ಶ್ರೀ ಶನೈಶ್ಚರ ಚರಿತಂ ೧ / ೧೦೧ ರಿಂದ ೧೨೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ
ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ
ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,
ಶ್ರೀ ದಶರಥ
ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ
ವೇದವ್ಯಾಸ ವಿರಚಿತ ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ
ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಪ್ರಥಮ ಸಂಧಿ ( ೧೦೧ ರಿಂದ ೧೨೦ )
ತಿರುಗುತಿಹ ತಾಯ್ತಂದೆಗಳ ಈ | ಪರಿಯ ಪಾವನ ಕುರಿತು
ತಪದೊಳು | ಇರುತಿರಲು ಹನ್ನೆರಡು ಸಾವಿರ ವರುಷ ಶನಿ ಕಳೆಯೇ || ೧೦೧ ||
ಶಂಕರಗೆ ಆನಂದ ವಾಗಲು | ಕಿಂಕರನೆ ಶನಿ ತಪಕೆ ಮೆಚ್ಚಿದೆ
| ಶಂಕೆ ಬಿಡುನೀ ಶಿವನು ಬಂದಿಹೆ ಕಣ್ಣು ತೆರೆಎಂದ || ೧೦೨||
ಚಂದ್ರ ಮೌಳಿಯ ನೋಡಿ ಪಿಂಗಳ | ಮಂದ್ರ ಸರದಲಿ
ಪ್ರಾರ್ಥಿಸಿದ ಮ - | ಹೇಂದ್ರ ಗೌರಿ ವರನೇ ಶಂಭುವೆ ಶೂಲ ಖಟ್ವಾನ್ಗ || ೧೦೩ ||
ಗಂಗೆ ಜಡೆ ರುದ್ರಾಕ್ಷಿ ಧಾರಿ ಭ -| ಸ್ಮಾಂಗ ಸುಂದರ
ಫಾಲ ನಯನನೆ | ಶೃಂಗಿ ಭೃಂಗಿ ಗಳಿಂದ ರಂಜಿಪ ಲಿಂಗ ಜಂಗಮನೆ || ೧೦೪ ||
ಮೈದಡವಿ ಮೇಲೆತ್ತಿ ಶಿವ ತಾ – | ನೈದೆ ಭಕ್ತಿಗೆ ಒಲಿದೆ
ಬೇಡುನಿ | ವೇದಿಸೆಂದಭಯವನು ಕೊಟ್ಟನು ನಮಿಸಿ
ಶನಿರಾಯ || ೧೦೫ ||
ಏನು ಬೇಡಲಿ ದೇವ ನಿನ್ನೊಳು | ನೀನೆ ನನ್ನವನಾಗಿ
ಉಳಿಯಲಿ | ಜ್ಞಾನ ದೃಷ್ಟಿಯ ಸರ್ವ ಅಂತರ್ಯಾಮಿ ನೀನಿರುವೆ || ೧೦೬ |\
ಬೇಕು ಬೇಡೆಂಬುವುದು ನನ್ನೊಳ | ಎಕೆ ನುಡಿಸುವಿ ದೇವ
ಅರಿತವ | ಸಾಕು ತಿಳಿದವ ನೀಗಿಪುದು ವಾಂಛಿತವು ನಿನಾಗೇ
|| ೧೦೭ ||
ವಚನವ ಕೇಳಿ ಶಂಭುವು | ವದನ ನುಡಿ ಬಿತ್ತರಿಸಿ ಪೇಳಿದ |
ಸದಯ ಹೃದಯನೆ ಮಂದ ನೀಲನೇ ಪೂರ್ತಿ ನಿನ್ನಿಷ್ಟ || ೧೦೮ ||
ನಿನ್ನ ತಾಯಿಯ ಪೂರ್ವ ರೂಪವು | ನಿನ್ನತಂಗಿಯು ಯಮುನೆಮಿಂದಿರೆ | ನಿನ್ನ ಮನದಿಂಗಿತವು ಅಕ್ಕುದುಇದುವೇ
ಸಹಜಾಯ್ತು || ೧೦೯ ||
ವಾಜಿ ರೂಪದ ನಿನ್ನ ತಾಯಿಯ | ಹೆಜ್ಜೆ ಕೆಳಗದು ಲಾಳ
ಗುರುತನು | ತಜ್ಜನಿತ ಚಿರ ಚಿತ್ತ ವಿರಿಸುತೆ ಶೋಧಿಸುವುದೆಂದ || ೧೧೦ ||
ತಪದ ಫಲವಿದು ಅಲ್ಲ ನಾನೇ -| ಸುಪ್ರಸನ್ನದಿ ದಯವು ಮಾದುತೆ | ಸಪ್ತಗ್ರಹ
ಶ್ರೇಷ್ಟತೆಯು ನಿನಗಿದೆ ಎಲ್ಲ ಗ್ರಹಗಳಲಿ || ೧೧೧ ||
ತಪ್ಪು ಮಾಡಿರೆ ಶಿಕ್ಷೆ ವಿಧಿಸುವೆ | ತಪ್ಪು ಯಾವುದೆಂ
ತಿಳಿಯ ಹೇಳುವೆ | ತಪ್ಪಿಗೆಡೆ ಮಾಡುತಿರೆ ನ್ಯಾಯದಿ ಶಾಸನವು ಖಚಿತ ||೧೧೨ ||
ಪೀಡೆಕೊಡುವುದರಲ್ಲಿ ಎಲ್ಲರ | ಕಾಡುಗ್ರಹಗಳ ನಡುವೆ
ಶ್ರೇಷ್ಟನು | ನಾಡ ದೇವತೆ ನಡುಗುವರು ನೀ ನೋಡೆ
ವಿವಿಧದಲಿ || ೧೧೩ ||
ದೃಷ್ಟಿ ಬಲ ಬಹು ಉಗ್ರ ವ್ಯಗ್ರವು | ಕಷ್ಟ
ಕಾರ್ಪಣ್ಯತೆಯು ಪುಟ್ಟಿಪ | ಇಷ್ಟ ನಿಷ್ಠ ಗಳೆಲ್ಲ ನಡೆವುದು ಡೊಂಕು ಸಾಗುಣಿಯ ||೧೧೪ ||
ತ್ರಯತ್ರಿOಶತಿ ಕೋಟಿ ದೇವತೆ | ಭಯವು ಪಡೆವರು ನಿನ್ನ
ಕಂಡೊಡೆ | ಜಯಪಜಯಗಳು ಸೌಖ್ಯ ದುಃಖ ಗಳೆಲ್ಲ ನಿನ್ನಿಂದ ||೧೧೫ ||
ನಿಂದ ರಾಶಿಗೆ ಎರಡುವರೆ ಇರೆ | ಮುಂದು ರಾಶಿಗೆ ವಕ್ರ
ದೃಷ್ಟಿಯು | ಹಿಂದೆ ರಾಶಿಗೆ ಸೌಮ್ಯ ನಾಗುತ ಏಳುವರೆ ವರುಷ ||೧೧೬ ||
ಸರ್ವ ಗ್ರಹಗಳ ಮಧ್ಯ ಬಲ ಶಾ -| ಲಿರ್ವ ಗ್ರಹ ಗಂಭೀರ ಉಗ್ರನು | ದರ್ಪ ಗೈಯುವ ನಿನ್ನ ಸರಿ
ಇಲ್ಲೆಂದ ಗೌರಿಹರ ||೧೧೭ ||
ಪನ್ನೆರಡು ರಾಶಿಗಳ ಭೋಗಿಪ | ತನ್ನಡುವೆ ಎರಡೂವರೆ
ವರುಷದಿ | ತನ್ನ ಸುತ್ತಿದ ಜೇಡನಂತೆ ಉದರದೊಳೆ ಬರುವಿ ||೧೧೮ ||
ಎರಡುವರೆ ವರುಷದಲಿ ಚಾಂಡಲ | ಚರಣದಿರಿಸುವಿ ಜನರ ಜೀವನ
| ದುರಹಂಕಾರಕೆ ಪಾರುಪತ್ಯವ ಗೈವೆ ಶನಿ ಕುವರ ||೧೧೯ ||
ಸ್ಥಾಪಿಸಿದ ಲಿಂಗಕ್ಕೆ ನಿನ್ನಯ | ಔಪ್ಯ ನಾಮವು
ಶನೈಶ್ವರ ವೆಂ-| ದಪ್ಪುದೈ ನಾನಿಟ್ಟ ಪೆಸರಿದು ಪೂರ್ಣ ರೂಪದಲಿ ||೧೨೦ ||
ಕ್ರಮಶಃ
No comments:
Post a Comment