ಪಿತೃದೇವತೆಗಳು
ಒಮ್ಮೆ ದೇವತೆಗಳು ತಮನ್ನು ಸೃಷ್ಟಿಸಿದ ಬ್ರಹ್ಮನನ್ನೇ ಮರೆತು ತಮ್ಮ ತಮ್ಮ ವೈಭವ ಸುಖಗಳಲ್ಲಿ ತಲ್ಲೀನರಾದರು. ಇದರಿಂದ ಕುಪಿತನಾದ ಬ್ರಹ್ಮನು - ನಿಮ್ಮನ್ನು ಅಜ್ಞಾನವು ಆವರಿಸಲಿ ಎಂದು ದೇವತೆಗಳನ್ನು ಶಪಿಸಿದನು.
ಚಿಂತಿತರಾದ ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದಾಗ ನೀವು ಪಿತೃದೇವತೆಗಳನ್ನು ಪೂಜಿಸಿ ಶಾಪವಿಮುಕ್ತರಾಗಿರಿ ಎಂಬುದಾಗಿ ಅನುಗ್ರಹಿಸಿದನು. ಅಂದಿನಿಂದ ದೇವತೆಗಳು ಸಹ ಪಿತೃದೇವತೆಗಳನ್ನು ಪೂಜಿಸುತ್ತಿದ್ದಾರೆ. ಮತ್ತು ಪಿತೃಗಳು ದೇವತೆಗಳಿಗಿಂತ ಉನ್ನತಸ್ಥಾನದಲ್ಲಿದ್ದಾರೆ.
ಪಿತೃದೇವತೆಗಳಲ್ಲಿ ಏಳು ಮುಖ್ಯ ಗುಂಪುಗಳಿವೆ. ಇವರಲ್ಲಿ ಸುಕಾಲರು, ಅಂಗೀರಸರು, ಸುಸ್ವಧರು ಮತ್ತು ಸೋಮಪರು ಎಂಬ ನಾಲ್ಕು ಮೂರ್ತರು ಅಂದರೆ ಇವರಿಗೆ ಕರ್ಮಜನ್ಮವಾದ ದಿವ್ಯ ಶರೀರವಿರುತ್ತೆ. ವೈರಾಜರು, ಅಗ್ನಿಷ್ಟಾತ್ತರು ಮತ್ತು ಬಹಿರ್ಷದರು ಅಮೂರ್ತರು ಅಂದರೆ ಇವರು ಯಾವ ರೂಪವನ್ನಾದರೂ ಧರಿಸಬಲ್ಲ ಕಾಮರೂಪಿಗಳು. ಈ ಅಮೂರ್ತ ಪಿತೃಗಳೇ ಶ್ರೇಷ್ಠರು. ಪವಿತ್ರ ಅಗ್ನಿಯ ಮೂಲಕ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ಸಾಗ್ನಿಗಳು. ಪವಿತ್ರ ಅಗ್ನಿಯಿಲ್ಲದೆ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ನಿರಗ್ನಿಗಳು.
ಈ ಸಪ್ತ ಪಿತೃಗಳಿಗೆ ಅಧೀನರಾಗಿ ಇಪ್ಪತ್ತೊಂದು ಪಿತೃಗಣಗಳಿವೆ. ಕವ್ಯವನು ಮಾನವ ಪಿತೃಗಳಿಗೆ ಈ ಇಪ್ಪತ್ತೊಂದು ಪಿತೃಗಣಗಳು ತಲುಪಿಸುತ್ತಾರೆ. ಈ ಮಾನವ ಪಿತೃಗಳು ಪುಣ್ಯಲೋಕದಲ್ಲಿರಬಹುದು ಅಥವಾ ಕರ್ಮಭ್ರಷ್ಟರಾಗಿ ನಾಯಿ, ನರಿ, ಮನುಷ್ಯ, ರಾಕ್ಷಸ ಮುಂತಾದ ಯೋನಿಗಳಲ್ಲಿ ಜನಿಸಿರಬಹುದು ಅಥವಾ ಪ್ರೇತರೂಪದಲ್ಲಿರಬಹುದು.
ಪಿತೃಗಳ ಪವಿತ್ರ ಸ್ಥಳಗಳು ಅಮಾವಾಸ್ಯೆ, ಕುತಪಕಾಲ(ಹಗಲಿನ 8ನೆಯ ಕಾಲ), ಆಕಾಶ, ದಕ್ಷಿಣದಿಕ್ಕು, ಬೆಳ್ಳಿ, ಅಪಸವ್ಯ, ನೀರು, ಎಳ್ಳು, ಧರ್ಭೆ, ಹಸುವಿನ ಹಾಲು, ಸಿಹಿ ಸಿಹಿಪದಾರ್ಥಗಳು, ಬಿಸಿಬಿಸಿ ಆಹಾರ, ತಾಮ್ರ, ಜೇನುತುಪ್ಪ, ಗೋಧಿ, ಗಾಯಾಶ್ರಾದ್ಧ ಮುಂತಾದವುಗಳು.
ಪಿತೃಗಳು ಬಿಸಿಬಿಸಿ ಆಹಾರವನ್ನು ಇಷ್ಪಡುವುದರಿಂದ ಅವರನ್ನು ಉಷ್ಣಪರು ಎಂದು ಕರೆಯುತ್ತಾರೆ.
ಪಿತೃಕಾರ್ಯವನ್ನು ಅಪರಾಹ್ನದಲ್ಲೇ ಮಾಡಬೇಕು ಬೇರೆ ಸಮಯದಲ್ಲಿ ಮಾಡಿದರೆ ಆ ಶ್ರಾದ್ಧ ಫಲವನ್ನು ರಾಕ್ಷಸರು ಪಡೆಯುತ್ತಾರೆ.
ನಮ್ಮ ವಂಶದಲ್ಲಿ ಬಹಳ ಪುತ್ರರು ಜನಿಸಬೇಕು. ಏಕೆಂದರೆ ಅವರಲ್ಲಿ ಒಬ್ಬನಾದರೂ ಗಯಾದಲ್ಲಿ ಶ್ರಾದ್ಧ ಮಾಡಬಹುದು* ಎಂದು ಪಿತೃಗಳು ಅನುಗಾಲವೂ ಚಿಂತಿಸುತ್ತಿರುತ್ತಾರೆ. ಆದ್ದರಿಂದ ಗಯದಲ್ಲಿರುವ ವಟ ವೃಕ್ಷದ ಕೆಳಗೆ ಶ್ರಾದ್ಧ ಮಾಡಿದರೆ ಶ್ರಾದ್ಧದ ಫಲವು ಅಕ್ಷಯವಾಗುತ್ತದೆ. ಅಲ್ಲದೆ ಕರ್ತೃವಿನ ಮುಂದಿನ ಪೀಳಿಗೆಯ ಯಾರೂ ಪ್ರೇತರಾಗುವುದಿಲ್ಲ. ಪಿತೃಗಳು ಎಂದರೆ ಪಾಲಿಸುವವರು ಎಂದರ್ಥ.ಪಿತೃಗಣಗಳು ದಕ್ಷ ಪುತ್ರಿ ಸ್ವಧಾನನ್ನು ಮದುವೆಯಾದರು. ಪಿತೃದೇವತೆಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು ಹೇಳಬೇಕು.
ಯಾವ ಮನೆಯಲ್ಲಿ ಸ್ವಾಹಾಕಾರಗಳು ಮತ್ತು ಸ್ವಧಾಕಾರಗಳು ಕೇಳಿಸುವುದಿಲ್ಲವೋ ಆ ಮನೆಯು ಸ್ಮಶಾನಕ್ಕೆ ಸಮಾನವೆಂದು ಹೇಳುತ್ತಾರೆ.ಯಮನು ಪಿತೃಗಣಗಳ ಅಧಿಪತಿಯಾಗಿರುವುದರಿಂದ ಅವನನ್ನು ಶ್ರಾದ್ದ ದೇವ ಎಂದು ಕರೆಯುತ್ತಾರೆ.
ಕಾಲ
ಪಿತೃಗಳಿಗೆ ಶುಕ್ಲಪಕ್ಷವು ರಾತ್ರಿಯಾಗಿಯೂ, ಕೃಷ್ಣಪಕ್ಷವು ಹಗಲಾಗಿಯೂ ಇರುತ್ತದೆ. ಅಂದರೆ ಮಾನವನ ಒಂದು ಮಾಸವು ಪಿತೃಗಳಿಗೆ ಒಂದು ಅರೋಹಾತ್ರಿಯಾಗಿರುತ್ತೆ. ಈ ಕಾಲಮಾನದಲ್ಲಿ ಪಿತೃಗಳ ಪೂರ್ಣಾಯಸ್ಸು 3000 ವರ್ಷಗಳು.
ಪಿತೃದೇವತೆಗಳು ಮಾನವರಿಗೆ ದೇವತೆಗಳಿಗಿಂತ ಹತ್ತಿರದಲ್ಲಿದ್ದು ಬಹುಬೇಗ ತೃಪ್ತರಾಗಿ ದೇವತೆಗಳಿಗಿಂತ ಮೊದಲು ವರವನ್ನು ಕೊಡುತ್ತಾರೆ.
ಅದಕ್ಕೆ ಹೇಳೋದು ಏನನ್ನು ಮರೆತರೂ ಶ್ರಾದ್ಧವನ್ನು ಮರೆಯಬಾರದು ಎಂದು.
ಶ್ರಾದ್ಧದ ದಿನ ಹಬ್ಬ ಹರಿದಿನಗಳನ್ನು ಪಕ್ಕಕ್ಕೆ ಇಟ್ಟು ಶ್ರಾದ್ಧವನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.
ಶ್ರಾದ್ಧಗಳು
ನಾಂದೀ ಶ್ರಾದ್ಧ / ವೃದ್ಧಿ ಶ್ರಾದ್ಧ / ಅಭ್ಯುದಯ ಶ್ರಾದ್ಧ - ಮದುವೆ, ಉಪಯನ ಮುಂತಾದ ಸಂಸ್ಕಾರಗಳಲ್ಲಿ ಮಾಡುವುದು ಪಿತೃಗಳ ಆಶೀರ್ವಾದಕೋಸ್ಕರ.(ನಂದತಿ ದೇವತಾ ಇತಿ ನಾಂದೀ). ಈ ಶ್ರಾದ್ಧ ದಲ್ಲಿ ಎಳ್ಳಿನ ಬದಲು ಅಕ್ಕಿಯನ್ನು ಉಪಯೋಗಿಸುತ್ತಾರೆ ಮತ್ತು ಇದನ್ನು ಪ್ರಾತಃಕಾಲದಲ್ಲಿ ಮಾಡುತ್ತಾರೆ. ಈ ಶ್ರಾದ್ಧದಲ್ಲಿ ಮನುಷ್ಯ ಮಾತೃಕೆಯರನ್ನು(ಮಾತೃ, ಪಿತಾಮಹಿ ಮತ್ತು ಪ್ರಪಿತಾಮಹಿ) ಮತ್ತು ದೇವಮಾತೃಕೆಯರನ್ನು (ಬ್ರಾಹ್ಮೀ, ಮಾಹೇಶ್ವರಿ, ವೈಷ್ಣವಿ, ಕೌಮಾರಿ,ಇಂದ್ರಾಣಿ, ಮಾಹೆಂದ್ರಿ, ವಾರಾಹಿ ಮತ್ತು ಚಾಮುಂಡಾ) ಪೂಜಿಸಿ ನಂತರ ಪಿತೃಗಳನ್ನು ಪೂಜಿಸುತ್ತಾರೆ.
ಸಪಿಂಡೀಕರಣ ಶ್ರಾದ್ಧ
ಮೃತನು ಸತ್ತ 12ನೆ ದಿನ ಮತ್ತು ಒಂದು ವರ್ಷದ ಬಳಿಕ ಮಾಡುವ ಶ್ರಾದ್ಧ.
ಅಷ್ಟಕ ಶ್ರಾದ್ಧ, ಏಕೋದಿಷ್ಟ ಶ್ರಾದ್ಧ, ಪಾರ್ವನ ಶ್ರಾದ್ಧ, ನಿತ್ಯ ಶ್ರಾದ್ಧ, ಕಾಮ್ಯ ಶ್ರಾದ್ದ, ಗೋಷ್ಠ ಶ್ರಾದ್ಧ, ಶುದ್ದಿ ಶ್ರಾದ್ಧ, ಕರ್ಮಾಂಗ ಶ್ರಾದ್ಧ, ದೈವಿಕ ಶ್ರಾದ್ಧ, ಮತ್ತು ಇತರೇ
ಪಿತೃಸ್ಥಾನದಲ್ಲಿರುವ ಬ್ರಾಹ್ಮಣನ ಕೈಯಲ್ಲಿ ಅನ್ನವನ್ನು ಹೋಮ ಮಾಡುವುದೇ "ಪಾಣಿಹೋಮ". ಪಾನಿ ಎಂದರೆ ಕೈ.(ಪಾಣಿ ಮುಖಾವೈ ಪಿತರಃ)
ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸದೆ ಮಾಡಿದ ವೈದಿಕ ಕರ್ಮಗಳೆಲ್ಲಾ ರಾಕ್ಷಸರ ಪಾಲಾಗುತ್ತದೆ.
ಸರ್ವೇಷಾಂ ಧಾನ್ಯಂ ರಾಶಿನಾಂ ತಿಲಾಃ ಪಾಪ ಪ್ರನಾಶನಾಃ* ಎಂಬಂತೆ ಧಾನ್ಯಗಳಲ್ಲಿ ತಿಲವೆ ಶ್ರೇಷ್ಠ ಮತ್ತು ಪಾಪನಾಶಕ.
ತಿಲ ದಾನ ಪುಣ್ಯದಾಯಕ, ಅದರಲ್ಲೂ ಮಾಘಮಾಸದಲ್ಲಿ ಎಳ್ಳನ್ನು ದಾನ ಮಾಡಿದರೇ ಪರಮಪುಣ್ಯ.

ವಿವಾಹಾನಂತರ ಪಿಂಡಪ್ರದಾನ : ಮಕ್ಕಳ ವಿವಾಹವಾದಮೇಲೆ 1 ಅಥವಾ 3 ತಿಂಗಳೊಳಗೆ ಪಿಂಡ ಪ್ರದಾನ ಮಾಡಬಾರದು ಎನ್ನುವುದು ತಂದೆ ತಾಯಿಗಳ ಹೊರತಾಗಿ ಬೇರೆ ಶ್ರಾಧಗಳಿಗೆ ಮಾತ್ರ ಅನ್ವಯಿಸುತ್ತದೆ ವಿವಾಹದ ಹಿಂದೆ ಎಷ್ಟೇ ದಿನದ ಅಂತರದಲ್ಲೂ ಪಿಂಡ ಪ್ರದಾನ ಮಾಡಬಹುದು ವಿವಾಹಾನಂತರ ತಂದೆ ತಾಯಿಗಳ ಶ್ರಾದ್ಧವು ಎಷ್ಟೇ ದಿನಗಳ ಅಂತರದಲ್ಲಿದ್ದರು ಅವಶ್ಯವಾಗಿ ಪಿಂಡಪ್ರದಾನವನ್ನೇ ಮಾಡಬೇಕು
ಶ್ರಾದ್ಧ ತಿಥಿ ಅಜ್ಞಾತವಾಗಿದ್ದರೆ : ಸಂಬಧಿಕರ ಬಳಗದವರ ಮುಖಾಂತರ ಮಾಸ ತಿಥಿ ಗೊತ್ತಾಗುವುದು ಸಾಧ್ಯವಿಲ್ಲದಿದ್ದರೆ ಮಾರ್ಗಶೀರ್ಷ ಅಥವಾ ಮಾಘ ಅಮಾವಾಸ್ಯಾ ಅಥವಾ ದ್ವಾದಶಿ ತಿಥಿಯಲ್ಲಿ ಶ್ರಾದ್ಧವನ್ನು ಮಾಡಬೇಕು
ಅಮಾವಾಸ್ಯಾ ( ದರ್ಶ ) : ದರ್ಷದ ದಿವಸ ದ್ವಾದಶ ಪಿತೃಗಳಿಗೆ ಮಾತ್ರ ತಿಲ ಸಹಿತ ನೀರಿನಿಂದ ತರ್ಪಣ ಕೊಡಬೇಕು ನಂತರ ಪ್ರತಿನಿತ್ಯದ ಬ್ರಹ್ಮಯಜ್ನವನ್ನು ದೇವ, ಋಷಿ ,ಆಚಾರ್ಯ ತರ್ಪಣವನ್ನು ಕೊಟ್ಟು ಆಮೇಲೆ ಕೇವಲ ನೀರಿನಿಂದ ಸರ್ವ ಪಿತೃಗಳಿಗೆ ತರ್ಪಣ ಕೊಡುವುದು
ಘಾತ ಚತುರ್ದಶಿ ಶ್ರಾದ್ಧವನ್ನು ಏಕೋದಿಷ್ಟ ವಿಧಿಯಿಂದ ಮಾಡಬೇಕು
ವಿಧವಾ ಜನರು ಮಾಡುವ ಶ್ರಾದ್ಧ : ಮಕ್ಕಳಿಲ್ಲದೆ ಇದ್ದರೆ ತಾವೇ ಶ್ರಾದ್ಧ ಮಾಡಬೇಕು
ಮಮ ಭರ್ತೃ ತತ್ಪಿತ್ರು ಪಿತಾಮಹಾನಾಂ, ಮಮ ಭರ್ತೃ ಮಾತುಹ್ ಪಿತಾಮಹಿ ಮಾತುಹ್ ಪ್ರಪಿತಾಮಹಿನಾಂ
ಮಮ ಪಿತೃ ಪಿತಾಮಹ ಪ್ರಪಿತಾಮಹಾನಾಂ,
ಮಮ ಮಾತೃ ಪಿತಾಮಹಿ ಪ್ರಪಿತಾಮಹಿನಾಂ,
ಮಮ ಮಾತಾಮಹ ಮಾತುಹ್ ಪಿತಾಮಾಹ ಮಾತುಹ್ ಪ್ರಪಿತಾಮಹಾನಾಂ
ಮಮ ಮಾತಾಮಾಹಿ ಮಾತುಹ್ ಪಿತಾಮಹಿ ಮಾತುಹ್ ಪ್ರಪಿತಾಮಹಿನಾಂ
ತೃಪ್ತ್ಯರ್ಥ ಸಕೃನ್ ಮಹಾಲಯ ......................ಕರಿಷ್ಯೇ
....ಮುಂದುವರಿಯುವುದು
No comments:
Post a Comment