Friday, September 27, 2019

SHRAADDHA VICHAARA - XII (ಪಕ್ಷಮಾಸೀಯ ಪಿತೃ ಯಜ್ಞ ಭಾಗ:-೧೨)

                                                                                                                                          ಸಂಗ್ರಹಿತ 
ಪಕ್ಷಮಾಸೀಯ ಪಿತೃ ಯಜ್ಞ ಭಾಗ:-೧೨
ಪಿತೃ ದೇವತೆಗಳು ಎರಡು ವಿಧ. ಚಿರ ಪಿತೃಗಳು ಹಾಗೂ ಅಚಿರ ಪಿತೃಗಳು. ಇವರೊಳಗೆ ಮತ್ತೆ ಚಿರ ಪಿತೃಗಳಲ್ಲಿಯೂ ಎರಡು ವಿಧರು ಅಮೂತ೯ ಚಿರಪಿತೃಗಳು ಹಾಗೂ ಸಮೂತ೯ ಚಿರಪಿತೃಗಳೆಂದು.ಅಮೂತ೯ರೆಂದರೆ ಶರೀರ ರಹಿತರು. ಸಮೂತ೯ರೆಂದರೆ ಶರೀರ ಉಳ್ಳವರು.
ಈ ಅಮೂತ೯ರೊಳು ಮತ್ತೆ ಮೂರು ಪ್ರಭೇಧ. ವೈರಾಜ, ಅಗ್ನಿಷ್ವಾತ್ತರು, ಬಹಿ೯ಷದರು ಎಂದು. ಸಮೂತ೯ರಲ್ಲಿ ನಾಲ್ಕು ಪ್ರಭೇದ:-ಸುಕಾಲರು, ಆಂಗಿರಸರು, ಸುಸ್ವಧಾರು, ಸೋಮಪಾರು ಚಂದ್ರಲೋಕದ ಮೇಲ್ಭಾಗದೊಳಿಹುದು ಇವರಿರುವ ಲೋಕ. ಈ ಪಿತೃ ದೇವತಾರಕವಾದ ಸಪ್ತಗಣರು ಅತ್ಯಂತ ತೇಜಸ್ವಿಗಳೂ, ಯೋಗಚಕ್ಷುಸ್ಸುಳ್ಳವರೂ, ಪರಮ ಅನುಗ್ರಹಶೀಲರೂ ಆಗಿರುತ್ತಾರೆ.


         ಇವರು ಪಿತೃಗಣಗಳಾದರೂ ಶ್ರಾದ್ಧಗಳಲ್ಲಿ ಇವರಾರೂ ಬರಲಾರರು. ಅಂದರೆ ಇವರನ್ನುದ್ದೇಶಿಸಿ ವಿಶೇಷ ಪೂಜೆ ಇರಲಾರದು.ಹಾಗಾದರೆ ಇವರ ಬಗ್ಗೆ ಯಾಕೆ ಪ್ರಸ್ತುತಿ? ತಿಳಿಯೋಣವಲ್ಲವೇ? ಕೇಳಿ:-
ಮೃತರಾದ ನಮ್ಮ ಪೂವ೯ಜರು ಅವರವರ ಕಮಾ೯ನುಸಾರ ಸ್ವಗ೯,ಮತ್ಯ೯,ನರಕಾದಿ ಲೋಕಗಳನ್ನು ಸೇರಿ ಕಮಾ೯ನುಸಾರ ಫಲ ಭೋಕೃಗಳಾಗಿರುತ್ತಾರೆ. ನಾವು ನಾಮ,ಗೋತ್ರ,ರೂಪ ಕೀತ೯ನಾ ಪೂವ೯ಕ ಅವರಿಗಾಗಿ ಮಾಡಿದ ಶ್ರದ್ಧಾ ಪೂವ೯ಕ ಕಮ೯(ಶ್ರಾದ್ಧ ಕಮ೯)ದಿಂದ ಅಚಿರ ಪಿತೃಗಳಾದ ಇವರನ್ನು ಅಚಿ೯ಸಿದರೆ ಚಿರಪಿತೃಗಳು ಸಂತುಷ್ಟರಾಗಿ ನಮ್ಮ ಪೂವ೯ಜರಾದ ಮೃತ ಪಿತೃ(ಅಚಿರ ಪಿತೃ)ಗಳನ್ನು ಸಂತೃಪ್ತಿ ಪಡಿಸುತ್ತಾರೆ. 
ಹಾಗಾಗಿ ಶ್ರಾದ್ಧದಲ್ಲಿ ಇವರನ್ನು ನಮಿಸಿಯೇ ಶ್ರಾದ್ಧಾರಂಭ ಮಾಡಬೇಕು. ಇವರನ್ನು ನಮಿಸುವ
ಶ್ಲೋಕ:-
ಅಮೂತಾ೯ನಾಂ ಸಮೂತಾ೯ನಾಂ ಪಿತೃಣಾಂ ದೀಪ್ತ ತೇಜಸಾಮ್
ನಮಸ್ಯಾಮಿ ಸದಾ ತೇಷಾಂ ಧ್ಯಾಯಿನಾಂ ಯೋಗಚಕ್ಷುಷಾಮ್।।
ಯೋಗಚಕ್ಷುಗಳೂ ದೀಪ್ತ ತೇಜರೂ ಆದ ಅಮೂತ೯ಪಿತೃಗಳಿಗೂ ಸಮೂತ೯ ಪಿತೃಗಳಿಗೂ ಸದಾ ನಮಸ್ಕರಿಸುವೆ. ನಮಗೆ ನೇರವಾಗಿ ಸಂಬಂಧಿಸಿಹ ವಸು,ರುದ್ರ,ಆದಿತ್ಯರೆಂಬ ಮಗದೊಂದ ಗಣವಿದೆ. ಈ ಗಣದಲ್ಲಿ ಅಷ್ಟವಸುಗಳೂ,ಏಕಾದಶ ರುದ್ರರೂ, ದ್ವಾದಶಾದಿತ್ಯರೂ ನಮ್ಮ ಆಯುಷ್ಯಕ್ಕೆ ಒಂದಿಲ್ಲೊಂದು ರೀತಿಯ ಕಾರಣೀ ಕತ೯ರು. ಹೇಗೆ ನಮಗೆ ದೈನಂದಿನ ಜೀವನದಲ್ಲಿ ತ್ರಿಕಾಲಾಚರಣೆಯೋ ಹಾಗೆ ಜೀವನ ಯಜ್ಞದಲ್ಲಿಯೂ. ಜನನಾದಾರಭ್ಯ ಅಂದಾಜು ಇಪ್ಪತ್ತನಾಲ್ಕನೇ ವಯಸ್ಸಿನವರೆಗೆ ಪ್ರಾಥಃ ಸ್ತವನ,ನಲ್ವತ್ತೆಂಟರ ಪಯ೯೦ತ ಮಾಧ್ಯಾಹ್ನಿಕ ಸ್ತವನವಾದರೆ ಮೂರನೆಯ ಭಾಗ ಆಯುಷ್ಯದ ಅಂತ್ಯ ಕ್ಷಣ ಪಯ೯೦ತ ಮೂರನೆಯ ಸಾಯಂ ಸ್ತವನ.ಇದಕ್ಕೆ ಪಿತೃ,ಪಿತಾಮಹ,  ಪ್ರಪಿತಾಮಹರ ಅಂತಗ೯ತ ವಸು ರುದ್ರ,ಆದಿತ್ಯರೇ ದೇವತೆಗಳು ಮತ್ತು ಇವರ ಅಂತಯಾ೯ಮಿಯಾಗಿ ಶ್ರೀ ಲಕ್ಮೀ ಜನಾದ೯ನನು ಪ್ರದ್ಯುಮ್ನ,ಸಂಕಷ೯ಣ ಮತ್ತು ವಾಸುದೇವ ರೂಪದಿಂದ ಆಯುಷ್ಯ ಪ್ರದನೂ ಆರೋಗ್ಯಾದಿ ಸಕಲ ಫಲದಾಯಕನೂ  ಮೋಕ್ಷಪ್ರದನೂ ಆಗಿ ಜೀವರ ಸಂರಕ್ಷಕನಾಗಿ ನಾವು ನೀಡುವ ಹವ್ಯ ಕವ್ಯಾದಿಗಳನ್ನು ಆಲ್ಲಲ್ಲಿಗೆ ಮುಟ್ಟಿಸಿ ನಮಗೂ ನಮ್ಮ ಪಿತೃಗಳಿಗೂ ತಪ೯ಕನಾಗುವನು. ಜೀವನ ನಡೆಸಲುಸಹಾಯಕನಾಗುವನು
 ಈ ಮೂಲಕ ಜೀವಂತರಾಗಿರುವ ನಮಗೂ ಒಳಿತಾಗುವುದು. ಆದುದರಿಂದ ಶ್ರಾದ್ಧವೆಂಬುದು ಕೇವಲ ಮೃತರಾದ ನಮ್ಮವರಿಗಾಗಿ ಮಾತ್ರವಲ್ಲ. ಅದು ಒಂದು ಮನುಷ್ಯನಾಗಿ ಹುಟ್ಟಿದವನ ಕತ೯ವ್ಯ ಕಮ೯. ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವ. ಆಹಾರ ರಹಿತಿ ಜೀವ ಸಂಕುಲಕ್ಕೆ ಅಲ್ಲಲ್ಲಿ ಅವರವರ ಆಹಾರ ರೂಪದಿಂದ ಬದುಕಿಗೆ ಆಶ್ರಯವಾಗುವ ಭೂತ ತೃಪ್ತಿಯೇ ಇದರ ಒಂದು ಉದ್ದೇಶ್ಯವೂ ಅಹುದು. ನೀವು ಎಲ್ಲೇ ಹೋಗಿ,ಎಷ್ಟೇ ಬಾರಿ ಶ್ರಾದ್ಧಾದಿಗಳನ್ನು ಮಾಡಿದ್ದರೂ ಸಾಂವತ್ಸರಿಕ ಹಾಗೂ ಪಕ್ಷ ಮಾಸೀಯ ವಿಧಿಯನ್ನು ಮಾಡಲೇಬೇಕು. ಅವರು ಮುಕ್ತರಾಗಿದ್ದರೂ ಶ್ರಾದ್ಧವಿಧಿ ಬಿಡುವಂತಿಲ್ಲ. ಅತ್ಯವಶ್ಯವಾಗಿ 
ಅನುಷ್ಠೇಯ ನಾಸ್ತಿ ಚೇನ್ನನನೋ ಹಾನಿಃ ಅಸ್ತಿ ಚೇನ್ನಾಸ್ತಿಕೋ ಹತಃ ಅತಃ ಬ್ರಹ್ಮೀಭೂತ ಪಿತೃಕೇಣಾಪಿ ಶ್ರಾದ್ಧಂ ಕಾಯ೯ಮೇವ.

No comments:

Post a Comment