NARAYANA BALI / NAGA BALI ನಾರಾಯಣಬಲಿ ಮತ್ತು ನಾಗಬಲಿ
ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ನಾರಾಯಣಬಲಿ
೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ
ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ ಶುಕ್ಲ ಏಕಾದಶಿ ಅಥವಾ ದ್ವಾದಶಿಯು ಯೋಗ್ಯವಾಗಿರುತ್ತದೆ. ಏಕಾದಶಿಯಂದು ಅಧಿವಾಸ (ದೇವರ ಸ್ಥಾಪನೆ) ಮಾಡಿ ದ್ವಾದಶಿಯಂದು ಶ್ರಾದ್ಧವನ್ನು ಮಾಡಬೇಕು (ಇತ್ತೀಚೆಗೆ ಹೆಚ್ಚಿನ ಜನರು ಒಂದೇ ದಿನ ವಿಧಿಯನ್ನು ಮಾಡುತ್ತಾರೆ). ಸಂತತಿ ಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದಲ್ಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.
ಆ. ವಿಧಿ ಮಾಡಲು ಯೋಗ್ಯ ಸ್ಥಳ: ನದಿತೀರದಂತಹ ಪವಿತ್ರ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.
ಇ. ಪದ್ಧತಿ
ಮೊದಲನೆಯ ದಿನ : ಮೊದಲು ತೀರ್ಥದಲ್ಲಿ ಸ್ನಾನ ಮಾಡಿ ನಾರಾಯಣಬಲಿಯ ಸಂಕಲ್ಪವನ್ನು ಮಾಡಬೇಕು. ಎರಡು ಕಲಶಗಳ ಮೇಲೆ ಶ್ರೀವಿಷ್ಣು ಮತ್ತು ವೈವಸ್ತವ ಯಮ ಇವರ ಸುವರ್ಣಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಅನಂತರ ಆ ಕಲಶಗಳ ಪೂರ್ವಕ್ಕೆ ದರ್ಭೆಯಿಂದ ಒಂದು ರೇಖೆಯನ್ನು ಎಳೆದು ದಕ್ಷಿಣದ ಕಡೆಗೆ ದರ್ಭೆಗಳನ್ನು (ಕುಶ) ಹರಡಬೇಕು. ಅದರ ಮೇಲೆ ‘ಶುಂಧಂತಾಂ ವಿಷ್ಣುರೂಪೀ ಪ್ರೇತಃ’ ಈ ಮಂತ್ರದಿಂದ ಹತ್ತು ಬಾರಿ ನೀರನ್ನು ಬಿಡಬೇಕು.
ಅನಂತರ ದಕ್ಷಿಣಕ್ಕೆ ಮುಖಮಾಡಿ ಅಪಸವ್ಯದಿಂದ ವಿಷ್ಣುರೂಪೀ ಪ್ರೇತದ ಧ್ಯಾನವನ್ನು ಮಾಡಬೇಕು. ಆ ಹರಡಿರುವ ದರ್ಭೆಗಳ ಮೇಲೆ ಜೇನುತುಪ್ಪ, ತುಪ್ಪ ಮತ್ತು ಎಳ್ಳುಗಳಿಂದ ತಯಾರಿಸಿದ ಹತ್ತು ಪಿಂಡಗಳನ್ನು ‘ಕಶ್ಯಪಗೋತ್ರ… ಇವರ ಪ್ರೇತ ವಿಷ್ಣುದೈವತ ಅಯಂ ತೆ ಪಿಂಡಃ’ ಎಂದು ಹೇಳಿಕೊಡಬೇಕು. ಪಿಂಡಗಳನ್ನು ಗಂಧಾದಿ ಉಪಚಾರಗಳಿಂದ ಪೂಜಿಸಿ ಅನಂತರ ಅವುಗಳನ್ನು ನದಿಯಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕು. ಇದು ಹಿಂದಿನ ದಿನದ ವಿಧಿಯಾಯಿತು.
ಎರಡನೆಯ ದಿನ: ಮಧ್ಯಾಹ್ನದ ಸಮಯದಲ್ಲಿ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಅನಂತರ ೧, ೩ ಅಥವಾ ೫ ಹೀಗೆ ಬೆಸ ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಆಮಂತ್ರಿಸಿ ಏಕೋದ್ದಿಷ್ಟ ವಿಧಿಯಿಂದ ಆ ವಿಷ್ಣುರೂಪೀ ಪ್ರೇತದ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧವನ್ನು ಬ್ರಾಹ್ಮಣರ ಪಾದಪ್ರಕ್ಷಾಲನದಿಂದ ತೃಪ್ತಿಪ್ರಶ್ನೆಯ ತನಕ ಮಂತ್ರರಹಿತವಾಗಿ ಮಾಡಬೇಕು. ಶ್ರೀವಿಷ್ಣು, ಬ್ರಹ್ಮಾ, ಶಿವ ಮತ್ತು ಸಪರಿವಾರ ಯಮ ಇವರಿಗೆ ನಾಮಮಂತ್ರಗಳಿಂದ ನಾಲ್ಕು ಪಿಂಡಗಳನ್ನು ಕೊಡಬೇಕು. ವಿಷ್ಣುರೂಪೀ ಪ್ರೇತಕ್ಕಾಗಿ ಐದನೆಯ ಪಿಂಡವನ್ನು ಕೊಡಬೇಕು. ಪಿಂಡಪೂಜೆಯನ್ನು ಮಾಡಿ ಅವುಗಳ ವಿಸರ್ಜನೆಯಾದ ನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕು. ಓರ್ವ ಬ್ರಾಹ್ಮಣರಿಗೆ ವಸ್ತ್ರಾಲಂಕಾರ, ಹಸು ಮತ್ತು ಚಿನ್ನ ಈ ವಸ್ತುಗಳನ್ನು ಕೊಡಬೇಕು. ಅನಂತರ ಪ್ರೇತಕ್ಕೆ ತಿಲಾಂಜಲಿ ನೀಡುವ ಬಗ್ಗೆ ಬ್ರಾಹ್ಮಣರಿಗೆ ಪ್ರಾರ್ಥನೆಯನ್ನು ಮಾಡಬೇಕು. ಬ್ರಾಹ್ಮಣರು ದರ್ಭೆ, ಎಳ್ಳು ಮತ್ತು ತುಳಸೀದಳಗಳಿಂದ ಭರಿತವಾದ ನೀರನ್ನು ಬೊಗಸೆಯಲ್ಲಿ ತೆಗೆದುಕೊಂಡು ಅದನ್ನು ಪ್ರೇತಕ್ಕೆ ನೀಡಬೇಕು. ಅನಂತರ ಶ್ರಾದ್ಧಕರ್ತನು ಸ್ನಾನ ಮಾಡಿ ಭೋಜನ ಮಾಡಬೇಕು. ಈ ವಿಧಿಯಿಂದ ಪ್ರೇತಾತ್ಮಕ್ಕೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಸ್ಮೃತಿಗ್ರಂಥದಲ್ಲಿ ನಾರಾಯಣಬಲಿ ಮತ್ತು ನಾಗಬಲಿ ಇವುಗಳನ್ನು ಒಂದೇ ಉದ್ದೇಶಕ್ಕಾಗಿ ಹೇಳಿರುವುದರಿಂದ ಎರಡೂ ವಿಧಿಗಳನ್ನು ಜೊತೆಯಲ್ಲಿ ಮಾಡುವ ಪರಂಪರೆಯಿದೆ. ನಾರಾಯಣ-ನಾಗಬಲಿ ಈ ಜೋಡಿಹೆಸರು ಇದೇ ಕಾರಣದಿಂದಾಗಿ ರೂಢಿಗೆ ಬಂದಿದೆ.
ನಾಗಬಲಿ
೧. ಉದ್ದೇಶ : ನಮ್ಮ ಮನೆತನದಲ್ಲಿ ಹಿಂದೆ ಯಾರಾದರೊಬ್ಬ ಪೂರ್ವಜರಿಂದ ನಾಗನ (ನಾಗರಹಾವಿನ) ಹತ್ಯೆಯಾಗಿದ್ದಲ್ಲಿ ಆ ನಾಗನಿಗೆ ಗತಿ ಸಿಗದೇ ಇದ್ದುದರಿಂದ ಅದು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ, ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆಗಳನ್ನು ಕೊಡುತ್ತದೆ. ಈ ದೋಷದ ನಿವಾರಣೆಗಾಗಿ ಈ ವಿಧಿಯನ್ನು ಮಾಡುತ್ತಾರೆ.
೨. ವಿಧಿ : ಸಂತತಿಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ಆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಮಾಡಬೇಕಾಗಿದ್ದಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.’
ನಾರಾಯಣ ಬಲಿ ನಾಗ ಬಲಿ
ಜನನ ಕುಂಡಲಿಯಲ್ಲಿ 1, 4 7 10 ಈ ಕೇಂದ್ರ ಭಾವ ದಲ್ಲಿ ಶನಿ ಮಂಗಳ ರವಿ ಗ್ರಹಗಳಿದ್ದು ಕೇಂದ್ರ ಬಿಟ್ಟು ಇನ್ನಿತರ ಭಾವದಲ್ಲಿ ಉಳಿದೆಲ್ಲ ಗ್ರಹಗಳಿದ್ದರೆ ಸರ್ಪ ಯೋಗವೆಂದು ಮಹರ್ಷಿ ಪರಾಶರರ ಅಭಿಪ್ರಾಯ ಅದಕ್ಕೆ ಬಾದರಾಯಣ ಗರ್ಗ ಮಣಿತ್ಥ ವರಾಹಮಿಹಿರರ ಮಾನ್ಯತೆ ಇದೆ. ಅದರಂತೆ ರಾಹುವಿನ ಮುಖದ ಉಪಸ್ಥಿತಿ 1 ರ ಮೊದಲ ಅರ್ಧ ಭಾಗ ,4,7ರ ಮೊದಲ ಅರ್ಧ ಭಾಗದಲ್ಲಿದ್ದರೇ ಅದು ಮುಖದ ಭಾಗ ಅನುದಿತವಾಗಿದ್ದು ಅಶುಭ ಸೂಚಕ ದೋಷಯುಕ್ತ ಸ್ಥಳಗಳು , ರಾಹುವಿನ ಬಾಲದ ಉಪಸ್ಥಿತಿ 7 ರ ಉಳಿದ ಅರ್ಧ ಭಾಗ,10, 1 ರ. ಉಳಿದ ಅರ್ಧ ಭಾಗ ಅದು ಬಾಲದ ಭಾಗ ಉದಿತವಾಗಿದ್ದು ಶುಭ ಸೂಚಕ ವೆನಿಸುತ್ತದೆ ಎಂತಲೂ ಹೇಳಲಾಗುತ್ತದೆ ಸಾರಾಮತಿ ಅನುಭವ ಸಿದ್ಧ ಗ್ರಂಥ ಕರ್ತ ಕಲ್ಯಾಣ ವರ್ಮನ ಪ್ರಕಾರ ನಾಭಸಾದಿ 32 ಸರ್ಪಗಳಲ್ಲಿ ಕೇವಲ ಎಂಟು ಸರ್ಪಗಳ ಬಗ್ಗೆ ಅಷ್ಟೇ ಈಗ ಮಾಹಿತಿ ಉಳಿದಿದ್ದು ಅವುಗಳಲ್ಲಿ ಎಲ್ಲವೂ ಕ್ರೂರ ಸರ್ಪಯೋಗಗಳೆನಲ್ಲ.
ಉತ್ತಮ 2 ಅನಂತ ಪದ್ಮ
ಮಧ್ಯಮ 2 ವಾಸುಕಿ ಶಂಖಪಾಲಕ
ಅಧಮ 2 ಕುಲಿಕ ಮಹಾಮಧ್ಯ
ಕ್ರೂರ 2 ತಕ್ಷಕ ಕಾರ್ಕೋಟಕ
ರಾಹು ಪ್ರಥಮ ದೇವತಾ ಕಾಲ
ರಾಹು ಪ್ರತ್ಯಧಿದೆವತಾ ಸರ್ಪ
ಕೇತು ಪ್ರಥಮ ದೇವತಾ ಚಿತ್ರ ಗುಪ್ತ
ಕೇತು
ಪ್ರತ್ಯಧಿದೆವತಾ ಬ್ರಹ್ಮ
ಜನ್ಮ ಕುಂಡಲಿಯ ಕೇಂದ್ರದಿಂದ ಎಂಟು ಭಾಗಗಳನ್ನು ಮಾಡಿ ಚಕ್ರದ ಗತಿಯಲ್ಲಿ ಒಂದರಿಂದ ನಾಲ್ಕು ಭಾಗಗಳಲ್ಲಿ ರಾಹುವಿನ ಮುಖ ಅನುದಿತ ಸ್ಥಿತಿ ಕ್ರೂರವಾಗಿದ್ದು ಐದರಿಂದ ಎಂಟನೇಯ ಭಾಗಗಳಲ್ಲಿ ರಾಹುವಿನ ಬಾಲದ ಉದಿತ ಅಷ್ಟೊಂದು ಕ್ರೂರವಾದದ್ದ ಲ್ಲ ಎಂತಲೂ ಹೇಳುತ್ತಾರೆ .ಈ ಮೇಲ್ಕಾಣಿಸಿದ ಕಥನಗಳಲ್ಲಿ ಸಂಶೋಧನೆಗೆ ಅವಕಾಶವಿದೆ
ನಾಗಾರಾಧನೆ
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ....ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.
ನಾಗನಿಗೇಕೀ ಮಹತ್ವ?
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ದೈವಿಕ ಸಂಪತ್ತು ಅನುಗ್ರಹಿಸುವವ. ಆದರೆ ಸರ್ಪ- ಸರಿಸೃಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.
ಸರ್ಪಗಳ ಜನ್ಮ, ಸರ್ಪ ಸಂಕುಲ
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ-
ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ.
ಸರ್ಪ ಶಾಪ ಬರುವುದು ಹೇಗೆ?
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಮಾಡಲಾಗುತ್ತದೆ.
ಧನ್ಯವಾದಗಳು
No comments:
Post a Comment