ಶ್ರೀ ಶನೈಶ್ಚರ ಚರಿತಂ ೧ /೨೧ ರಿಂದ ೪೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ,ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ
ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ
ಶ್ರೀ ಶನೈಶ್ಚರ ಚಕ್ರ ಸಹಿತ )
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಪ್ರಥಮ ಸಂಧಿ ( ೨೧ ರಿಂದ ೪೦ )
ದ್ವಿತೀಯ ಪುತ್ರನೆ ಶ್ರೀ ಶನೈಶ್ಚರ - | ತ್ರಿತಿಯದಿಂ ಕ್ರಮ ಕ್ರಮದಿ ಪುಟ್ಟಿತ -
| ಪತಿ ಭದ್ರೆಯು ಕಾಲಿಂದಿ ಸಾವಿತ್ರಿ
ಕನ್ಯೆಯರು ||೨೧ ||
ವಿಷ್ಣುವಿಗೆ ಕಾಳಿಂದಿ ಅರ್ಪಿಸಿ | ಸೃಷ್ಟಿ ಕೃತುಗೆ ಸಾವಿತ್ರಿಯಿತ್ತು | ಪೂಷ್ಣ ದೇವನು ಮದುವೆಯನು ಮಾಡಿದನು ವೈಭವದಿ || ೨೨ ||
ಧರೆಯ ಮೇಗೆಡೆ ರವಿಕುವರಿಯರು | ಗಿರಿಯಸ್ತಮದಿ ಭದ್ರೆಯಮುನೆಯು | ಹರಿದುಹೊಳೆ
ಸಾವಿತ್ರಿತಪತಿಯು ಉದಯಚಲದುದಿಸಿ || ೨೩ ||
ಸವೆಯುತಿಹ ದೇಹವನು ಸಂಜ್ಞೆಯು | ಅವತೆ ನೋಡಿರೆ ದುಃಖದಿಂ ಬಲು | ಕವಿದು ಚಿಂತೆಯು ಚಿತೆಯ ರವಿಯಿಂ ಬಳಲಿ ಬೆಂಡಾಗಿ ||೨೫ ||
ತಾಳದೆಯೇ ಸತಿಸಂಜ್ಞೆ ತನ್ನಯ | ಹಾಳುಬಾಳುವೆ ಕುರಿತು ಹಳಿದಳು | ಖುಳ್ಳ ಯುಕ್ತಿಯು ಯೋಜಿಸಿದಳಾ ತನ್ನ ಛಾಯೆಯೋಳು ||೨೬ ||
ಛಾಯೇ ಸಂಜ್ಞೆ ಯ ವರ್ಣ ರೂಪದ | ಮಾಯೆ ಮೂರುತಿಯಾಗಿ ರೂಪಿಸಿ | ಕಾಯ ಕಾಂತಿಯು ಏಕರೂಪ ಸವರ್ಣ ನಿರ್ಮಾಣ || ೨೭ ||
ಪ್ರತಿಯ ರೂಪ ಸವರ್ಣೆ ನಿರ್ಮಿಸಿ | ಶ್ರುತಿಸಿ ಆಜ್ಞೆಯ ನಿತ್ತಳೀಪರಿ | ಸತಿಯು ನೀ ರವಿಗಾಗಿ ರತಿ ಸುಖ ಪಡೆಯುತಿರುಯೆಂದು || ೨೮ ||
ಮಿತ್ರ ಸತಿಯಾಗಿರುತೆ ನೀನು | ಗೊತ್ತು ಗುರಿ ತಪ್ಪಿಸಲು ಬೇಡ | ಕುತ್ತು ಬಂದರೆ ನನ್ನ ಸ್ಮರಣೆಯು ಮಾಡು ನೀಗಿಪೆನು || ೨೯ ||
ಸೂರ್ಯನೊಂದಿಗೆ ವಿಷಯಸುಖವನು | ತೂರ್ಯದಿಂದುಪಭೋಗ ಗೊಳ್ಳುತೆ | ಕಾರ್ಯಕಂಟಕ ವೆನಿಸೆ ನೆನೆವುದು ನನ್ನಪೆಸರಿಂದೆ || ೩೦ ||
ಆಜ್ಞೆ ಛಾಯೆ ಸವರ್ಣೆ ಗಿತ್ತು ತಾ - | ಸಂಜ್ಞೆ ತಂದೆಯ
ಮನೆಯ ಸೇರಲು | ಸೂಜ್ಞತೆಗೆ ನ್ಯೂನತೆಯು ಬರುವುದು ಕಂಡ ದಕ್ಷ ಪತಿ || ೩೧ ||
ಮಗಳೇ ನೀ ಬಂದಿಹುದು ಯಾಕದು ? | ಬಗೆಯು ಎನಿಹುದೆಂದು
ಕೇಳಲು | ಖಗನ ಪ್ರಖರತೆ ಕುರಿತು ಹೇಳಲು ತಂದೆ ಬೋಧಿಸಿದ || ೩೨ ||
ಹಿರಿಯಳಾಗಿಹ ಮೇಲೆ ಕನ್ಯೆಯ | ಹಿರಿಯನಲಿ ಲಗ್ನವನು
ಮಾಡಿರೆ | ಸರಿ ಸಮಾನರು ತಂದೆತಾಯಿಗೆ ಮಕ್ಕಳೆಂಬುವರು || ೩೩ ||
ಐದು ಮಕ್ಕಳ ಹೆತ್ತ ಹಿರಿಯಳೆ | ಐದಿದೆಯೆ ಪತಿಯಿಂದ
ಪರದಲಿ | ಐದೆತನವಲ್ಲಹುದು ನಿನ್ನಯ ಕೃತಿಗೆ ಧಿಕ್ಕಾರ
||೩೪ ||
ಕೇಡಿರಲಿ ಒಳ್ಳೆಯದೇ ಇರಲಿ | ಬೇಡಿರಲಿ ಬಿಡುವಾಗಿಯಾಗಲಿ
| ನಾಡ ತಿರುಗದೆ ಪತಿಯೆ ಪರದೈವೆಂದು ಬಗೆಯುವುದು
|| ೩೫ ||
ಮದುಯಾಗಿಹ ಮಗಳು ತನ್ನಯ | ಸದನದಲಿ ನಲಿನಲಿಯುತಿರುವುದು
| ಕದನ ತೆಗೆಯುತ ಎರಡನೆಯ ಸ್ಥಳದಲ್ಲಿ ಬೇಡುವುದು
|| ೩೬ ||
ತಾಯಿ ತಂದೆಯ ಸರಿಯೇ ನೀವಿರೆ | ಗಾಯಗೊಂಡರು ನಿಮ್ಮ ಸಂಸಾ
- | ರಾಯತದ ಹೊರ ಬಾರದಂತೆಯೇ ಸಹಿಸಿ ನಡೆಯುವುದು
|| ೩೭ ||
ಮನವು ಚಂಚಲ ಸ್ಥಿರವೆ ಇರಲಿ | ಘನವು ತನ್ನಯ ಮನೆಯು
ಪಿಡಿದಿರೆ | ವಿನಃ ವೇಶ್ಯೆಯ ವೃತ್ತಿಗೆಳೆಯುವ ದೀ ಮನವು ಶುನಗ || ೩೮ ||
ಋತುಮತಿಯು ಆಗಿರಲು ಮಗಳನು |
ಪತಿಯಮನೆ ಹೊರತಾಗಿಇರುವುದು
| ಪತಿತಪಾಪಿಯು ಎನಿಪುದೂ ಇದು ತಂದೆಮನೆ ಉಂಟು || ೩೯ ||
ಹೆಣ್ಣು ಪುಣ್ಯದ ಪಣತಿ ದೀಪವು | ಬಣ್ಣ ಮೀರಲು ಕೋಟಿ
ಕುಲಗಳ | ಗಣ್ಯವೆನೆ ನರಕದೊಳು ಬಿಳುವುದಿರಲು ನಿನ್ನಿಂದ || ೪೦ ||
......... ಕ್ರಮಶಃ
No comments:
Post a Comment