ಸಂಗ್ರಹಿತ
ಪಿತೃ ಯಜ್ಞ ಭಾಗ ೦೪
ಪಿತೃ ಯಜ್ಞ ಭಾಗ ೦೪
ನಾವು ಏಕೆ ಪಿತೃಪಕ್ಷವನ್ನು ಆಚರಿಸಬೇಕು.ಯಾಕೆ ಪಿಂಡಪ್ರದಾನ ಮಾಡುತ್ತೇವೆ ಮತ್ತು ಬ್ರಾಹ್ಮಣ ಭೋಜನ, ದಕ್ಷಿಣೆ ದಾನ ಕೊಡಬೇಕು? ಪ್ರತಿಯೊಬ್ಬ ಮಗನಾದವನ ಕರ್ತವ್ಯ ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು , ಅವರು ನಿಮಗೆ ಅಧಿಕಾರ ,ಅಂತಸ್ತು , ಐಶ್ವರ್ಯ , ಹಣ ಆಸ್ತಿ ಕೊಟ್ಟಿಲ್ಲ ಎಂದು ಯೋಚಿಸಬೇಡಿ. ಜನ್ಮ ಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು.. ನೀವು ಕೊಟ್ಟ ಅನ್ನ ದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶೃದ್ಧೆಯಿಂದ ಮಾಡಿ . ಅದಕ್ಕೇ ಹೇಳುವದು ಶ್ರದ್ಧೆಯಿಂದ ಮಾಡಿದರೆ ಅದು ಶ್ರಾದ್ಧ. ಭಕ್ತಿಯಿಂದ ಮಾಡಿದರೆ ಪೂಜಾ ಫಲ ದೊರೆಯದೇ ಇರದು... ಖಂಡಿತಾ ಫಲವಿಹುದು ವಿಶ್ವಾಸೋ ಫಲದಾಯಕಃ।...
1 ಅಗ್ನೌ ಕರಣೇನ ದೇವಸ್ಥಾಃ.....ಅಂದರೆ ತನ್ನ ಪಿತೃಗಳು ದೇವತೆಗಳಾಗಿ ದೇವಲೋಕದಲ್ಲಿದ್ದರೆ, ಅವರಿಗೆ ಅಗ್ನೌ ಕರಣಾಕ್ಯ ಅನ್ನದಿಂದ ತೃಪ್ತಿಯಾಗುತ್ತದೆ..(ಅಗ್ನಿಯಲ್ಲಿ ಹಾಕುವ ಆಹುತಿಗಳಿಂದ.)
2 ಸ್ವರ್ಗಸ್ಥಾಃ ವಿಪ್ರಭೋಜನೇ. ತನ್ನ ಪಿತೃಗಳು ಸ್ವರ್ಗದಲ್ಲಿದ್ದರೆ ಬ್ರಾಹ್ಮಣರ ಭೋಜನ ರೂಪ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ..
3 ಯಮಸ್ಥಾ ಪಿಂಡದಾನೇನ.. .... ತನ್ನ ಪಿತೃಗಳು ಯಮಲೋಕದಲ್ಲಿದ್ದರೆ ,ಪಿಂಡ ಪ್ರಧಾನರೂಪವಾದ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.
4 ನರಕೇ ವಿಕಿರೇಣ ತು..... ತನ್ನ ಪಿತೃಗಳು ನರಕಲೋಕದಲ್ಲಿದ್ದರೆ , ವಿಕಿರಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
5 ಉಚ್ಛಿಷ್ಟೇನ ಪಿಶಾಚಾಶ್ಚ....ತನ್ನ ಪಿತೃಗಳು ಪಿಶಾಚಿಗಳಾಗಿದ್ದರೆ... ಉಚ್ಛಿಷ್ಟ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.
6 ಅಸುರಾ ಭೂರಿ ಭೋಜನಾತ್.....ತನ್ನ ಪಿತೃಗಳು ಅಸುರರಾಗಿದ್ದರೆ ,ಭೂರಿ ಭೋಜನದಿಂದ ಅವರಿಗೆ ತೃಪ್ತಿ ಯಾಗುತ್ತದೆ...
7ದಕ್ಷಿಣೇನ ಮನುಷ್ಯಾದ್ಯಾಃ ..... ತನ್ನ ಪಿತೃಗಳು ಮನುಷ್ಯರಾಗಿ ಜನಿಸಿದ್ದ ಕಾಲಕ್ಕೂ ಅಥವಾ ಯಾವುದೇ ಯೋನಿಯಲ್ಲಿ ಜನಿಸಿದ್ದರೂ ದಕ್ಷಿಣಾಕ್ಯ ಅನ್ನ ದಿಂದ ಅವರಿಗೆ ತೃಪ್ತಿ ಯಾಗುತ್ತದೆ....
ಅದಕ್ಕಾಗಿ ಪಿತೃಗಳ ಸಂತೋಷಕ್ಕಾಗಿ ಪಿತೃ ಪಕ್ಷದಲ್ಲಿ ಪಿಂಡಪ್ರಧಾನ ಮಾಡಿ ಬ್ರಾಹ್ಮಣ ರಿಗೆ ಭೋಜನ ದಕ್ಷಿಣೆ ದಾನ ಅನ್ನದಾನ ಇತರ ಶಕ್ತ್ಯನುಸಾರ ದಾನ ಕೊಡಬೇಕು ....
ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ ೧೫ ದಿನಗಳ ಈ ಕಾಲವನ್ನು "ಪಿತೃ ಪಕ್ಷ" "ಪಕ್ಷಮಾಸ" ಎನ್ನುತ್ತಾರೆ.
ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದವುಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ. ಪಕ್ಷಶ್ರಾದ್ಧವನ್ನು ಮಾಡದವರಿಗೆ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಹುಟ್ಟಿದರೂ ಅಂಗ ವಿಕಲರಾಗಿಯೋ ನಮಗೆ ಹೊರೆಯಾಗಿಯೋ ಹುಟ್ಟಬಹುದು.
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”. ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ. ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.
ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.ಮತ್ತು ಮಹಾಲಯ ಶ್ರಾದ್ಧ.
ಪಿತೃಗಳಿಗೆ ತಿಲ ತರ್ಪಣವೇಕೆ ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಜೊತೆಗೆ ಯಜ್ಞ ವರಾಹ ಸ್ವಾಮಿಯ ಬೆವರಿಂದ ಹುಟ್ಟಿದ್ದು ಎಳ್ಳು. ರೋಮದಿಂದ ಹುಟ್ಟಿದ್ದು ದಬೆ೯. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ. ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ೧೫ ದಿನ ಹಗಲು ೧೫ ದಿನ ರಾತ್ರಿಯಾದರೆ ೧ ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?
ದರ್ಬೆ, ಕುಶ, ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆ ಗುಂಪಿನ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಗುಂಪಿನ ಮೇಲೆ ಬೀಳುತ್ತದೆ. ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.
ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.(ಕೆಲವೆಡೆ ಮೂರು.)
1. ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.
2. ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.
3. ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ(ಕಾಕ ಬಲಿ)
4. ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.
5. ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜಿಸಬೇಕು. ಅಥವಾ ಬ್ರಾಹ್ಮಣ ಭೋಜನಕ್ಕೆ ಕುಳಿತ ನಂತರ.
ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |
ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |
ದದ್ಯಾದ್ವಿಫುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||
पिता ददाति सत्पुत्रान् गोधनानि पितामह: ।
धनदाता भवेत्सोपि यस्तस्य प्रपितामह: ।।
दद्याद्विपुलमन्नाद्यं वृद्धस्तु प्रपितामह: ।
तृप्ता: श्राद्धेन ते सर्वे दत्वा पुत्रस्य वांछितम्।।

No comments:
Post a Comment