Thursday, May 16, 2019

Analysis of JAPA ( ಜಪದ ವಿಶ್ಲೇಷಣೆ )

                                                                                                                                         ಸಂಗ್ರಹಿತ 
"ಜಪ"
ಜಪದಿಂದ ಮಸ್ಸಿಗೆ ವ್ಯಾಯಾಮ ಮತ್ತು ಶಾಂತಿ★
ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.
ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.
ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.
 "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.
 "ಜ" ಕಾರೋ ಜನ್ಮ ವಿಚ್ಚೇಧನ "ಪ" ಕಾರೋ ಪಾಪನಾಶಕ
ತಸ್ಮಾಜ್ಯಪ ಇತಿಪ್ರೊಕ್ತೋ ಜನ್ಮ ಪಾಪ ವಿನಾಶಕ “
"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.
"ಜಪ" ಅಂದರೇನು?
ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಾಗಲಿ  ಧ್ಯಾನಿಸುವುದೇ "ಜಪ",
ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ.
ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.

ಸಂಸ್ಕೃತದಲ್ಲಿ, ಶಿಕ್ಷಕರ ಗುಣಮಟ್ಟದ ಆಧಾರದ ಮೇಲೆ ವಿವಿಧ ರೀತಿಯ ಶಿಕ್ಷಕರನ್ನು ಉಲ್ಲೇಖಿಸಲಾಗಿದೆ.

ಒಂದು ವಿಷಯದ ಬಗ್ಗೆ ಮಾತ್ರ ಮಾಹಿತಿ ನೀಡುವ ವ್ಯಕ್ತಿಯನ್ನು ಶಿಕ್ಷಕ ಎಂದು ಕರೆಯಲಾಗುತ್ತದೆ.

ವಿಷಯದ ಮಾಹಿತಿ ಮತ್ತು ಜ್ಞಾನವನ್ನು ನೀಡುವ ವ್ಯಕ್ತಿಯನ್ನು ಉಪಾಧ್ಯಾಯ ಎಂದು ಕರೆಯಲಾಗುತ್ತದೆ.

ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ವ್ಯಕ್ತಿಯನ್ನು ಪಂಡಿತ ಎಂದು ಕರೆಯಲಾಗುತ್ತದೆ.

 ಒಬ್ಬ ವಿದ್ಯಾರ್ಥಿಯನ್ನು ಕೌಶಲ್ಯದಲ್ಲಿ ಕರಗತ ಮಾಡುವ / ಮುನ್ನಡೆಸುವ ವ್ಯಕ್ತಿಯನ್ನು ಆಚಾರ್ಯ ಎಂದು ಕರೆಯಲಾಗುತ್ತದೆ.

 ವಿಷಯದ ವೀರೋಚಿತ ಚಿತ್ರವನ್ನು ಅರ್ಥಮಾಡಿಕೊಂಡು ತಿಳಿಸುವ ವ್ಯಕ್ತಿಯನ್ನು ದ್ರಷ್ಟಾ/ವೀಕ್ಷಕ ಎಂದು ಕರೆಯಲಾಗುತ್ತದೆ.

ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಿ ಅವರನ್ನು ಕತ್ತಲೆಯಿಂದ ಬೆಳಕಿಗೆ ಕರೆದೊಯ್ಯುವ ವ್ಯಕ್ತಿಯನ್ನು ಗುರು ಎಂದು ಕರೆಯಲಾಗುತ್ತದೆ
ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ.
ಗುರು ಎಂಬ ಶಬ್ದಕ್ಕೆ ಅರ್ಥ
"ಗು" ಎಂದರೆ ಕತ್ತಲು ಅಥವ ಅಜ್ನಾನ
"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರುಉಪದೇಶ ಮಾಡುವುದರ ಜೊತೆಗೆ ಆಶಿರ್ವಾದವನ್ನೂ ಮಾಡುತ್ತಾನೆ.
ಜಪದಲ್ಲಿ ಮೂರು ವಿಧಾನಗಳಿವೆ.
"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.
"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು
"ಮಾನಸಿಕ - ಮನಸ್ಸಿನಲ್ಲಿ ಧ್ಯಾನಿಸುವುದು.

 "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು "ಮಾನಸಿಕ ಜಪ , ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.
ಜಪ ಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.
ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.
ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.
ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು
ಜಪ ಎಂದರೆ ಏನು..?
ಇದು ಅರ್ಥವಾದರೆ ಖಂಡಿತಾ ಭಗವಂತನನ್ನು ಕಾಣುವ ದಿವ್ಯ ದೃಷ್ಟಿ ಲಭ್ಯವಾಯಿತು ಅಂತಲೇ ಅರ್ಥ.

ಜಪದ ಅರ್ಥವೇನು..?
ಜಕಾರೋ ಜನ್ಮ ವಿಚ್ಛೇದ:
ಪಕಾರ: ಪಾಪ ನಾಶನಂ
ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕ: ಜಪ ಎಂಬ ಪದದ ಅರ್ಥವಾದರೆ ಜಪದ ಕ್ರಿಯೆಗೆ ಸುಲಭವಾಗಿ ತೊಡಗಬುದು.
ಜಕಾರೋ ಜನ್ಮ ವಿಚ್ಛೇದ:  ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ.
ಪ ಕಾರ: ಪಾಪನಾಶನಂ ಪ ಕಾರ ಪಾಪ ನಾಶ ಮಾಡುತ್ತದೆ.
ಹಾಗಾಗಿ ಇದು ಜನ್ಮಪಾಪ ವಿನಾಶಕವಾದ ಪದವಾಗಿದೆ.
ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹುಟ್ಟು-ಸಾವು ಎರಡರಿಂದಲೂ ಮುಕ್ತರನ್ನಾಗಿ ಮಾಡುತ್ತದೆ ಈ ಜಪ. ಯಾವಾಗ ನಮಗೆ ಹುಟ್ಟು ಸಾವುಗಳಿಲ್ಲ ಆಗ ನಾವು ಪರಮಾತ್ಮನಲ್ಲೇ ಸೇರಿದ್ದೇವೆ ಅಂತ.
ಆ ಸ್ಥಿತಿಗೆ ತಲುಪುವುದು ಹೇಗೆ..?
ಅದನ್ನೇ ನಾವು ಅರಿಯಬೇಕಾದದ್ದು. ಹುಟ್ಟು-ಸಾವಿನಿಂದ ಹೊರಬರಲಿಕ್ಕೆ ಕೆಲವು ಜಪ ಮಾರ್ಗಗಳಿವೆ. ಯಾರಿಗೆ ಯಾವ ಜಪ ಸಾಧ್ಯವಿದೆ ಅದನ್ನ ಅವರು ಅನುಸರಿಸಬಹುದು.
ಜಪದ ವಿಧಗಳು
ನಿತ್ಯಜಪ
ವೈಯಕ್ತಿಕ ಜಪ
ಪ್ರಾಯಶ್ಚಿತ ಜಪ
ಅಚಲ ಜಪ
ಜಲ ಜಪ
ಅಖಂಡ ಜಪ
ಪ್ರದಕ್ಷಿಣ ಜಪ
ಲಿಖಿತ ಜಪ
ಕಾಮ್ಯ ಜಪ
ಹೀಗೆ ಇನ್ನೂ ಕೆಲವಿವೆ. ಈ ಜಪಗಳ ತಾತ್ಪರ್ಯ ಅರ್ಥವಾದರೆ ಜಪ ಮಾಡಲಿಕ್ಕೆ ಸುಲಭವಾಗುತ್ತದೆ.

ನಿತ್ಯ ಜಪ - ನಿತ್ಯವೂ ತಪ್ಪದೇ ಒಂದು ನಿಗದಿತ ಸಮಯದಲ್ಲಿ ಮಾಡು ಜಪ ಅದೇ ನಿತ್ಯಜಪ ಅದು ಆತ್ಮೋನ್ನತಿಯನ್ನು ತಂದುಕೊಡುತ್ತದೆ.

ನೈಮಿತ್ತಿಕ ಜಪ - ಇದು ವಿಶೇಷ ದಿನಗಳಲ್ಲಿ ಮಾಡುವ ಜಪ. ಸಂಕ್ರಮಣ, ನವರಾತ್ರಿ, ಶಿವರಾತ್ರಿ ಇಂಥ ಪರ್ವ ಕಾಲದಲ್ಲಿ ಮಾಡುವ ಜಪ

ಕಾಮ್ಯ ಜಪ - ಹೆಸರೇ ಹೇಳುವ ಹಾಗೆ ಒಂದು ಅಪೇಕ್ಷೆಯಿಂದ ಮಾಡಬಹುದಾದ ಜಪ. ಉದಾಹರಣೆಗೆ ವಿವಾಹಾಕಾಂಕ್ಷೆಯಿಂದ ಮಾಡುವ ಕಾತ್ಯಾಯಿನಿ ಜಪ, ಆರೋಗ್ಯ ಸದೃಢತೆಗೆ ಮಾಡುವ ಸೂರ್ಯ ಜಪ, ಧನಾಕರ್ಷಣೆಗೆ ಮಾಡುವ ಮಹಾಲಕ್ಷ್ಮೀ ಜಪ ಇತ್ಯಾದಿ.
 
ಪ್ರದಕ್ಷಿಣಾ ಜಪ - ದೇವಾಲಯದಲ್ಲಿ, ಅಶ್ವತ್ಥದ ಬಳಿಯಲ್ಲಿ ಮಾಡುವ ಪ್ರದಕ್ಷಿಣಾ ಜಪ

ಅಖಂಡ ಜಪ - ಹೆಸರೇ ಹೇಳುವ ಹಾಗೆ ಖಂಡ ಮಾಡದೇ ಮಾಡುವ ಜಪ. ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭಿಸಿ ಎಡಬಿಡದೆ ನಿರ್ದಿಷ್ಟ ಕಾಲದವರೆಗೆ ಹಗಲೂ ರಾತ್ರಿ ಎನ್ನದೆ ನಿರಂತರವಾಗಿ ಮಾಡುವ ಜಪ.

ಅಜಪಾಜಪ - ಇದು ಹಂಸ ಜಪ ಅಂತಾರೆ ಸೋಹಂ ಎಂಬುದನ್ನ ಹೇಳುವುದು
 
ಲಿಖಿತ ಜಪ - ದೇವರ ನಾಮಗಳನ್ನು ಬರೆಯುತ್ತಾ ಜಪಿಸಿವುದು.

ಅಚಲ ಜಪ - ಒಂದೇ ಕಡೆ ಸ್ಥಿರವಾಗಿ ಕುಳಿತು ಮಾಡುವ ಜಪ.

ಚಲ ಜಪ - ಓಡಾಡುತ್ತಾ ಹೇಳಿಕೊಳ್ಳಬಹುದಾದ ಜಪ.

ಹೀಗೆ ಹಲವು ಜಪ ಬಗೆಗಳವೆ. ಕೃಷ್ಣ ಈ ಜಪವನ್ನ ಯಜ್ಞ ಎಂದು ಕರೆದಿದ್ದಾನೆ. ಜಪಯಜ್ಞ ಅಂತಲೇ ಗುರ್ತಿಸಿದ್ದಾನೆ. ಹಾಗಾದರೆ ಯಾವ ಜಪ ಮಾಡಬೇಕು ಎಂಬುದು ನಿರ್ಧಾರವಾಗಬೇಕು. ಮೇಲಿನವು ಜಪ ವಿಧಗಳಾದರೆ ಯಾವ ಮಂತ್ರದ ಜಪವಾಗಬೇಕು ಎಂಬುದೂ ನಿಶ್ಚಿತ ಮಾಡಿಕೊಳ್ಳಬೇಕು

ಯಾವ ಜಪ ಬೇಕು..?

ಏಕಾಕ್ಷರಿ ಎನಿಸುವ ಓಂ ಜಪ ದಿಂದ ಹಿಡಿದು ಚತುರ್ವಿಂಶತ್ಯಕ್ಷರಿ ಅಂದರೆ 24 ಅಕ್ಷರಗಳವರೆಗೆ ಇರುವ ಗಾಯತ್ರೀ ಜಪದ ವರೆಗೆ ಹಲವು ಜಪಗಳಿವೆ. ನಿಮಗೆ ಇಷ್ಟವಾದ ಜಪವನ್ನ ಆಯ್ಕೆ ಮಾಡಿಕೊಂಡು ಆ ಭಗವಂತನ ದರ್ಶನಕ್ಕೆ ತೊಡಗಬಹುದು.

ಏಕಾಕ್ಷರಿ  ಮಂತ್ರ  - ಓಂ
ದ್ವ್ಯಕ್ಷರಿ ಮಂತ್ರ - ರಾಮ
ತ್ರ್ಯಕ್ಷರೀ ಮಂತ್ರ - ಶ್ರೀ ರಾಮ, ಓಂ ಶೀವ, ಶಿವೋಹಂ
ಪಂಚಾಕ್ಷರೀ ಮಂತ್ರ - ನಮ: ಶೀವಾಯ
ಷಡಕ್ಷರೀ ಮಂತ್ರ - ಓಂ ನಮ: ಶಿವಾಯ, ಹ್ರೀಂ ನಮ: ಶಿವಾಯ, ಶೊಂ ಶಿವಾಯೈ ನಮ:
 ಅಷ್ಟಾಕ್ಷರೀ ಮಂತ್ರ - ಓಂ ನಮೋ ನಾರಾಯಣಾಯ
ದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ರುದ್ರಾಯ
ದ್ವಾದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ವಾಸುದೇವಾಯ / ಶ್ರೀ ಲಲಿತಾತ್ರಿಪುರ ಸೌಂದರ್ಯೈ ನಮ: ತ್ರಯೋದಶಾಕ್ಷರೀ
ಮಂತ್ರ - ಓಂ ಶ್ರೀ ಲಲಿತಾತ್ರಿಪುರ ಸೌದರ್ಯೈ ನಮ:
ಪಂಚದಶಾಕ್ಷರೀ ಮಂತ್ರ - ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ
ಚತುರ್ವಿಂಶತ್ಯಕ್ಷರ - ಗಾಯತ್ರೀ ಮಂತ್ರ
ಇವೆಲ್ಲವೂ ಜಪದ ಮಂತ್ರಗಳು ಯಾರಿ ಯಾವ ಜಪ ಬೇಕು ನಿರ್ಣಯಿಸಿ ಗುರುಗಳಿಂದ ಉಪದೇಶ ಸ್ವೀಕರಿಸಿ ಜಪ ಮಾಡಿ ಖಂಡಿತಾ ಇಚ್ಛಿತ ದೇವರ ಸಾಕ್ಷಾತ್ಕಾರವಾಗುವುದರಲ್ಲಿ ಸಂದೇಹವಿಲ್ಲ.
ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.
ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.
ಅವುಗಳೆಂದರೆ,
ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.
ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.
ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.
ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
 ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.
ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.
ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.
ಪ್ರತಿನಿತ್ಯವೂ ಜಪ ಮಡುವುದರಿಂದ
ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.
ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡುತ್ತದೆ.
ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.
ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.
ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.

ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.
ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಆದರೆ ತೋರಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.
ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.
ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

No comments:

Post a Comment