ಶ್ರೀ ಶನೈಶ್ಚರ ಚರಿತಂ
೧ / ೧ ರಿಂದ ೨೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ
ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ
ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಪ್ರಥಮ ಸಂಧಿ
ಶ್ರೀ ಗಣೇಶನ ನಮಿಸಿ ಬೇಡುವೆ | ನೀಗಿಸೆಂದುಸುರುವೆನು ಸೇವೆಗೆ | ಶ್ಲಾಘಿಸುವೆ ಶ್ರೀ ಶನೈಶ್ಚರ ಮಹ ಚರಿತೆ ವಿಸ್ತರಿಸಿ || ೧ ||
ವಾಗು
ದೇವಿಯೇ ವಂದಿಸಿಯೇ ಭವ | ಭೋಗ ಭಾಗ್ಯವನೀವ ಪಿಂಗಳ- | ಮೋಘ ವರ್ಣನೆ ಮಾಳ್ಪ ಶಕ್ತಿಯು ಕೇಳ್ವೆ ಪ್ರೇರಣೆಯ || ೨ ||
ಶ್ರೀ
ಗುರುವೆ ಹರಿ ಬ್ರಹ್ಮ ಶಂಕರ | ಆಗು ಹೋಗುಗಳೆಣೆಯ ಸಾಗಿಪ | ಸಾಗರವೇ ಪ್ರಾರ್ಥಿಸುವೆ ಕೋಣಸ್ಥರಿವ
ದೆಸೆಯಿಂದ || ೩ ||
ಶ್ರೀ
ಲಕುಮಿ ಗೋವಿಂದದೇವ ವಿ - | ಶಾಲ ಮರವಶ್ವತ್ಥ ರೂಪದ | ಓಲೈಸಿ ವಂದಿಸುವೆ ಕಾರ್ಯಕೆ ಯಶವನೀಯೆಂದು || ೪ ||
ಶರಣ
ಸಂತತಿ ಚರಣ ಸನ್ನಿಧಿ | ಕರುಣಿಸೆಂ ಬಯಸುತಲೆ ನುತಿಸುವೆ | ವರವಿರಲಿ ಬುಧರೆಲ್ಲ ಪ್ರೇರಿಸಿ
ಕೃತಿಗೆ ಕೈಗೂಡಲಿ || ೫ ||
ಮೂಲದೊಳು
ಕಥೆ ಶಿವ ಭವಾನಿಗೆ | ಬಾಲ ಕುವರ ಷಡಾನನಾಲಿಸಿ | ಮೇಲು ಸ್ಕಂದ ಪುರಾಣದೊಳು ತಾ ಕಾಶಿಖಂಡೆಂದು ||೬ ||
ಇದನಗಸ್ತಿಯು
ಲೋಪಮುದ್ರೆಗೆ | ಬಾದರಾಯಣ ಶಿಷ್ಯರಲಿಯು | ಮೋದದಲಿ ಶಿವಶರ್ಮ ವಿಷ್ಣುಗಣಗಳಿಮ್ ಕೇಳ್ದ || ೭ ||
ಕಾಶಿ
ಖಂಡುಪಖಂಡ ವಿಂಶತಿ | ಶ್ರೀ ಶನೈಶ್ಚರಜನ್ಮ ಕಥೆಯದು | ಭಾಷೆ ಕನ್ನಡ ಪೇಳೆ ತಾ ಗೋವಿಂದ
ಕೃಪೆಯಿಂದ || ೮ ||
ದಕ್ಷಿಣದಿ
ದಾನವರ ಹಾವಳಿ | ಭಕ್ಷಿಸುತಲಿರೆ ಮಾನವರ ಕುಲ | ರುಕ್ಷ ಬುದ್ಧಿಯ ಕ್ರೂರಮತಿಗಳ ನಾಶ
ಪಡಿಸಲ್ಕೆ || ೯ ||
ದಾನವರ
ನೀಗಿಸುವ ಕೃತಿಯದು | ತಾನೇ ಅಮರರಿಗೆಲ್ಲ ಆಗದೆ | ಮಾನ ಶರ ಶಪದಪಿಯು ಕುಂಭೋದ್ಭವಗೆ ನೀಡಿದರು
|| ೧೦ ||
ದೇವತೆಗಳಾದೇಶ
ದಂತೆಯೇ | ನೋವು ಕಾಶಿಯ ವಿರಹ ತಾಳದೇ | ಧಾವಿಸಿದ ದಕ್ಷಿಣದ ಪಥವನೆ ತಿದ್ದಲಾಗಸ್ತಿ || ೧೧ ||
ಆತಾಪಿ
ವಾತಾಪಿ ಇಲ್ವಲ | ಘಾತಮಾಡಲಗಸ್ತಿ ಪೋಗುವ | ಪ್ರೀತಿ ಪರಿವಾರವನು ದಕ್ಷಿಣ
ಭೀಮೆ ತಟದಿರಿಸಿ || ೧೨ ||
ದಕ್ಷ ದಾರ್ಢ್ಯರ ಪರ್ಣ ಕುಟಿರವು | ವೃಕ್ಷ ದ್ವಯ ಅಶ್ವತ್ಥ ನಿಂಬಕ | ಅಕ್ಷಯದ ಶಿಲೆ ಉತ್ತುಂಗಪೀಠದ ವೃಕ್ಷರಾಜಮರ || ೧೩ ||
ಸತ್ವಗುಣ ಗೋವಿಂದ ರಾಜನೇ | ನಿತ್ಯ ಪಾಲಿಪನೆಂದು ತರು ಅ - |
ಶ್ವತ್ಥ ದಡಿಯೊಳು ಭಾವಮೂರ್ತಿಯ ಸ್ಮರಿಸಿಪೋಗಿಪನು || ೧೪
||
ಅಸುರ ವಧೆಯನು ಮುಗಿಸಿ ಕೂಡಿದ | ಅಸಮ ಮರ ಗೋವಿಂದರಾಜನ | ಬೇಸಸಿ ಪೊರಟನು ಕಾಶಿಖಂಡದ
ಕಥೆಯ ಪೇಳುತಲೇ || ೧೫ ||
ಕೇಳು ಲೋಪಾಮುದ್ರೆ ಸತಿಯಳೆ | ಕೇಳುತಿಹ ಶಿವಶರ್ಮ ಗಣರಿಗೆ | ಕಾಳ ಕಂಕಣ ವಲಯವಾಗಿಹ
ಲೋಕ ಯಾವುದಿದು || ೧೬ ||
ಎಂದು ಕೇಳಲು ವಿಷ್ಣು ಗಣರಿಂ |
ತೆಂದು ವದಿಸಿದ ಶ್ರೀ ಶನೈಶ್ಚರ | ಮಂದ
ಗ್ರಹದ ಲೋಕ ಕಾಣುವುದೆಂದು ವರ್ಣಿಸುತ || ೧೭ ||
ಕೃತ ಯುಗದ ಆರಭ್ಯ ಕಾಲದಿ | ಚತುರ ಮುಖಸುತ ಪ್ರಜಪತಿಯ ಅತಿ | ಚತುರತೆಯ ಗುಣದಿಂ
ದಕ್ಷ ಬ್ರಹ್ಮನೆಂದು ಹೆಸರಾದ ||
೧೮ ||
ಕನ್ಯೆ ಸಂಜ್ಞಯ ದಕ್ಷ ಬ್ರಹ್ಮನು | ಭಾನು ನಾರಾಯಣಗೆ ಇತ್ತು ವಿ - | ಧಾನ ಪೂರ್ವಕ
ಶುಭವಿವಾಹವು ಜರುಗಿಸಿರಲಾಗಿ || ೧೯ ||
ತರಣಿ ಸಂಜ್ಞಯರಲ್ಲಿ ಜನಿಸಿದ | ಹಿರಿಯ ಮಗು ಕೃತಾಂತ ಕಾಲನು | ದೊರೆಯು ಯಮಲೋಕದಲಿ ದಕ್ಷಿಣ
ಪೂರ್ಣ ಅಧಿಕಾರಿ || ೨೦ ||
ಕ್ರಮಶಃ
No comments:
Post a Comment