ಶ್ರೀ ಶನೈಶ್ಚರ ಚರಿತಂ ೨ / ೦೧ ರಿಂದ ೨೪
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ
ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ
ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,
ಶ್ರೀ ದಶರಥ
ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ
ವೇದವ್ಯಾಸ ವಿರಚಿತ ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ
ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ದ್ವಿತೀಯ ಸಂಧಿ (೦೧ ರಿಂದ ೨೪)
ಓಂ ನಮಃ ಗಣ ವಿನಾಯಕನಿಗೆ | ಗಮಿಸೆ ರಿದ್ಧಿ ಸಿದ್ಧಿಯರು ಸಹ | ನಮನ ಆರಂಭಿಸಲು
ಕಥೆಯನು ವಿಘ್ನ ಹೊರತಾಗಿ ||೦೧ ||
ಶುಭ್ರ ವಸನೆಯೇ ಶಾರದಾಂಬೆಯೇ | ಶುಭ್ರ ಕಮಲಾಸನೆಯೇ
ದೇವಿಯೇ | ಶುಭ್ರ ಮತಿಗೆ ನೀಡುನೀ ಬೇಡುವೆನು ಪ್ರೇರಣೆಯ ||೦೨||
ಹಿನ್ನೆಲೆಯ ಸವಿಗತೆಯು ಶ್ರೀ ಶನಿ | ಜನನವಾದುದು ಶಾಪ
ಮುಕ್ತತೆ | ಜನನಿ ಪಾವನೆ ಗ್ರಹಗಳಲಿ ಶ್ರೇಷ್ಟತ್ವ ತಾ ಪಡೆದ ||೦೩ ||
ಕೇಡ ದೃಷ್ಟಿಯು ಇರಲು ಸೌರಿಯು | ನಾಡ ಯತ್ನವ ಮಾಡೇ ದುಃಖವು | ನೋಡೇ ಸರಳತೆ ಆದೊಡನೇ ತಾ
ಸೌಖ್ಯ ಉಂಟಾಗಿ ||೦೪ ||
ಗ್ರಂಥಿ ಕಥೆ ನಿಧಿಯುಕ್ತ ಕುಂಬಳ | ಪಂಥ ಕಟ್ಟಿಯೇ ಸುಖವ
ನೀಡಲು | ಅಂತ್ಯದಲಿ ಬ್ರಾಹ್ಮಣನು ಶನಿ ಮಹಿಮೆಯನೆ ಪೇಳಿದನು ||೦೫ ||
ಭರತ ಖಂಡದ
ಮದ್ಧ್ಯ ಭಾಗದಿ | ಪುರವು ಉಜ್ಜಯಿನಿಯದು ಇರಲು | ಮೆರೆವ ಕ್ಷಿಪ್ರಾ ನದಿಯ ತೀರದಿ ಇರುವ ದುರ್ಗವದು ||೦೬ ||
ಸುಂದರತೆಯಾಗರವು ದೇಶವು | ಅಂದವದು ರಮಣೀಯ ಮಾಳವ |
ಸಂಧಿ ಗಿರಿ ಸಾಲುಗಳು ಪುರವು ಪಡೆದು ಎಡೆಯಲ್ಲಿ ||೦೭ ||
ಕಲ್ಲಿನಲ್ಲಿಯೇ ಕಟೆದ ಕೋಟೆಯು | ಬಲ್ಲ
ಅತ್ತ್ಯುನ್ನತೆಯು ಭದ್ರವು | ಸಲ್ಲುವದು ದುರ್ಗದ ಸುತ್ತಲೂ ಕಂದಕವು ಕೂಪಗಳು ||೦೮ ||
ನಗರದಲಿ ಎಲ್ಲೆಡೆಯೂ ಸ್ವಚ್ಚದಿ | ಸುಗುಣ ವಿದ್ಯಾಲಯಗಳು
ಸೊ - | ರಗದ ತೆರದಿ ಗ್ರಾಮ ದೇವತೆ ಐತಿಹಾಸಿಕವೂ
||೦೯ ||
ಬೇತಾಳದಾ ಗುಡಿ ಪ್ರಮುಖವಿರುವ | ಚಾತುರ್ಯಯುತ ವಿಶಾಲ
ಮರಗಳು | ಕೃತಿಯು ಗೃಹ ಪ್ರಾಂಗಣವು ದೊಡ್ಡವು ಸಬಲದಿ ಶೋಭೆ ||೧೦||
ದೀಪ ಸ್ಥಂಬದ ತಾಣಗಳು ಇರೆ | ಸುಪಥ ವೈಶಿಷ್ಥ್ಯವದು
ಕಾರ್ಯದಿ | ಆಪ ರಕ್ಷಿಪ ಚರಂಡಿಗಳವು ದಾರಿಯ ಬದಿಗೆ || ೧೧ ||
ಭಾವದಿಂ ನಿರ್ಮಲದಿ ಜನರು | ಸ್ವಾವಲಂಬಿಗಳೆನಿಸಿ ನಿಜದಿಂ
| ತಾವು ಅತಿ ಕರ್ತವ್ಯ ತತ್ಪರು ಸಾಧು ಜೀವಿಗಳು || ೧೨ ||
ಏಕ ಚಕ್ರಾಧಿಪನು ಸೇನನು | ನಾಕವಂ ಧರೆಗಿಳಿಸಿದಂತೆಯೇ |
ಪ್ರೇಕ್ಷಣಿಯದಿ ಕಾಣುವಾ ವಾಸ್ತ್ವ್ಯವದು ಪುರದ || ೧೩ ||
ನೃಪ ಪರಾಕ್ರಮಿ ವಿಕ್ರಮಾರ್ಕನು | ಪಾಪಭಿರು ಉದಾರ
ಚರಿತನು | ಆಪತ್ಸಮಯದಿ ಪ್ರತಾಪಿಯನತಿ ಧೈರ್ಯಶಾಲಿಯೆಂದು || ೧೪ ||
ಅರವತ್ತ ನಾಲ್ಕೂ ಕಲೆಗಳರಿತವ | ಹರಿತ ದೃಷ್ಟಿಯ
ತೀಕ್ಷ್ಣ ಮತಿಯ | ತರವು ಮೂವತ್ತೆರಡು ಲಕ್ಷಣ ಗಳನುಉಳ್ಳವನು || ೧೫ ||
ಅವನೀಶ ಆಸಕ್ತ ತ್ಯಾಗಿಯು | ತವ ಸಮರ್ಥ ಗಂಧರ್ವ ಸಂಭವಿ
| ಅವ ಮಹತ್ ಆಕಾಂಕ್ಷಿಯಾಗಿರೆ ಅರಿ ಭಯಂಕರನು || ೧೬ ||
ರಾಜ ಸಮೃದ್ಧಿಯನು ನೋಡಿರೆ | ರಾಜಿಪರು ರಾಣಿ
ವಾಸದಲ್ಲಿಯೇ | ಸೌಜಿಗದಿ ದಾಸಿಯರು ಸೇವಕ ವೃಂದವು ಬಹಳ || ೧೭ ||
ಪ್ರಖ್ಯಾತ ವಿಹರಂಗ ರಕ್ಷಕ | ಆಖ್ಯೆಯ ಭಟರು ಗೂಢ ಚರರು |
ಆಖ್ಯಾತ ಚತುರಂಗದಲಿ ಭದ್ರ ಸೈನ್ಯವು ಮೇರೆಯೇ ||
೧೮ ||
ದುಷ್ಪ್ರಯೋಜಕ ನರರುಗಳಿಗೂ | ದುಷ್ಪ್ರೇರಣೆ ಮಾಡುವವರಿಗೂ
| ನಿಷ್ಪ್ರಹತೆಯಿಂ ಉಗ್ರಶಿಕ್ಷೆಯ ಕೊಡುವ ತಾ ನಿಜದಿ || ೧೯ ||
ಇಂಥ ಜನಕತಿ ಕ್ರೂರ ರಾಜನು | ಪಂಥ ಭ್ರಷ್ಟರ ನೀತಿ ಭ್ರಷ್ಟರ
| ಅಂಥ ಹೀನ ಸ್ಥಿತಿಯ ನೀಚಗೆ ಮೃತ್ಯು ದೇವತೆಯು || ೨೦ ||
ಕೈಯ ಮೇಲದು ಯೋಗ್ಯ ತೀರ್ಪಿಗೆ | ನ್ಯಾಯಕೆ ನಿಷ್ಪಕ್ಷ
ಪಾತಿಯೂ | ದೀಯನು ಭವದೀಯನು ಇಹ ನಿಜವ ಅರಿತವಗೆ || ೨೧ ||
ಪಾರಮಾರ್ಥಿಕ ಐಹಿಕವು ತಾ | ಧಾರ್ಮಿಕನು ವೈವಾಹಿಕನು
ಐಚ್ಚಿಕ | ಆರ್ಥಿಕನು ಸಾಂಘಿಕ ನೈತಿಕದಿ ಉತ್ತಮನು ರಾಜ || ೨೩ ||
ರಾಜನಂತೆಯೇ ಪ್ರಜೆಗಳೆಲ್ಲರು | ರಾಜ
ಠೀವಿಯ ಸುಖವ ಭವಿಸುತ | ಪ್ರಜೆಗಳೆಲ್ಲರು ರಾಜ ನಿಷ್ಠರು ಸ್ವಾಭಿಮಾನಿಗಳು ||೨೪ ||
ಕ್ರಮಶಃ
No comments:
Post a Comment