Monday, September 23, 2019

SHRAADDHA VICHAAR - V ( ಶ್ರಾದ್ಧ ವಿಚಾರ ಲಿಂಗದೇಹ ಭಾಗ :-೦೫ )

ಸಂಗ್ರಹಿತ 
ಶ್ರಾದ್ಧ ವಿಚಾರ ಭಾಗ :-೦೫

ಮತ್ಸ್ಯಪುರಾಣದಲ್ಲಿ ಶ್ರಾದ್ಧಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ಕೇಳಲಾಗಿದೆ,  ಬ್ರಾಹ್ಮಣರು ಸೇವಿಸಿದ ಅಥವಾ ಹೋಮಾಗ್ನಿಯಲ್ಲಿ ಸಮರ್ಪಿಸಿದ ಅನ್ನವು ಲಿಂಗದೇಹಗಳಿಗೆ ಹೇಗೆ ತಲುಪುತ್ತದೆ? 
ಏಕೆಂದರೆ ಮೃತ್ಯುವಿನ ನಂತರ ಆ ಆತ್ಮಗಳು ಪುನರ್ಜನ್ಮವನ್ನು ಪಡೆದುಕೊಂಡು ಇನ್ನೊಂದು ದೇಹದ ಆಶ್ರಯವನ್ನು ಪಡೆದುಕೊಂಡಿರುತ್ತವೆ.  ಇಲ್ಲವೇ,ಕಮಾ೯ನುಸಾರ ಯಾವುದೋ ಲೋಕ ಸೇರಿರುತ್ತದೆ.ಈ ಪ್ರಶ್ನೆಗೆ ಉತ್ತರವನ್ನೂ ಅಲ್ಲಿಯೇ ನೀಡಲಾಗಿದೆ. ಅದು ಹೀಗಿದೆ – ವಸು, ರುದ್ರ ಮತ್ತು ಆದಿತ್ಯ ಈ ಪಿತೃದೇವತೆಗಳ ಮೂಲಕ ಆ ಆಹಾರವು ಪಿತೃಗಳಿಗೆ ತಲುಪುತ್ತದೆ (ಅಗ್ನಿ,ವಾಯು,ಸೂಯ೯ಮಾಗ೯ದಿಂದ)ಅಥವಾ ಆ ಅನ್ನವು ಬೇರೆ ರೂಪದಲ್ಲಿ ಅಂದರೆ ಅಮೃತ, ತೃಣ, ಭೋಗ, ಗಾಳಿ ಮುಂತಾದ ವಸ್ತುಗಳಲ್ಲಿ ರೂಪಾಂತರ ಗೊಂಡು ಆ ವಿಭಿನ್ನ ಯೋನಿಗಳಲ್ಲಿರುವ ಪಿತೃಗಳಿಗೆ ತಲುಪುತ್ತದೆ. –ಹೇಗೆ ಮನಯಾಡ೯ರ್ ಮಾಡುವಾ ನಾವು ಕೊಟ್ಟ ನೋಟನ್ನೇ ತೆಗೆದುಕೊಂಡು ಹೋಗಿ ಕೊಡುವುದಿಲ್ಲ, ಬದಲಾಗಿ ಸಮ ಮೌಲ್ಯವನ್ನು ತಲುಪಿಸುವಂತೆ. ಮತ್ಸ್ಯಪುರಾಣ, ಅಧ್ಯಾಯ ೧೯, ಶ್ಲೋಕ ೩ರಿಂದ ೯, ಅಧ್ಯಾಯ ೧೪೧, ಶ್ಲೋಕ ೭೪-೭೫
ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ಪಿತೃಗಳಿಗೆ ಹೇಗೆ ಸಿಗುತ್ತದೆ.
‘ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ತೇಜಸ್ತತ್ತ್ವದ ಸಹಾಯದಿಂದ ಸೂಕ್ಷ್ಮ-ವಾಯುವಿನ ರೂಪದಲ್ಲಿ ಪಿತೃಗಳ ಲಿಂಗದೇಹಗಳ ಬಾಹ್ಯಕೋಶವನ್ನು ಸ್ಪರ್ಶಿಸುತ್ತದೆ ಮತ್ತು ಅದರಲ್ಲಿನ ರಜ-ತಮಯುಕ್ತ ಕಣಗಳನ್ನು ವಿಘಟನೆ ಮಾಡುತ್ತದೆ. ಈ ಅರ್ಥದಲ್ಲಿ ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ಪಿತೃಗಳಿಗೆಸತ್ತ್ವ ರೂಪದಿಂದಲೇ  ತಲುಪುತ್ತದೆ ಎಂದು ಹೇಳಲಾಗಿದೆ’. –  ಬ್ರಾಹ್ಮಣನು ಊಟ ಮಾಡಿದ ಅನ್ನವು ಪಿತೃಗಳಿಗೆ ಹೇಗೆ ತಲುಪುತ್ತದೆ ?
‘ಶ್ರಾದ್ಧಕರ್ಮಗಳಲ್ಲಿನ ಮಂತ್ರಗಳ ಪರಿಣಾಮದಿಂದ ಬ್ರಾಹ್ಮಣರ ಬ್ರಾಹ್ಮತೇಜವು ಜಾಗೃತವಾಗುತ್ತದೆ. ಪಿತೃಗಳನ್ನು ಆವಾಹನೆ ಮಾಡಿ ಅನ್ನೋದಕಗಳ ಮೇಲೆ ಮಂತ್ರಯುಕ್ತ ನೀರನ್ನು ಸಿಂಪಡಿಸುವುದರಿಂದ ಹವಿರ್ಭಾಗದಿಂದ (ಅನ್ನದಿಂದ) ಪ್ರಕ್ಷೇಪಿತವಾಗುವ ಸೂಕ್ಷ್ಮವಾಯುವು ವಿಶ್ವೇದೇವರ ಕೃಪೆಯಿಂದ ಪಿತೃ ದೇವತೆಗಳ ಅನುಗ್ರಹದಿಂದ ನಮ್ಮ ಪಿತೃಗಳಿಗೆ ಸಿಗುತ್ತದೆ.
೨. ಬ್ರಾಹ್ಮತೇಜ ಜಾಗೃತವಾದ ಬ್ರಾಹ್ಮಣನಿಗೆ ಪಿತೃಗಳ ಹೆಸರಿನಲ್ಲಿ ಭೋಜನವನ್ನು ಕೊಡುವುದರಿಂದ ಶ್ರಾದ್ಧಕರ್ತನಿಗೆ ಮತ್ತು ಪಿತೃಗಳಿಗೆ ಪುಣ್ಯವು ಪ್ರಾಪ್ತವಾಗುತ್ತದೆ. ಅಪಾತ್ರರಿಗೆ ಅನ್ನ ದಾನ ಮಾಡಿದರೆ ದಾತಾರೋ ನಿರಯಂ ವ್ರಜೇತ್ ಹೀಗೆ ಬ್ರಾಹ್ಮಣರ ಆಶೀರ್ವಾದದಿಂದಲೂ ಪಿತೃಗಳಿಗೆ ಗತಿ ಸಿಗಲು ಸಹಾಯವಾಗುತ್ತದೆ.
ಪಿತೃಗಳ ಹೆಸರಿನಲ್ಲಿ ಬ್ರಾಹ್ಮಣರಿಗೆ ಭೋಜನವನ್ನು ಕೊಟ್ಟರೆ ನಮ್ಮ ಕರ್ತವ್ಯವು ಪೂರ್ಣವಾಯಿತು ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳದೇ, ಬ್ರಾಹ್ಮಣರ ಮಾಧ್ಯಮದಿಂದ ಪಿತೃಗಳೇ ಊಟವನ್ನು ಮಾಡುತ್ತಿದ್ದಾರೆ ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಊಟವನ್ನು ಮಾಡಿ ಸಂತೋಷಗೊಂಡ ಬ್ರಾಹ್ಮಣರಿಂದ ಪ್ರಕ್ಷೇಪಿತವಾಗುವ ಆಶೀರ್ವಾದಾತ್ಮಕ ಸಾತ್ತ್ವಿಕ ಲಹರಿಗಳ ಶಕ್ತಿಯು ಪಿತೃಗಳಿಗೆ ಪ್ರಾಪ್ತವಾಗುತ್ತದೆ. ಈ ಅರ್ಥದಲ್ಲಿ ‘ಬ್ರಾಹ್ಮಣರು ಊಟ ಮಾಡಿದ ಅನ್ನವು ಪಿತೃಗಳಿಗೆ ತಲುಪುತ್ತದೆ’ ಎಂದು ಹೇಳಲಾಗಿದೆ.
ಕೆಲವೊಮ್ಮೆ ತೀವ್ರ ವಾಸನೆಯಿರುವ ಪಿತೃಗಳು ಬ್ರಾಹ್ಮಣರ ದೇಹದಲ್ಲಿ ಪ್ರವೇಶಿಸಿ ಅನ್ನವನ್ನು ಸ್ವೀಕರಿಸುತ್ತವೆ.
1.ಶ್ರಾದ್ಧ ಮಾಡುವ ದಿನ ಮನೆ ಮುಂದೆ ನೀರು ಹಾಕಿ ಆದರೆ     ರಂಗೋಲಿ ಹಾಕಬಾರದು.
2. ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು ಎರಕ ನಿಷಿದ್ದ,  ಕೂದಲು ಬಾಚಿಕೊಳ್ಳಬಾರದು. ಹೆಂಗಳೆಯರೂ ಕೂಡಾ ಕೂದಲನ್ನು ಒಟ್ಟು ಸೇರಿಸಿ ಗಂಟು ಹಾಕಿಕೊಳ್ಳಿ.
3.ಆದಷ್ಟು ಮನೆಯಲ್ಲಿ ಶ್ರಾದ್ಧ ಮಾಡುವುದು ಅತ್ಯುತ್ತಮ..  ಹಿರಿಯರು ಹುಟ್ಟಿದ ಮನೆ,  ಅಲ್ಲದೆ, ಮನೆಯಲ್ಲಿರೋ ಮಕ್ಕಳು,  ಮೊಮ್ಮಕ್ಕಳು ಅವರ ಪ್ರಸಾದ  ಸ್ವೀಕಾರ  ಮಾಡಿ,  ಹಿರಿಯರ ಆಶೀರ್ವಾದ ಪಡೆಯುತ್ತಾರೆ,  ಹಿರಿಯರು,  ನಾವು ಪೂಜಿಸುವ ಆಚಾಯ೯ರ ರೂಪದಲ್ಲಿ ಬರುತ್ತಾರೆ.. ಮನೆಯಲ್ಲಿ ಎಲ್ಲರೂ ಅವರ ಕಾಲಿಗೆರಗಿ ಆಶಿರ್ವಾದ ಪಡೆಯಬೇಕು.. ಮಕ್ಕಳಿಗೂ ಪೂವ೯ಜರ ಆಚಾರ ವಿಚಾರಗಳ ಅರಿವು ಮೂಡಲು ಇದು ಸಹಕಾರಿಯೂ ಹೌದು.
ಈಗಿನ ಜನರಿಗೆ ಮಡಿ  ಅಡುಗೆ ಅಂದ್ರೆ ಕಷ್ಟ.. ಅಡುಗೆ ಮಾಡಲು ಕಷ್ಟ ಅನಿಸಿದ್ರೆ ಸಾಕಷ್ಟು ಅಡುಗೆ ಮಾಡುವ ಸೇವೆ ಒದಗಿಸುವವರು ಇರುತ್ತಾರೆ. ಅವರ ಸೇವೆ ಪಡೆಯಬಹುದು..ಪ್ರಯತ್ನ ಪೂವ೯ಕವಾಗಿ ಮನೆಯಲ್ಲೇ ಮಾಡಿ. ಪೂವ೯ಜರಿಗೆ ಅವರು ಕಟ್ಟಿದ ಯಾ ವಾಸಮಾಡಿದ ಮನೆಯ ಮೇಲೆ ವಿಶೇಷ ಅಭಿಮಾನವಿರುತ್ತದೆ.
4.ಮನೆಯಲ್ಲಿ ಮಾಡೋದು ಸಾಧ್ಯವಿಲ್ಲ ಅಂದರೆ ಮಾತ್ರ  ಅನಿವಾಯ೯ಪಕ್ಷ  ಮಠದಲ್ಲಿ,  ಗುಡಿಯಲ್ಲಿ ಆದರೂ, ಶ್ರಾದ್ಧ ಮಾಡಬೇಕು. ಒಟ್ಟಾರೆಯಾಗಿ ಬಿಡಬಾರದು ಅಷ್ಟೇ.
5.ಅವಿಧವಾ ನವಮಿ ದಿನ ಸ್ರೀಯರು  ಎಲ್ಲರೂ ಎರೆದುಕೊಂಡು, ಮುತ್ತೈದೆಗೆ ಸೀರೆ, ಕುಪ್ಪುಸ,  ಬಳೆ,  ಹೂವು , ಕೊಟ್ಟು ಉಡಿ ತುಂಬಬೇಕು,  ( ತಮ್ಮ ಶಕ್ತ್ಯಾನುಸಾರ )ಹಿರಿಯ ಮುತ್ತೈದೆಯರ ಕುಟುಂಬದವರ ಸ್ಮರಣೆಗೆ ಇದು ಒಂದು ಅವಕಾಶ. ಆದಷ್ಟು ಹಿರಿಯ ಮುತ್ತೈದೆಯರನ್ನು ಪೂಜಿಸಿರಿ.
ಮನೆಯಲ್ಲಿ ಅವಿಧವಾ  ನವಮಿ ಆಚರಿಸುವ ಅಗತ್ಯ ಇಲ್ಲದಿದ್ರೂ  ಉಡಿ ತುಂಬಬಹುದು.. 
6.ಪಕ್ಷ ಮಾಸ ಅಂದರೆ ಬೇರೇನೂ  ಅಲ್ಲ.,  ಪಿತೃ ದೇವತೆಗಳ ಪೂಜೆ, ಅವರ ಅಂತರ್ಯಾಮಿಯಾಗಿರುವ ಭಗವಂತನ ಪೂಜೆ.. ಪಿತೃ ದೇವತೆಗಳು, ನಮ್ಮ ಹಿರಿಯರಿಗೆ ಸದ್ಗತಿ ಕೊಡುವವರು.. ವಂಶಾಭಿವೃದ್ಧಿ ಆಗಲು ಆಶೀವ೯ದಿಸುವವರು.. 
ಎಲ್ಲರೂ ಶ್ರದ್ದೆ,  ಭಕ್ತಿಯಿಂದ , ಶ್ರಾದ್ಧ ಮಾಡಿ,  ಹಿರಿಯರ ಪ್ರೀತಿಗೆ ಪಾತ್ರರಾಗೋಣ,  ಮನೆಯಲ್ಲಿ,  ಸುಖ,  ಶಾಂತಿ,  ಸಂಪತ್ತು,  ಸಂತಾನ, ಕರುಣಿಸುವಂತೆ ಪ್ರಾಥಿ೯ಸೋಣ

No comments:

Post a Comment