Wednesday, August 22, 2018

*HANUMAD BHIMA MADHWA ( ಹನುಮದ್ ಭೀಮ ಮಧ್ವ )



ಶ್ರೀ ಮನ್ ಹನುಮದ್ಭೀಮಮಧ್ವ ಸ್ತುತಿ 
        ( ಕನ್ನಡ ವಾರ್ಧಿಕ ತ್ರಿಪದಿ )
बुद्धिर्बलं यशो धैर्यं निर्भयत्वमरोगता।
अजाड्यं वाक्पटुत्वं च हनूमत्स्मरणाद्भवेत् ।।

ಓಂ ಕಾರ ಬ್ರಹ್ಮಾಂಡ ಪುರುಷನಾ ಪ್ರಾಣ ದಿಂ
ಹುಂ ಕಾರ ಗೈಯುತಲೇ ಪವನ ದೇವನು ಪುಟ್ಟಿ
ಝೇಂಕಾರ ಜೀವರಿಗೆ ಪ್ರಾಣಭೂತನು ಇರಲು 
ಬಲಯುತದ ಅಧಿದೇವತೆ       ||೧||
ಪ್ರಾಣ ದೇವನ ಮೊದಲ ಪುತ್ರ ಹನುಮನು ವೀರ |
ಪ್ರಾಣಿ ಮಾತ್ರಂ ಗಳಿಗೆ ಧೈರ್ಯಯುತ ದೇವತೆಯು|ಪ್ರಾಣ ಬಲ ಬುದ್ಧಿ ಯಶ ವಾತ ಆತ್ಮಜನನ್ನು ಸ್ಮ್ರುತಿಸಲೂ ದೊರೆಯಲಹುದು  ||೨ ||
ಮರುತ ದೇವನ ದ್ವಿತಿಯ ಸುತ ಭೀಮ ಸೇನನು
ಜರ ಸಂಧ ಅಂತಕನು ಕೌಂತೆಯ ಪಾಂಡವನು
ಭರ ಬಲದ ಮಹತಿಯನು ಪಾಪ ನಾಶಕನನ್ನು 
ಜಾವದೋಳ್ ನಿತ್ಯ ಸ್ತುತಿಸೆ    ||೩ ||
ವಾಯುದೇವರ ತೃತಿಯ ಪುತ್ರನವ ಪ್ರಜ್ಞ್ಯಸ್ಥ
ಕಾಯಕವು ಭಕ್ತಿಯನು ತಿಳಿಪಡಿಸಿದಾ ಜ್ಞ್ಯಾನಿ
ಧ್ಯೇಯ ಪುಣ್ಯದ ನಾಮ ಶ್ರೀ ಮಧ್ವಆಚಾರ್ಯ 
ದ್ವ್ವೆತಮತ ಸಂಸ್ಥಾಪಕ          ||೪ ||
ಶ್ರೀ ಶಕದ ಪನ್ನೊಂದು ನೂ ರ ಇಪ್ಪತ್ತೊಂದು
ತಾ ಶಿಸುವು ಜನಿಸಿರಲು ಮಧ್ಯಗೇಹರ ಸುತನು
ಆ ಶುಭದ ಕ್ಷೇತ್ರವು ನೆರೆ ಉಡುಪಿ ಗ್ರಾಮವು ಪಾಜಕವು ಎಂಬಲ್ಲಿ ಪುಟ್ಟಿ        ||೫ ||
ಶ್ರೀ ಮಧ್ವ ಆಚಾರ್ಯ ಮೇಧಾವಿ ವರ ಧೀರ
ಶ್ರೀ ಮಹಾ ಉಪನಿಷದ್ ಬ್ರಹ್ಮ ಸೂತ್ರಮ್ ಗೀತೆ ಶ್ರೀ ಮಧ್ವ ರೀತಿಯಲಿ ಪ್ರಸ್ಥಾನ ತ್ರಯಗಳಿಗೆ ಟೀಕೆ ಭಾಷ್ಯಂ ಬರೆದರವರು    ||೬ ||  
ವೈಷ್ಣವದ ಮತವನ್ನು ಮಹತತ್ವ ರೀತಿಯನು
ವಿಷ್ಣು ಸರ್ವೋತ್ತಮನು ಅವನೇ ಪರ ಪರಮಾತ್ಮನಿಷ್ಣಾತ ಮಾನವರ ಜೀವಾತ್ಮನವ ಬೇರೆ ಅಡಿಗಲ್ಲು ದ್ವೆತ ಮತದ             ||೭ ||
ಆತ್ಮ ಜೀವಿಯು ತಾನು ತನ್ನ ಭಕ್ತಿಯ ಬಲದಿ
ಆತ್ಮ ಪರಮಾತ್ಮನನು ಭಜಿಸೆ ಮೋಕ್ಷವು ಅಂತ-ರಾತ್ಮವದು ಉಪಜನ್ಮ ಪಡೆಯದೆಯೇ ಸಾಯುಜ್ಯದಿಂ ಸಾರ್ಥ ನರಜನ್ಮವು   ||೮ ||
ದೇವ ಆರಾಧನೆಗೆ ಮೂರು ಮಾರ್ಗಂ ಗಳವು
ಆವ ಕರ್ಮ ಜ್ಞಾನ ಭಕ್ತಿಯಂ ಗಳು ಇರಲು
ಸಾವಯವ ಜೀವಾಳಿ ವೃಂದಕದು ಭಕ್ತಿರಸ ಪ್ರಾಧಾನ್ಯವಂ ದ್ವೆತ ಮತದಿ      ||೯ ||
ಮಾರ್ಗ ಜ್ಞಾನಾಶಕ್ಯ ಸಾಮಾನ್ಯ ಜೀವರಿಗೆ
ಮಾರ್ಗ ಕರ್ಮವು ಕಠಿಣ ಕರ್ಮವು ತಾಂತ್ರಿಕವು ಮಾರ್ಗ ಭಕ್ತಿಯು ಬಹಳ ಕಾಯಕದಿ ಸುಲಭವೂ ಆನಂದ ತೀರ್ಥ ಮತವು   ||೧೦ ||
ಜ್ಞಾನ ಕರ್ಮಂ ಗಳಲಿ ಭಕ್ತನವ ದೇವೆಡೆಗೆ
ತಾನೇ ಜೀವನು ಸೂಕ್ಷ್ಮ ಪೋಗಲಹುದೆಂತಲು
ತಾನೆ ಆ ಭಗವಂತ ನೆಚ್ಚಿನಿಂ ಬರುವನವ ಭಕ್ತ ಭಕ್ತಿಯಿಂ ಭಜಿಸಲು        ||೧೧ ||
ಶ್ರೀ ಮಹಾ ವಿಷ್ಣು ಸಮ ಇತರ ದೇವರು ಇಲ್ಲ
ಶ್ರೀ ಮಧ್ವ ಆಚಾರ್ಯ ಸಮ ಗುರುವು ಇನ್ನಿಲ್ಲ
ಶ್ರೀ ಮಹತ್ ಶಾಸ್ತ್ರೋಕ್ತಿ ಇರುವ ದ್ವಾದಶ ಸ್ತವನ ಇಂದುಸುತ ಭಜಿಸೆ ಮೋಕ್ಷ   ||೧೨ ||

 || ಶ್ರೀ ಮನ್ ಮಧ್ವೇಶಾರ್ಪಣಮಸ್ತು ||




No comments:

Post a Comment