ಸಂಗ್ರಹಿತ
ಸಂಧ್ಯೋಪಾಸನೆಯಲ್ಲಿ ಸೂರ್ಯನಮಸ್ಕಾರದ ಮಹತ್ವ
ಯೋಗಾಸನದಲ್ಲಿ ಸೂರ್ಯ ನಮಸ್ಕಾರ ಪ್ರಮುಖವಾದ ವ್ಯಾಯಾಮ. ಇದನ್ನು ಎಲ್ಲಾರು ಮಾಡಬಹುದಾಗಿದ್ದು, ಈ ವ್ಯಾಯಾಮ ಪ್ರತಿದಿನ ಮಾಡುತ್ತಾ ಬಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು. ಸೂರ್ಯ ನಮಸ್ಕಾರದಲ್ಲಿ 12 ಆಸನಗಳಿವೆ. ಈ ಆಸನಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಆಹಾರದ ನಂತರ ಸೂರ್ಯ ನಮಸ್ಕಾರದ ಮೊದಲು ಕನಿಷ್ಠ ಎರಡು ಗಂಟೆಗಳ ಅಂತರ ಇರಬೇಕು. ಆದ್ದರಿಂದ ಸೂರ್ಯ ನಮಸ್ಕಾರವನ್ನು ಬೆಳಗಿನ ಜಾವ ಅಥವಾ ಸಂಜೆ ಮಾಡುವುದು ಒಳ್ಳೆಯದು. ಸೂರ್ಯ ನಮಸ್ಕಾರದಲ್ಲಿ 12 ಆಸನಗಳಿಗೆ. ಈ ಆಸನಗಳನ್ನು ಮಾಡುವ ವಿಧಾನ ಮತ್ತು ಶ್ಲೋಕಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ಓಂ ಹ್ರಾಂ ಮಿತ್ರಾಯ ನಮಃ
ಕಾಲುಗಳನ್ನು ಹತ್ತಿರ ತಂದು ನೇರವಾಗಿ ನಿಲ್ಲಬೇಕು. ನಿಮ್ಮ ಕೈಗಳನ್ನು ನೇರವಾಗಿ ಮೇಲೆತ್ತಿ ಹಾಗೇ ಮುಂದುವರಿದು ನೇರವಾಗಿ ನಿಮ್ಮ ಮುಖಕ್ಕೆ ಎದುರಾಗುವಂತೆ ಮಾಡಬೇಕು. ಕೈಗಳನ್ನು ನಮಸ್ಕಾರ ಮಾಡುವ ರೀತಿಯಲ್ಲಿ ಜೋಡಿಸಿ ಹಿಡಿಯಬೇಕು.
2. ಓಂ ಹ್ರೀಂ ರವಯೇ ನಮಃ
ಶ್ವಾಸ ಒಳಗೆ ಎಳೆದುಕೊಳ್ಳುವುದರೊಂದಿಗೆ ನಿಮ್ಮ ಕಿವಿಗಳಿಗೆ ತಗಲುವಂತೆ ಕೈಗಳನ್ನು ಮೇಲಕ್ಕೆತ್ತಿ. ನಂತರ ನಿಧಾನವಾಗಿ ಬಾಗಿ ನಿಮ್ಮ ತೋಳುಗಳನ್ನು ತಲೆಯಿಂದ ಹಿಂದಕ್ಕೆ ತೆಗೆದುಕೊಳ್ಳಬೇಕು.
3. ಓಂ ಹ್ರೂಂ ಸೂರ್ಯಾಯ ನಮಃ
ಶ್ವಾಸವನ್ನು ಹೊರಗೆ ಬಿಡುತ್ತಾ ಮುಂದಕ್ಕೆ ಬಾಗಿ ಎರಡು ಕೈಗಳಿಂದ ನಿಮ್ಮ ಪಾದದ ಬೆರಳುಗಳನ್ನು ಮುಟ್ಟಿ ಹಾಗೇ ಕೆಲ ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿರಲು ಪ್ರಯತ್ನಿಸಿ. ಇದು ಪಾದ ಪಶ್ಚಿಮೋತ್ಥಾನಾಸನ.
4. ಓಂ ಹ್ರೈಂ ಭಾನವೇ ನಮಃ
ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲು ಹಿಂದೆ ಇಟ್ಟು ಕಾಲು ಮತ್ತು ಕೈಗಳನ್ನು ಭೂಮಿಯ ಮೇಲೆ ಊರಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ ಕೆಲ ಸೆಕೆಂಡು ಕಳೆಯಬೇಕು.
5. ಓಂ ಹ್ರೌಂ ಭಾಸ್ಕರಾಯ ನಮಃ
ಶ್ವಾಸ ಹೊರಗೆ ಬಿಡುತ್ತಾ ಕಾಲುಗಳನ್ನು ನೇರವಾಗಿಸಿ, ಕೈಗಳನ್ನು ನೇರವಾಗಿಡಬೇಕು. ನಂತರ ಹಿಂಗಾಲನ್ನು ಎತ್ತಿ ಅದರ ಜೊತೆಗೆ ನೇರವಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ.
6. ಓಂ ಹ್ರಃ ಖಗಾಯ ನಮಃ
ನೆಲದ ಮೇಲೆ ಬೋರಲಾಗಿ ಮಲಗಿ ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತಾ ಪಾದ, ಮೊಣಕಾಲು ಎದೆ ಮತ್ತು ಹಣೆ ನೆಲಕ್ಕೆ ನಿಧಾನವಾಗಿ ತಾಗುವಂತೆ ಮಾಡಿ ಹಿಂಗಾಲನ್ನು ನೆಲಕ್ಕಿಂತ ಸ್ವಲ್ಪ ಮೇಲಕ್ಕೆತ್ತಿ ಶ್ವಾಸ ಹೊರಗೆ ಬಿಡಬೇಕು.
7. ಓಂ ಹ್ರಾಂ ಪೂಷ್ಣೇ ನಮಃ
ಶ್ವಾಸ ಹೊರಗೆಳೆದುಕೊಳ್ಳುತ್ತಾ ನಿಧಾನವಾಗಿ ದೇಹವನ್ನು ಆದಷ್ಟು ಹಿಂದಕ್ಕೆ ಬಾಗಿಸಿ. ಇದನ್ನು ಭುಜಂಗಾಸಾನ ಎಂದು ಕರೆಯುತ್ತಾರೆ.
8. ಓಂ ಹ್ರೀಂ ಹಿರಣ್ಯಗರ್ಭಾಯ ನಮಃ
ಶ್ವಾಸ ನಿಧಾನವಾಗಿ ಹೊರಗೆ ಬಿಡುತ್ತಾ ಕೈಗಳನ್ನು ನೇರವಾಗಿಟ್ಟು ಸೊಂಟವನ್ನು ಮೇಲಕ್ಕೆತ್ತಿ ತಲೆಯನ್ನು ಮೇಲ್ಮುಖ ಮಾಡುತ್ತಾ ಕೈಗಳನ್ನು ಹಿಂದಕ್ಕೆ ತೆಗೆಯಬೇಕು.
9. ಓಂ ಹ್ರೂಂ ಮರೀಚಯೇ ನಮಃ
ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲಿನ ಮೊಣಕಾಲನ್ನು ಮುಂದಕ್ಕೆ ಇಡುತ್ತಾ ತಲೆಯನ್ನು ಆದಷ್ಟು ಮೇಲೆತ್ತಬೇಕು.
10. ಓಂ ಹ್ರೈಂ ಅರ್ಕಾಯ ನಮಃ
ನಿಧಾನವಾಗಿ ಶ್ವಾಸ ಹೊರಗೆ ಬಿಡುತ್ತಾ ಕಾಲುಗಳು ನೇರ, ಕೈಗಳು ಪಾದದ ಬೆರಳುಗಳನ್ನು ಮುಟ್ಟುತ್ತಿದ್ದು ತಲೆ ಮೊಣಕಾಲಿಗೆ ತಗುಲಿರಬೇಕು.
11. ಓಂ ಹ್ರೌಂ ಆದಿತ್ಯಾಯ ನಮಃ
ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ನಿಧಾನವಾಗಿ ಹಿಂದಕ್ಕೆ ಭಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ. ನಮಸ್ಕಾರದ ಸ್ಥಿತಿಗೆ ಬನ್ನಿ.
12. ಓಂ ಹ್ರಃ ಸವಿತ್ರೇ ಸವಿತಾ ಸೂರ್ಯ ನಾರಾಯಣಾಯ ನಮಃ
ಈಗ ಸಾಮಾನ್ಯ ಸ್ಥಿತಿಗೆ ಬನ್ನಿ. ಈ ರೀತಿ ಮಾಡಿದರೆ ಒಂದು ಸುತ್ತಿನ ಸೂರ್ಯ ನಮಸ್ಕಾರ ಮಾಡಿದಂತಾಯಿತು. ನಂತರ ಎಡಗಾಲಿನಿಂದ ಈ ಹಂತಗಳನ್ನು ಪುನರಾವರ್ತಿಸಬೇಕು.
ಸೂರ್ಯ ನಮಸ್ಕಾರ ಮಾಡುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿದರೆ ಉತ್ತಮ ಪ್ರಯೋಜನನ್ನು ಪಡೆಯಬಹುದು.
ಸೂರ್ಯ ನಮಸ್ಕಾರದ ನಿಯಮಗಳು:
ಸೂರ್ಯ ನಮಸ್ಕಾರಗಳನ್ನು ಒಂದು ಚಾಪೆ ಅಥವಾ ವಸ್ತ್ರದ ಮೇಲೆ ಮಾಡಬೇಕು. ಬರೀ ನೆಲದಲ್ಲಿ ಮಾಡಬಾರದು.
ಮೊದಲ ಬಾರಿಗೆ ಅಭ್ಯಾಸ ಮಾಡುವವರು 12 ಸೂರ್ಯ ನಮಸ್ಕಾರಗಳನ್ನು ಒಂದೇ ಬಾರಿಯಲ್ಲಿ ಮಾಡಬೇಕಾಗಿಲ್ಲ. ಒಂದು ವಾರದವರೆಗೆ ದಿನಕ್ಕೆ (3 ರಿಂದ 6) ಕಡಿಮೆ ನಮಸ್ಕಾರಗಳನ್ನು ಪ್ರಾರಂಭಿಸಬೇಕು, ತದನಂತರ ಕ್ರಮೇಣ 12 ನಮಸ್ಕಾರಗಳನ್ನು ಮಾಡಬೇಕು.
ಶವಾಸನವನ್ನು ಅಭ್ಯಾಸದ ಕೊನೆಯಲ್ಲಿ ಮಾಡಬೇಕು. ಮಂತ್ರಗಳನ್ನು ಪ್ರತಿ ಸೂರ್ಯ ನಮಸ್ಕಾರ ಆರಂಭದಲ್ಲಿ ಉಚ್ಚರಿಸಬೇಕು.
ಸೂರ್ಯ ನಮಸ್ಕಾರದಲ್ಲಿ ಒಟ್ಟು 8 ವಿವಿಧ ಭಂಗಿಗಳು, ಸರಣಿಯಲ್ಲಿ 12 ನಿಲುವು ಬದಲಾವಣೆಗಳು ಇವೆ.
ಕೆಲವು ಆಸನಗಳು ಒಂದು ಸೂರ್ಯ ನಮಸ್ಕಾರದ ಅದೇ ಚಕ್ರದಲ್ಲಿ ಎರಡು ಬಾರಿ ಪುನರಾವರ್ತಿಸಲಾಗುವುದು.
ಸೂರ್ಯ ನಮಸ್ಕಾರವನ್ನು ಯಾವಾಗಲೂ ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ (ಪಶ್ಚಿಮ) ದಿಕ್ಕಿನಲ್ಲಿ ಮುಖಮಾಡಿ ಮಾಡಲಾಗುವುದು.

No comments:
Post a Comment