗಿದ್ದಾನೆ. ಪಾಂಡವರು ವನವಾಸದಲ್ಲಿದ್ದಾಗ,
ಒಮ್ಮೆ ಬದರಿಕಾರಣ್ಯದಲ್ಲಿ, ದ್ರೌಪದಿ ಸೌಗಾಂಧಿಕ ಹೂವನ್ನು ಸುವಾಸನೆಯಿಂದ ತೀವ್ರವಾಗಿ ಆಕರ್ಷಿತಳಾಗಿ ಭೀಮನ ಬಳಿ ತನಗೆ ಆ ಪುಷ್ಪವನ್ನು ತಂದು ಕೊಡಬೇಕೆಂದು ಕೇಳಿಕೊಂಡಳು. ದ್ರೌಪದಿಯ ಆಸೆಯಂತೆ ಭೀಮನು ಸೌಗಂಧಿಕಾ ಪುಷ್ಪಗಳನ್ನು ಹುಡುಕುತ್ತಾ ಕುಬೇರನ ಉದ್ಯಾನವನದ ಸಮೀಪಕ್ಕೆ ಹೋಗುತ್ತಾನೆ. ಆ ಪುಷ್ಪದ ಪ್ರಭೇದವನ್ನು ಸುಲಭವಾಗಿ ಪತ್ತೆ ಮಾಡಲು ಭೀಮನು ಆ ಹೂವನ್ನು ಹುಡುಕಿಕೊಂಡು ಹೋಗಿ ಒಂದು ಭವ್ಯವಾದ ಸರೋವರದಲ್ಲಿ ಆ ಪುಷ್ಪಗಳನ್ನು ಕಂಡನು. ಪುಷ್ಪಗಳನ್ನು ತೆಗೆದುಕೋಳ್ಳಲು ಭೀಮನು ಆ ಸರೋವರದಲ್ಲಿ ಇಳಿದಾಗ ಕ್ರೋಧವಾಸರೆಂಬ ಕುಬೇರನ ಸೈನಿಕರು ಭೀಮನನ್ನು ತಡೆದು ನಿಲ್ಲಿಸಿ ಆ ಪ್ರದೇಶವು ಕುಬೇರನಿಗೆ ಸೇರಿದ್ದೆಂದು ಅಲ್ಲಿ ಪುಷ್ಪಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಆದರೆ ಅವನು ಅವರೆಲ್ಲರನ್ನೂ ಸೋಲಿಸಿ ಕೊಂದನು. ಬದುಕುಳಿದ ಸೈನಿಕರು ತಮ್ಮ ನಾಯಕ ಮತ್ತು ಕುಬೇರನ ಮಿತ್ರನಾದ ಮಣಿಮನೆಂಬುವನ ಬಳಿ ಭೀಮಸೇನನ ಅತಿಕ್ರಮ ಪ್ರವೇಶದ ಬಗ್ಗೆ ದೂರಿದರು. ಆ ಮಣಿಮನೋ ಮಹರ್ಷಿ ಅಗಸ್ತ್ಯರಿಂದ ಶಪಿಸಲ್ಪಟ್ಟ ಕುಬೇರನ ಸ್ನೇಹಿತ. ಮಣಿಮನು ಅಗಸ್ತ್ಯರ ಮೇಲೆ ಆಕಸ್ಮಿಕವಾಗಿ ಮಾಡಿದ ದುರ್ವರ್ತನೆ ಯಿಂದ ಮಣಿಮನ ಸೈನ್ಯ ಮತ್ತು ಮಣಿಮನನ್ನು ದ್ವಾಪರಯುಗದ ಮನುಷ್ಯನ ಕೈಯಲ್ಲಿ ಸಾಯುತ್ತಾರೆಂದು ಶಪಿಸಿರುತ್ತಾರೆ.
ಉದ್ಯಾನವು ಕುಬೇರನ ಪ್ರದೇಶದ ಮಣಿಕರ್ಣಿಕಾ ನದಿಯಿಂದ ನೈಸರ್ಗಿಕವಾಗಿ ನಿರ್ಮಿತವಾದ ಮಾನಸ ಸರೋವರದ ದಡದಲ್ಲಿ ಇದ್ದು ಇಲ್ಲಿ ಅತ್ಯಮೌಲ್ಯವಾದ ಔಷಧೀಯ ಗಿಡಗಳು ಮೂಲಿಕೆಯ ಸಸ್ಯಗಳು ಹೂಗಳು ಸಂಜೀವಿನಿ ಮೂಲಿಕೆಯ ಸಸ್ಯಗಳು ಇತ್ಯಾದಿಗಳ ಆಗರವಾಗಿದ್ದು ಧನದ ದೇವತೆಯಾದ ಕುಬೇರನನ್ನು ಉದ್ಯಾನ ವನದ ಸಂರಕ್ಷಣೆಗೆ ಒಪ್ಪಿಸಿರುತ್ತಾರೆ.. ಅಲ್ಲಿ ಕುಬೇರನ ಆಪ್ತ ರಾಕ್ಷಸರು ಮತ್ತು ಯಕ್ಷರು ನೋಡಿಕೊಳ್ಳುತ್ತಾರೆ.
ಈ ರಾಕ್ಷಸರಲ್ಲಿ ಮಣಿಮಂತ ಎಂಬುವವನು ದುಷ್ಟನಾಗಿದ್ದನು. ಅವನು ಉದ್ಯಾನದ ನದಿಯ ಸುತ್ತ ಮುತ್ತಲಿನ ಪರಿಸರದಲ್ಲಿ ವಾಸಿಸುತ್ತಿದ್ದ ಪ್ರಜೆಗಳನ್ನು ಹೆಣ್ಣು ಮಕ್ಕಳನ್ನು ಪೀಡಿಸುತ್ತಿದ್ದನು ಅದರಿಂದ ರಾಜ ಕುಬೇರನ ಅಸಂತೋಷಕ್ಕೂ ಕಾರಣನಾಗಿದ್ದನು.
ಭೀಮನು ಕೇವಲ ಮಣಿಮಂತನಲ್ಲದೆ, ಕೌರವನು ಕಳಿಸಿದ ರಾಕ್ಷಸರನ್ನೂ ಅಲ್ಲಿ ಸೋಲಿಸುತ್ತಾನೆ. ಇದರಿಂದ ಕೌರವರ ಷಡ್ಯಂತ್ರವೂ ಭೀಮನಿಗೆ ಮತ್ತೆ ತಿಳಿದು ಇನ್ನೂ ಕ್ರೋಧಕ್ಕೊಳಗಾಗುತ್ತಾನೆ. ಭೀಮ ಮತ್ತು ಮಣಿಮರ ನಡುವೆ ನಡೆದ ಭೀಕರ ಯುದ್ಧದಲ್ಲಿ ಭೀಮನು ಮಣಿಮನನ್ನು ಕೊಂದನು. ಭೀಮನು ಮಣಿಮಂತನನ್ನು ಕೇವಲ ಬರಿಗೈಯಿಂದ ಎಳೆದು ಬಡಿದು ಕೊಲ್ಲುವ ಮೂಲಕ ಆ ರಾಕ್ಷಸನ ಶಾಪವನ್ನು ಮುಕ್ತಾಯಗೊಳಿಸಿದನು, ಇದರಿಂದ ಕುಬೇರನು ಸಹ ಸಂತೋಷಗೊಂಡನು.
ದಣಿದ ಬಳಲಿದ ಭೀಮನು ಕೊಳದ ಬಳಿ ನಿದ್ರೆಗೆ ಜಾರಿದನು. ನಂತರ, ಪಾಂಡವರು ಭೀಮನನ್ನು ಹುಡುಕುತ್ತಾ ಕೃಷ್ಣ ಮತ್ತು ದ್ರೌಪದಿಯೊಂದಿಗೆ ಬಂದರು. ಅವರು ಕುಬೇರರನ್ನು ಭೇಟಿಯಾದರು, ಕುಬೇರನು ಭೀಮನಿಂದ ಹತನಾದ ತನ್ನ ಸ್ನೇಹಿತ ಮಣಿಮನ ಶಾಪ ವಿಮೋಚನೆಯಾದ್ದರಿಂದ ಬಹಳ ಸಂತಸಪಟ್ಟನು ಮತ್ತು ಸೌಗಂಧಿಕಾ ಕಮಲದ ಬುಟ್ಟಿಗಳನ್ನು ಅರ್ಪಿಸಿ ಭೀಮ ಹಾಗೂ ಇತರರನ್ನು ಉಪಚರಿಸಿ ಕಳುಹಿಸಿಕೊಟ್ಟರು.
ಸೌಗಂಧಿಕಾ ಪುಷ್ಪವನ್ನು ಹುಡುಕುವ ಮಾರ್ಗಮಧ್ಯದಲ್ಲಿ ಭೀಮನು ಒಂದು ವೃದ್ಧ ಕಪಿಯೊಂದು ಅವನ ಹಾದಿಯಲ್ಲಿ ಮಲಗಿದ್ದನ್ನು ನೋಡಿದನು. ಅದರ ಉದ್ದನೆಯ ಬಾಲವು ಸುತ್ತಲಿನ ಪ್ರದೇಶವನ್ನು ಚಾಚಿತ್ತು. ಭೀಮನು ಬಹಳ ಹೆಮ್ಮೆಯಿಂದ ಆ ಕಪಿಗೆ ತನ್ನ ಬಾಲವನ್ನು ತಾನು ಹೋಗುವ ಮಾರ್ಗದಿಂದ ಸರಿಸುವಂತೆ ಕೇಳಿಕೊಂಡನು. ಆದರೆ ಆ ಕಪಿಯು ತನಗೆ ತುಂಬಾ ವಯಸ್ಸಾಗಿದೆ ಮತ್ತು ಅದನ್ನು ಮಾಡಲು ಯಾವುದೇ ಶಕ್ತಿ ಇಲ್ಲ ಎಂದು ಉತ್ತರಿಸಿತು ಮತ್ತು ಬದಲಿಗೆ ಭೀಮನು ಅದನ್ನು ಪಕ್ಕಕ್ಕಿಟ್ಟು ಸರಿಸುವಂತೆ ವಿನಂತಿಸಿತು. ತನಗಿಂತ ಕೆಳಮಟ್ಟದ ಪ್ರಾಣಿಯಿಂದ ಆಜ್ಞಾಪಿಸಲ್ಪಟ್ಟಿದ್ದಕ್ಕೆ ಆಕ್ರೋಶಗೊಂಡ ಭೀಮನು ಆ ಕೋತಿಯ ಬಾಲವನ್ನು ತನ್ನ ಎಡಗೈಯಿಂದ ಹಿಡಿದು ಪ್ರಯತ್ನಿಸಿ ಅದನ್ನು ಸರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವನು ತನ್ನ ಎರಡೂ ಕೈಗಳನ್ನು ಮತ್ತು ಅವನ ಎಲ್ಲಾ ಶಕ್ತಿಯನ್ನು ಬಳಸಿದರೂ ಕೂಡ ಆ ಬಾಲವನ್ನು ಅಲ್ಲಾಡಿಸಲೂ ಸಾಧ್ಯವಾಗಲಿಲ್ಲ. ಸೋಲಿಸಲ್ಪಟ್ಟ ಮತ್ತು ಆಶ್ಚರ್ಯಚಕಿತನಾದ ಅವನು ತನ್ನ ಅಹಂಕಾರವನ್ನು ತೊರೆದು ಆ ಕಪಿಯ ಬಳಿ ಕ್ಷಮೆಯಾಚಿಸಿ ಅದರ ನಿಜಸ್ವರೂಪವನ್ನು ಬೇಡಿದನು . ಕೋತಿಯು ತನ್ನ ನೈಜತೆಯನ್ನು ಬಹಿರಂಗಪಡಿಸಿತು ಮತ್ತು ತಾನು ಭೀಮನ ಸಹೋದರ ಹನುಮಂತನೆಂದನು. ಭೀಮನು ಹೆಚ್ಚಿನ ಶಕ್ತಿಯ ರೂಪದಲ್ಲಿ ಹನುಮನ ಆಶೀರ್ವಾದವನ್ನು ಪಡೆದನು. ಅವನು ಭೀಮನನ್ನು ಮುಂದಿನ ಹಾದಿಯ ಬಗ್ಗೆ ಎಚ್ಚರಿಸಿದನು, ಭವಿಷ್ಯದಲ್ಲಿ ನಡೆಯುವ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದನು ಮತ್ತು ಅವರ ಎಲ್ಲಾ ಪ್ರಯತ್ನಗಳಲ್ಲಿ ವಿಜಯದ ಆಶೀರ್ವಾದ ಮಾಡಿ ಅದೃಶ್ಯನಾದನು.
ಭೀಮನ ಅಸಾಧಾರಣ ಶಕ್ತಿ ಮತ್ತು ಪಾಂಡವರು ವನವಾಸದಲ್ಲಿದ್ದಾಗ ಎದುರಿಸಿದ ಅಡೆತಡೆಗಳನ್ನು ನಿವಾರಿಸಿದ ಪರಾಕ್ರಮವನ್ನು ತೋರಿಸುತ್ತದೆ.

No comments:
Post a Comment