Saturday, October 14, 2017

RAKSHAATA MALLA Govindapur ( Bhutaraaj ) ಕ್ಷೇತ್ರ ಪಾಲ ರಗಡ ಮಲ್ಲ


क्षेत्र पाल रक्षाटमल्ल
ಜನಪದ  ಭೂತರಾಜ  ಕ್ಷೇತ್ರ ಪಾಲ ರಗಡ ಮಲ್ಲ 
शिष्ट रक्षणॆ दुष्ट निःपातद बग्गॆ इरुव परमपुरुषन  हेळिकॆयंतॆ, इन्नू ऒंदु हॆज्जॆ मुंदॆ होगि दुष्टरन्नु अंकितदल्लि इट्टुकॊंड श्रीमद्गोविंदराजर देवर बग्गॆ ---------------------
समाजघातुक महाभायंकर रक्कसरूपद महमल्लनॆंबववनन्नु श्री अगस्त्यऋषिगळ मुखांतर शिक्षिसि ,परिवर्तिसि हिडितदल्लिट्टुकॊंडु प्रजापालनक्कॆ, समाजहितक्कॆ उपयोगिसिकॊंडु रक्षाटमल्ल नॆंदु परिसर संरक्षणॆगागि क्षेत्र पालनेन्दु  नियमिसिद बग्गॆ आख्यायिकॆगळु  कंडु बरुत्तवॆ.
 क्षेत्रस्य नैऋत्य मारभ्य आग्नेय पर्यंतरौ ।
त्रिकाले एककालं वा भूतमल्ल महाबलिः   ।
यस्यस्मरण मात्रेण सर्व शत्रुर् विनाषनंम्   ॥
निषिद्ध कर्मणेSतिक्रमणे एकवार क्षमे श्रियं | अक्ष्यम्य रक्षा टके शिक्षा विस्फोटक भवे ध्रुवं ||
रोगाग्रस्थ विनश्यन्ति न च सर्पेण दृश्यते | 
वेताल भूत पिशाच्यादि डाकिनी प्रभवन्ति नो  ||
क्षेत्र पालो महा उग्रो सर्व क्लेश विनाशकः | 
यत्रत्वम् नमते भूत राजा रक्षं नमोस्तुते  ||   
इदु रक्षाटमल्लन शिला प्रतिमॆ, तलेयल्ली भालेयन्नु होडेदुद्दन्नुकाणुत्तेवे.कोरे हल्लुगळु नालिगे होरबन्दिद्दु  एदेय मेले हाविन चित्रविदे  एदेयिन्द सोन्टद वरेगे हग्गदिन्द बिगियलागिदे हिन्दे कै कट्टिद्दानो, कत्तरिसिद्दारो तिलियदु सोन्टद केलगे दोद्ड कत्तियोन्दु नेतादुत्तिरुवन्तिदे. ई प्रतिमेय मुम्भागदल्ली यज्ञ वराहाद मुखवन्नु होलुव शिला प्रतिमेयु ऒंदु कालदल्लि इत्तु ऎंदु हिरियर हेळिकॆगळिवॆ.आदरॆ मुंदॆ भक्तादिगळ चिक्कमक्कळ शरीर स्वास्थ्यक्कागि माडिरुव हरकॆगळ परिणाम सिंधूर हच्हुवदु,पदे पदे ऎण्णॆ सुरियुवुदरिंद सुंदरतॆ मायवायितंतॆ.आ मेलिन दिनगळलि आ शिलॆयु मूरेणिन कल्लिनंतॆ काणुत्तित्तंतॆ. भीमानदिय नीरिन रभसदिंद ऒत्तुकॊट्टिरुव कारण ई शिला प्रतिमॆयु पूर्वक्कॆ दक्षिण वाहिनियागिरुव भीमा नदिय नीरिनिंद चिक्क कॊळ्ळद तॆर नैसर्गिकवागि निर्माणगॊंडिरुव भाग गोविंदपुरद पश्चिमद वरॆगू हब्बिदॆ. गोविंदपुर परिसरदल्लिरुव निवरगि,रेवतगाव ,उमरज ,नंदगाव ,भंडारकवठॆ संख ,उमराणि  ग्रामगळल्लिरुव भक्तरु “ रगडमल्ल “ नॆंदु भय भक्तियिंद करॆयुत्तारॆ. श्री गोविंदराज देवर उत्तुंग शिला पीठदिंद दक्षिणक्कॆ सुमारु ऒंदु फर्लांग दूरदल्लि नदिय ऒत्तुकॊट्ट भागविद्दु अल्लिये रगड मल्लन वास्तवविदॆ. भीम रथिय नीरिन रभसद ऒत्तडदिंद शिला प्रतिमॆयु कित्तुहोगिदॆयो अथवा मण्णिनल्लि हूतु होगिदॆयो गॊत्तिल्ल.आ रगड मल्लनिंद  क्षेत्र पालनिन्द  परिसरद  रक्षणा कर्म इन्नू निरंतरवागि नडॆयुत्तिदॆयॆंदु भक्तर नंबिकॆ,ई रगडमल्लन ऒत्तु कॊट्ट भागदुद्दक्कू यारादरु लघुशंखॆ अथवा बहिर्दॆशॆ इत्यादि कॆलस माडिदरॆ तन्न देवर श्रीमद्त गोविन्दाराज देवर अस्तित्व दल्लिरुव भूमि यन्नु कबळिसलु नोडीदरे  तत् क्षणवे  रक्त कारुवुरन्ते मत्तु  ज्वर ,बडबडिसुवदु अपस्मार  इत्यादि दुष्परिणामगळिगॆ  तुत्तागुवदु खंडित ऎंदु बलवाद नंबिकॆ इदॆ. क्षेत्र पालन मुन्दे बली कोत्तिद्दन्नु यारु कोट्टील्लवन्ते. दुष्परिणामगळिगे तुत्तादवरु इद्दारे. चिक्क मक्कळ स्वास्थ्यक्कागि तम्म तम्म हरकॆ पूरैसुववरु प्रति अमावास्यॆगॆ तम्म हरकॆय पूजॆ, नैवेद्य तोरिसि हूवु हण्णुगळन्नु अर्पिसि हार हाकि शिलॆय बुडदल्लिरुव मृत्तिकॆयन्नॆ प्रसादवॆंदु,विभूतियॆंदु  हणॆगॆ हच्चिकॊंडु दोष  निवारणॆ पडॆयुत्तारॆ, कृतार्थरागुत्तारॆ

ಪರಿಸರದ ಜನಪದರಲ್ಲಿ ಭೂತಾಳ ಸಿದ್ಧ ನೆಂದೂ
ರಕ್ಷಾಟಮಲ್ಲ ,ಭೂತರಾಜ, ಕ್ಷೇತ್ರ ಪಾಲ, ರಗಡ ಮಲ್ಲನೆಂದೂ ಪ್ರಸಿದ್ಧ ನಿರುವ ಈತನ ಮೂರ್ತಿಗಳು ಬಗ್ಗೆ ಬೇರೆ ಬೇರೆ ಅಭಿಪ್ರಾಯ ಗಳಿವೆ ಅದಕ್ಕಾಗಿ ಎರಡೂ ಮೂರ್ತಿಗಳ ಚಿತ್ರಗಳನ್ನು ಗ್ರಾಮದ ಹಿರಿಯರು ಹೇಳಿದ ಹಾಗೆ ಚಿತ್ರಿಸಲು ಪ್ರಯತ್ನಪಟ್ಟಿದ್ದೇನೆ. ಗೋವಿಂದ ರಾಜ ದೇವರ ಸಾನ್ನಿಧ್ಯದಲ್ಲಿ ಇರುವ ಗ್ರಾಮವಾದ್ದರಿಂದ ಗೋವಿಂದಪುರವೆಂದು ಒಂದುಕಡೆ ಕರೆಯುವುದಾದರೇ, ಬೇರೆ ಹೇಳಿಕೆಗಳಂತೆ ದಾರ್ಢ್ಯ ಋಷಿಗಳ ಮಾರ್ಗದರ್ಶನ ದಿಂದಾಗಿ ಏಕಚಕ್ರಾಧಿಪತ್ಯ ಹೊಂದಿದ ರಾಜಾ ವಿಕ್ರಮಾದಿತ್ಯನು ಕೃತಜ್ಞತೆಯಿಂದ ಕಾಣಿಕೆ ರೂಪದಲ್ಲಿ ಸಹಸ್ರ ಹಸುಗಳನ್ನು ದಾನವಾಗಿ ಕೊಟ್ಟನಂತೆ,ಅಲ್ಲದೆ ಹಸುಗಳ ಮೇಲ್ವಿಚಾರಣೆಗೆ ಅಲ್ಲಿ ಗೋಶಾಲೆಯನ್ನೂ  ಕಟ್ಟಿಸಿ ನೋಡಿ ಕೊಳ್ಳುತ್ತಿದ್ದುದರಿಂದ ಈ ಗ್ರಾಮಕ್ಕೆ ಗೋವೃಂದಪುರ ಎಂದೂ ಕರೆದದ್ದಿದೆ ಎಂಬ ಆಖ್ಯಾಯಿಕೆಗಳಿವೆ.
ಶಿಷ್ಟ ರಕ್ಷಣೆ ದುಷ್ಟ ನಿಃಪಾತದ ಬಗ್ಗೆ ಇರುವ ಪರಮಪುರುಷನ  ಹೇಳಿಕೆಯಂತೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದುಷ್ಟರನ್ನು ಅಂಕಿತದಲ್ಲಿ ಇಟ್ಟುಕೊಂಡ
ಶ್ರೀಮದ್ಗೋವಿಂದರಾಜರ ದೇವರ ಬಗ್ಗೆ ---
ಸಮಾಜಘಾತುಕ ಮಹಾಭಾಯಂಕರ ರಕ್ಕಸರೂಪದ ಮಹ ಮಲ್ಲನೆಂಬವವನನ್ನು ಶ್ರೀ ಅಗಸ್ತ್ಯ ಋಷಿಗಳ ಮುಖಾಂತರ ಶಿಕ್ಷಿಸಿ ,ಪರಿವರ್ತಿಸಿ ಹಿಡಿತದಲ್ಲಿಟ್ಟುಕೊಂಡು ಪ್ರಜಾಪಾಲ ನಕ್ಕೆ,  ಕ್ಷೇತ್ರಪಾಲಕ್ಕೆ, ಸಮಾಜಹಿತಕ್ಕೆ ಉಪಯೋಗಿಸಿಕೊಂಡು ರಕ್ಷಾಟಮಲ್ಲ ನೆಂದು ಪರಿಸರ ಸಂರಕ್ಷಣೆಗಾಗಿ ನಿಯಮಿಸಿದ ಬಗ್ಗೆ ಆಖ್ಯಾಯಿಕೆಗಳು ಕಂಡು ಬರುತ್ತವೆ.
ಕ್ಷೇತ್ರಸ್ಯ ನೈಋತ್ಯ ಮಾರಭ್ಯ ಆಗ್ನೇಯ ಪರ್ಯಂತರೌ | ತ್ರಿಕಾಲೇ ಏಕಕಾಲಂ ವಾ ಭೂತಮಲ್ಲ ಮಹಾಬಲಿಃ   || ಯಸ್ಯಸ್ಮರಣ ಮಾತ್ರೇಣ ಸರ್ವ ಶತ್ರುರ್ ವಿನಾಶನಮ್   ||
ನಿಷಿದ್ಧ ಕರ್ಮಣೇSತಿಕ್ರಮಣೇ ಏಕವಾರ ಕ್ಷಮೇ ಶ್ರಿಯಂ | ಅಕ್ಷ್ಯಮ್ಯ ರಕ್ಷಾಟಕೇ ಶಿಕ್ಷಾ ವಿಸ್ಫೋಟಕ ಭವೇ ಧ್ರುವಂ || ರೋಗಾಗ್ರಸ್ಥ ವಿನಶ್ಯಂತಿ  ನ ಚ ಸರ್ಪೇಣ ದೃಶ್ಯತೇ | ವೇತಾಲ ಭೂತ ಪಿಶಾಚ್ಯಾದಿ ಡಾಕಿನೀ ಪ್ರಭವಂತಿ ನೋ  || ಕ್ಷೇತ್ರಪಾಲೋ ಮಹಾಉಗ್ರೋ ಸರ್ವ ಕ್ಲೇಶವಿನಾಶಕಃ | ಯತ್ರತ್ವಮ್ ನಮತೇ ಭೂತರಾಜಾ ರಕ್ಷಂ ನಮೋಸ್ತುತೇ  ||   
ಇದು ರಕ್ಷಾಟಮಲ್ಲನ ಶಿಲಾ ಪ್ರತಿಮೆ, ತಲೆಯಲ್ಲಿ ಭಾಲೆಯನ್ನು ಹೊಡೆದುದ್ದನ್ನು ಕಾಣುತ್ತೇವೆ ಕೋರೆ ಹಲ್ಲುಗಳು,ನಾಲಿಗೆ ಹೊರಬಂದಿದ್ದು  ಎದೆಯಮೇಲೆ ಹಾವಿನ ಚಿತ್ರವಿದೆ.ಎದೆಯಿಂದ ಸೊಂಟದ ವರೆಗೆ ಹಗ್ಗದಿಂದ ಬಿಗಿಯಲಾಗಿದೆ, ಹಿಂದೆ ಕೈ ಕಟ್ಟಿ ದ್ದಾನೋ, ಕತ್ತರಿಸಿದ್ದಾರೋ ತಿಳಿಯದು ಸೊಂಟದ ಕೆಳಗೆ ದೊಡ್ಡ ಕತ್ತಿಯೊಂದು ನೇತಾಡುತ್ತಿರುವಂತಿದೆಈ ಪ್ರತಿಮೆಯ ಮುಂಭಾಗದಲ್ಲಿ ಯಜ್ಞ ವರಾಹದ ಮುಖವನ್ನು ಹೋಲುವ ಶಿಲಾ ಪ್ರತಿಮೆಯು ಒಂದು  ಕಾಲದಲ್ಲಿ ಇತ್ತು ಎಂದು ಹಿರಿಯರ ಹೇಳಿಕೆಗಳಿವೆ. ಆದರೆ ಮುಂದೆ ಭಕ್ತಾದಿಗಳ ಚಿಕ್ಕಮಕ್ಕಳ ಶರೀರ ಸ್ವಾಸ್ಥ್ಯಕ್ಕಾಗಿ ಮಾಡಿರುವ ಹರಕೆಗಳ ಪರಿಣಾಮ ಸಿಂಧೂರ ಹೆಚ್ಚುವುದು, ಪದೇ ಪದೇ ಎಣ್ಣೆ ಸುರಿಯುವುದರಿಂದ ಸುಂದರತೆ ಮಾಯವಾಯಿತಂತೆ.ಆ ಮೇಲಿನ ದಿನಗಳಲಿ ಆ ಶಿಲೆಯು ಮೂರೇಣಿನ ಕಲ್ಲಿನಂತೆ ಕಾಣುತ್ತಿತ್ತಂತೆ. ಭೀಮಾನದಿಯ ನೀರಿನ ರಭಸದಿಂದ ಒತ್ತುಕೊಟ್ಟಿರುವ ಕಾರಣ ಈ ಶಿಲಾ ಪ್ರತಿಮೆಯು ಪೂರ್ವಕ್ಕೆ ದಕ್ಷಿಣ ವಾಹಿನಿ ಯಾಗಿರುವ ಭೀಮಾ ನದಿಯ ನೀರಿನಿಂದ ಚಿಕ್ಕ ಕೊಳ್ಳದ ತೆರ ನೈಸರ್ಗಿಕವಾಗಿ ನಿರ್ಮಾಣ ಗೊಂಡಿರುವ ಭಾಗ ಗೋವಿಂದಪುರದ ಪಶ್ಚಿಮದ ವರೆಗೂ ಹಬ್ಬಿದೆ. ಗೋವಿಂದಪುರ ಪರಿಸರದಲ್ಲಿರುವ ನಿವರಗಿ,ರೇವತಗಾವ ,ಉಮರಜ ,ನಂದಗಾವ ,ಭಂಡಾರಕವಠೆ ಸಂಖ ,ಉಮರಾಣಿ  ಗ್ರಾಮಗಳಲ್ಲಿರುವ ಭಕ್ತರು “ ರಗಡಮಲ್ಲ “ ನೆಂದು ಭಯ ಭಕ್ತಿಯಿಂದ ಕರೆಯುತ್ತಾರೆ. ಶ್ರೀ ಗೋವಿಂದರಾಜ ದೇವರ ಉತ್ತುಂಗ ಶಿಲಾ ಪೀಠದಿಂದ ದಕ್ಷಿಣಕ್ಕೆ ಸುಮಾರು ಒಂದು ಫರ್ಲಾಂಗ ದೂರದಲ್ಲಿ ನದಿಯ ಒತ್ತುಕೊಟ್ಟ ಭಾಗವಿದ್ದು ಅಲ್ಲಿಯೇ ರಗಡ ಮಲ್ಲನ ವಾಸ್ತವವಿದೆ. ಭೀಮ ರಥಿಯ ನೀರಿನ ರಭಸದ ಒತ್ತಡದಿಂದ ಶಿಲಾ ಪ್ರತಿಮೆಯು ಕಿತ್ತುಹೋಗಿದೆಯೋ ಅಥವಾ ಮಣ್ಣಿನಲ್ಲಿ ಹೂತು ಹೋಗಿದೆಯೋ ಗೊತ್ತಿಲ್ಲ.ಆ ರಗಡಮಲ್ಲನಿಂದ ಪರಿಸರದ ರಕ್ಷಣಾ ಕರ್ಮ ಇನ್ನೂ ನಿರಂತರವಾಗಿ ನಡೆಯುತ್ತಿದೆಯೆಂದು ಭಕ್ತರ ನಂಬಿಕೆ,ಈ ರಗಡಮಲ್ಲನ ಒತ್ತು ಕೊಟ್ಟ ಭಾಗದುದ್ದಕ್ಕೂ ಯಾರಾದರು ಲಘುಶಂಖೆ ಅಥವಾ ಬಹಿರ್ದೆಶೆ ಇತ್ಯಾದಿ ಕೆಲಸ ಮಾಡಿದರೆ ತನ್ನ ದೇವರ ಶ್ರೀಮದ್ ಗೋವಿಂದರಾಜ ದೇವರ ಅಸ್ತಿತ್ವದಲ್ಲಿರುವ ಭೂಮಿಯನ್ನು ಕಬಳಿಸಲು ನೋಡಿದರೆ ಕ್ಷೇತ್ರ ಪಾಲ ತಕ್ಷಣವೇ ರಕ್ತ ಕಾರುವಂತೆ ಮಾಡುತ್ತಾನೆ.  
   ಅಪಸ್ಮಾರ ಜ್ವರ ,ಬಡಬಡಿಸುವದು ಇತ್ಯಾದಿ ದುಷ್ಪರಿಣಾಮಗಳಿಗೆ  ತುತ್ತಾಗುವದು ಖಂಡಿತ ಎಂದು ಬಲವಾದ ನಂಬಿಕೆ ಇದೆ. ಕ್ಷೇತ್ರ ಪಾಲನ ಮುಂದೆ ಬಲಿಕೊಟ್ಟಿದ್ದನ್ನು ಯಾರು ಕಂಡಿಲ್ಲವಂತೆ.ದುಷ್ಪರಿಣಾಮಗಳಿಗೆ ತುತ್ತಾದವರು ಇದ್ದಾರೆ. ಚಿಕ್ಕ ಮಕ್ಕಳ ಸ್ವಾಸ್ಥ್ಯಕ್ಕಾಗಿ ತಮ್ಮ ತಮ್ಮ ಹರಕೆ ಪೂರೈಸುವವರು ಪ್ರತಿ ಅಮಾವಾಸ್ಯೆಗೆ ತಮ್ಮ ಹರಕೆಯ ಪೂಜೆ, ನೈವೇದ್ಯ ತೋರಿಸಿ ಹೂವು ಹಣ್ಣುಗಳನ್ನು ಅರ್ಪಿಸಿ ಹಾರ ಹಾಕಿ ಶಿಲೆಯ ಬುಡದಲ್ಲಿರುವ ಮೃತ್ತಿಕೆಯನ್ನೆ ಪ್ರಸಾದವೆಂದು,ವಿಭೂತಿಯೆಂದು  ಹಣೆಗೆ ಹಚ್ಚಿಕೊಂಡು ದೋಷ  ನಿವಾರಣೆ ಪಡೆಯುತ್ತಾರೆ, ಕೃತಾರ್ಥರಾಗುತ್ತಾರೆ.

No comments:

Post a Comment