Wednesday, October 31, 2018

VAASTUPURUSHA (ವಾಸ್ತುಪುರುಷ)

                                                                                                                                          ಸಂಗ್ರಹಿತ 
                                             ವಾಸ್ತುಪುರುಷ 
ಗೃಹಪ್ರವೇಶದಲ್ಲಿ ವಾಸ್ತುಶಾಂತಿಯ ಮಹತ್ವ
ವಾಸ್ತುಶಾಂತಿ ಏಕೆ ಮಾಡಬೇಕು.?
ಭೂಮಿಯನ್ನೇ ಮುಳುಗಿಸಹೊರಟಿದ್ದವ ದುಷ್ಠ ಹಿರಣ್ಯಾಕ್ಷ. ಕರುಣಾಳು ದೇವ ವರಾಹನಾಗಿ ಬಂದು ಧರೆಯನ್ನುದ್ಧರಿಸಿದ. ಭೂಮಿಯನ್ನು ಮತ್ತೆ ಕಕ್ಷೆಯಲ್ಲಿಟ್ಟ. ಆಗ ವರಾಹದೇವ ಬೆವರ ಹನಿಗಳನ್ನು ಭೂಮಿಗೆ ಸಿಡಿಸಿದ. ಮೂರು ಸ್ವೇದ ಬಿಂದುವಿನಿಂದ ಮೂವರು ಆವಿರ್ಭವಿಸಿದರು. 
 ಒಬ್ಬ ಪೀತವರ್ಣದ ನರಕಾಸುರ. 
• ಇನ್ದನೋರ್ವ ಕೆಂಪುಬಣ್ಣದ ಮಂಗಳ, ಕುಜ. 
• ಮತ್ತೊಬ್ಬ ಕಪ್ಪುಬಣ್ಣದ ವಾಸ್ತುಪುರುಷ. 
ಈ ಮೂವರೂ ಭೂಮಾತೆಯ ತನುಜರು. 
ಭೂವರಾಹನ ಮಕ್ಕಳು. ಆಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದರು. 
‘ವಾಸ್ತುರ್ವ ರಾಹಸ್ಯ ಹರೇಃ ಸುತಃ’ 
ವಾಸ್ತುಪುರುಷನು ವರಾಹರೂಪೀ ಶ್ರೀಹರಿಯ ಮಗ ಎಂದು. ‘ಅಂಧಕಾಸುರ ಸಂಗ್ರಾಮದಲ್ಲಿ 
ಶಿವನಿಂದಾಗಿ ಆವಿರ್ಭವಿಸಿದ ವಾಸ್ತುಪುರುಷ ನೋರ್ವನಿದ್ದಾನೆ. 
ಕಶ್ಯಪಗೃಹಿಣಿಯಾದ ಸಿಂಹಿಕೆಯಲ್ಲಿ ಹುಟ್ಟಿದ ವಾಸ್ತು ಮತ್ತೊಬ್ಬನಿದ್ದಾನೆ. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ. 
ವರಾಹಸುತನಾದ ಪ್ರಧಾನ ವಾಸ್ತುವಿನ ಸಹಚರರಿವರು. 
ಪ್ರಾಸಾದದ ಹಾಗೂ ಸ್ವಗೃಹದ ಸುತ್ತಮುತ್ತಲಿನ ಪ್ರಾಕಾರ ಮೊದಲಾದ ಉಪವಿಭಾಗಗಳಿಗೆ ಸಂಬಂಧಿಸಿದವರು.
ವಾಸ್ತು ಪುರುಷನು ಭೂಮಿಯ ಮಗನಾಗಿ ಸಚ್ಚೇತನವಾಗಿದ್ದರೂ ನರಕಾಸುರನಂತೆ ಅಸುರಾವೇಶಕ್ಕೆ ಒಳಗಾಗಿ ಬಿಟ್ಟ. ಜಗತ್ಪೀಡಕನಾಗಿ ದೇವಲೋಕಕ್ಕೂ ಲಗ್ಗೆಯಿಟ್ಟ. 
ದೇವೇಂದ್ರನು ವಜ್ರಾಯುಧದಿಂದ ಬಡಿದು ಭೂಮಿಯಲ್ಲಿ ಬೀಳಿಸಿಬಿಟ್ಟ. 
ಭೂಮಿಯಲ್ಲಿ ಬೋರಲಾಗಿ ಬಿದ್ದ ವಾಸ್ತು. ಈಶಾನ್ಯಕ್ಕೆ ತಲೆ, ನೈರ್ಋತ್ಯಕ್ಕೆ ಕಾಲು, ಕೆದರಿದ ಕೂದಲು, ಕರ್ರಗಿನ ದೊರಗು ಮೈ, ಕೆಂಗಡರಿಂದ ಕಣ್ಣು, ಜೋಡಿಸಿದ ಎರಡು ಕೈ, ಬೋರಲು ಬಿದ್ದೂ ಕೈ ಮುಗಿದ ವಾಸ್ತುವಿನ ಮೇಲೆ ಬ್ರಹ್ಮಾದಿದೇವತೆಗಳು ಬಂದು ಕುಳಿತರು. ವಾಸ್ತುವಿನ ಅದೃಷ್ಟ ದೊಡ್ಡದು. ಇವರ ಸ್ಪರ್ಶಮಾತ್ರದಿಂದ ವಾಸ್ತುವಿನಲ್ಲಿದ್ದ ಅಸುರ ಬೇಸ್ತುಬಿದ್ದ. 
ವಾಸ್ತು ಶುದ್ಧನಾದ. ಅಸುರಾವೇಶ ತೊಲಗಿತು.
ಕೈಮುಗಿದು ದೇವತೆಗಳಲ್ಲಿ ವಿನಂತಿಸಿದ. ‘ನನ್ನನ್ನು ಉದ್ಧರಿಸಿರಿ. ನನಗೊಂದು ಕರ್ತವ್ಯಕರ್ಮ ಆದೇಶಿಸಿರಿ’.
ದೇವತೆಗಳೆಂದರು “ಹೊಟ್ಟೆ ಹೊರೆಯುವುದಕ್ಕಾಗಿ ದೇವತೆಗಳೆಡೆ ದಂಡೆತ್ತಿ ಬರಬೇಡ. ನೀನು ನೆಲದ ಮಗ. ಈ ಭೂತಲಯದಲ್ಲಿಯೇ ಸ್ಥಿರನಾಗಿ ನೆಲಸು. ಭೂಮಿಯನ್ನು ಅಗೆಯುವ ಜನ ನಿನ್ನನ್ನು ಆರಾಧಿಸುತ್ತಾರೆ. 
ನಿನ್ನ ಮೇಲೆ ಸನ್ನಿಹಿತರಾದ ನಮ್ಮನ್ನು ಆಹುತಿಯನ್ನಿತ್ತು ಪೂಜಿಸುತ್ತಾರೆ. ಅವರು ಮಾಡುವ ಈ ಪೂಜೆ, ಹೋಮ, ಬಲಿಪ್ರದಾನಗಳಿಂದ ನಿನ್ನ ಜೀವನ.
ಇದಕ್ಕೆ ಪ್ರತಿಯಾಗಿ ನೀನು ಅವರ ನೆಲದಲ್ಲಿ 
• ಸ್ಥಿರನಾಗು, 
• ಶಿವನಾಗು, 
• ಶುಭನಾಗು. 
ಅವರ ಗೃಹವು ಶಾಂತಿ -ನೆಮ್ಮದಿಗಳಿಗೆ ತವರಾಗುವಂತೆ ನೋಡಿಕೋ. ರೋಗ ರುಜಿನಗಳಿಗೆ ಆಸಪದವಾಗದಂತೆ ರಕ್ಷೆಯಾಗು. ನೂತನಗೃಹಾದಿಗಳನ್ನು ನಿರ್ಮಿಸಿ ಈ ಬಗೆಯ ಪೂಜೆ ನಡೆಸದೆ ಒಂದೊಮ್ಮೆ ಅಲ್ಲಿ ವಾಸಿಸ ತೊಡಗಿದರೆ ಆ ಗೃಹವೇ ನಿನಗೆ ಆಹಾರ.  ಗೃಹಪ್ರವೇಶಾದಿ ಸಂದರ್ಭಗಳಲ್ಲಿ ವಾಸ್ತುಪೂಜೆಯನ್ನು ಖಡ್ಡಾಯವಾಗಿ ನಡೆಸತಕ್ಕದು ಎಂಬುದನ್ನು ಪುರಾಣಗಳು ಹೇಳುತ್ತದೆ#ವಾಸ್ತು_ಪುರುಷ
ಮೊನ್ನೆ ನನಗೊಬ್ಬರು ಕೇಳಿದರು  ನೀವು ವಾಸ್ತು ನಂಬುತ್ತೀರಾ ಅಂತ  ಅದಕ್ಕೆ ನಾನ ಕೇಳಿದೆ ನೀವು ದೇವರನ್ನು ನಂಬುತ್ತೀರಾ ಅಂತ ಅದಕ್ಕವರು ಹಾ ದೇವರಿದ್ದಾನೆ  ನಾನು ನಂಬುತ್ತೇನೆ ಅಂದರು. ಅದಕ್ಕೆ ನಾನು ಹೇಳಿದೆ  ವಾಸ್ತು ಪುರುಷನಿದ್ದಾನೆ ನಾನು ನಂಬುತ್ತೇನೆ ಅಂತ. ಅದಕ್ಕೆ ಒಂದು ಸಣ್ಣ ಉದಾಹರಣೆ ಹೇಳತೇನೆ ಕೇಳಿ  ಹಿರಿಯರು ಏನು ವಾಸ್ತುಗಳನ್ನ ಅಳವಡಿಸಿದ್ದಾರೆ ಅಷ್ಟು ಅಚ್ಚುಕಟ್ಟಾಗಿ ಪಾಲಿಸಿ ಮನೆ ಕಟ್ಟಿದ್ದಾರೆ...  ದೇವರ ಮನೆ , ಅಡುಗೆ ಮನೆ ಎಲ್ಲವೂ ಸಹ ಹೀಗಿರುವಾಗ  ಅವರಲ್ಲಿ    ಆಗಾಗ ಕನಸು ಬೀಳುತ್ತಿತ್ತು ಒಂದು ಮನುಷ್ಯ ಬಂದು  ನನ್ನ ತಲೆ ಮೇಲೆ ಭಾರವಾಗಿದೆ , ಅಂತ ಪದೇ ಪದೇ ಹೇಳುತ್ತಾನೆ ಇದ್ದನಂತೆ  ನಂತರ  ಯಜಮಾನರಿಗೆ ತಲೆ ನೋವು ಬಹಳೆ ಬರೊದಕ್ಕೆ ಶುರುವಾಯಿತು...  ಒಂದು ಸಲ ಅವರು  ತಮ್ಮ ಮನೆಯಲ್ಲಿ ಹೋಮವನ್ನು ಮಾಡಿಸಬೇಕು ಅಂತ  ಗುರುಗಳನ್ನು ಕರೆಯಿಸಿದ್ದರು .ಅವರು ಮನೆಯೆಲ್ಲ ನೋಡಿ ನಂತರ ದೇವರ ಮನೆ ಯೊಳಗೆ ಹೋದಾಗ ಅವರು ಹೇಳಿದರು , ದೇವರ ಮನೆ ಈಶಾನ್ಯದ ಮೂಲೆಗೆ ವಾಸ್ತು ಪುರುಷನ ವಾಸ ಇರುತ್ತೆ ಪೂಜೆ ಮಾಡಿದ ಸ್ಥಳದಲ್ಲಿಎರಡು ಮೂರು ಸಾಣೆಕಲ್ಲನ್ನು ಹೇರಿ ಇಟ್ಟಿದ್ದೀರಾ  ಆ ಸ್ಥಳದಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು  ಆ ಜಾಗವನ್ನು ಖಾಲಿ ಬಿಡಬೇಕು ಅಂತ ತಕ್ಷಣವೇ   ಅವರಿಗೆ ನೆನಪಾಗಿದ್ದು ತಮ್ಮ ಕನಸಿನಲ್ಲಿ ಒಬ್ಬ ವ್ಯಕ್ತಿ ನನ್ನ ತಲೆ ಮೇಲೆ ಭಾರವಾಗಿದೆ ಅಂತ ಬರುತ್ತಿದ್ದುದು , ನಂತರ ಆ ಜಾಗ ಖಾಲಿ ಮಾಡಿದರು. ಅವರಿಗೆ ಕೇಳಿದೆ ಹೇಳಿ ಈಗ ನಂಬುತ್ತೀರಾ ವಾಸ್ತು ಪುರುಷನನ್ನ ಅಂತ  ಆಗ ಅವರು ಖಂಡಿತಾ ವೀಣಾ ಅಂತ ಮುಗುಳ್ನನಕ್ಕರು...‌  ವಾಸ್ತುವನ್ನು ನಂಬಬೇಕು ಆದರೆ ಪ್ರತಿ ಹೆಜ್ಜೆಕಿತ್ತಿಟ್ಟರೆ ವಾಸ್ತು ಅನ್ನುವಷ್ಟು ಅಲ್ಲ...... ನಮ್ಮ ಪೂರ್ವಜರು  ವಾಸ್ತುವನ್ನು ವೈಜ್ಞಾನಿಕ ಕಾರಣ ಅಳವಡಿಸಿ ಕೊಂಡಿದ್ದರು.‌
ಹಾಗಾದರೆ ಯಾರು ಈ ವಾಸ್ತು ಪುರುಷ  ,  ಅವನನ್ನು ಯಾಕೆ ಪೂಜಿಸಬೇಕು....
ತ್ರೇತಾಯುಗದಲ್ಲಿ, ದೊಡ್ಡ ಆಕಾರದ ಒಂದು ಭೂತ ತನ್ನ ಶರೀರದಿಂದ ಪ್ರಪಂಚವನ್ನೆಲ್ಲ ಆವರಿಸಿಕೊಂಡು ನಿದ್ರಿಸುತ್ತಿತ್ತು...
ಇಂದ್ರನೇ ಮೊದಲಾದ ದೇವತೆಗಳು ಆ ಭಯಂಕರಾಕಾರದ ಭೂತವನ್ನು ನೋಡಿ ವಿಸ್ಮಿತರಾಗಿ ಭಯಪಟ್ಟು ಬ್ರಹ್ಮನ ಮೊರೆಹೊಕ್ಕು, ಭಯಂಕರ ರೂಪಿಯಾದ ಭೂತವೊಂದು ಮಲಗಿ ಪ್ರಪಂಚವನ್ನೆಲ್ಲ ಆವರಿಸಿಕೊಂಡಿದೆ, ನಾವು ಭೀತರಾಗಿದ್ದೇವೆ, ಈಗ ಎಲ್ಲಿಗೆ ಹೋಗುವುದು. ಏನು ಮಾಡುವುದು ಎಂಬ ಅರಿವಿಲ್ಲದೆ ನಿನ್ನಲ್ಲಿಗೆ ಬಂದಿದ್ದೇವೆ-ಎಂದು ವಿಷಯವನ್ನು ತಿಳಿಸಿ, ತಮ್ಮ ದುರಿತಗಳನ್ನು ನಿವಾರಿಸಿ ರಕ್ಷಿಸುವಂತೆ ಪ್ರಾರ್ಥಿಸಿದರು.
ಆಗ ಬ್ರಹ್ಮ, ದೇವತೆಗಳಿಗೆ ಅಭಯ ಪ್ರದಾನಮಾಡಿ, ನೀವು ಹೆದರಬೇಡಿ, ಆ ಭೂತವನ್ನು ಕೆಳಮುಖ ಮಾಡಿ ತಳ್ಳಿ, ನಿಮಗೆ ಯಾವ ಭಯವೂ ಇರುವುದಿಲ್ಲ ಎಂದು ತಿಳಿಸುತ್ತಾನೆ. ಅದರಂತೆ, ದೇವತೆಗಳು ಆ ಭೂತವನ್ನು ಕೆಳಮೊಗನಾಗಿ ತಳ್ಳಿ ಹಿಂಸಿಸಿದರು. ಅವನೇ ಬ್ರಹ್ಮಕೃತ ವಾಸ್ತುಪುರುಷ.
ವಾಸ್ತುಪುರುಷ ಬ್ರಹ್ಮನಲ್ಲಿಗೆ ಹೋಗಿ ಜಗತ್ಪ್ರಭುವೇ! ಚರಾಚರಾತ್ಮಕವಾದ ಸರ್ವವೂ ನಿನ್ನಿಂದ ಸೃಷ್ಟವಾಗಿದೆ. ಯಾವ ತಪ್ಪು ಇಲ್ಲದ ನನ್ನನ್ನು ವಿನಾಕಾರಣ ದೇವತೆಗಳು ಪೀಡಿಸುತ್ತಿದ್ದಾರೆ ಎನ್ನಲು ಪ್ರೀತನಾದ ಬ್ರಹ್ಮ ಅವನಿಗೆ  ಇಂದಿನಿಂದ ನೀನು ವಸ್ತುಪುರುಷನೆಂದು ಪ್ರಸಿದ್ಧಿ ಪಡೆಯುತ್ತೀಯಾ  .ಗ್ರಾಮ, ನಗರ, ದುರ್ಗ, ಪ್ರಾಸಾದ, ಉದ್ಯಾನ, ಗೃಹ-ಈ ಸ್ಥಳಗಳಲ್ಲಿ ಯಾರು ನಿನ್ನನ್ನು ಪೂಜಿಸದೆ ಕಟ್ಟಡ ಮೊದಲಾದುವನ್ನು ನಿರ್ಮಿಸಲು ಪ್ರಾರಂಭಿಸುತ್ತಾರೊ ಅವರ ಸಂಪತ್ತು ನಾಶವಾಗುತ್ತದೆ, ವಿಘ್ನಪರಂಪರೆಗಳು ಬರುತ್ತವೆ ಎಂದು ವರವನ್ನು ಕೊಟ್ಟು ಅಂತರ್ಧಾನನಾದ. ಅಂದಿನಿಂದ ಯಾವ ಕಟ್ಟಡವನ್ನು ಕಟ್ಟಿಸಲು ಪ್ರಾರಂಭಿಸಬೇಕಾದರೂ ಮೊದಲು ವಾಸ್ತುಪುಜೆಯನ್ನು ಮಾಡುತ್ತಾರೆ. ಇಂದಿಗೂ ಇದು ಆಚರಣೆಯಲ್ಲಿದೆ.
ಭೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಯಮ, ನಾರದ, ನಗ್ನಜಿತ್, ವಿಶಾಲಾಕ್ಷ, ಪುರಂದರ, ಬ್ರಹ್ಮ, ಕುಮಾರ, ನಂದೀಶ, ಶೌನಕ, ಗರ್ಗ, ವಾಸುದೇವ, ಅನಿರುದ್ಧ, ಶುಕ್ರ, ಬೃಹಸ್ಪತಿ-ಈ ಹದಿನೆಂಟು ಮಂದಿ ವಾಸ್ತುಶಾಸ್ತ್ರದ ಉಪದೇಶಕರು. ಮತ್ಸ್ಯರೂಪಿಯಾದ ಭಗವಂತನಿಂದ ಮನುವಿಗೆ ಇದು ಉಪದಿಷ್ಟವಾಗಿದೆ. ವಿಶ್ವಕರ್ಮ ಪ್ರಕಾಶದಲ್ಲಿರುವಂತೆ ಮೊಟ್ಟಮೊದಲು ಲೋಕಹಿತಕ್ಕಾಗಿ ಇದನ್ನು ತಿಳಿಸಿದವ ಶಂಭು.
ಪುರಾತನವಾದ ಈ ಶಾಸ್ತ್ರವನ್ನು ಪರಾಶರ ಬೃಹದ್ರಥನಿಗೂ ಬೃಹದ್ರಥ ವಿಶ್ವಕರ್ಮನಿಗೂ ತಿಳಿಸುತ್ತಾನೆ. ವಿಶ್ವಕರ್ಮ ಈ ಶಾಸ್ತ್ರವನ್ನೇ ಲೋಕದಲ್ಲಿ ಪ್ರಚಾರ ಮಾಡಿರುತ್ತಾನೆ....
ಮನೆ  ಕಟ್ಟುವಾಗ ವಾಸ್ತು ಅಳವಡಿಸಿಕೊಳ್ಳ ಬೇಕು ಆದರೆ ಹೆಜ್ಜೆ ಹೆಜ್ಜೆಗೆ  ಅಲ್ಲ ನಮ್ಮ ಪೂರ್ವಜರು ಏನು ವಾಸ್ತುವನ್ನು ಅಳವಡಿಸಿದ್ದಾರೊ ಅಷ್ಟಾದರೆ ಸಾಕು.... 

ಗಿಡ ನೆಡಿ ವಾಸ್ತು ದೋಷ ದೂರಮಾಡಿ
ಮನೆಯ ಪಶ್ಚಿಮ ದಿಕ್ಕಿಗೆ ತೆಂಗು,  ಉತ್ತರಕ್ಕೆ ಮಾವು,  ದಕ್ಷಿಣಕ್ಕೆ ಅಡಿಕೆಮರ ಮತ್ತು  ಪೂರ್ವಕ್ಕೆ ಹಲಸಿನ ಮರವನ್ನು ಬೆಳೆಸಿದರೆ ಮನೆಯ ಮೇಲೆ ಯಾವ ಕುದೃಷ್ಟಿಯೂ ಬೀಳುವುದಿಲ್ಲ.
ಮನೆಯ ಪೂರ್ವದಲ್ಲಿ ಬಿಲ್ವವೃಕ್ಷವನ್ನು ನೆಟ್ಟು ಬೆಳೆಸಿ. ಸೋಮವಾರ ಹಾಗೂ ಶುಕ್ರವಾರ ಆ ಮರಕ್ಕೆ ಪ್ರದಕ್ಷಿಣೆ ಬಂದು ಪೂಜೆ ಸಲ್ಲಿಸಿ. ಬಿಲ್ವ ಪತ್ರೆಯಿಂದ ಲಕ್ಷ್ಮೇ ದೇವರ ಆರಾಧನೆ ಮಾಡಿದರೆ ಲಕ್ಷ್ಮೇ ಕಟಾಕ್ಷವಾಗುತ್ತದೆ. 
ಮನೆಯ ಮುಂಬದಿಯಲ್ಲಿರುವ ವೃಂದಾವನದೊಳಗೆ ನೆಲ್ಲಿ ಕೊನೆಯ ನೆಟ್ಟು ಬೆಳೆಸಿ. ಪ್ರತಿ ಮಂಗಳವಾರ ಹಾಗೂ ದ್ವಾದಶಿಯಂದು ನೆಲ್ಲಿ ಗಿಡವನ್ನು ಪೂಜಿಸಿದರೆ ಮನೆಯಲ್ಲಿ ಸುಖ, ಶಾಂತಿ ಉಂಟಾಗುತ್ತದೆ. 
ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸುವುದರಿಂದ ಗುರುವಿನ ಅನುಗ್ರಹವಾಗುತ್ತದೆ. ಗುರುವಿಗೆ ಸಂಬಂಧ ಪಟ್ಟ ದೋಷಗಳು ಪರಿಹಾರವಾಗುತ್ತವೆ. 
ಮನೆಯ ಹಿತ್ತಲಲ್ಲಿ ಬಿಳಿ ತುಂಬೆ ಹೂವಿನ ಗಿಡ ಬೆಳೆಸುವುದರಿಂದ ಉತ್ತಮ ಫಲ ಉಂಟಾಗುತ್ತದೆ. ವಾಸ್ತು ದೋಷವೂ ಪರಿಹಾರವಾಗುತ್ತದೆ. 
ತುಳಸಿಯನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ಭಾಗದಲ್ಲಿ ಬೆಳೆಸಬೇಕು. ತುಳಸಿಯನ್ನು ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಳ್ಳುವಂತೆ ನೆಡಬಾರದು. ತುಳಸಿ ಗಿಡಗಳನ್ನು ಯಾವುದೇ ಕಾರಣಕ್ಕೂ ಸರಿ ಸಂಖ್ಯೆಯಲ್ಲಿ ನೆಡಬೇಕೇ ಹೊರತು, ಬೆಸ ಪ್ರಮಾಣದಲ್ಲಿ ಅಲ್ಲ.
ಮನೆಗೆ ಒಳಿತಾಗಲು ಮನೆಯ ಎರಡೂ ಬದಿಯಲ್ಲಿ ಗಿಡವನ್ನು ನೆಡುವುದು ಒಳ್ಳೆಯದು. ಯಾವ ಕಾರಣಕ್ಕೂ ಕಟ್ಟಡದ ಉತ್ತರ, ಈಶಾನ್ಯ ಅಥವಾ ಪೂರ್ವಭಾಗದಲ್ಲಿ ಎತ್ತರವಾದ ಮರ, ಗಿಡಗಳನ್ನು ಬೆಳೆಸಬಾರದು. ಈ ದಿಕ್ಕಿನಲ್ಲಿ ಆದಷ್ಟೂ ಪುಟ್ಟ ಗಿಡ ಅಥವಾ ನೆಲದಲ್ಲೇ ಹರಡಿಕೊಳ್ಳುವ ಜಾತಿಯ ಸಸ್ಯಗಳನ್ನು ಬೆಳೆಸಬಹುದು
ವಾಸ್ತುದೋಷದ ಕಾರಣ ಯಾವುದೇ ಮರ, ಗಿಡವನ್ನು ಕೀಳಬೇಕೆಂದಿದ್ದರೆ ಅವನ್ನು ಮಾಘ ಅಥವಾ ಭಾದ್ರಪದ ಮಾಸದಲ್ಲಿ ಮಾತ್ರವೇ ಕೀಳಬೇಕು. ಮನೆಯೊಳಗೆ ಬೆಳೆದ ತೆಂಗಿನಮರ, ಮಾವಿನಮರವನ್ನು ಕತ್ತರಿಸುವುದರಿಂದ ದೋಷ ಉಂಟಾಗುತ್ತದೆ. ಒಂದೊಮ್ಮೆ ಮರ ಕತ್ತರಿಸಿದರೆ ಕತ್ತರಿಸಿದ ಭಾಗವು ಯಾವುದೇ ಕಾರಣಕ್ಕೂ ಪಶ್ಚಿಮ ಅಥವಾ ದಕ್ಷಿಣ ಭಾಗದಲ್ಲಿ ಬೀಳದಂತೆ ನೋಡಿಕೊಳ್ಳಿ.
ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!
ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!
ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆ ಯ ತುಂಬ ಹೂವು ಸಂಸ್ಕಾರ..!
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!
ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ ತೋರಿಸೋ ಪ್ರೀತಿ ವಿಶ್ವಾಸ ಕಳಕಳಿ ಸಂಸ್ಕಾರ..! 
ನಮ್ಮ ನಡವಳಿಕೆಯಲ್ಲಿರೋ ನಯ ವಿನಯ ನಾಜೂಕತನ ಸಂಸ್ಕಾರ..! 
ಓದು ಬರಹ ಉದ್ಯೋಗದ ಹೊರತಾಗಿಯೂ ಹೊರುವ ಜವಾಬ್ದಾರಿ ಸಂಸ್ಕಾರ..! 
ಖಾಯಿಲೆಯ ತಂದೆಯನ್ನು ಮಗನಂತೆಯೇ ಜೋಪಾನ ಮಾಡೋದು ಸಂಸ್ಕಾರ..! 
ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವದು ಸಂಸ್ಕಾರ..! 
ಮುದ್ದಿನ ಮಗ ತಪ್ಪು ಮಾಡಿದಾಗ ಮೃದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ..! 
ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ...! 
ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೆ ಸಹಾಯ ಮಾಡೊ ಗೆಳೆಯನ ಗುಣ ಸಂಸ್ಕಾರ..! 
ಸಣ್ಣ ಸಂಪಾದನೆಯಲ್ಲಿ ತನ್ನ ಇಷ್ಟಾ ನಿಷ್ಟ ಮರೆತು ನಿಮ್ಮನ್ನೊಪ್ಪಿ ಬಂದ ಹೆಂಡತಿಯ ಉದಾರ ಗುಣ ಸಂಸ್ಕಾರ..! 
 ಸಂಸ್ಕಾರ ಎಲ್ಲೆಲ್ಲೂ ಇದೆ..
ಅಂಗಳದ ರಂಗೋಲಿಯಲ್ಲಿ..
ದೇವರ ಮುಂದೆ ದೀಪದಲ್ಲಿ..
ಅಡುಗೆಯಾದೊಡನೆ ಬರುವ ಘಮದಲ್ಲಿ..
ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ತಾರದಲ್ಲಿ..
ತುಳಸಿ ಕಟ್ಟೆ ಮುಂದೆ ಕೈ ಮುಗಿವ ಕೈಗಳಲ್ಲಿ..
ತಟ್ಟೆಯ ಮುಂದೆ ಕೂತಾಗ ಬಡಿಸುವವನ ಕೈಯಲ್ಲಿ..
ಹುಶಾರಿಲ್ಲದೆ ಮಲಗಿದಾಗ ಏನಾಯಿತು ಎಂದು ಮರಗುವವರ ಮನದಲ್ಲಿ..
ನಮ್ಮ ನಡವಳಿಕೆ ಗುಣ ಮಾತು ನಡತೆಯಲ್ಲಿ ಸಂಸ್ಕಾರ ಅಡಗಿದೆ..
ನಾಮವೆಂದರೆ ದೇವರ ಹೆಸರು. ಜಪವೆಂದರೆ ಪದೇ ಪದೇ ಅದನ್ನು ಉಚ್ಚರಿಸುವುದು. 
ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕಃ|| 
ಅಂದರೆ ನಮ್ಮ ಜನ್ಮಜನ್ಮಾಂತರಗಳ ಪಾಪವನ್ನು ನಾಶಮಾಡಿ ನಮ್ಮನ್ನು 
ಜನನ - ಮರಣಗಳ ಚಕ್ರದಿಂದ ಮುಕ್ತಗೊಳಿಸುವಂತಹದ್ದೇ ಜಪ 
ನಾಮಜಪದ ಲಾಭಗಳು
ಅ) ನಾಮಜಪದಿಂದ ಮನಸ್ಸು ಶಾಂತವಾಗುವುದರಿಂದ ಮಾನಸಿಕ ಒತ್ತಡದಿಂದ ನಿರ್ಮಾಣವಾಗುವ ಶಾರೀರಿಕ ರೋಗಗಳು ಬರುವುದಿಲ್ಲ. 
ಆ) ಮನಸ್ಸಿನ ಏಕಾಗ್ರತೆ ಹೆಚ್ಚುವುದು.(ಏಕೆಂದರೆ ನಾಮಜಪದಲ್ಲಿ ಮನಸ್ಸು ತಲ್ಲೀನವಾಗಿರುವುದು) 
ಇ) ನಾವು ಮಾಡುವ ಕರ್ಮಗಳ ಫಲವು ಈಶ್ವರನಿಗೆ ಅರ್ಪಿತವಾಗಿ ಕರ್ಮವು ಅಕರ್ಮ ಕರ್ಮವಾಗುತ್ತದೆ. 
ಈ) ಅನೇಕ ತೀರ್ಥಕ್ಷೇತ್ರಗಳ ದರ್ಶನದ ಮತ್ತು ಯಜ್ಞಗಳ ಫಲವು ಕೇವಲ ನಾಮಜಪದಿಂದ ಸಿಗುವುದು 
ಉ) ಮೃತ್ಯುವಿನ ನಂತರವೂ ನಾಮ ಜಪದ ಲಾಭವು ಸಿಗುವುದು.

No comments:

Post a Comment