Wednesday, October 31, 2018

KATHOPANISHAT ( शरीरमाध्यं खलु .....)

                                                                                                                                      ಸಂಗ್ರಹಿತ 
                                                           ಕಠೋಪನಿಷತ್ 

ಭಗವದ್ ವಿಷ್ಣುಸಾಕ್ಷಾತ್ಕಾರಕ್ಕೆ ಬೇಕಾಗಿರುವುದು ಶರೀರವೆಂಬ ಸಾಧನ ಯಂತ್ರ !
( ಮೂಲ ಆಧಾರ -- ಕಠೋಪನಿಷತ್ )
ಭಗವಂತನ ಕಡೆಗೆ ಪಯಣಿಸಲು ಮೊದಲು ಬೇಕಾಗಿರುವುದು ಸಾಧನ ಶರೀರ.
ಸಾಧನಾ ಶರೀರಕ್ಕಿಂತ ಇಂದ್ರಿಯಗಳು ಮುಖ್ಯ, ಇಂದ್ರಿಯಗಳಿಗಿಂತ ಇಂದ್ರಿಯ ವಿಷಯಗಳು ಮುಖ್ಯ,
ವಿಷಯಗಳಿಗಿಂತ ಅದನ್ನು ಗ್ರಹಿಸುವ ಮನಸ್ಸು ಮುಖ್ಯ,
ಮನಸ್ಸಿಗಿಂತ ಬುದ್ಧಿ ಮುಖ್ಯ,
ಬುದ್ಧಿಗಿಂತ ಆತ್ಮ ಮುಖ್ಯ.
ಈ ಎಲ್ಲಾ ಪರಿಕರಗಳೊಂದಿಗೆ ಭಗವಂತನನ್ನು ಸೇರಲು ತಾಯಿ-ತಂದೆಯ ಅನುಗ್ರಹ ಬಹಳ ಮುಖ್ಯ.
ಪ್ರಕೃತಿ ಮಾತೆಯಾದ ಲಕ್ಷ್ಮಿ, ಪುರುಷನಾದ ನಾರಾಯಣ –ಇವರ ಅನುಗ್ರಹ ಇಚ್ಛೆ ಇಲ್ಲದೇ ನಮ್ಮ ರಥ ಗುರಿಯನ್ನು ಸೇರುವುದಿಲ್ಲ.
ಇಂದ್ರಿಯಗಳಲ್ಲಿ ಮುಖ್ಯವಾಗಿ ಎರಡು ಗುಂಪು.
೧) ಅಂತಃಕರಣಗಳು
ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಐದು 
೨) ಜ್ಞಾನೇಂದ್ರಿಯಗಳು.
ಬಾಯಿ, ಕೈ, ಕಾಲು, ಪಾಯು ಮತ್ತು ಉಪಸ್ಥ ಐದು ಕರ್ಮೇಂದ್ರಿಯಗಳು.
ನಮ್ಮ ಶರೀರವೊಂದು ದೇವರುಗಳ ಕಕ್ಷಾಬಲೆ 
ಲಕ್ಷೀ 2ನೇ ಕಕ್ಷೆ
ಬ್ರಹ್ಮ ಮತ್ತು ವಾಯು 3ನೇ ಕಕ್ಷೆ
ದೇವತೆಗಳು
ಸರಸ್ವತಿ ಮತ್ತು ಭಾರತಿ 4ನೇ ಕಕ್ಷೆ ದೇವತೆಗಳು
ಗರುಡ,ಶೇಷ ಮತ್ತು ರುದ್ರ 5ನೇ ಕಕ್ಷೆ ದೇವತೆಗಳು
ಸುಪರ್ಣಿ,ವಾರುಣಿ ಮತ್ತು ಪಾರ್ವತಿ 7ನೇ ಕಕ್ಷೆ ದೇವತೆಗಳು
ಕೈ ಯ ಅಭಿಮಾನಿ ದೇವತೆ ಇಂದ್ರ(೮ನೇ ಕಕ್ಷೆ)
ಉಪಸ್ಥ ಅಭಿಮಾನಿ ದೇವತೆ ದಕ್ಷ ಪ್ರಜಾಪತಿ(೧೦ನೇ ಕಕ್ಷೆ).
ಕಿವಿಯ ಅಭಿಮಾನಿ ದೇವತೆ ಚಂದ್ರ (೧೨ನೇ ಕಕ್ಷೆ); ದೇವತೆ
ಕಣ್ಣಿನ ಅಭಿಮಾನಿ ದೇವತೆ ಸೂರ್ಯ(೧೨ನೇ ಕಕ್ಷೆ); ದೇವತೆ
ಪಾಯು ಅಭಿಮಾನಿ ದೇವತೆ ಯಮ(೧೨ನೇ ಕಕ್ಷೆ); ದೇವತೆ
ನಾಲಿಗೆಯ ಅಭಿಮಾನಿ ದೇವತೆ ವರುಣ (೧೩ನೇ ಕಕ್ಷೆ); ದೇವತೆ
ಮಾತಿನ ಅಭಿಮಾನಿ ದೇವತೆ ಅಗ್ನಿ (೧೫ನೇ ಕಕ್ಷೆ); ದೇವತೆ
ತ್ವಕ್ ಅಭಿಮಾನಿ ದೇವತೆ ಕುಬೇರ(೧೮ನೇ ಕಕ್ಷೆ); ದೇವತೆ
ಮೂಗಿನ ಅಭಿಮಾನಿ ದೇವತೆಯರು ಅಶ್ವಿಗಳು(೧೮ನೇ ಕಕ್ಷೆ); ದೇವತೆ
ಕಾಲಿನ ಅಭಿಮಾನಿ ದೇವತೆ ಇಂದ್ರ ಪುತ್ರ ಜಯಂತ(೧೯ನೇ ಕಕ್ಷೆ); ದೇವತೆ
ಒಟ್ಟಿನಲ್ಲಿ ಇಲ್ಲಿ ೮ನೇ ಕಕ್ಷೆಯಿಂದ ೧೯ನೇ ಕಕ್ಷೆಯವರೆಗಿನ  ದೇವತೆಗಳ ಗುಂಪನ್ನು ಕಾಣುತ್ತೇವೆ.
ಇಂದ್ರಿಯಗಳ ನಂತರ ಇಂದ್ರಿಯ ವಿಷಯಗಳು. ಇಂದ್ರಿಯ ವಿಷಯಗಳು ಹತ್ತು.
ಗಂಧ, ರಸ, ರೂಪ, ಸ್ಪರ್ಶ, ಶಬ್ದ, ವಾಕ್, ಪಾಣಿ, ಪಾದ, ಪಾಯು(ವಿಸರ್ಗ) ಮತ್ತು ಉಪಸ್ಥ(ಸಂತಾನ).
ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಗರುಡ ಪತ್ನಿ ಸುಪರ್ಣಿ,
ರೂಪ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ,
ಗಂಧದ ಅಭಿಮಾನಿ ದೇವತೆ ಶಿವ ಪತ್ನಿ ಪಾರ್ವತಿ.
ಅದೇ ರೀತಿ ವಾಕ್ ಮತ್ತು ಪಾಣಿ ಅಭಿಮಾನಿ ಸುಪರ್ಣಿ,
ಪಾದ ಮತ್ತು ವಿಸರ್ಗ ಅಭಿಮಾನಿ ದೇವತೆ ವಾರುಣಿ,
ಸಂತಾನದ ಅಭಿಮಾನಿ ದೇವತೆ ಪಾರ್ವತಿ. ಈ ಮೂವರೂ ೭ನೇ ಕಕ್ಷೆಯ ದೇವತೆಗಳು.
ಇಂದ್ರಿಯ ವಿಷಯಗಳ ನಂತರ
ವೇದ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಗರುಡ;
ಇತರ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಶೇಷ
ಮನೋಭಿಮಾನಿ ದೇವತೆ ಶಿವ.
 ಈ ಮೂವರೂ ಕೂಡ ೫ನೇ ಕಕ್ಷೆಯ ದೇವತೆಗಳು.
ಮನಸ್ಸಿನ ನಂತರ ಬುದ್ದಿ. ಸರಸ್ವತಿ ಮತ್ತು ಭಾರತೀಯರು ಬುದ್ಧಿಯ ಅಭಿಮಾನಿ ದೇವತೆಗಳು. ಇವರು ನಾಲ್ಕನೇ ಕಕ್ಷೆಯ ದೇವತೆಗಳು.
ಬುದ್ಧಿಯ ನಂತರ ಆತ್ಮ. ಜೀವ ಸ್ವರೂಪಾಭಿಮಾನಿಯರಾದ ಬ್ರಹ್ಮ-ವಾಯು ಆತ್ಮದ ಅಭಿಮಾನಿ ದೇವತೆಗಳಾಗಿ ಮೂರನೇ ಕಕ್ಷೆಯಲ್ಲಿದ್ದಾರೆ.
ಇವರಿಗಿಂತ ಮೇಲೆ ಅವ್ಯಕ್ತ ತತ್ವ, ಪ್ರಕೃತಿ ಮಾತೆ ಶ್ರೀಲಕ್ಷ್ಮಿ.
 ಲಕ್ಷ್ಮೀಪತಿ ಭಗವಂತ ಸರ್ವೋತ್ತಮ ತತ್ವ. “ಅದಕ್ಕಿಂತ ಎತ್ತರದ ಇನ್ನೊಂದು ತತ್ವವಿಲ್ಲ”
ಅದು ಎತ್ತರದ ತುತ್ತತುದಿ. ಈ ತಾರತಮ್ಯಕ್ಕೆ ಅನುಗುಣವಾಗಿ ಭಗವಂತನ ಪರಿವಾರದ ಚಿಂತನೆ ಮಾಡಿ, ತುತ್ತತುದಿಯಲ್ಲಿರುವ
ಭಗವಂತನ ಉಪಾಸನೆಯೇ ನಮ್ಮ ಧ್ಯಾನವಾಗಬೇಕು.

No comments:

Post a Comment