सीताराम घनश्याम त्रिविक्रम
साक्षी श्रीधर श्रेया सात्विक सुमंत
ಔಂಧ ರಾಜ್ಯದ ಶ್ರೀಮಂತ ಭವಾನರಾವ ಶ್ರೀನಿವಾಸರಾವ ಮಹಾರಾಜರು.
ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಉತ್ಕಟ ದೇಹ ದಾರ್ಢ್ಯ ಬೆಳೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ ಮತ್ತು ದೈಹಿಕ ಸಂಸ್ಕೃತಿಯ ಪ್ರವರ್ತಕರಾಗಿದ್ದರು. ಅವರ ರಾಜ್ಯದ ಎಲ್ಲ ನಾಗರಿಕರಿಗೆ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಔಂಧನಲ್ಲಿಯ ಬೆಟ್ಟದ ತುದಿಯಲ್ಲಿ ಯಮಾಯಿ ದೇವಿಯ ಸುಂದರವಾದ ದೇವಸ್ಥಾನ. ಇದು ಪಂತ ಪ್ರತಿನಿಧಿ ಕುಟುಂಬದ ಔಂಧ ರಾಜರ ಕುಲದೈವತೆ ಆಗಿದೆ. ಅವರು ಉತ್ತಾನಾಸನವನ್ನು ಜನಪ್ರಿಯಗೊಳಿಸಿದರು, ಸೂರ್ಯನಮಸ್ಕಾರ ವ್ಯಾಯಾಮದ ಪ್ರತಿ ಪಾದಕರಾಗಿದ್ದರು ಸೂರ್ಯ ನಮಸ್ಕಾರದ ಹರಿವಿನ ಅನುಕ್ರಮವು ಮೇಲಕ್ಕೆ ಮತ್ತು ಕೆಳಕ್ಕೆ ಮಾಡುವ ಭಂಗಿಗಳನ್ನು ಪರಿಷ್ಕರಣೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಶ್ರೀ ಭವಾನರಾವಜಿ ಶಿಕ್ಷಣಕ್ಕೆ ಒತ್ತು ನೀಡಿದ ಮಹಾರಾಜರು. ಒಬ್ಬ ಅಕ್ಷರ ಪುರುಷ, ಒಬ್ಬ ನಿಪುಣ ಚಿತ್ರಕಾರ, ಕೀರ್ತನಕಾರ. ಸಮಾಜ ಸುಧಾರಕ, ದಾರ್ಶನಿಕ, ಕಟ್ಟಾ ದೇಶಭಕ್ತ ಮತ್ತು ಪ್ರಜಾ ಪೋಷಕರಲ್ಲದೆ - ಅತ್ಯುತ್ತಮ ಕಲಾವಿದರಾಗಿದ್ದರು, ಅವರ ನೈಸರ್ಗಿಕ ಪ್ರತಿಭೆಯನ್ನು ಆ ಸಮಯದಲ್ಲಿ ಯುರೋಪಿನ ಅನೇಕ ಕಲಾ ವಿಶ್ವ ವಿದ್ಯಾಲಯಗಳಲ್ಲಿ ಗೌರವಿಸಲಾಯಿತು.
ಅವರು ಜಲವರ್ಣ ತೈಲವರ್ಣಚಿತ್ರಗಳ ಪೋಷಕರಾಗಿದ್ದರು ಮತ್ತು ಅವರ ಚಿತ್ರ ಸಂಗ್ರಹವು ರಾಜಾ ರವಿವರ್ಮ ಅವರ ಕೆಲವು ಮೂಲ ಕೃತಿಗಳನ್ನು ಸಹ ಹೋಲುವಂತ್ತಿದ್ದವು.
ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನೆಲೆಸಿರುವ ಕಲೆಯನ್ನು ಉತ್ತೇಜಿಸಲು ಹೆಸರುವಾಸಿಯಾಗಿದ್ದರು. ಅವರ ವರ್ಣಚಿತ್ರಗಳು, ಶಿಲ್ಪಗಳು ಮತ್ತು ಕಲಾಕೃತಿಗಳ ಸಂಗ್ರಹವನ್ನು ಸಾತಾರಾದ ಔಂಧ ನಲ್ಲಿರುವ ಸುಸಂಸ್ಕೃತ / ಕ್ಯುರೇಟೆಡ್ ಮ್ಯೂಸಿಯಂನಲ್ಲಿ ಕಾಣಬಹುದು, ಈ ನೆಲೆಯಲ್ಲಿ ಚರ್ಚಿಸಲಾದ ಔಂಧ, ಪಶ್ಚಿಮ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಹಿಂದಿನ ಔಂಧ ರಾಜ್ಯವಾಗಿದೆ.
ಅವರ ಚಿತ್ರ ರಾಮಾಯಣ : ಈ ಚಿತ್ರವು ರಾಮನ ಪಟ್ಟಾಭಿಷೇಕದ ಚಿತ್ರವಾಗಿದೆ ರಾಮಾಯಣದ ಚಿತ್ರ ತುಂಬಾ ಸುಂದರವಾಗಿದೆ. ಸುಮಾರು 60 ಸುಂದರವಾದ ತಂಪಾದ ವರ್ಣಗಳಿಂದ ರಚಿತವಾಗಿರುವ ಚಿತ್ರಗಳಿವೆ. ಪಂತ ಪ್ರತಿಭೆ ಯ ಅವರು ಔಂಧ ನಲ್ಲಿ ಬೃಹತ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದಾರೆ.
ಮಹಾರಾಜ ಅವರು 1949 ರಲ್ಲಿ ತಮ್ಮ ರಾಜ್ಯದ ಸಂಸ್ಥೆಗಳನ್ನು ಶ್ರೀ ವಲ್ಲಭಭಾಯಿ ಪಟೇಲರಿಗೆ ಸ್ವೇಚ್ಛೆಯಿಂದ ಅರ್ಪಿಸಿದರು. ಹಾಗೆ ಮಾಡಿದ ಭಾರತದ ಮೊದಲ ರಾಜರು ಅವರು.
ನಮ್ಮ ಅಜ್ಜ ವೇದ ಶಾಸ್ತ್ರ ಸಂಪನ್ನರಾದ ವೈ. ಶ್ರೀ ಸೀತಾರಾಮಾಚಾರ್ಯ ದ್ವೈಪಾಯನಾಚಾರ್ಯ ಕಟ್ಟಿ ಉಮರಜಕರ ರವರಿಗೆ ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಎಂಬ ಬಿರುದನ್ನು ನೀಡಿ ಗೌರವಿಸಿದವರೇ ಔಂಧ ರಾಜ್ಯದ ಮಹಾರಾಜರು. ಔಂಧ ರಾಜರ ಆಸ್ಥಾನದಲ್ಲಿ ನಮ್ಮ ಅಜ್ಜ ಕೆಲ ವರ್ಷಗಳ ವರೆಗೆ ರಾಜ ಪುರೋಹಿತರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಲಾಗುತ್ತದೆ.
ಈ ಅಲಭ್ಯ ಐತಿಹ್ಯವನ್ನು ಅವರ ಮುಖದಿಂದಲೇ ತಿಳಿದುಕೊಂಡಿದ್ಧು ಕಾಲಕ್ರಮವಾಗಿದೆಯೋ ಏನೋ ಗೊತ್ತಿಲ್ಲಾ, ಹೇಳಿದ ಘಟನೆಗಳನ್ನು ಅನೂಚಾನವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ.
ವೈ.ದಾದಾರವರು ಕಾಶಿ, ಪ್ರಯಾಗಕ್ಕೆ, ಹರಿದ್ವಾರಕ್ಕೆ, ಅಲಹಾಬಾದ್ ಹೋಗಿದ್ದರೆಂದು ಕೇಳಿ ಗೊತ್ತು, ಚೈತ್ರ ಶುಕ್ಲ ಏಕಾದಶಿ ಶುಕ್ರವಾರ ದಂದು ಚಂದ್ರ ಸಿಂಹ ರಾಶಿಯಲ್ಲಿರುವಾಗ 1878 ದುರ್ಮುಖಿ ನಾಮ ಸಂವತ್ಸರ ಉತ್ತರಾಯಣ 20/04/1956 ರಂದು ಮಥುರೆಯಲ್ಲಿದ್ದರು ಎಂದು ತಿಳಿದುಬಂದಿದೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಶ್ರಾದ್ಧಾದಿ ಕಾರ್ಯದಲ್ಲಿ ಇದ್ದಾಗ ಯಾರೋ ಒಬ್ಬ ವಿದ್ವಾಂಸರು " ತಾವು ದಶಗ್ರಂಥಿ ಬ್ರಾಹ್ಮಣರು ಆತ್ಮ ಶ್ರಾದ್ಧವನ್ನೂ ಮಾಡಿಕೊಳ್ಳಬೇಕಲ್ಲವೇ ? ಎಂದಾಗ ಶುಭಕಾರ್ಯಕ್ಕೆ ತಡವೇಕೆ ಈ ದಿನ ಅಪರಾಹ್ನವೇ ತಮ್ಮ ಪೌರೋಹಿತ್ಯ ದಲ್ಲಿಯೇ ಆತ್ಮ ಶ್ರಾದ್ಧ ಮಾಡಿಕೊಳ್ಳುತ್ತೇನೆ ಎಂದರಂತೆ ಆದರೇ " ಪಿತೃಗಳ ತೀರ್ಪಣಗಳನ್ನು ಇನ್ನೊಮ್ಮೆ ಗಂಡಕಿ ನದಿಯಲ್ಲಿ ಅರ್ಪಿಸುವದು ವಾಡಿಕೆ ಮತ್ತು ಶ್ರೇಷ್ಠ " ಎಂದಿದ್ದರೆಂದು ವೈ ದಾದಾರವರೇ ಹೇಳಿದ್ದು ನೆನಪಿದೆ ( ವೈ. ದಾದಾರವರ ಕೊನೆಯ ಭೆಟ್ಟಿ - ಶ್ರೀ ವಾಸುದೇವಾಚಾರ್ಯ ಕಾಕಾರವರ ವಿವಾಹಕ್ಕೆ 1975 ಸೋಲಾಪೂರಕ್ಕೆ ಕೇವಲ ಒಂದೇ ಒಂದು ದಿವಸದ ರಜೆ ತೆಗೆದು ಹೋಗಿದ್ದೆ " ನಿನಗ ಕೇಂದ್ರ ಸರ್ಕಾರದ ನೌಕರಿ ಹತ್ತು, ನಾ ಜೀವಂತ ಇದ್ದಾಗೆ ನನ್ನ ಮೊಮ್ಮಗನಿಗೆ ನೌಕರಿ ಆಯಿತು, ನನ್ನ ಶ್ರಮ ಸಾರ್ಥಕ ಆಯ್ತು ಆನಂದ ಆಯ್ತು, ನಂದು ಒಂದು ಕೆಲಸ ಮಾಡು ಯಾವಾಗ ಆದಾಗ ಗಂಡಕೀ ನದ್ಯಾಗ ನನ್ನ ಎಲ್ಲಾ ಪಿತರ ತರ್ಪಣ ಕುಡಪಾ, ಆ ಅಧಿಕಾರ ನಿನಗೆ ಕೊಟ್ಟೀದ. ) ಎಂದು ಕಣ್ಣೀರು ಹಾಕಿದ್ದು ಇನ್ನೂ ಕಣ್ಣು ಮುಂದೆ ಬರುತ್ತದೆ. ಮುಂದೆ 2016 ರಲ್ಲಿ ನೇಪಾಳದ ಮುಕ್ತಿನಾಥ ದರ್ಶನ ಪಡೆದು ಹಿಂದಿರುಗುವಾಗ ಝಾಮ್ಸಾಮ್ ಗ್ರಾಮದ ಗಂಡಕೀ ನದಿಯ ದಂಡೆಯಲ್ಲಿ ಶ್ರಾದ್ಧ ಮಾಡಿ ಸಮಸ್ತ ಪಿತರರ ತರ್ಪಣ ಬಿಡುವ ಸದವಕಾಶ ಒದಗಿ ಬಂತು. ಆಗ ಪುತ್ರ ಘನಶ್ಯಾಮನು ತ ನ್ನ ತಾಯಿಯ ಶ್ರಾದ್ಧ ಮಾಡಿ ತರ್ಪಣ ಬಿಡುವ ಪುಣ್ಯವನ್ನೂ ಪಡೆದ.
ಕಟ್ಟಿ ಮತ್ತು ಉಮರಜಕರ ಮನೆತನದವರು ತಮಗೆ ಇನ್ನೂ ಹೊಸದಾಗಿ ಏನಾದರೂ ಗೊತ್ತಿದ್ದರೆ ತಿಳಿಸಬೇಕು. ಉತ್ಸಾಹಿಗಳು ತಮ್ಮ ಮನೆತನದ ಇತಿಹಾಸದ ಬಗ್ಗೆ ಸಂಶೋಧನೆ ಮಾಡಲು ಅವಕಾಶವಿದೆ. ಧನ್ಯವಾದಗಳು.
.... ಸುಧೀರ ಶ್ರೀಧರಾಚಾರ್ಯ ಕಟ್ಟಿ
ಯಲಗೂರು
No comments:
Post a Comment