Monday, September 23, 2019

SHRAADDHA VICHAAR - X ( ಶ್ರಾದ್ಧದ ಮಹತ್ವ ಭಾಗ :-೧೦ )

                                                                                                                                                 ಸಂಗ್ರಹಿತ 
ಶ್ರಾದ್ಧದ ಮಹತ್ವ ಭಾಗ :-೧೦

ಹರಿವಂಶದಲ್ಲಿ ಒಂದು ಪ್ರಸಂಗ -ಒಂದು ದಿನ ಧರ್ಮರಾಜನು ಪಿತಾಮಹನಾದ ಭೀಷ್ಮಾಚಾರ್ಯರನ್ನು ಕುರಿತು ಶ್ರಾದ್ಧಕ್ರಿಯಾ ಸಂಸ್ಕಾರ ತಾರಕವಾಗುವ ಬಗೆ ಹೇಗೆ ಎಂದು ಪ್ರಶ್ನೆ ಮಾಡುವನು.ಆಗ ಭೀಷ್ಮಾಚಾರ್ಯರುಉತ್ತರಿಸುವರು.
ಎಲೈ ಧರ್ಮರಾಜನೇ ನಾನು ಹಿಂದೆ ಶ್ರಾದ್ಧಕ್ರಿಯೆಯನ್ನು ಮಾಡುತ್ತಿದ್ದಾಗ   ನನ್ನ ತಂದೆಯ ತೃಪ್ತಿಗಾಗಿ ಪಿಂಡವನ್ನು ಪಿತೃವಿಗೆ ಸಮರ್ಪಿಸಲು ಕೈ ಎತ್ತಿದೆ  ಆಗ ಭೂಮಿಯನ್ನು ಸೀಳಿಕೊಂಡು ಪಿಂಡವನ್ನು ಸ್ವೀಕರಿಸಲು ನನ್ನ  ತಂದೆಯು ಕೈ ಚಾಚಿದನು . ಆಗ ಅವನ ಆಕೃತಿಯು ವಿವಿಧ ಆಭರಣಗಳಿಂದ ಭೂಷಿತವಾಗಿತ್ತು ತಂದೆಯು ಜೀವಂತವಿದ್ದಾಗ ನಾನು ನೋಡಿದ್ದಂತೆಯೇ ಅವನು ರೂಪಸಂಪದ್ಭರಿತನಾಗಿದ್ದನು. ತಂದೆಯ ದಷ್ಟಪುಷ್ಟವಾದ ತೊರು ಬೆರಳಿಗೆ ಹಾಕಿದ್ದ ಉಂಗುರ ಮುಂಗೈಯಲ್ಲಿನ ಅಭರಣಗಳು ತೊಳ್ಭಂಧಿ ಮಿನುಗುವ ಚಿನ್ನದ ಸರ ಇವೆಲ್ಲವನ್ನು ಕಂಡು ಅವು ತಂದೆಯದೇ ಎಂದು ನನಗೆ  ಖಾತರಿಯಾಯಿತು. ಅಂದಿನವರೆಗೆ ಕಾಣದ ಸನ್ನಿವೇಶವನ್ನು ಕಂಡು ಆಲೋಚನೆಗೊಳಗಾದೆನು. ಅದದ್ದಾಗಲಿ ಎಂದೆಣಿಸಿ  ತಂದೆಯ ಕೈಗೆ ಕೊಡದೇ ವಿಧ್ಯುಕ್ತವಾಗಿ ದಬೆ೯ಯ ಮೇಲೆ   ಪಿಂಡಪ್ರಧಾನ ಮಾಡಿದೆನು. ಏಕೆಂದರೆ ಶಾಸ್ತ್ರದಲ್ಲಿ ಹೇಳಿರುವುದು ಹಾಗೆಯೇ.
ಆಗ ಶಂತನುವು ಸ್ವಲ್ಪವೂ ಕೂಡಾ ಕೋಪಿಸಲಿಲ್ಲ. ಇನ್ನೂ ಸಂತೋಷ ಪಡುತ್ತಾ ಹೇಳಿದನು .

ತ್ವಯಾ ದಾಯಾದವಾನಸ್ಮಿಕೃತಾರ್ಥೋsಮುತ್ರ ಚೇಹ ಚ | ಸತ್ಪುತ್ರೇಣ ತ್ವಯಾ ಪುತ್ರ ಧರ್ಮಜ್ಞೇನ ವಿಪಶ್ಚಿತಾ ||

ಮಗನೇ ನಿನ್ನಂತಹ ಮಗನಿಂದ ನನಗೆ ಇಹಪರಗಳೆರಡರಲ್ಲೂ ಸುಖಶಾಂತಿ ಲಭಿಸಿತು . ನನ್ನ ಜನ್ಮಸಫಲವಾಯಿತು.ನಿನ್ನ ತಂದೆಯಾಗಿದ್ದಕ್ಕೆ ತುಂಬು ಫಲ ಸಿಕ್ಕಿತು  .ನೀನು ಜ್ಞಾನಿಯಾದವನು ಧರ್ಮವನ್ನು ತಿಳಿದವನು ನಿನ್ನಿಂದ ಭೂಲೋಕದಲ್ಲಿಯೂ ಮೇಲಿನ ಲೋಕದಲ್ಲಿಯೂ ನಾನು ಪುಣ್ಯವಂತನಾದೆ .
ನಿನ್ನಲ್ಲಿ ಅಂಕುರಿಸಿದ ಶ್ರಾದ್ಧ ವಿಚಾರ ಜಿಜ್ಞಾಸೆಯ ಪರಿಹಾರಕ್ಕಾಗಿ ನಾನು ಕಾಣಿಸಿಕೊಂಡೆನು ಇದರಿಂದಾಗಿ ಜನತೆಗೆ ಶ್ರಾದ್ಧವಿಧಾನದಲ್ಲಿ ನಂಬಿಕೆ ಉಂಟಾಗುವುದು ನಿಶ್ಚಿತ .ನೀನು ಮಾಡುತ್ತಿರುವ ಶ್ರಾದ್ಧಕರ್ಮಾಚರಣೆಯು ಪ್ರಜೆಗಳಿಗೆ ದಾರಿದೀಪವಾಗುತ್ತದೆ .
ಪಿತೃಪ್ರೀತಿ ಜನಕವಾದ ಶ್ರಾದ್ಧಕ್ರಿಯೆಯಿಂದ ನನಗೆ ಅಪ್ರತಿಮ ಸಂತೋಷವನ್ನುಂಟು ಮಾಡಿರುವಿ .ನಿನ್ನ ಈ ಕ್ರಿಯೆಯಿಂದ ಸಂತುಷ್ಟನಾದ ನಾನು ನಿನಗೆ ಇಚ್ಛಾಮರಣಿಯಾಗು ಎಂಬ ವರವನ್ನು ಕೊಟ್ಟಿರುವೆ .ನಿನ್ನ ಮನಸ್ಸಿನಲ್ಲಿ ಏನಿದೆಯೋ ಎಲ್ಲವನ್ನೂ ಕೇಳು ನಿನ್ನ ಇಷ್ಟಾರ್ಥವನ್ನು ಪೂರೈಸುವೆ ಎಂದನು 
ಆಗ ಭೀಷ್ಮಾಚಾರ್ಯರು ಪಿತೃದೇವತೆಗಳೆಂದರೆ ಯಾರು? ಅವರ ಸ್ಥಾನ ಯಾವುದು?ಎಷ್ಟು ಗಣದವರಿದ್ದಾರೆ .? ಈ ವಿಚಾರವನ್ನು ವಿಸ್ತಾರವಾಗಿ ಹೇಳು ಎಂದು ಕೇಳಲು ಎಲ್ಲವನ್ನೂ ವಿಸ್ತಾರವಾಗಿ ಉಪದೇಶಿಸಿ ತಂದೆಯು ಅಂತಾರ್ಧನವನ್ನು ಹೊಂದಿದನು .
ಆಷಾಡ್ಯಾ ಪಂಚಮೇ ಪಕ್ಷೇ ಕನ್ಯಾಸಂಸ್ಥೇ ದಿವಾಕರೇ। ಮೃತಾಹನಿ ಪಿತುಯೋ೯ ವೈ ಶ್ರಾದ್ಧಂ ದಾಸ್ಯತಿ ಮಾನವಃ।। ತಸ್ಯ ಸಂವತ್ಸರಂ ಯಾವತ್ಸಂತೃಪ್ತಾ ಪಿತರೋ ಧ್ರವಮ್।(ನಿಣ೯ಯ ಸಿಂಧು)

ಆಷಾಡ ಮಾಸದ ಕೃಷ್ಣ ಪಕ್ಷ ಶ್ರಾವಣದ ಎರಡು, ಭಾದ್ರಪದದ ಒಂದು ಹೀಗೆ ನಾಲ್ಕು ಪಕ್ಷ ದಾಟಿ ಐದನೇ ಪಕ್ಷವನ್ನು ಪಿತೃಪಕ್ಷವೆಂದೂ ಈ ಪಕ್ಷದಲ್ಲಿ ಮೃತರಾದ ಪಿತೃಗಳು ಮಕ್ಕಳು ನೀಡುವ ಆಹಾರವನ್ನು ಕಾಯುತ್ತಿರುತ್ತಾರೆ. ಅವರ ಮೃತ ತಿಥಿಯಂದೇ ಪಕ್ಷಾಚರಣೆ ವಿಶೇಷವಾದರೂ ಪಾಡ್ಯ, ಷಷ್ಠಿ,  ಏಕಾದಶೀ, ಚತುದ೯ಶೀ ಹಾಗೂ ಮಂಗಳವಾರ ಶುಕ್ರವಾರ ಹೊರತು ಪಡಿಸಿ ಯಾವುದಾದರೂ ವಿಶೇಷ ದಿನದಲ್ಲಿ ಅಂದರೆ. ದ್ವಿತೀಯ,ಅಷ್ಟಮೀ,ತ್ರಯೋದಶೀ,ಅಮಾವಾಸ್ಯೆ  ಹಾಗೂ ಮಹಾಭರಣೀ,ಮಘಾ ನಕ್ಷತ್ರ, ವ್ಯತೀಪಾತ, ಗಜಚ್ಛಾಯಾದಿನಗಳಲ್ಲಿ ಸಕೃನ್ಮಹಾಲಯ ಶ್ರಾದ್ಧ ಮಾಡಬೇಕು
ವಿವಾಹಾನಂತರ ಪಿಂಡಪ್ರದಾನ : ಮಕ್ಕಳ ವಿವಾಹವಾದಮೇಲೆ 1 ಅಥವಾ 3 ತಿಂಗಳೊಳಗೆ  ಪಿಂಡ ಪ್ರದಾನ ಮಾಡಬಾರದು  ಎನ್ನುವುದು ತಂದೆ ತಾಯಿಗಳ ಹೊರತಾಗಿ ಬೇರೆ ಶ್ರಾಧಗಳಿಗೆ ಮಾತ್ರ ಅನ್ವಯಿಸುತ್ತದೆ  ವಿವಾಹದ ಹಿಂದೆ ಎಷ್ಟೇ ದಿನದ ಅಂತರದಲ್ಲೂ ಪಿಂಡ ಪ್ರದಾನ ಮಾಡಬಹುದು ವಿವಾಹಾನಂತರ ತಂದೆ ತಾಯಿಗಳ ಶ್ರಾದ್ಧವು ಎಷ್ಟೇ ದಿನಗಳ ಅಂತರದಲ್ಲಿದ್ದರು ಅವಶ್ಯವಾಗಿ ಪಿಂಡಪ್ರದಾನವನ್ನೇ ಮಾಡಬೇಕು 

ಶ್ರಾದ್ಧ ತಿಥಿ ಅಜ್ಞಾತವಾಗಿದ್ದರೆ : ಸಂಬಧಿಕರ ಬಳಗದವರ  ಮುಖಾಂತರ ಮಾಸ ತಿಥಿ ಗೊತ್ತಾಗುವುದು ಸಾಧ್ಯವಿಲ್ಲದಿದ್ದರೆ ಮಾರ್ಗಶೀರ್ಷ ಅಥವಾ ಮಾಘ ಅಮಾವಾಸ್ಯಾ ಅಥವಾ ದ್ವಾದಶಿ ತಿಥಿಯಲ್ಲಿ ಶ್ರಾದ್ಧವನ್ನು ಮಾಡಬೇಕು 

ಅಮಾವಾಸ್ಯಾ  ( ದರ್ಶ ) : ದರ್ಷದ ದಿವಸ ದ್ವಾದಶ ಪಿತೃಗಳಿಗೆ ಮಾತ್ರ ತಿಲ ಸಹಿತ ನೀರಿನಿಂದ ತರ್ಪಣ ಕೊಡಬೇಕು  ನಂತರ ಪ್ರತಿನಿತ್ಯದ ಬ್ರಹ್ಮಯಜ್ನವನ್ನು ದೇವ, ಋಷಿ ,ಆಚಾರ್ಯ ತರ್ಪಣವನ್ನು ಕೊಟ್ಟು ಆಮೇಲೆ ಕೇವಲ ನೀರಿನಿಂದ ಸರ್ವ ಪಿತೃಗಳಿಗೆ ತರ್ಪಣ ಕೊಡುವುದು 
ಘಾತ ಚತುರ್ದಶಿ ಶ್ರಾದ್ಧವನ್ನು ಎಕೊದಿಷ್ಟ ವಿಧಿಯಿಂದ ಮಾಡಬೇಕು 
ವಿಧವಾ ಜನರು ಮಾಡುವ ಶ್ರಾದ್ಧ : ಮಕ್ಕಳಿಲ್ಲದೆ ಇದ್ದರೆ ತಾವೇ ಶ್ರಾದ್ಧ ಮಾಡಬೇಕು 
ಮಮ ಭರ್ತೃ ತತ್ಪಿತ್ರು ಪಿತಾಮಹಾನಾಂ,  ಮಮ ಭರ್ತೃ ಮಾತುಹ್ ಪಿತಾಮಹಿ  ಮಾತುಹ್ ಪ್ರಪಿತಾಮಹಿನಾಂ 
ಮಮ ಪಿತೃ  ಪಿತಾಮಹ ಪ್ರಪಿತಾಮಹಾನಾಂ,   
ಮಮ ಮಾತೃ  ಪಿತಾಮಹಿ  ಪ್ರಪಿತಾಮಹಿನಾಂ,
ಮಮ ಮಾತಾಮಹ ಮಾತುಹ್ ಪಿತಾಮಾಹ  ಮಾತುಹ್ ಪ್ರಪಿತಾಮಹಾನಾಂ
ಮಮ ಮಾತಾಮಾಹಿ  ಮಾತುಹ್ ಪಿತಾಮಹಿ  ಮಾತುಹ್ ಪ್ರಪಿತಾಮಹಿನಾಂ
ತೃಪ್ತ್ಯರ್ಥ ಸಕೃನ್ ಮಹಾಲಯ .............ಕರಿಷ್ಯೇ  



    

No comments:

Post a Comment