Saturday, December 09, 2017

Shanaischara charitam (ಶ್ರೀ ಶನೈಶ್ಚರ ಚರಿತಂ) I / 81 ರಿಂದ 100

ಶ್ರೀ ಶನೈಶ್ಚರ ಚರಿತಂ ೧ /೮೧ ರಿಂದ ೧೦೦  
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )   
  ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ಪ್ರಥಮ ಸಂಧಿ ( ೮೧ ರಿಂದ ೧೦೦ )
ಚಿಕ್ಕ ಮಗು ತಾ ಶೋಕದಿಂದಲಿ | ಬಿಕ್ಕಿ ಬಿಕ್ಕಳುತಿರಲು ಸೂರ್ಯನು | ನಿಕ್ಕು ತಾಯಿಯು ತಪದಿ ತಲ್ಲಿ ನಿಹಳು ಮೇರುವಲಿ  || ೮೧ ||
ಮೋಸದಿಂ ಮನೆಬಿಟ್ಟು ಪೋಗಿಹ | ಹೇಸಿ ಹೆಂಗಸು ಪಶ್ಚಾತ್ತಾಪದಿ | ಬೇಸಿ ಬೇಯಲಿ ಇನ್ನು ಬಹುದಿನ ಎಂದು ರವಿ ನುಡಿದ ||೮೨ ||
ಶನಿಯು ದುಃಖದಿ ನಿಜದ ತಾಯಿಯ | ನೆನೆದು ಕೊರಗುತೆ ಅಣ್ಣ ಯಮನಿಗೆ | ಕನವರಿದು ಕೇಳಿದನು ಅವಮಾನಿತನು ತಾನಾದ ||೮೩ ||
ಕಾಲರಾಯನೆ ತಾಯಿ ಕಳೆದಳು | ಕಾಲ ಕುಂಟತೆ ಶಾಪವಾಯಿತು   | ಮೂಲ ಅಂತಃಕರಣ ತಾಯಿಯ ಇಲ್ಲದಿರೆ ಎಮಗೆ ||೮೪ ||
ತಾಯಿ ಇಲ್ಲದ ತಬ್ಬಲಿಯು ಮಲ- | ತಾಯಿ ಮತ್ಸರದಿಂದ ಶಿಕ್ಷೆಯು | ಆಯಿತೀತೆರ ಸಹನೆ ಮೀರಿತು ಅಣ್ಣ ಕೇಳೆಂದ ||೮೫ ||
ಅಂತಕನು ಈ ಮಾತು ಆಲಿಸಿ | ಅಂತಃಕರಣದಿ ತಮ್ಮ ನಿಗೆ ತ-| ನ್ನಂತರಂಗವ ಅರುಹಿದನು ತಪಕುರಿತು ದುಡಿಯುವನು ||೮೬||
ನಮ್ಮ ಪುಣ್ಯವೇ ಕಡಿಮೆಯಾಗಿದೆ | ತಮ್ಮ ಹೆರವರ ಹಳಿದು ಫಲವೇ? | ಬ್ರಹ್ಮ ಬರಹಕೆ ಸಾಟಿಯಾರಿಹರೀ ಜಗದಿ ಜೀವಿ ||೮೭||
ವಾರಣಾಸಿಗೆ ಹೋಗಿ ಈಶನ | ಕುರಿತು ತಪವನು ಮಾಡಬೇಕು | ಹಿರಿಮೆ ದೈವಿ ಶಕ್ತಿ ಪ್ರಾಪ್ತಿಯ ಮಾಡಿಕೊಳ್ಳೋಣ ||೮೮||
ಭದ್ರೆ ಯಮ ಶನಿ ನಡೆದು ಕಾಶಿಗೆ | ಶುದ್ಧರಾದರು ಗಂಗೆ ಮಿಂದರು | ಸಿದ್ಧಿತಪ ಆನಂದ ವನದಲಿ ಮಾಲ್ಪುದಕೆ ಪೋಗಿ ||೮೯||
ರುದ್ರ ದೇವರ ಪೂಜೆ ನ್ಯಾಸವು | ಸಿದ್ಧಿ ಸಂಕಲ್ಪವನು ಮಾಡಿಯೇ | ಬದ್ಧ ಪದ್ಮಾಸನದಿ ಆನುಷ್ಠಾನ ನಡೆಸಿದರು ||೯೦||
ಲಿಂಗ ರಚಿಸಿದ ಶ್ರೀ ಶನೈಶ್ಚರ | ತಂಗಿ ಭದ್ರೆಶ್ವರ ಯಮೆಶ್ವರ | ಅಂಗ ನಾಮವೆ ಇರಿಸಿ ಉಗ್ರತೆಯಿಂದ ಜಪಿಸಿದರು ||೯೧||
ತಪವ ಗೈಯುತ್ತಿರಲು ಮೂವರು | ಅಪರಿಮಿತ ದಿನಗಳೆಯ ಪ್ರತಿಫಲ | ಕುಪಿತ ಸೂರ್ಯನು ಶಾಂತ ವೃತ್ತಿಯ ಹೊಂದಿ ದಯಹುಟ್ಟಿ ||೯೨||
ವಿರಹ ವ್ಯಥೆಯಿಂ ಮರಗುತಿಹ ಸತಿ | ಇರುವ ಮೇರುವ ಹುಡುಕಿ ಬಂದನು | ತುರಗ ರೂಪದಿ ಕುಳಿತ ಸಂಜ್ಞೆಯ ಕಂಡು ಬೆರಗಾದ ||೯೩||
ದಕ್ಷ ಪ್ರಜಪತಿ ನುಡಿದ ಸಿಟ್ಟಿನ | ರುಕ್ಷ ಮಾತಿಗೆ ಮಗಳ ನಡತೆಗೆ | ತಕ್ಕ ಶಿಕ್ಷೆಯ ತಿಳಿದು ರವಿ ಹಯ ರೂಪ ಧರಿಸಿದನು ||೯೪||
ಪತಿಯ ರೂಪ ಸರುಪ್ಯವಾಗಿ | ಅತಿಶಯದಿ ಪ್ರೆಮಾಂಬು ಪುಟ್ಟಿ | ಋತುಮತಿಯು ತಾನಿಹುದು ತಿಳಿದು ಸಂಜ್ಞೆ ಸಾನಿಧ್ಯ ||೯೫||
ಸಾಮಿಪ್ಯದೊಳು ರವಿ ಹರುಷದಿರಲು | ಕಾಮ ವಾಸನೆ ಹುಟ್ಟಿ ಮುದ್ದಿಸೆ | ಪ್ರೇಮ ಸಲ್ಲಾಪದೊಳು ಸೂರ್ಯ ವೀರ್ಯವು ಸ್ಖಲಿಸೆ ||೯೬||
ವೀರ್ಯ ವಾಸನೇ ಘ್ರಾಣ ಮಾರ್ಗದಿ | ತೂರ್ಯದೊಳು ಎಳೆ ಸಂಜ್ಞೆ ತನ್ನೊಳು | ಭಾರ್ಯೆ ಮೂಗಿನ ಮಡಿಲು ಗರ್ಭವು ಪಿಡಿದು ಕೆಲ ದಿನದಿ ||೯೭||
ವೀಡೆ ಪಿಂಗಲೇ ಹೊರಳಿ ಗಳಿತದಿ | ನಾಡ ಸುಂದರ ಅವಳಿ ಪುತ್ರರು | ಕಾಡಿನಲಿ  ಅಶ್ವಿಜಯ ವೈವಸ್ವತರು ಜನಿಸಿದರು ||೯೮||
ಅವಳಿಗಳು ಮೊಮ್ಮೊದಲ ವೈದ್ಯರು | ಕುವರ ಅಶ್ವಿನಿ ಎಂಬ ಪೆಸರಿಂ -| ದಿವಿಜ ಕುಲ ಶುಶ್ರೂಷೆ ಅಧಿಪತಿ ಎನಿಸಿ ಕೊಂಡಿಹರು ||೯೯||
ಕುದುರೆಯಾಗಿಹ ಸೂರ್ಯ ಸಂಜ್ಞೆ | ಉದಯಿಸಿದ ಪಶು ಯೋನಿಯಿಂ ಮುಂ - | ಕ್ತ ದುವು ಎಲ್ಲಿದೆ ಎಂಬ ಚಿಂತೆಯ ಮಾಡಿ ನಡೆದಿಹರು ||೧೦೦||
  
ಕ್ರಮಶಃ


No comments:

Post a Comment