Wednesday, November 08, 2017

Author about SHANAISCHARA CHARITAM Granth (ಮನದಾಳದ ಮಾತು )


 ಲೇಖಕರ ಮನದಾಳದ ಮಾತು
ಲೋಕಾ ಸಮಸ್ತಾ ಸುಖಿನೋ ಭವಂತು ……………………………..
ಈ ವಿಶ್ವ, ಸೃಷ್ಥಿಯಲ್ಲಿ ಹುಟ್ಟಿ ವಾಸಿಸುವ ಪ್ರಾಣಿ ವರ್ಗಗಳಲ್ಲಿ ಮನುಷ್ಯ ಜೀವಿಯು ಸರ್ವ ಶ್ರೇಷ್ಠ ನೆಂದು ಪರಿಗಣಿಸಲ್ಪಟ್ಟಿದ್ದಾನೆ.ತನ್ನ ಬೌದ್ಧಿಕ ಬಲದಿಂದ ಆತನು ಈ ವಿಶ್ವದ ವಿವಿಧ ವಸ್ತು ಶಕ್ತಿಗಳ ರಹಸ್ಯವನ್ನು ಭೇದಿಸುತ್ತ
ತನ್ನ ಬಾಳ್ವೆಯನ್ನು ಸುಗಮಗೊಳಿಸಲು ನಿರಂತರವೂ ಶ್ರಮಿಸುತ್ತಿದ್ದಾನೆ.
ಆ ಪ್ರಯತ್ನಗಳಲ್ಲಿ ಬಹುತಾಂಶ ಯಶಸ್ವಿಯೂ ಆಗಿದ್ದಾನೆ. ತಾನು ಬದುಕಿರುವಷ್ಟು ಕಾಲ
ಸುಖಮಯ ವಾಗಿರಬೇಕೆಂಬ ಹೆಬ್ಬಯಕೆಯಿಂದ ತನ್ನ ವಿಚಾರ ಶಕ್ತಿಯ ಬಲದಿಂದ   ಸಾವಿರಾರು ಅನುಕೂಲತೆಗಳನ್ನು ಕಲ್ಪಿಸಿಕೊಂಡಿದ್ದಾನೆ ,ಪ್ರತಿಕೂಲತೆಗಳನ್ನು
ನಿವಾರಿಸಿಕೊಂಡಿದ್ದಾನೆ.ಸಾವಿರಾರು ವರ್ಷಗಳ ಹಿಂದೆಯೇ ಅಲೌಕಿಕ ಬುದ್ಧಿಸಂಪನ್ನರಾಗಿದ್ದ ನಮ್ಮ ಋಷಿ ಮುನಿಗಳು, ತಪಃ ಪ್ರಭಾವದಿಂದ ಸೃಷ್ಥಿಯ ರಹಸ್ಯವನ್ನೇ ಭೇದಿಸಿ ಅದರ ಆದಿ,ಅಂತ್ಯ ,ಸ್ವರೂಪ ,ಸ್ವಭಾವ ,ಹುಟ್ಟು, ಸಾವು, ಕರ್ಮ, ಕರ್ಮಫಲ,ಜನ್ಮ ಜನ್ಮಾಂತರ ,ಸುಖ ದುಃಖ ಇತ್ಯಾದಿಗಳನ್ನು ವಿಷದವಾಗಿ ನಿರೂಪಿಸಿದ್ದಾರೆ. ಸ್ಪಷ್ಥವಾದ ತ್ರಿಕಾಲಾಬಾಧಿತ ಸಿದ್ಧಾಂತಗಳನ್ನು ಮಾಡಿದ್ದಾರೆ. ಮನೋ ವೈಜ್ಞಾನಿಕ ದೃಷ್ಥಿಕೊನದಿಂದ ನೋಡಲಾಗಿ, ಈ  ಜಿಜ್ಞಾಸೆಯೇ ಮನುಷ್ಯನನ್ನು ಜ್ಯೋತಿಷ್ಯ ಶಾಸ್ತ್ರದ ಅತ್ಯಂತ ಗಂಭೀರ ರಹಸ್ಯೋದ್ಘಾಟನ ಮಾಡಲು ಪ್ರವೃತ್ತ ಮಾಡಿದೆ. ಅದರಲ್ಲಿ ಖಗೋಳ ಶಾಸ್ತ್ರ, ಫಲ ಜ್ಯೋತಿಷ್ಯ, ನವಗ್ರಹಗಳು, ಬ್ರಹ್ಮಾಂಡ ದಲ್ಲಿ ಅವುಗಳ ಸ್ಥಿತಿ ಗತಿ ,ಮನುಷ್ಯರ ಮೇಲಾಗುವ ಪರಿಣಾಮ, ದುಷ್ಪರಿಣಾಮಗಳ ನಿವಾರಣೋಪಾಯಗಳು ಇಹ ಪರ ಎರಡನ್ನೂ ಸಮನ್ವಯ ಗೊಳಿಸಿದ್ದಾರೆ.                                                ಭಾರತೀಯ ಸನಾತನ ಧರ್ಮಕ್ಕನುಸಾರ ಮನುಷ್ಯ ನಿರಂತರ ಕರ್ಮ ಮಾಡುತ್ತಲೇ ಹೋಗುತ್ತಾನೆ  ಈ ಕರ್ಮಗಳಲ್ಲಿ ಸಂಚಿತ ,ಪ್ರಾರಬ್ಧ ,ಮತ್ತು ಕ್ರಿಯಾಮಾಣ  ಎಂದು ಮೂರು ಭೇದ ಗಳಿವೆ .ವರ್ತಮಾನ ಕ್ಷಣದ ವರೆಗೆ ಮಾಡಿದ ಕರ್ಮ ಸಂಚಿತ ಕರ್ಮವಾಗುತ್ತದೆ . ಯಾವುದೇ ಕರ್ಮ ಈ ಜನ್ಮ ದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಮಾಡಿದ್ದು ಎರಡು ಜೊತೆಯಾಗಿ ಭೋಗಿಸುವುದು ಸಂಭವನೀಯ ಇಲ್ಲದಾಗ ಕ್ರಮವಾಗಿ ಭೋಗಿಸುವುದು ಅನಿವಾರ್ಯ, ಆಗ ಮಾತ್ರ ಸಂಚಿತ ಕರ್ಮದಿಂದ ಪ್ರಾರಂಭ ವಾಗುತ್ತದೆ ಇದೇ ಪ್ರಾರಬ್ಧಕರ್ಮ, ಈ ಕರ್ಮ ಭೋಗದಲ್ಲಿ ಪ್ರಸ್ತುತ ಭೋಗಿಸುವ ಕರ್ಮವೇ ಕ್ರಿಯಾಮಾಣ ಕರ್ಮ, ಜೀವಿತದಲ್ಲಿ ಮನುಷ್ಯನ ಸ್ಥೂಲ ಶರೀರದ ಜೊತೆ ಆತ್ಮದ ನಿರಂತರ ಸಂಬಂಧವಿದ್ದು ,ಮರಣಾನಂತರ ಆತ್ಮವು ಸ್ಥೂಲ ಶರೀರವನ್ನು ಬಿಟ್ಟು, ಮತ್ತೊಂದು ಸ್ಥೂಲ ಶರೀರದ ಪ್ರವೇಶ ಮಾಡುತ್ತದೆ. ಆದರೆ ಪ್ರಾರಬ್ಧ ಕರ್ಮವು ನಮ್ಮನ್ನು ಬಿಡುವುದಿಲ್ಲ. ಅದಕ್ಕಾಗಿಯೇ ಶನೈಶ್ಚರ ಗ್ರಹವು ಕರ್ಮಲೋಪ,ಭೋಗಲೋಪ ಇವುಗಳಾಗದಂತೆ ನೋಡಿಕೊಳ್ಳುವ ನವಗ್ರಹಗಳಲ್ಲಿ ನ್ಯಾಯಾಧಿಪತಿಯಾಗಿದ್ದ , ಅನುಶಾಸನವನ್ನು ಪ್ರಯೋಗಿಸುತ್ತಿದ್ದ ಬಲಿಷ್ಠ ಗ್ರಹ. ಜನಮಾನಸದಲ್ಲಿ ಶನಿಗ್ರಹದ ಬಗ್ಗೆ ತಪ್ಪು ತಿಳುವಳಿಕೆಯೇ ಹೆಚ್ಚಾಗಿದೆ, ಶಿಕ್ಷಿಸಿ ತಿಳಿ ಹೇಳುವವನೇ ನಿಜವಾದ ಮಾರ್ಗ ದರ್ಶಕ , ತಪ್ಪಿಗೆ ಶಿಕ್ಷೆ ಆಗಲೇಬೇಕೆಂಬ ಕಠಿಣ ಹೃದಯಿಯೂ ಹೌದು,  ಕಠಿಣ ಶಿಕ್ಷೆಯ ಭೀತಿಯಿಂದ ಸನ್ಮಾರ್ಗದಲ್ಲಿ ನಡೆಯಲಿ ಎನ್ನುವುದೇ ಉದ್ದೇಶ .
ಜ್ಯೋತಿಷ್ಯ ಮಂಡಲ : ಮನುಷ್ಯ ತನ್ನ ಜೀವಿತದಲ್ಲಿ ತನ್ನ ದೃಷ್ಟಿಯಿಂದ ತಾನು ಕೆಳಗಿಳಿಯದಂತೆ ವರ್ತನೆಯಿದ್ದರೆ ಶನೈಶ್ಚರನು ಸಂತೃಪ್ತನಾಗಿ ಶುಭಫಲಗಳನ್ನು ಕೊಡುತ್ತಾನೆ ಎಂಬ ಬಲವಾದ ನಂಬಿಕೆಯಿದೆ . ಶನಿ ಗ್ರಹ ಆಂತರಿಕ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಾನೆ ,ತಾತ್ವಿಕ ಜ್ಞಾನ ,ನಾಯಕತ್ವ ,ಮನನಶೀಲತೆ , ಧೈರ್ಯ , ಧೃಡತೆ ,ಗಂಭೀರತೆ ,ಸತರ್ಕತೆ ,ಕಾರ್ಯ ಕ್ಷಮತೆ ಇತ್ಯಾದಿಗಳ ಪ್ರತೀಕವಾಗಿದ್ದಾನೆ. ಏಳನೇ ಸ್ಥಾನದಲ್ಲಿದ್ದ ಶನಿ ಗ್ರಹವು ಅಸಿತ ,ಆರ್ಕಿ ,ಛಾಯಾತ್ಮಜ ,ಮಂದ ,ಶನೈಶ್ಚರ , ಸೂರ್ಯಪುತ್ರ,ರವಿಜ,ಪಂಗು ,ಸೌರಿ, ಮತ್ತು ಭಾಸ್ಕರಿ ಎಂದು ಕರೆಯಲ್ಪಡುತ್ತಾನೆ .ವೈಶಾಖ ಕೃಷ್ಣ ಅಮಾವಾಸ್ಯೆಯೇ ಶನೈಶ್ಚರ ಜಯಂತಿ , ಸ್ವಜನ್ಮ ರಾಶಿಯಿಂದ ೧,೨ ,೪,೫,೭,೮,೯,೧೨ ಈ ಸ್ಥಾನಗಳಲ್ಲಿದ್ದ ಶನಿಯು ಪೀ ಡಾಕಾರಕನು  ಲೋಹದ ಪ್ರತಿಮೆಯನ್ನು ೨೩೦೦೦ ಜಪಗಳಿಂದ ನುತಿಸುವುದು .ಶನೈಶ್ಚರನ ಶುಭಾಶುಭ ಫಲವು ಜನ್ಮ ಕುಂಡಲಿಯಲ್ಲಿರುವ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಜನ್ಮ ಕುಂಡಲಿಯಲ್ಲಿ ಶನಿಯು ಶುಭ ಗ್ರಹಗಳಿಗೆ ಸ್ಪಂದಿಸುತ್ತಿರಲು ಅಥವಾ ೧ ,೫ , ಮತ್ತು ೯ ನೇ ಸ್ಥಾನದ ಸ್ವಾಮಿಯಾಗಿದ್ದು ೩ ,೬ ,೧೧ ನೇ ಸ್ಥಳದಲ್ಲಿದ್ದರೇ  ಏಳುವರೆ ವರ್ಷದ  ಅವಧಿಯಲ್ಲಿಯೂ ಶುಭ ಫಲಗಳನ್ನು ಕೊಡುತ್ತಾನೆ. ಆದರೇ ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಶನಿ ಅಶುಭ ಗ್ರಹಗಳ ಜೊತೆಯಿದ್ದು , ೨ ಮತ್ತು ೮ ನೇ ಸ್ಥಾನದ ಅಧಿಪತಿಯಾಗಿದ್ದರೆ ಅಶುಭ ಫಲ ಖಂಡಿತ. ಒಟ್ಟು ಏಳೂವರೆ ವರ್ಷಗಳಲ್ಲಿ  ಮೊದಲ ಎರಡೂವರೆ ವರ್ಷಗಳು ವೃಷಭ ,ಧನು ,ಮಕರ ರಾಶಿಗಳಿಗೆ ಹೆಚ್ಚು ಪೀಡಾದಾಯಕ, ಮೇಷ ,ಕರ್ಕ ,ಸಿಂಹ ,ಕನ್ಯಾ ,ವೃಶ್ಚಿಕ ರಾಶಿಗಳಿಗೆ ನಡುವಿನ ಎರಡೂವರೆ ವರ್ಷಗಳು ,ಮಿಥುನ ,ತುಲಾ, ಕುಂಭ , ಮೀನ ರಾಶಿಗಳಿಗೆ ಕೊನೆಯ ಎರಡೂವರೆ ವರ್ಷಗಳಲ್ಲಿ ತ್ರಾಸ ದಾಯಕನಿರುತ್ತಾನೆ .ಪಿಡಾಪರಿಹಾರಕ್ಕಾಗಿ  ದಾನ ವಸ್ತುಗಳು : ಸುವರ್ಣ, ಲೋಹ, ನೀಲಮಣಿ, ಪೂರ್ಣ ಉದ್ದು ,ಎಮ್ಮೆ ,ಎಣ್ಣೆ ,ಕಪ್ಪು ಬಣ್ಣದ ಹೊದ್ದಿಕೆ ,ಕಪ್ಪು ಅಥವಾ ನೀಲಿ ಹೂವುಗಳು.
ಶನೈಶ್ಚರ ಪುರಾಣ ಮಂತ್ರ : ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ |  ಛಾಯಾ ಮಾರ್ತಾಂಡ ಸಂಭೂತಂ ತನ್ನಮಾಮಿ ಶನೈಶ್ಚರಂ ||                 
ಸೌರ ಮಂಡಲ :  ಸೂರ್ಯನಿಂದ ಅಂತರ :೧೪೨ ಕೋಟಿ ೬೬ ಲಕ್ಷ ೬೬ ಸಾವಿರ ೪೨೨ ಕಿಲೋಮಿಟರ ( 9 .58 AU )
ಶನೈಶ್ಚರನ ಒಂದು  ವರ್ಷ  :    ಪೃಥ್ವಿಯ 29 .45 ವರ್ಷಗಳು  ಅಥವಾ 10755 .70  ದಿವಸಗಳಿಗೆ ಸಮ
      ,,            ,,      ದಿವಸ  :   10 ಗಂಟೆ 34 ಮಿನಿಟ
ದ್ರವ್ಯರಾಶಿ   :  568319   ಖರ್ವ ಕಿ ಗ್ರ್ಯಾಂ 
ಭೂಮಧ್ಯರೇಷಿಯ ವ್ಯಾಸ   :  12 05 36  ಕಿ ಮಿ
ಧೃವೀಯ ವ್ಯಾಸ                 :  10 27 28  ಕಿ ಮಿ
ಭೂಮಧ್ಯರೇಷಿಯ ಪರಿಘ   :  36 28 82  ಕಿ ಮಿ
ಸ್ಥಿತ ಉಷ್ಣತೆ                      :  13 9  ಡಿಗ್ರಿ ಸೆಂಟಿಗ್ರೇಡ
ಶ್ರೀ ಶನೈಶ್ಚರರಿಂದ  ನರಸಿಂಹ ಪ್ರಾರ್ಥನೆ :   
 ಯತ್ಪಾದ ಪಂಕಜ ರಜಃ ಪರಮಾದರೇಣ | ಸಸೇವಿತಂ ಸಕಲ ಕಲ್ಮಶರಾಶಿ ನಾಶಂ || ಕಲ್ಯಾಣಕಾರಕ ಆಶೇಷ  ನಿಜಾನುಗಾನಾಂ |  ಸತ್ವಂ ನರಸಿಂಹ ಮಯಿ ದೇಹಿ ಕರಾಲವಂಬಂ ||
ಶುಭಂ ಭವತು
ಶ್ರೀಧರಾಚಾರ್ಯ ಸೀತಾರಾಮಾಚಾರ್ಯ  ಕಟ್ಟಿ ಉಮರಜಕರ ( ತುಳಸಾತ್ಮಜ )
ಆಷಾಢ ಶುಕ್ಲ ಪೂರ್ಣಿಮಾ  ಶನಿವಾರ
 ಶನಿ ಪಲ್ಲಟ ದಿನ


            

No comments:

Post a Comment