गोविंदलालि
बिन्नह माडुतलि घन मल्ल । पाल्गडलॊळु पवडिपन
कलशोद्भव सुतन आश्रमदि । वरवल्लभरिं भजिसि
(कन्नड)
मलगै गोविंद मलगय्य
।तॊट्टिलोळाडुतले नी
निदुरॆय माडय्य त्रयगुण नी । अश्वत्थ रूपकनॆ नी
॥ मलगै गोविंद मलगय्य ॥ पल्ल ॥
स्तोत्रव माडुतलि मरुतसुत । अज अच्युत भव नल्लि
नेत्रत्रयि गणप उरगेश । उदधि शयननॆ नीनु ॥ मलगै गोविंद मलगय्य ॥ १ ॥
द्वादश नामगळु अक्षतॆयू । ऊर्ध्वपुंड्रव धरिसि
त्रैदश निर्जररु भृत्यदलि । निगमागम अद्वितिय
॥ मलगै गोविंद मलगय्य ॥ २ ॥
ऒलविन कमलाक्षि नळिनाक्षि । कमलासनदॊळु निन्न
जलनिधि चंद्रलॆयु तलॆवागि । प्रणवाकारनॆ नीनु
॥ मलगै गोविंद मलगय्य ॥ ३ ॥
पिप्पल विक्रमर भकुत भय । श्रिवर पिंगळ सेव्य
इर्पुदु भीमरथि तटदल्लि । गोविंदपुरवर काय्व
॥ मलगै गोविंद मलगय्य ॥ ४ ॥
शंख चक्रगळु कोदंड । शरनिधि नीरजॆ सहित
बिंकव बिट्टिहरु मौनदलि । स्तवनव माडुतलिहरु
॥ मलगै गोविंद मलगय्य ॥ ५ ॥
सन्निधि कैमुगिदु विजयरॆय । पन्नगशयननॆ नीनु
॥ मलगै गोविंद मलगय्य ॥ ६ ॥
बलुपरि पाडिपरु जोगुळव । इंदिरॆवरसुत नुतिसि
॥ मलगै गोविंद मलगय्य ॥ ७ ॥
... सुधीराचार्य कट्टी
ಗೋವಿಂದಲಾಲಿ (ಕನ್ನಡ)
ಮಲಗೈ ಗೋವಿಂದ ಮಲಗಯ್ಯ | ತೊಟ್ಟಿಲೋಳಾಡುತಲೇ ನೀ ನಿದುರೆಯ ಮಾಡಯ್ಯ ತ್ರಯಗುಣ ನೀ | ಅಶ್ವತ್ಥ ರೂಪಕನೆ ನೀ
|| ಮಲಗೈ ಗೋವಿಂದ ಮಲಗಯ್ಯ || ಪಲ್ಲ ||
ಸ್ತೋತ್ರವ ಮಾಡುತಲಿ ಮರುತಸುತ | ಅಜ ಅಚ್ಯುತ ಭವ ನಲ್ಲಿ ನೇತ್ರತ್ರಯಿ ಗಣಪ ಉರಗೇಶ | ಉದಧಿ ಶಯನನೆ ನೀನು
|| ಮಲಗೈ ಗೋವಿಂದ ಮಲಗಯ್ಯ || ೧ ||
ದ್ವಾದಶ ನಾಮಗಳು ಅಕ್ಷತೆಯೂ | ಊರ್ಧ್ವಪುಂಡ್ರವ ಧರಿಸಿ ತ್ರೈದಶ ನಿರ್ಜರರು ಭೃತ್ಯದಲಿ | ನಿಗಮಾಗಮ ಅದ್ವಿತಿಯ
|| ಮಲಗೈ ಗೋವಿಂದ ಮಲಗಯ್ಯ || ೨ ||
ಒಲವಿನ ಕಮಲಾಕ್ಷಿ ನಳಿನಾಕ್ಷಿ | ಕಮಲಾಸನದೊಳು ನಿನ್ನ ಜಲನಿಧಿ ಚಂದ್ರಲೆಯು ತಲೆವಾಗಿ | ಪ್ರಣವಾಕಾರನೆ ನೀನು
|| ಮಲಗೈ ಗೋವಿಂದ ಮಲಗಯ್ಯ || ೩ ||
ಪಿಪ್ಪಲ ವಿಕ್ರಮರ ಭಕುತ ಭಯ | ಶ್ರಿವರ ಪಿಂಗಳ ಸೇವ್ಯ
ಇರ್ಪುದು ಭೀಮರಥಿ ತಟದಲ್ಲಿ | ಗೋವಿಂದಪುರವರ ಕಾಯ್ವ
|| ಮಲಗೈ ಗೋವಿಂದ ಮಲಗಯ್ಯ || ೪ ||
ಶಂಖ ಚಕ್ರಗಳು ಕೋದಂಡ | ಶರನಿಧಿ ನೀರಜೆ ಸಹಿತ
ಬಿಂಕವ ಬಿಟ್ಟಿಹರು ಮೌನದಲಿ | ಸ್ತವನವ ಮಾಡುತಲಿಹರು
|| ಮಲಗೈ ಗೋವಿಂದ ಮಲಗಯ್ಯ || ೫ ||
ಬಿನ್ನಹ ಮಾಡುತಲಿ ಘನ ಮಲ್ಲ | ಪಾಲ್ಗಡಲೊಳು ಪವಡಿಪನ ಸನ್ನಿಧಿ ಕೈಮುಗಿದು ವಿಜಯರೆಯ | ಪನ್ನಗಶಯನನೆ ನೀನು
|| ಮಲಗೈ ಗೋವಿಂದ ಮಲಗಯ್ಯ || ೬ ||
ಕಲಶೋದ್ಭವ ಸುತನ ಆಶ್ರಮದಿ | ವರವಲ್ಲಭರಿಂ ಭಜಿಸಿ ಬಲುಪರಿ ಪಾಡಿಪರು ಜೋಗುಳವ | ಇಂದಿರೆವರಸುತ ನುತಿಸಿ
|| ಮಲಗೈ ಗೋವಿಂದ ಮಲಗಯ್ಯ || ೭ ||
... ಸುಧೀರಾಚಾರ್ಯ ಕಟ್ಟಿ
No comments:
Post a Comment