ಸಂಗ್ರಹಿತ
Jotishya related to Divorce ಜೋತಿಷ್ಯ- ವಿಚ್ಛೇದನ ವಿಚಾರ
ರವಿ,ಕುಜ,ಶನಿ, ರಾಹು,ಕೇತು ಗ್ರಹಗಳು ಶತ್ರು ಸ್ಥಾನಗಳಲ್ಲಾಗಲೀ ಅಥವಾ ನೀಚ ಸ್ಥಾನದಲ್ಲಾಗಲೀ ಇದ್ದರೆ ದಂಪತಿಗಳು ಬೇರೆಯಾಗುವುದು ನಡೆಯುತ್ತದೆ.
ರವಿ,ಕುಜ,ರಾಹು,ಕೇತು,ಶನಿ ಗ್ರಹಗಳು ಮತ್ತು ಅವುಗಳ ಸ್ಥಾನಗಳು ಕೆಟ್ಟ ದೃಷ್ಟಿಗೆ ಗುರಿಯಾದರೂ ದಂಪತಿಗಳು ಬೇರೆಯಾಗುವ ಪರಿಸ್ಥಿತಿಗಳು ಒದಗುತ್ತವೆ.
ಒಂದುವೇಳೆ ರವಿ,ಕುಜ,ಶನಿ,ರಾಹು,ಕೇತು ಗ್ರಹಗಳಲ್ಲಿ ಒಳ್ಳೆಯ ದೃಷ್ಟಿ ಬಿದ್ದರೆ ದಂಪತಿಗಳು ವಿಚ್ಛೆದನೆಯಾದನಂತರವೂ ಪುನಃ ಒಂದಾಗುತ್ತಾರೆ.
ಸಪ್ತಮಾಧಿಪತಿ ಆರನೆಯ ಭಾವದಲ್ಲಿ ಎಂತಹಾ ಶುಭ ಗ್ರಹಗಳೂ ಇಲ್ಲದಂತೆ ಇದ್ದರೆ ಆ ಜಾತಕದವರಿಗೆ ವಿಚ್ಛೇದನೆ ಉಂಟಾಗುತ್ತದೆ.
ಶನಿ,ರಾಹು ಇಬ್ಬರೂ ಒಟ್ಟಾಗಿರುವುದು ಅಥವಾ ಯವುದೋ ಒಂದು ಗ್ರಹವಾದರೂ ಲಗ್ನದಲ್ಲಿದ್ದು ಅತಿಯಾದ ಕೆಟ್ಟ ದೃಷ್ಟಿ ಬಿದ್ದರೆ ದಂಪತಿಗಳು ಬೇರೆಯಾಗುತ್ತಾರೆ.
ಆದರೆ ಈ ಗ್ರಹಸ್ಥಿತಿ ಇರುವವರಿಗೆ ಪುನಃ ತನ್ನ ಜೀವನಸಂಗಾತಿಯೊಂದಿಗೆ ಒಂದಾಗುವುದು ನಡೆಯುವುದಿಲ್ಲ.
ಸಪ್ತಮಾಧಿಪತಿ ವಕ್ರ ಸ್ಥಿತಿಯಲ್ಲಿದ್ದರೂ ಅಥವಾ ಅಸ್ತಂಗತವಾಗಿದ್ದರೂ ರವಿಯೊಂದಿಗೆ ಸೇರಿದರೂ ಅಥವಾ ನೀಚವಾಗಿದ್ದರೂ ದಂಪತಿಗಳು ಬೇರೆಯಾಗುತ್ತಾರೆ.
ಈ ರೀತಿ ಅನೇಕ ಗ್ರಹಗಳು ,ಅವುಗಳ ಸ್ಥಾನಗಳು,ಅವುಗಳ ಅಧಿಪತಿಗಳ ಸ್ಥಾನಗಳು ಎಷ್ಟೋ ದಂಪತಿಗಳ ನಡುವೆ ವಿಬೇಧಗಳು, ವಿಚ್ಛೇದನೆ,ಬೇರೆಯಾಗುವುದಕ್ಕೆ ಕಾರಣವಾಗುತ್ತವೆ. ಆದರೆ ಜನ್ಮಕುಂಡಲಿಯನ್ನು ಪರಿಶೀಲಿಸದೇ ಎಂತಹಾ ನಿರ್ಧಾರವನ್ನೂ ಮಾಡಬಾರದು.
ಇನ್ನು ಪರಹಾರದ ವಿಷಯಕ್ಕೆ ಬಂದರೆ ಜನ್ಮಕುಂಡಲಿಯಲ್ಲಿ ಯಾವ ಗ್ರಹಗಳಿಂದ ಜಾತಕದವನು ಪೀಡಿಸಲ್ಪಡುತ್ತಾನೋ, ಆ ಗ್ರಹಕ್ಕೆ ಸಂಬಂಧಿಸಿದ ತಾಂತ್ರಿಕ ಹೋಮಗಳೇ ಸರಿಯಾದ ಮಾರ್ಗ.
No comments:
Post a Comment