Tuesday, August 06, 2019

GOVINDA ASHWATHA TREE (ಅಶ್ವತ್ಥ ವೃಕ್ಷ)

GOVINDA  ASHWATHA TREE (ಅಶ್ವತ್ಥ ವೃಕ್ಷ)
ಅರಳಿ (ಅಶ್ವತ್ಥ) ಮರದ ಮಹತ್ವ

ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ..
"ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ
ರುದ್ರ ರೂಪಾಯ ವೃಕ್ಷರಾಜಾಯತೇ ನಮಃ"


ಅರಳಿಮರವೇಕೆ ಬಾಡುವುದಿಲ್ಲ ಗೊತ್ತಾ..?ಇದರ ಹಿಂದೆ ಇದೆ ರೋಚಕ ಪುರಾಣ ಕತೆ.!
ರಾಮಲಕ್ಷ್ಮಣರು ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಬರುತ್ತಾರೆ. 
ಸೀತಾದೇವಿಯನ್ನು ಫಲ್ಗುಣಿ ನದಿಯ ದಂಡೆಯಲ್ಲಿ ಕೂಡಿಸಿ 
ಅವರಿಬ್ಬರೂ ಕಾಡಿಗೆ ಹೋಗುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ 
ನದಿಯ ಒಳಗಿನಿಂದ ಕೈಯೊಂದು ಹೊರಗೆ ಬರುತ್ತದೆ.
ಸೀತಾದೇವಿ ನನಗೆ ಹಸಿವೆಯಾಗುತ್ತಿದೆ ಎಂದಂತಾಗುತ್ತದೆ.                                                  
ಪದೇ ಪದೇ ಆ ಧ್ವನಿ ಮರುಕಳಿಸುತ್ತದೆ. ಆ ಧ್ವನಿ ಮಹಾರಾಜರಂತೆ 
ಇರುತ್ತದೆ. ಸೀತೆಗೆ ಏನು ಮಾಡುವುದೆಂದೇ ತೋಚುವುದಿಲ್ಲ. 
ಬೇರೆ ದಾರಿ ಇಲ್ಲದೆ ಮರಳಿನ ಉಂಡೆಯನ್ನು ಮಾಡಿ ಅದರಲ್ಲಿ 
ಅನ್ನವನ್ನು ಆವಾಹನೆ ಮಾಡಿ ನದಿಯಿಂದ ಮೇಲೆ ಬಂದ 
ಕೈಯೊಳಗೆ ಇಡುತ್ತಾಳೆ. ನಂತರ ತನ್ನ ಕರ್ತವ್ಯಕ್ಕೆ ಐದು 
ಸಾಕ್ಷಿಗಳನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾಳೆ.
ಸೀತೆ ನೀಡಿದ ಆಹಾರದಿಂದ ದಶರಥ ಸಂತುಷ್ಟನಾಗುತ್ತಾನೆ. ಹರಸಿ ಮರೆಯಾಗುತ್ತಾನೆ. ಇತ್ತ ರಾಮ ಲಕ್ಷ್ಮಣರು ಮರಳಿದಾಗ ಸೀತೆ ಅವರಿಗೆ ನಡೆದ ಸಂಗತಿಯೆಲ್ಲವನ್ನೂ ವಿವರಿಸುತ್ತಾಳೆ. ರಾಮ ಲಕ್ಷ್ಮಣರಿಗೆ ಮೊದಲಿಗೆ ಸೀತೆಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆಗ ಸೀತೆ ತನ್ನ ಕೃತ್ಯಕ್ಕೆ ಫಲ್ಗುಣಿ ನದಿ, ತುಳಸಿ ಗಿಡ, ಹಸು ಬ್ರಾಹ್ಮಣ ಮತ್ತು ಅರಳಿಮರವೇ ಸಾಕ್ಷಿ ಎನ್ನುತ್ತಾಳೆ. ಆದರೆ, ಸೀತೆಯ ಸಹಾಯಕ್ಕೆ ಅರಳಿ ಮರದ ಹೊರತಾಗಿ ಮತ್ಯಾರು ಬರುವುದಿಲ್ಲ. ಅರಳಿ ಮರ ಸಾಕ್ಷ್ಯ ನುಡಿಯುತ್ತದೆ. ರಾಮ, ಲಕ್ಷ್ಮಣರು ಸೀತೆಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸುತ್ತಾರೆ.
ಆದರೆ, ಸೀತೆ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಫಾಲುಣಿ ನದಿ, ಹಸು, ಬ್ರಾಹ್ಮಣ ಮತ್ತು ತುಳಸಿ ಗಿಡಕ್ಕೆ ಶಾಪ ಕೊಡುತ್ತಾಳೆ. ಫಾಲುಣಿ ನದಿಗೆ ಮಳೆಗಾಲದಲ್ಲೂ ಸಹ ನಿನ್ನ ಪಾತ್ರಕ್ಕೆ ಎಷ್ಟೇ ನೀರು ಬಂದರೂ ಬರಿದಾಗಲಿ. ನೀರು ನೆಲದ ಒಳಗೇ ಉಳಿದುಕೊಳ್ಳಲಿ.
ಹೇ ವಿಪ್ರೋತ್ತಮ ನೀನು ಸತ್ಯ ಹೇಳದೇ ನನಗೆ ಮೋಸ ಮಾಡಿದೆ. ಹೀಗಾಗಿ ನೀನು ಈ ಕ್ಷೇತ್ರದಲ್ಲೇ ಇದ್ದು ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ನಡೆಸು.
ಗೋಮಾತೆ ನೀನು ಜಗವ ಬೆಳಗಬೇಕಾದವಳು. ಆದರೆ, ನೀನು ನನ್ನ ಮಾತು ಮೀರಿ ಲೊಭತನ ಮೆರೆದೆ. ಹಾಗಾಗಿ ಗಯಾ ಕ್ಷೇತ್ರದಲ್ಲೇ ಇದ್ದುಕೊಂಡು ಅವರಿವರು ಪಿಂಡವನ್ನು ತಿನ್ನುತ್ತಾ ಜೀವನ ಸಾಗಿಸು. ಎಷ್ಟು ತಿಂದರೂ ನಿನ್ನ ಹೊಟ್ಟೆ ತುಂಬದಿರಲಿ.
ತುಳಸಿ ಮಾತೆ ನೀನು ಪವಿತ್ರಳಾದವಳು. ನೀನು ಸಹ ನನ್ನ ಮಾತು ಮೀರುವಿ ಎಂದುಕೊಂಡಿರಲಿಲ್ಲ. ಹಾಗಾಗಿ ನೀನು ಎಲ್ಲೆಂದರಲ್ಲಿ ಬೆಳೆಯುವಂತಾಗಲಿ.
ಸೀತೆಯ ಶಾಪದಂತೆ ಫಲ್ಗುಣಿ ನದಿ ಬತ್ತಿಹೋಗಿದೆ.

ನದಿಯೊಳಗಿನ ಮರಳನ್ನು ಅಗೆದಾಗಳಷ್ಟೆ ಇಂದಿಗೂ ನೀರು ಬರುತ್ತದೆ. ಫಾಲುಣಿ ನದಿ ತೀರದಲ್ಲಿರುವ ಹಸುಗಳಿಗೆ ಪಿಂಡಗಳೇ ಆಹಾರ. ಅವು ಎಷ್ಟು ಹಸಿದಿರುತ್ತವೆ ಎಂದರೆ ಕೆಲವೊಮ್ಮೆ ಪಿಂಡ ವಿಸರ್ಜನೆಗೂ ಅವಕಾಶ ಕೊಡದೆ ಬಾಯಿ ಹಾಕುತ್ತದೆ. ನಂತರ ಸೀತೆಯ ದೃಷ್ಟಿ ಅರಳೀ ಮರದತ್ತ ಬೀಳುತ್ತದೆ. ಆಕೆ ಪರಮ ಸಂತೋಷದಿಂದ ಆಶೀರ್ವಾರ್ದಿಸುತ್ತಾಳೆ. ಅಂದಿನಿಂದ ಅರಳಿಮರ ಬಾಡದೆ ಕಂಗೊಳಿಸುತ್ತದೆ.

ಅಶ್ವತ್ಥ ಮರವನ್ನು ಪೂಜಿಸಿದರೆ ಕಾಳ ಸರ್ಪ ದೋಷ ನಿವಾರಣೆಯಾಗುವುದು  ನಮ್ಮ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ.
ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

ಅಶ್ವತ್ಥ ಮರದ ಎಲೆಗಳ ಔಷಧೀಯ ಗುಣಗಳು
ಹೌದು ಅನೇಕ ಖಾಯಿಲೆಗಳಿಗೆ ಅರಳಿ ಮರ ಒಂದು          
ರಾಮಬಾಣವೆಂದೇ ಹೇಳಬಹುದು.
ಅರಳಿ ಮರದ ಎಲೆಗಳ ರಸಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು
ಹಾಕಿ ಕುಡಿದರೆ ಕಾಮಾಲೆ ಖಾಯಿಲೆ ಕಡಿಮೆಯಾಗುತ್ತದೆ.
ಅರಳಿ ಮರದ ಎಲೆಗಳನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ
ಬೆಲ್ಲವನ್ನು ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿದರೆಶೀತ ಕೆಮ್ಮು
ಮಾಯವಾಗುತ್ತದೆ.
ಒಂದು ಹಿಡಿ ಅರಳಿ ಎಲೆಗಳನ್ನು ಅರ್ಧ ಲೀಟರ್ ನೀರಿಗೆ ಹಾಕಿ
ಚೆನ್ನಾಗಿ ಕುದಿಸಿ ಅರ್ಧದಷ್ಟಾದ ಮೇಲೆ ಇದನ್ನು ತಣ್ಣಗೆ ಮಾಡಿ
ಕುಡಿದರೆ ಹೃದಯ ತೊಂದರೆ ಕಡಿಮೆಯಾಗುತ್ತದೆ.
ಮರವು ದೇವದೇವತೆಗಳಿಗೆ ಸ್ವರ್ಗ ಎಂದು ಅಥರ್ವ ವೇದ ಮತ್ತು
ಛೋದೋಗ್ಯ ಉಪನಿಷತ್ ನಲ್ಲಿ ಹೇಳಲಾಗಿದೆ. ಪುರಾಣಗಳ
ಪ್ರಕಾರ ಅಶ್ವತ್ಥ ಮರದ ಬೇರಿನಲ್ಲಿ ಬ್ರಹ್ಮ, ಕೊಂಬೆಯಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ನೆಲೆಸಿರುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದು ಮತ್ತು ಇದರಲ್ಲಿ ತಪ್ಪು ಮಾಡುವವರಿಗೆ ಬಡತನ ಕಾಡುವುದು ಎನ್ನಲಾಗಿದೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಇರುವ ನಿಯಮಗಳ ಬಗ್ಗೆ ತಿಳಿದುಕೊಂಡು ಅಶ್ವತ್ಥ ಮರ ಪೂಜಿಸಿ..... 

ಹಿಂದೂ ಧರ್ಮದಲ್ಲಿ ಅನೇಕ ಮರಗಳನ್ನು ಪೂಜನೀಯ ಮರವೆಂದು ಪರಿಗಣಿಸಲಾಗುತ್ತದೆ. ಅರಳಿ ಮರವನ್ನು, ಆಲದ ಮರವನ್ನು, ಬೇವಿನ ಮರವನ್ನು, ಬೇಲದ ಮರವನ್ನು, ಬಾಳೆ ಮರವನ್ನು, ತುಳಸಿ ಸಸ್ಯವನ್ನು, ಅಶೋಕ ಮರವನ್ನು, ಬಿದಿರಿನ ಮರವನ್ನು, ಶ್ರೀಗಂಧದ ಮರವನ್ನು, ತೆಂಗಿನ ಮರವನ್ನು, ಮಾವಿನ ಮರವನ್ನು ಮತ್ತು ಕೆಂಪು ಶ್ರೀಗಂಧದ ಮರವನ್ನು ಇತ್ಯಾದಿಗಳನ್ನು ಪೂಜಿಸಲಾಗುತ್ತದೆ. ಅರಳಿ ಮರದ ಪೂಜೆಯ ಬಗ್ಗೆ ಮತ್ತು ಅರ್ಘ್ಯವನ್ನು ನೀಡುವುದರ ಪ್ರಯೋಜನಗಳು
ಜನರು ವಿವಿಧ ಕಾರಣಗಳಿಗಾಗಿ ಅರಳಿ ಮರವನ್ನು ವಿಶೇಷವಾಗಿ ಪೂಜೆ ಮಾಡುತ್ತಾರೆ ಮತ್ತು ಅರಳಿ ಮರದ ಬುಡಕ್ಕೆ ನೀರನ್ನು ಅಂದರೆ ಅರ್ಘ್ಯವನ್ನು ಅರ್ಪಿಸುತ್ತಾರೆ. ಜ್ಯೋತಿಷ್ಯದಲ್ಲಿ ಈ ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಗ್ರಹಗಳಿಂದುಟಾಗುವ ನಕಾರಾತ್ಮಕ ಶಕ್ತಿಯಿಂದ ಪರಿಹಾರ ಪಡೆದುಕೊಳ್ಳಲು ಜ್ಯೋತಿಷ್ಯ ಶಾಸ್ತ್ರವು ಅರಳಿ ಮರಕ್ಕೆ ನೀರನ್ನು ಅರ್ಪಿಸುವಂತೆ ಹೇಳುತ್ತದೆ. ಸಾಲ, ಶತ್ರು ಭಾದೆ ಮತ್ತು ಅಡೆತಡೆಗಳಂತಹ ವಿವಿಧ ಸಮಸ್ಯೆಗಳಿಂದ ಹೊರಬರಲು ಹೆಚ್ಚಿನವರು ಅರಳಿ ಮರವನ್ನು ಪೂಜಿಸುತ್ತಾರೆ. ಅರಳಿ ಮರವನ್ನು ಪೂಜಿಸಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ.
ಎಲ್ಲಾ ಜನರು ಹೆಚ್ಚು ಏಕಾಗ್ರತೆಯನ್ನು ಹೊಂದಿರುವುದಿಲ್ಲ. ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಖಂಡಿತವಾಗಿಯೂ ನಿಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ನೀವು ಕ್ರಿಯಾತ್ಮಕ ಯೋಜನೆ ಮತ್ತು ಕಾರ್ಯತಂತ್ರವನ್ನು ಹೊಂದಿಲ್ಲದಿದ್ದರೆ ನೀವು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಲ್ಲ ಶಕ್ತಿ ಅರಳಿ ಮರಕ್ಕಿದೆ. ಆದ್ದರಿಂದ ಪ್ರತಿನಿತ್ಯ ನಾವು ಅರಳಿ ಮರದ ಬುಡಕ್ಕೆ ನೀರನ್ನು ಅರ್ಪಿಸುವುದರಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.
ವಿಭಿನ್ನ ಜನರು ವಿಭಿನ್ನ ತಾರ್ಕಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನೀವು ಹೆಚ್ಚು ತಾರ್ಕಿಕ ಚಿಂತನೆಯನ್ನು ಹೊಂದಿದ್ದರೆ ನೀವು ವೃತ್ತಿಯಲ್ಲಿ, ಕೆಲಸದಲ್ಲಿ ಮತ್ತು ಉದ್ಯೋಗದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಒಂದು ಆಲೋಚನೆಯು ಇತರ ಆಲೋಚನೆಗಳೊಂದಿಗೆ ಸ್ಪಷ್ಟವಾಗಿ ಸಂಬಂಧಿಸಿದಾಗ ತಾರ್ಕಿಕ ಚಿಂತನೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇಂದು, ಉದ್ಯೋಗದಾತರು ಹೆಚ್ಚು ತಾರ್ಕಿಕ ಚಿಂತನೆಯನ್ನು ಹೊಂದಿರುವ ಜನರನ್ನು ಹುಡುಕುತ್ತಿದ್ದಾರೆ. ನೀವು ಪ್ರತಿದಿನ ಅರಳಿ ಮರವನ್ನು ಪೂಜಿಸಿದರೆ, ನಿಮ್ಮ ತಾರ್ಕಿಕ ಚಿಂತನೆಯು ಸುಧಾರಿಸುವ ಸಾಧ್ಯತೆಯಿದೆ ಮತ್ತು ಇದರಿಂದ ಯಶಸ್ಸು ಗಳಿಸುತ್ತೀರಿ.
ಇತ್ತೀಚಿನ ದಿನಗಳಲ್ಲಿ, ವೈವಾಹಿಕ ಅಪಶ್ರುತಿಯು ಮನೆಯ ಸಮಸ್ಯೆಯಾಗಿದೆ. ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೋಷಪೂರಿತ ಗ್ರಹಗಳ ಪ್ರಭಾವದಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವವಾಗಬಹುದು. ಕುಂಡಲಿಯಲ್ಲಿ ನಿಮ್ಮ ವಿವಾಹದ ಸ್ಥಾನವು ಶನಿ, ರಾಹು, ಮಂಗಳ, ಕೇತು ಮತ್ತು ಸೂರ್ಯನಿಂದ ಪೀಡಿತವಾಗಿದ್ದರೆ, ಅರಳಿ ಮರವನ್ನು ಪೂಜಿಸುವುದರಿಂದ ಅಪಾರ ಫಲಿತಾಂಶ ಸಿಗುತ್ತದೆ. ವೈವಾಹಿಕ ಸಂತೋಷವನ್ನು ಹೆಚ್ಚಿಸಲು ಅರಳಿ ಮರಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಿ.
ನಾವೆಲ್ಲರೂ ಈ ದಿನಗಳಲ್ಲಿ ಯಾಂತ್ರಿಕ ಜೀವನವನ್ನು ನಡೆಸುತ್ತಿದ್ದೇವೆ. ಅತಿಯಾದ ಮಾಲಿನ್ಯ ಮತ್ತು ತಪ್ಪಾದ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ದಂಪತಿಗಳು ಸಂತಾನವಿಲ್ಲದೆ ಕೊರಗಬೇಕಾಗಿದೆ. 5 ನೇ ಮನೆಯ ಅಧಿಪತಿ ದುಷ್ಕೃತ್ಯದಿಂದಾಗಿ ಕೂಡ ಸಂತಾನ ಭಾಗ್ಯವನ್ನು ಪಡೆಯುವುದು ಅಸಾಧ್ಯವಾಗಿರುತ್ತದೆ. ಕುಂಡಲಿಯ ಸಂತಾನ ಸ್ಥಾನವು ಶನಿ, ಮಂಗಳ, ಸೂರ್ಯ, ರಾಹು ಮತ್ತು ಕೇತು ಮುಂತಾದ ದೋಷಪೂರಿತ ಗ್ರಹಗಳಿಂದ ಪೀಡಿತವಾಗಿದ್ದರೆ ಮಕ್ಕಳಾಗದಿರುವ ಸಾಧ್ಯತೆಯಿದೆ. ಸಂತಾನದ ಆಶೀರ್ವಾದವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಲು ಅರಳಿ ಮರಕ್ಕೆ ನೀರನ್ನು ಅರ್ಪಿಸಿ.
ಅರಳಿ ಮರವು ನಮ್ಮ ಜೀವನದ ಮೇಲೆ ಪ್ರಭಾವ ಬೀರುವಂತಹ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತದೆ. ನಮ್ಮ ಪೋಷಕರು ಮತ್ತು ಅಜ್ಜಿಯರು ಪ್ರಕೃತಿಯ ಬೆಂಬಲ ಪಡೆಯಲು ಅರಳಿ ಮರವನ್ನು ಪೂಜಿಸುತ್ತಿದ್ದಾರೆ. ಅರಳಿ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಸಾಕಷ್ಟು ಆಧ್ಯಾತ್ಮಿಕ ಶಕ್ತಿ ಮತ್ತು ಪ್ರಗತಿಯನ್ನು ಹೆಚ್ಚಿಸಿಕೊಳ್ಳಬಹುದು.
ಹಣ ಮತ್ತು ಸಂಪತ್ತು ನಮ್ಮ ಜೀವನದ ಒಂದು ಭಾಗ ಮತ್ತು ಮುಖ್ಯ ಅಂಶವಾಗಿದೆ. ಹಣವಿಲ್ಲದೆ ಒಂದು ಹೆಜ್ಜೆ ಇಡುವುದು ಅಸಾಧ್ಯವಾಗಿದೆ. ಹಣದ ನಿರಂತರ ಹರಿವನ್ನು ಪಡೆಯಲು ಅರಳಿ ಮರಕ್ಕೆ ನೀರು ನೀಡುವುದು ಅತ್ಯಗತ್ಯ. ನೀವು ಅರಳಿ ಮರಕ್ಕೆ ನೀರನ್ನು ನೀಡಿದರೆ, ಅದು ನಿರಂತರ ಆದಾಯದ ಮೂಲವನ್ನು ಹೊಂದುವ ಮಾರ್ಗಗಳನ್ನು ಮತ್ತು ಸಾಧನಗಳನ್ನು ಸೃಷ್ಟಿಸುತ್ತದೆ.
ಆಧ್ಯಾತ್ಮಿಕ ಪ್ರಗತಿಯು ಪ್ರತಿಯೊಬ್ಬ ಜನರ ಭಾಗವಾಗಿದೆ. ಅರಳಿ ಮರದ ಕೆಳಗೆ ಧ್ಯಾನ ಮಾಡಿದ ನಂತರ ಗೌತಮ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ಇತಿಹಾಸ ಹೇಳುತ್ತದೆ. ಹಿಂದೂ ಸಂತರು ಸಹ ಜ್ಞಾನವನ್ನು ಪಡೆಯಲು ಅರಳಿ ಮರದ ಕೆಳಗೆ ಧ್ಯಾನ ಮಾಡುತ್ತಾರೆ. ಜನರು ಅರಳಿ ಮರದ ಸುತ್ತಲೂ ಪ್ರದಕ್ಷಿಣೆ ಮಾಡುತ್ತಾರೆ. ಅರಳಿ ಮರಕ್ಕೆ 7 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು.
ಸಾಕಷ್ಟು ಕಥೆಗಳಲ್ಲಿ ಭಗವಾನ್‌ ಬ್ರಹ್ಮ,ಆದಿದೇವ, ಅಚ್ಯುತ ಮತ್ತು ಅರಳಿ ಮರದ ಸಂಬಂಧದ ಬಗ್ಗೆ ಹೇಳಲಾಗಿದೆ. ನಾವು ನಿಯಮಿತವಾಗಿ ಅರಳಿ ಮರಗಳಿಗೆ ಪೂಜೆ ಮತ್ತು ನೀರನ್ನು ಅರ್ಪಿಸಿದರೆ ತ್ರಿಮೂರ್ತಿಗಳು ಅಪಾರವಾದ ಸಂಪತ್ತು, ಜ್ಞಾನ, ಶಕ್ತಿ, ಸ್ಥಾನ ಮತ್ತು ಅಧಿಕಾರವನ್ನು ನಮಗೆ ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯಿದೆ.

No comments:

Post a Comment